Poem

ಗುರುವೆ,

ಗುರುವೆ,
ಜೇಬಿಲ್ಲದ ಅಂಗಿ ತೊಟ್ಟ ಸಂತ ನೀವು
ನಿಮ್ಮದೇ ನಿಜವಾದ ಸಂತವಾಣಿ - ದಾಸವಾಣಿ
ಬಯಲಾಗುವ ಮುನ್ನ ಸೂಯ೯ನಾದವರು ನೀವು
ನೀವೆಲ್ಲಿ ಹೋಗುತ್ತೀರಿ, ಕೋಟಿ ಕೋಟಿ ಮನಗಳಲ್ಲಿ
ಮನೆ ಕಟ್ಟಿಕೊಂಡ ಜಂಗಮರು ನೀವು.
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ
ಕೆರೆಯ ನೀರನು ಕೆರೆಗೆ ಚೆಲ್ಲಿದ ಸಾಗರ ನೀವು
ಮಾತು ಜೋತಿಲಿ೯ಂಗ, ಅದೊಂದು ಅಭಂಗ.
ಗಂಟಾದ ದಾರದುಂಡೆಯ ಬಿಡಿಸಿ ಹೆಣೆದವರು ನೀವು
ಮಾತು ಬೆಳ್ಳಿ, ಮೌನ ಬಂಗಾರ
ನಿಮಗಿದೋ ನಮನದ ಹಾರ.

 

ಶಿರೀಷ ಜೋಶಿ

ಕರ್ನಾಟಕ ಸರ್ಕಾರದ ಜಲ ಸಂಪನ್ಮೂಲ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿರೀಷ ಜೋಶಿ ಅವರು ಸಂಗೀತಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಬರೆಯುವ ಕೆಲವೇ ಲೇಖಕರಲ್ಲಿ ಒಬ್ಬರು. ಬೆಳಗಾವಿ ನಿವಾಸಿ ಆಗಿರುವ ಶಿರೀಷ ಅವರು ಸಾಹಿತ್ಯ, ಸಂಗೀತ, ನಾಟಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಂಗೀತದ ಪ್ರೀತಿ ಅವರಿಂದ ಹಲವು ಪುಸ್ತಕಗಳನ್ನು ಬರೆಸಿದೆ.

ಕೃತಿಗಳು: ಕುಮಾರ ಗಂಧರ್ವ, ಬಸವರಾಜ ರಾಜಗುರು, ಕರ್ನಾಟಕದ ಗಂಧರ್ವರು, ಸಂಗೀತ ಲೋಕದ ರಸನಿಮಿಷಗಳು, ಕುಮಾರ ಸಂಗೀತ 

More About Author