Date: 15-11-2024
Location: ಕಲಬುರಗಿ
ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ -2024’ಕ್ಕೆ ವಿದ್ಯಾರಶ್ಮಿ ಪೆಲತ್ತಡ್ಕ, ಪ್ರಭಾವತಿ ದೇಸಾಯಿ, ವೀರೇಂದ್ರ ರಾವಿಹಾಳ್, ಪೂರ್ಣಿಮಾ ಮಾಳಗಿಮನಿ, ದ್ವಾರನಕುಂಟೆ ಪಾತಣ್ಣ, ಗುರುಪ್ರಸಾದ ಕಂಟಲಗೆರೆ, ಡಾ.ಪರವಿನ ಸುಲ್ತಾನಾ, ಡಾ.ಪ್ರಕಾಶ ಭಟ್, ಡಾ.ಎಚ್.ಎಸ್.ಸತ್ಯನಾರಾಯಣ ಹಾಗೂ ಮಂಜುನಾಥ ಚಾಂದ್ ಅವರ ಕೃತಿಗಳು ಆಯ್ಕೆಯಾಗಿವೆ.
ವಿದ್ಯಾರಶ್ಮಿ ಪೆಲತ್ತಡ್ಕ ಅವರ ಕೆರೆ-ದಡ, ಪ್ರಭಾವತಿ ದೇಸಾಯಿ ಅವರ ಸೆರಗಿಗಂಟಿದ ಕಂಪು, ವೀರೇಂದ್ರ ರಾವಿಹಾಳ್ ಅವರ ಡಂಕಲ್ ಪೇಟೆ, ಪೂರ್ಣಿಮಾ ಮಾಳಗಿಮನಿ ಅವರ ಮ್ಯಾಜಿಕ್ ಸೌಟು, ದ್ವಾರನಕುಂಟೆ ಪಾತಣ್ಣ ಅವರ ರಾಣಿ ಅಹಲ್ಯಾಬಾಯಿ ಹೋಳ್ಕರ್, ಗುರುಪ್ರಸಾದ ಕಂಟಲಗೆರೆ ಅವರ ಅಟ್ರಾಸಿಟಿ, ಡಾ.ಪರವಿನ ಸುಲ್ತಾನಾ ಅವರ ಶರಣರ ನಾಡಿನ ಸೂಫಿ ಮಾರ್ಗ, ಡಾ.ಪ್ರಕಾಶ ಭಟ್ ಅವರ ಹಳ್ಳಿಗಳನ್ನು ಕಟ್ಟುವ ಕಷ್ಟ ಸುಖ, ಡಾ.ಎಚ್.ಎಸ್.ಸತ್ಯನಾರಾಯಣ ಅವರ ಬಿದಿರ ತಡಿಕೆ ಹಾಗೂ ಮಂಜುನಾಥ ಚಾಂದ್ ಅವರ ಪ್ರಿಯ ಮೀರಾ ಕೃತಿಗಳನ್ನು 2024 ನೇ ವರ್ಷದ ‘ಅಮ್ಮ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ತಲಾ 5000 ರೂ. ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ, ಸತ್ಕಾರ ಮತ್ತು ಈ ನೆಲದ ಸಿರಿಧಾನ್ಯ ತೊಗರಿ ಬೇಳೆ ಒಳಗೊಂಡಿರುತ್ತದೆ. ನವೆಂಬರ್ 26 ರಂದು ಸಂಜೆ 5:30ಕ್ಕೆ ಸೇಡಮ್‌ನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ‘ಅಮ್ಮ ಪ್ರಶಸ್ತಿ’ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.
ಬೆಂಗಳೂರು: ಸುಗಮ ಸಂಗೀತ ಕ್ಷೇತ್ರಕ್ಕೆ ಲಕ್ಷ್ಮೀ ನಾರಾಯಣ ಭಟ್ಟ ಅವರು ಅನುಪಮವಾದ ಕೊಡುಗೆಯನ್ನು ಕೊಟ್ಟಿದ್ದಾರೆ. ಅವರು ಯಾ...
ಬೆಂಗಳೂರು: “ಎಕ್ಸ್ ಕ್ಯೂಸ್ ಮಿ” ಸಿನಿಮಾದ ನಂತರ ಎರಡು ದಶಕಗಳ ಹತ್ತಿರ ಮ್ಯೂಸಿಕಲ್ ಲವ್ ಸ್ಟೋರಿ ಥೀಮ್&zwn...
ಬೆಂಗಳೂರು: ನವೆಂಬರ್ ಎಂದರೆ ಕನ್ನಡದ ಹಬ್ಬದ ಮಾಸ. ಈ ಮಾಸಕ್ಕೆ ಮೆರುಗು ಹೆಚ್ಚಿಸಲು ನಗರದಲ್ಲಿ ಸಾಹಿತ್ಯ ಆಸಕ್ತರಿಗ...
©2024 Book Brahma Private Limited.