ನಲಿವಿನಲಿ ನಕ್ಕವರು ಇಂದು
ನೋವಲಿ ಬೆಟ್ಟದಾಚೆ ಇದ್ದಿಹರು
ಬಯಲೊಳಗೋ ಕಂಡ ಕನಸು
ಕಣ್ಗಳ ತಂಪಲಿ ಮರೆಯಾಯಿತು
ಹಾದಿ ಹದಗೆಡಿಸುವ ಕವಲುಗಳು
ಅಶ್ವಾಸನೆಯ ಗೋಪುರ ಏರಿ
ಮಿಂದೆದ್ದೆ ಎನಗೆ ಅರಿವು ತೋಚಲಿಲ್ಲ
ಏನಿದರ ಸೊಗಡು
ದುರ್ಬಲ ಮನದ ತಡಬಡಿಕೆಗೆ
ಸಂಗಡ ಇದ್ದೋಳು ಬ್ಯಾಸರದಿ
ಜಗಕ್ಕೆ ಭಾರ ಅಂತಿಹಳು
ಯಾರ ಗೆಲ್ಲಲಿಲ್ಲ ಸಾಧಿಸಿದ್ದೇನು
ಬೆವರ ಹನಿ ಮೈಯೊಳು ಕವಚಿ
ಒದ್ದೆಯಾಗುತ ಸವೆಸಿದ ಕೈಗಳ
ಸ್ಪರ್ಶಸಿ ಸಂತೈಸುವ ಜೀವವು
ಇರದ ಯಾತನೆ ನರಕ ಸದೃಶ್ಯ
ಧನಿವಿದ್ದರೆ ಭಾಗ್ಯವೇ ಬಲವಿರೆ
ಶಕ್ತಿಯೇ ಆದೇ ಅಧಿಕಾರವೇ
ಪುಣ್ಯದ ಕರ್ಮ ಆಳುತ್ತಿಹದು
ಶಿವನು ಮನಸಿಟ್ಟು ಕರೆದರೆ
ಯಾವ ರೂಪದೊಳಗೊಣ
ತೊರೆದು ತಾ ಪಯಿಣಿಸಬೇಕು
ಇದೆಂತಹಾ ವಿಧಿ ಪ್ರಧಾನ್ಯಗಳು
ಜೊತೆಗಿದ್ದು ಉನ್ಮಾದದಿ ಬಾಳೋಣ ಆದೇ ಶಾಶ್ವತವು
- ಎಸ್. ರಾಜುಕವಿ ಸೂಲೇನಹಳ್ಳಿ
ಎಸ್. ರಾಜು ಸೂಲೇನಹಳ್ಳಿ
ಲೇಖಕ ಎಸ್. ರಾಜು ಸೂಲೇನಹಳ್ಳಿ ಮೂಲತಃ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ರಾಯಪುರದ ಸೂಲೇನಹಳ್ಳಿ ಗ್ರಾಮದವರು. ಎಂ. ಎ., ಬಿ. ಈಡಿ, ಡಿ. ಈಡಿ. ಹಾಗೂ ಎಂ.ಫಿಲ್ ಪದವೀಧರರು. ಪ್ರಸ್ತುತ ಎಸ್. ಜೆ. ಎಂ. ವಿದ್ಯಾಸಂಸ್ಥೆ ಯ ಎಸ್. ಜೆ. ಎಂ. ಹಿರಿಯ ಪ್ರಾಥಮಿಕ ಶಾಲೆ ನಾಗೊಂಡನಹಳ್ಳಿಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದಾರೆ. ಸಾಹಿತ್ಯ ಮತ್ತು ಸಂಘಟನೆ, ಕತೆ, ಕಾದಂಬರಿ, ಲೇಖನ, ಕವನ ಹಾಗೂ ಸಂಶೋಧನಾ ಲೇಖನಗಳನ್ನು ಬರೆಯುವುದು ಅವರ ಹವ್ಯಾಸ. ಕರುನಾಡ ಹಣತೆ ಕವಿ ಬಳಗ ರಾಜ್ಯಾಧ್ಯಕ್ಷರು, ತನುಶ್ರೀ ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ ಸಂಸ್ಥಾಪಕರು.
ಕೃತಿಗಳು: ಪ್ರೇಮದ ಹಣತೆ (ಚಲನಚಿತ್ರಕ್ಕೆ ಆಯ್ಕೆಯಾದ ಕಾದಂಬರಿ, ಹಿಂದಿ, ತೆಲುಗು ಭಾಷೆಗೂ ಅನುವಾದಗೊಂಡಿದೆ) ಒಲವೇ (ಕವನ ಸಂಕಲನ), ಸ್ಪಂದನಾ (ಕಾದಂಬರಿ), ಅವಳ ಪ್ರೇಮದ ಅಲೆಗಳು (ಕಾದಂಬರಿ), ಬುದ್ಧ ಕಾಣದ ನಗೆ (ಕವನ ಸಂಕಲನ),
ಪ್ರಶಸ್ತಿ ಮತ್ತು ಪುರಸ್ಕಾರ : ಸಿರಿಗನ್ನಡ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತ( 2018), ಸಾಹಿತ್ಯ ಸೇವೆ ಕರುನಾಡ ಸಿರಿ ರತ್ನ ರಾಜ್ಯ ಪ್ರಶಸ್ತಿ (2019), ಕರ್ನಾಟಕ ಶಿಕ್ಷಣ ಸೇವಾ ರತ್ನ(2019), ಕನ್ನಡ ರಾಜ್ಯೋತ್ಸವ ಪ್ರಶಸ್ತಿ (2019-ಕನ್ನಡ ಸಾಹಿತ್ಯ ಪರಿಷತ್ ಮೊಳಕಾಲ್ಮೂರು), ಕನ್ನಡ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿ(2019 ), ಸಾಹಿತ್ಯ ವಿಭೂಷಣ ಪ್ರಶಸ್ತಿ (2019 ), ಮಾಸ್ತಿ ರಾಷ್ಟ್ರ ಪ್ರಶಸ್ತಿ (2020- ಸಮಗ್ರ ಸೇವೆ), ಮೈತ್ರಿ ಸಾಹಿತ್ಯ ರತ್ನ ಪ್ರಶಸ್ತಿ (2021), ಕನ್ನಡ ಸಾಹಿತ್ಯ ವಿಭೂಷಣ ರಾಜ್ಯ ಪ್ರಶಸ್ತಿ (2021 ), ಕನ್ನಡ ರತ್ನ ಪ್ರಶಸ್ತಿ (2021), ಕನ್ನಡ ಸೇವಾ ರತ್ನ ಪ್ರಶಸ್ತಿ( 2021-ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ನಗರ ಜಿಲ್ಲಾ ಘಟಕ - ಸಾಹಿತ್ಯ), ಸಾಹಿತ್ಯ ಸಿರಿ ಪ್ರಶಸ್ತಿ ( 2021), ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶ್ರೇಷ್ಠ ಕೃತಿ ಪುರಸ್ಕಾರ ಲಭಿಸಿದೆ.
More About Author