ನಕ್ಕು ಬಿಡು ಓ ಮನವೇ
ಹಗುರವಾಗುವುದು ನಿನ್ನ
ಮನದಾಳದ ನೋವು
ನಲಿಯುವುದು ನಿನ್ನ ಮನವು ||
ವುಕ್ಕಿ ಬದುಕಿಹ ದುಃಖ
ಸೊಕ್ಕಿ ಮರೆಯುವ ಮುನ್ನ
ನಗುತ್ತಾ ಹೇಳಿಬಿಡು ಓಮ್ಮೆ
ಬದುಕಿನ ನೋವುಗಳನ್ನೆಲ್ಲ ನೀನು ||
ನೋವ ಮರೆಯುವ ಗಳಿಗೆ
ನೊಂದವರು ಬಂದಾಗ ಬಳಿಗೆ
ನಕ್ಕು ಬಿಡು ಮನಬಿಚ್ಚಿ
ಎದೆಯ ಭಾರ ಇಳಿಸಿಕೊ ನೀನು ||
ಹೊಸ ಬದುಕಲಿ ನೀ
ನಲಿ ಜೇನಿನ ಸಿಹಿಯ ಹಾಗೆ
ಹಳೆ ನೋವನ್ನು ಮರೆ ನೀ
ಅರಳುವ ಮುಗುಳುನಗೆ ಹಾಗೆ ||
ನಸು ನಕ್ಕು ತುಸು ಮುಂದೆ
ಮನದ ನೋವು ಮರೆತಂತೆ
ಜೀವನ ಹಸನಾಗುವುದು
ಚಲವು ಮೈ ಗೂಡುವುದು ||
ಜೀವನಕ್ಕಲ್ಲವೇ ನೋವು
ಕಲ್ಲಿಗೆ ಬರುವುದೇನು?
ನಲಿವು-ನೋವು ಒಂದೇ
ಇವೆ ಬದುಕಿನಲ್ಲಿ ಮುಂದೆ ||
-ಮೊಹಮ್ಮದ್ ಅಜರುದ್ದೀನ್
ಮೊಹಮ್ಮದ್ ಅಜರುದ್ದೀನ್
ಲೇಖಕ ಮೊಹಮ್ಮದ್ ಅಜರುದ್ದೀನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದವರು. ಪ್ರಸ್ತುತ ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ ಎಂಜನಿಯರಿಂಗ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ, ಪ್ರಾದೇಶಿಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದಾರೆ.
ಕೃತಿಗಳು : ಅಕ್ಕಿ-ಚುಕ್ಕಿ, ನಿಸರ್ಗ ನಾದ, ಹೆಬ್ಬೊಳಲು.
ಪ್ರಶಸ್ತಿ-ಪುರಸ್ಕಾರಗಳು: ಕಾವ್ಯಶ್ರೀ ಪ್ರಶಸ್ತಿ
More About Author