ಹಾದಿಯಲ್ಲಿ ಕಾಲು
ಇಟ್ಟಾಗೆಲ್ಲ ಆಕಸ್ಮಿಕವಾಗಿ
ಚುಚ್ಚುವ ಮುಳ್ಳುಗಳು
ಈಗೀಗ ವೇದನೆಯಾಗುವುದಿಲ್ಲ ||
ನಿತ್ಯಶಿಕ್ಷೆಯ ಬಿಸಿ ತಾಕುವ
ಖಾಲಿ ನಯನಗಳಿಗೆ
ನೋವು, ಆನಂದದ ವ್ಯತ್ಯಾಸ
ತಿಳಿಯುವುದಾದರೂ ಹೇಗೆ?
ನಮ್ಮೂರಿನ ಹಾದಿಗಳು ಸೌಹಾರ್ದತೆಯ
ಹಸಿರ ನೋಡಿ ದಶಕವೇ ಕಳೆದಿದೆ
ಈಗ ಅಲ್ಲಿ ಕೇಳುವ ಕರ್ಕಶ ಧ್ವನಿ
ಧರ್ಮಗಳ ಚಿಹ್ನೆಗಳಿಗೆ ಬೇಸರವಿಲ್ಲಿ ||
ಜಾಲಿಮರದ ಕೆಳಗೆ ಕುಳಿತು
ನೆರಳಿಲ್ಲದೆ ಬಿಸಿಲಿಗೆ ಒಣಗಿ
ಮುಳ್ಳುಗಳ ನೋವು ಪಡೆಯುವುದೇ
ಮಿಗಿಲು ಸೌಹಾರ್ದತೆ ಇಲ್ಲದ ಹಾದಿಯಲ್ಲಿ ||
ಮಾನವೀಯತೆ ಮರುಹುಟ್ಟಾಗಬೇಕಿದೆ
ಬಡ ತಾಯಂದಿರ ಮಡಿಲು
ಖಾಲಿಯಾಗುತ್ತಿದೆ ಹಾದಿ
ಉದ್ದಕ್ಕೂ ನಿಸ್ವಾರ್ಥಿಗಳಾಗೋಣ!
ಮೊಹಮ್ಮದ್ ಅಜರುದ್ದೀನ್
ವಿಡಿಯೋ
ವಿಡಿಯೋ
ಮೊಹಮ್ಮದ್ ಅಜರುದ್ದೀನ್
ಲೇಖಕ ಮೊಹಮ್ಮದ್ ಅಜರುದ್ದೀನ್ ಅವರು ಮೂಲತಃ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದವರು. ಪ್ರಸ್ತುತ ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ ಎಂಜನಿಯರಿಂಗ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ, ಪ್ರಾದೇಶಿಕ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದಾರೆ.