Poem

ಪರದೆ ಹಿಂದಿನ ಪ್ರಗತಿ

ಕವಿ ರಾಜು ಸನದಿ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕು ದಿಗ್ಗೇವಾಡಿಯವರು. ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಣೆ. ಕನ್ನಡ ಪುಸ್ತಕ ಪ್ರಾಧಿಕಾರ ಕೊಡಮಾಡುವ 2018ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿಯ ಪ್ರೋತ್ಸಾಹ ಧನಕ್ಕೆ ಇವರ ‘ದುಗುಡದ ಕುಂಡ’ ಕವನ ಸಂಕಲನ ಆಯ್ಕೆಯಾಗಿತ್ತು. ಪ್ರಖರ ಬರಹಗಾರ್ತಿ ತಸ್ಲೀಮಾ ನಸ್ರಿನ್ ಅವರ ‘At the back of progress' ಕವಿತೆಯನ್ನು ರಾಜು ಸನದಿ ಅವರು ‘ಪರದೆ ಹಿಂದಿನ ಪ್ರಗತಿ’ ಶೀರ್ಷಿಯಡಿ ಕನ್ನಡಕ್ಕೆ ಅನುವಾದಿಸಿದ್ದು ಇಲ್ಲಿದೆ.

 

ಆಫೀಸಿನ ಕೋಣೆ-ಕುರ್ಚಿ ಮೇಲೆ ಕಾಲಿರಿಸಿದವನೊಬ್ಬ
ಡಜನ್ ಹೆಣ್ಣುಗಳ
ಹಣ್ಣಿನ ಸಿಪ್ಪೆಯಂತೆ ಶೀಲ ಸುಲಿದು
ನಶೆಯ ಪಾನೀಯಗಳಲ್ಲಿ ಮೈಮರೆತು
ಒಳಗೊಳಗೆ ತೃಷೆ ತೀರಿಸಿಕೊಂಡವ
ನೋಟ ಬೀಸಿರುವ ನಾಬಿಯತ್ತ

 

ಐದಂಸ್ತಿನ ಬಂಗಲೆಗಳೊಳಗೆ
ವಿವಿಧ ವಾಸನೆಯನ್ನ
ವಿದಧ ಹೆಂಗಳೆಯರೊಂದಿಗೆ ಪೂರೈಸಿಕೊಂಡು ಮತ್ತೆ,
ಮನೆಗೆ ಹೋದಾಗ ಬಡಿಯುವ ಮಡದಿಗೆ
ಇಸ್ತ್ರಿ ಪೆಟ್ಟಿಗೆ ಸುಟ್ಟ ಬಟ್ಟೆಯ ಕಲೆಗಳ ಕಾರಣಕ್ಕೆ

 

ಕೂಲಿಯಾಳುಗಳನ್ನು ಕರೆದು
ಮತ್ತಿನ ಸಿಗಾರೇಟು ಹೊತ್ತಿಸಿ,
ಕೆಲಸದಾಳುಗಳನ್ನು ಕೈಗೊಂಬೆಯಾಗಿಸಿ ಕೂಗಾಡಿ
ಚೀರಾಡಿ ಮತ್ತೆ, ಚಹಾದ
ಗುಟುಕೇರಿಸುವವ
ಲೇಖನಿ ಹಿಡಿದು ಜನರ
ಚಾರಿತ್ರ್ಯ ಚಿತ್ರಿಸುವವ

 

ಗುಸು ಗುಸು ಮಾತುಗಳು ಇವನ ಉದ್ಯೋಗಿಗಳ ಮಧ್ಯೆ
ನಂಬಲಸಾಧ್ಯವೆಂಬಂತೆ
ಹೀಗೆ ಅವನೂ ಏರುಧ್ವನಿಯಲಿ
ದಬ್ಬಾಳಿಸುವವ ಕುಟುಂಬದಲ್ಲಿ
ಆದರೆ,
ಸ್ನೇಹಿತರೊಂದಿಗೆ ಚಿತ್ರನೋಡುವ
ಬಿಗುಮಾನದಿ ಭಾಷಣ ನೀಡುವ
ರಾಜಕೀಯ, ಕಲೆ,ಸಾಹಿತ್ಯ ಜೊತೆ ಹೆಣ್ಣಿನ ಹಾದರದ
ತನ್ನಜ್ಜಿ ಮುತ್ತಜ್ಜಿ ತಾಯಂದಿರ
ನೇಣಿನಲ್ಲಿರುವ ಮರಣಶಯ್ಯದ ಕುರಿತು

 

ಗೆಳೆಯರೊಂದಿಗೆ ನಿರ್ಗಮಿಸುವ
ಮತ್ತೆ ಮನೆಗೆ ಬಂದು ಮಡದಿಗೆ
ಜಡೆ ಹಿಡಿದು ನೂಕುವವ
ಸೋಫಿನ ನೊರೆಗೆ
ಇಲ್ಲವೇ
ನಗುವಿರದ ಮಗುವಿನ ರೋಗದ ಕಾರಣಕ್ಕೆ

 

ಮರುದಿನ ಕೆಲಸದ ವೇಳೆ
ಆರಾಮವಾಗಿ ಟೀ ತರಿಸಿ
ಕಿಸೆಯಲ್ಲಿನ ಲೈಟರ ತೆಗಿಸಿ
ಸಿಗಾರೇಟು ಹೊತ್ತಿಸಿ
ಮಧ್ಯದ ಬಟ್ಟಲು ತರಲು ಆಜ್ಞಾಪಿಸುವ
ಮತ್ತೆ ಯಾರಿಗೂ ಹೇಳದ ತನ್ನ
ಧೂರ್ತ ಇತಿಹಾಸದ ವಿಚ್ಛೇದನೆಗಳ ಸಾಹಸವನ್ನ
ಮೂದಲನೆಯವಳನ್ನ ಬಂಜೆತನಕ್ಕೆ
ಎರಡನೆಯವಳಿಗೆ ಬರಿ ಹೆಣ್ಣು ಹೆತ್ತದ್ದಕ್ಕೆ
ವರದಕ್ಷಿಣೆ ತಾರದಕ್ಕೆ ಮೂರನೆಯವಳನ್ನ

 

ಈಗ ಮತ್ತದೇ
ನಾಲ್ಕನೇಯವಳ ಸರದಿ ಎಂದು
ಖಾರ ಹೆಚ್ಚಾದ ಸಾರಿನ ನೆಪವೊಡ್ಡಿ ಬಡಿಯುವವ
ಇಲ್ಲವೇ ಬೇಯದ ಗಂಜಿಯ
ರುಚಿಯ ನೆನಪೂಡ್ಡಿ.

ಕಲಾಕೃತಿ : ಚಂದ್ರು ಕನಸು

ರಾಜು ಸನದಿ

ರಾಜು ಸನದಿ  1988 ಜೂನ್ 1 ರಂದು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕು ದಿಗ್ಗೇವಾಡಿಯಲ್ಲಿ ಜನಿಸಿದ  ಅವರು ಇಂಗ್ಲಿಷ್ ಸ್ನಾತಕೋತ್ತರ ಪದವಿ ಹೊಂದಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ "ದುಗುಡದ ಕುಂಡ" ಕವನ ಸಂಕಲನವು ಕನ್ನಡ ಪುಸ್ತಕ ಪ್ರಾಧಿಕಾರ ಕೊಡಮಾಡುವ 2018ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿಯ ಪ್ರೋತ್ಸಾಹ ಧನಕ್ಕೆ ಆಯ್ಕೆಯಾಗಿದೆ.

More About Author