Poem

ಹಣತೆ ಹಚ್ಚೋಣ

ಪ್ರೀತಿಯ ಹಣತೆ ಹಚ್ಚೋಣ
ಮನಸುಗಳ ಬೆಳಗಲು
ಮನಸುಗಳ ಬೆಳಗೋಣ
ಕನಸುಗಳ ಬೆಳೆಸಲು

ಬೆಳೆವ ಕನಸುಗಳ ಬಳಸಿ
ಗೆಲುವ ಪಡೆಯುತ,
ಪಡೆದ ಗೆಲುವಿನಲೆ
ಖುಷಿಯ ಅನುಭವಿಸೋಣ

ಖುಷಿಯ ಜಗದ ತುಂಬ
ಹಂಚಲು ಹೋದರೆ
ಜಗದ ಜನರ ನಮ್ಮಿಂದ
ಖುಷಿಯ ಸ್ವೀಕರಿಸುವರೆ?

ನೋಡೋಣ, ಏನಾಗುವುದೋ!
ಒಟ್ಟಿನಲಿ ಹಣತೆ ಹಚ್ಚೋಣ.

● ಅಜಯ್ ಅಂಗಡಿ

ಅಜಯ್ ಅಂಗಡಿ

ಕವಿ ಅಜಯ್ ಅಂಗಡಿ ಮೂಲತಃ ದಾವಣಗೆರೆಯವರು. ಬರವಣಿಗೆ, ಓದು, ಕವನ ಅವರ ಆಸಕ್ತಿ ಕ್ಷೇತ್ರವಾಗಿದ್ದು ಪ್ರಸ್ತುತ ಕರಾಮುವಿಯಲ್ಲಿ ಎಂ.ಎ ಕನ್ನಡವನ್ನು ವ್ಯಾಸಂಗ ಮಾಡುತ್ತಿದ್ದಾರೆ.

More About Author