Poem

ಅಮ್ಮಾ...

ಅಮ್ಮಾ ನಿನ್ನ ಮಡಿಲಲ್ಲಿ
ಮಲಗಬೇಕಮ್ಮ ಒಮ್ಮೆ.
ಪ್ರೀತಿಸುವೆ ನಿನ್ನನು
ಮಲಗಿಸು ನನ್ನನು
ನಿನ್ನೆಯಾ ಧನಿಯಲ್ಲಿ
ಲಾಲಿಯ ಹಾಡಮ್ಮ||

ನೀನಿದ್ದರೆ ಬೆಳಕಮ್ಮ
ನನ್ನೊಲವ ಜೀವಮ್ಮ
ಕರುಣೆಯ ಕಡಲೇ ನೀನು
ನೀನೊಂದು ಬೆರಗಮ್ಮ||

ದೇವತೆಯೂ ನೀನಾದೆ
ಬೆರಳಿಡಿದು ನಾ ನಡೆದೆ
ಇನ್ನೂನೂ ನಡೆಸು ನನ್ನ
ನಾನೆಂದಿಗು ನಿನ್ನ ಕೂಸಮ್ಮ||

ಆ ಲಾಲಿಯ ಪದವನು
ನೀ ತೂಗಿದ ತೊಟ್ಟಿಲನು
ಕೈತುತ್ತು ನೀಡಿದ ನಿನ್ನನು
ಮರೆಯಲಿ ಹೇಗೆ ಹೇಳಮ್ಮ||

ಮತ್ತೊಮ್ಮೆ ನಿನ್ನ ಮಡಿಲಲಿ
ಮಲಗುವಾಸೆ ಎದೆಯಲಿ
ಹಾಡಿ ತಟ್ಟುತ್ತಾ ಬಳಿಯಲಿ
ನೀನರಬೇಕು ನನ್ನ ಒಲವಮ್ಮ||


- ರವಿ ಶಿವರಾಯಗೊಳ

ರವಿ ಶಿವರಾಯಗೊಳ

ರವಿ ಶಿವರಾಯಗೊಳ ಅವರು ಮೂಲತಃ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಭೀವರ್ಗಿ ಎಂಬ ಪುಟ್ಟ ಹಳ್ಳಿಯವರು. ಡಿಪ್ಲೋಮಾ ವಿದ್ಯಾರ್ಹತೆಯನ್ನು ಪಡೆದಿರುವ ಅವರು ಸದ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಸಾಹಿತ್ಯ ಕ್ಷೇತ್ರ ಅವರ ಆಸಕ್ತಿಯಾಗಿದೆ. ದಿನಪತ್ರಿಕೆಗಳಾದ ವಿಶ್ವವಾಣಿ, ಕರ್ಮವೀರ, ಉದಯವಾಣಿ, ಓ ಮನಸೇ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಕವಿತೆ, ಕವನ, ಕಥೆ, ಲೇಖನ ಪ್ರಕಟಗೊಂಡಿರುತ್ತದೆ.

More About Author