ಅವಳ ಹೆಸರು ತುಂಬಸೊಗಸು
ಹೇಳಲಾರದೆನ್ನ ಮನಸು
ಅವಳ ಮನಸೋಜೇನಿಗಿಂತಮಧುರ
ಹವಳಕಿಂತ ಕೆಂಪು ಅವಳ ಅಧರ
ಅವಳ ನಗುವ ಕಂಡು ಬಿರಿಯುತೊಂದುತಾವರೆ
ತನ್ನ ಸಾಟಿ ಸಾಗದೆ
ನಾಚಿತದು ಕೆಂದಾವರೆ
ಜೋಡಿ ಜಡೆಯ ಜಗದಂಬ
ನೋಡಿ ನಡೆಯ ಕಣ್ಣತುಂಬ
ಕೋಡಿ ಒಡೆಯೆ ಹರುಷವೆಂಬ
ಹೊನಲು ಹರಿಯೆ ಮನದ ತುಂಬ
ಅವಳಿಗಂತು ಮಹಾ ಜಂಬ
ಇದ್ದರಿರಲಿ ರೂಪ ತುಂಬ
ನನ್ನನೊಮ್ಮೆ ನೋಡಲೆಂಬ
ಕರೆಗೆ ಮೊರೆಗೆ ಕೊಡಳು ಇಂಬ
ನನ್ನ ನೊಮ್ಮೆ ನೋಡಿ ನಕ್ಕುಬಿಡಲಿ
ಧರಿಸುತದನು ಹೃದಯದಲಿ-. ಸ್ಮರಿಸುತದನು ಮುದದಲಿ
ಬಾಳುವೆನು ಉತ್ಸಾಹದಲಿ
- ಸಚ್ಚಿದಾನಂದ ಕೆ.ಎಸ್
ಸಚ್ಚಿದಾನಂದ ಕೆ.ಎಸ್
ಸಚ್ಚಿದಾನಂದ ಕೆ.ಎಸ್ ಅವರು ಪ್ರತಿಷ್ಠಿತ ಸಾರ್ವಜನಿಕ ಸಂಸ್ಥೆಯಾದ ಬಿ.ಇ.ಎಂ.ಎಲ್ ನಲ್ಲಿ ಮೂವತ್ತು ವರ್ಷಗಳ ದೀರ್ಘ ಸೇವೆಮಾಡಿ ಡೆಪ್ಯುಟಿಜನರಲ್ ಮ್ಯಾನೇಜರ್ ಆಗಿ ನಿವೃತ್ತಿ ಹೊಂದಿದ್ದಾರೆ. ನಿವೃತ್ತಿಯ ಬಳಿಕ ರಚಿಸಿದ ಅವರ ಚೊಚ್ಚಲ ಕೃತಿ.