ನೀಳ ಕೇಶವದು ಮೆಲ್ಲನೆ ಸರಿದು
ಹುಸಿ ನಗೆಯ ಬಿರುತಿದೆ
ಮುಂಗೊಪವ ತೋರುತಲಿ ಮೂಗುತಿ
ಮತ್ತೆ ಮತ್ತೆ ಕೆದಕಿ ಯುದ್ದ ಸಾರುತಿದೆ
ತಿಲೊತ್ತಮೆಯರು ಹಿಗಳೆವರು
ನಿನ್ನ ನಗುವ ಕಂಡು
ಸಂಗೀತದ ಅಮೃತವ ನೀಡಲು
ಚೈತನ್ಯದ ಹಾದಿ ಹಿಡಿದಿವೆ
- ಕಿರಣ ಡಿ ಕೆ
ಕಿರಣ ಡಿ. ಕಳಸ
ಕವಿ ಕಿರಣ ಡಿ. ಕಳಸ ಅವರು ಮೂಲತಃ ಬಾಗಲಕೋಟ ಜಿಲ್ಲೆಯ ಗುಡೂರ ಗ್ರಾಮದವರು. ಪ್ರಸ್ತುತ ಕೋ ಅಪ್ ಕ್ರೆಡಿಟ್ ಸೊಸೈಟಿ ಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಕವಿತೆ, ಬರಹಗಳು ವಿವಿಧ ಪತ್ಕಾರಿಕೆಗಳಲ್ವ್ಯಲಿ ಬೆಳಕು ಕಂಡಿವೆ.