Date: 06-01-2023
Location: ಹಾವೇರಿ
ಗ್ರಂಥಾಲಯ ಜ್ಞಾನಾರ್ಜನೆಯ ದೇಗುಲ. ಗ್ರಂಥಾಲಯಗಳನ್ನು ಉನ್ನತೀಕರಿಸುವುದು ಸರ್ಕಾರದ ಪ್ರಮುಖ ಜವಾಬ್ದಾರಿ. ಈ ನಿಟ್ಟಿನಲ್ಲಿ ರಾಜ್ಯ ಗ್ರಂಥಾಲಯಕ್ಕೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡರು, ಈ ಹೊತ್ತು ಪುಸ್ತಕೋದ್ಯಮ ಸೊರಗಬಾರದು. ಅದು ಪರಿಪ್ಲುತವಾಗಬೇಕು. ಗ್ರಂಥಗಳು ಸರಕುಗಳಲ್ಲ. ಅವುಗಳಲ್ಲಿ ಸಂಸ್ಕೃತಿಯ ಹೃದಯವಿದೆ. ಬಿಬಿಎಂಪಿ ಗ್ರಂಥಾಲಯಗಳಿಗೆ ಕೊಡಬೇಕಾದ 500ಕೋಟಿ ಹಣವನ್ನು ಬಾಕಿ ಉಳಿಸಿಕೊಂಡು ಆ ಹಣವನ್ನು ಬೇರೆ ಖಾತೆಗಳಿಗೆ ನೀಡಿ ಪುಸ್ತಕೋದ್ಯಮಕ್ಕೆ ಬಹಳ ಅನ್ಯಾಯ ಅನ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹೀಗಾದರೆ, ಪುಸ್ತಕ ಪ್ರಕಾಶಕರು ಬದುಕುವುದು ಹೇಗೆ? ಪುಸ್ತಕ ಬರೆಯುವ ಬರಹಗಾರರು ಬದುಕುವುದು ಹೇಗೆ? ಇಂಥ ವಿಷಮ ಸ್ಥಿತಿಯಲ್ಲಿ ಪುಸ್ತಕೋದ್ಯಮ ಬೆಳೆಯುವುದಾದರೂ ಹೇಗೆ? ನಮ್ಮ ಸರ್ಕಾರ ಇದನ್ನು ಸರಿಪಡಿಸಬೇಕು. ಪುಸ್ತಕೋದ್ಯಮಕ್ಕೆ ಕಾಯಕಲ್ಪ ಮಾಡಬೇಕಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ಇದುವರೆಗೆ ಸಗಟು ಖರೀದಿಗೆ ಸಂಬಂಧಿಸಿದಂತೆ ಏಕಗವಾಕ್ಷಿ ಮೂಲಕ ಒಬ್ಬೊಬ್ಬ ಪ್ರಕಾಶಕರಿಂದ 300 ಪ್ರತಿಗಳನ್ನು ಮಾತ್ರ ಕೊಳ್ಳುತ್ತಿದೆ. ಇಂದಿನ ದಿನಮಾನಗಳಲ್ಲಿ ಪುಸ್ತಕೋದ್ಯಮ ಬದುಕುಳಿಯಬೇಕಾದರೆ ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳದಲ್ಲಿರುವಂತೆ ಕನಿಷ್ಠ 500 ಪ್ರತಿಗಳನ್ನಾದರೂ ಕೊಳ್ಳುವ ಮನಸ್ಸು ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಆಯಾ ವರ್ಷ ಖರೀದಿಸಿದ ಪುಸ್ತಕದ ಹಣವನ್ನು ಪ್ರಕಾಶಕರಿಗೆ ತಲುಪಿಸುವ ತುರ್ತು ಕಾರ್ಯವೂ ಆಗಬೇಕಿದೆ ಎಂದು ಕನ್ನಡ ಪುಸ್ತಕೋದ್ಯಮದ ಪರಿಸ್ಥಿತಿಯನ್ನು ತಿಳಿಸಿದರು.
ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ಭಾನುವಾರದಂದು ಕನಕ ಶರೀಫ-ಸರ್ವಜ್ಞ ಪ್ರದಾನ ವ...
ಹಾವೇರಿ : ಬರವಣಿಗೆಯ ಯುಗದಲ್ಲಿ ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿರುವುದೇಕೇ ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿದೆ ಎನ...
ಇಂಗ್ಲಿಷ್ ಮಾಧ್ಯಮ ಶಾಲೆಗಳ ಆರಂಭಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದು ...
©2025 Book Brahma Private Limited.