Poem

ಭೀಮಾ ಕೋರೆಗಾಂವ್

‌ಅಣ್ಣ ಬನ್ನಿರೋ...ss
ತಮ್ಮಾ ಬನ್ನಿರೋ...ss
ಅಕ್ಕ ತಂಗಿಯರೂ ಬನ್ನಿರಮ್ಮ...ss
ತಂದೆ ತಾಯಿ ನೀವು ಬನ್ನಿರೀ...ss

ನೀರಿಗಾಗಿ ಯುದ್ಧ ಬೇಡವೆಣದ
ಬುದ್ಧನ ಇತಿಹಾಸ ತಿಳಿಯಲು ಬನ್ನಿ...ss
ಶಾಂತಿಯಿಂದ ಸಭೆಯ ನಡಿಸಿ
ಪ್ರೀತಿಯಿಂದ ಸಲಹೆ ನೀಡಿದ
ಸಿದ್ಧಾರ್ಥ ಗೌತಮ ಬುದ್ಧರ
ಮೇಲೆ ಆರೋಪ ಹೊರಸಿ
ಗಡಿಪಾರು ಶಿಕ್ಷೆ ವಿಧಿಸಿದ
ಇತಿಹಾಸ ತಿಳಿಯಲು ಬನ್ನಿ...ss

ಸಹೋದರ ಸಂಬಂಧಿ ಕೋಲಿಯಾ ಸಾಮ್ರಾಜ್ಯ
ಸಿದ್ಧಾರ್ಥನ ತಾಯಿಯ ತವರುಮನೆಯವರು
ಸುದ್ದಿ ತಿಳಿದು ಯುದ್ಧಗೈದವರೆಂದು
ಭಯಗೊಂಡ ಮನುವಾದಿಗಳ
ಇತಿಹಾಸ ತಿಳಿಲು ಬನ್ನಿ...ss

ವಿಷ ಕಕ್ಕಿದ ಹಾವಿಗೆ
ಹಾಲು ಉಣಿಸಿ
ಶಾಂತಿ ಬಯಸಿ
ನಿಮಗಾವ ತೊಂದರೆ
ಆಗದಿರದ್ದೆಂದು | ಸ್ವ ಇಚ್ಛೆಯಿಂದ
ಪರಿವಾಜ್ರಕ ದೀಕ್ಷೆ ಪಡೆದು
ತಂದೆ ತಾಯಿ ಮಡದಿ ಮಗ
ಪ್ರೀತಿಸುವ "ಕಂಥಕ" ಚನ್ನ
ಅರಮನೆ, ಶಾಕ್ಯ ಸಾಮ್ರಾಜ್ಯ ತೊರೆದ
ಶಾಂತಿಯ ಕ್ರಾಂತಿ ಪುರುಷನ
ಇತಿಹಾಸ ತಿಳಿಯಲು ಬನ್ನಿ...ss

ಎರಡು ನೂರು ವರ್ಷಗಳ ಹಿಂದಿನ
ಇತಿಹಾಸ ತಿಳಿಯಲು ಬನ್ನಿರೋ...ss
ಐದು ನೂರು ಮಹರ್ ಶೂರ ಧೀರರ
ಇತಿಹಾಸ ತಿಳಿಯಲು ಬನ್ನಿರೋ...ss
ಇಪ್ಪತ್ತೈದು ಸಾವಿರು ಮನುವಾದಿ
ಪೇಶ್ವೆಗಳ ಸದೆಬಡಿದ
ಇತಿಹಾಸ ತಿಳಿಯಲು ಬನ್ನಿರೋ...ss

ಭೀಮ ಕೋರೆಗಾಂವ್ ವಿಜಯೋತ್ಸವ
ಆಚರಣೆಗೆ ಬನ್ನಿರೋ...ss
ಸಡಗರ ಸಂಭ್ರಮ ತನ್ನಿರೋ...ss
ಹರ್ಷೋದ್ಗಾರ ಮೊಳಗಿಸಿರೋ...ss
ಜೈ ಭೀಮ ಹಾಕಿಕೋಟ್ಟ
ಮಾರ್ಗದಲ್ಲಿ ನಡಯುರೋ...ss

ಅಣ್ಣ ಬನ್ನಿರೋ...ss
ತಮ್ಮಾ ಬನ್ನಿರೋ...ss
ಅಕ್ಕ ತಂಗಿಯರೂ ಬನ್ನಿರಮ್ಮ...ss
ತಂದೆ ತಾಯಿ ನೀವು ಬನ್ನಿರೀ...ss

- ಎಚ್.ಎಸ್.ಬೇನಾಳ

 

ವಿಡಿಯೋ

ಎಚ್.ಎಸ್. ಬೇನಾಳ

ಎಚ್.ಎಸ್.ಬೇನಾಳ ಅವರು ಬಹುಮುಖ ಪ್ರತಿಭಾವಂತ,ಜೊತೆಗೆ ಸಂವೇದನಾ ಶೀಲ ಬರಹಗಾರ, ಕವಿಯಾಗಿ, ಕಥೆಗಾರನಾಗಿ, ವಿಚಾರವಂತ, ಪ್ರಬುದ್ಧ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಕಲಬುರಗಿ ಮೂಲದವರಾದ ಎಚ್. ಎಸ್. ಬೇನಾಳ ಚಿಕ್ಕ ವಯಸ್ಸಿಗೆ ವಿಚಾರಾತ್ಮಕ ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿದ್ದಾರೆ. ಅವರ ಪ್ರಕಟಿತ ಕೃತಿಗಳು- ಬುದ್ಧನ ನಿಜವಾದ ವೈರಾಗ್ಯ, ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್, ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು, ಬಹಿಷ್ಕಾರ(ಕಥಾಸಂಕಲನ), ಪ್ರಥಮ ವಚನಕಾರ ಜೇಡರ ದಾಸೀಮಯ್ಯ, ಕಾವ್ಯ ಕಂಬನಿ(ಕವನ ಸಂಕಲನ), ಬಚ್ಚಿಟ್ಟ ಚರಿತ್ರೆಯನ್ನು ಬಿಚ್ಚಿಟ್ಟ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್, ವಿಶ್ವಕಂಡ ಶ್ರೇಷ್ಠ ಆರ್ಥಿಕ ಚಿಂತಕ ಬಾಬಾ ಸಾಹೇಬ ಡಾ.ಬಿ.ಆರ್ ಅಂಬೇಡ್ಕರ್, ಮೋಕ್ಷವಾದ ಮತ್ತು ಅಂಬೇಡ್ಕರ್ ವಾದ. ಹೀಗೆ ಚಿಂತನಾಶೀಲರಾಗಿ, ಮತ್ತು ಕವಿಯಾಗಿ ಬರೆವ ಎಚ್.ಎಸ್ ಬೇನಾಳ ಅವರು 17 ಕ್ಕೂ ಹೆಚ್ಚಿನ ಕೃತಿಗಳನ್ನು ಪ್ರಕಟಿಸಿದ್ದಾರೆ. 

More About Author