‌ಕರ್ನಾಟಕ, ವಿಶ್ವದಾದ್ಯಂತ ಶರೀಫರು ಇದ್ದಾರೆ ಎಂದಾದರೆ ಅದಕ್ಕೆ ಮುಖ್ಯ ಕಾರಣ ಎನ್ನೆಸ್ಸೆಲ್: ಬಿಆರೆಲ್‌

Date: 15-11-2024

Location: ಬೆಂಗಳೂರು


ಬೆಂಗಳೂರು: ಸುಗಮ ಸಂಗೀತ ಕ್ಷೇತ್ರಕ್ಕೆ ಲಕ್ಷ್ಮೀ ನಾರಾಯಣ ಭಟ್ಟ ಅವರು ಅನುಪಮವಾದ ಕೊಡುಗೆಯನ್ನು ಕೊಟ್ಟಿದ್ದಾರೆ. ಅವರು ಯಾವಾಗಲು ಒಂದು ಮಾತು ಹೇಳುತ್ತಿದ್ದರು ಒಬ್ಬ ಒಳ್ಳೆಯ ಭಾವಗೀತಾ ರಚನಕಾರನಾಗುವ ಮೊದಲು ಕವಿಯಾಗಿರಬೇಕು ಎಂದು. ಎನ್ನೆಸ್ಸೆಲ್ ತುಂಬಾ ಒಳ್ಳೆಯ ಕವಿ ಮತ್ತು ಅನುವಾದಕ. ಮೃಚ್ಛಕಟಿಕ, ಠಾಗೂರರ ಇಸ್ಪಿಟ್‌ ರಾಜ್ಯ, ಶೇಕ್ಸ್ಪಿಯರ್ ಸಾನೆಟ್ಸ್‌, ಇಲಿಯೆಟ್‌ಗಳ ಅನುವಾದ ಅಮೂಲ್ಯವಾದದ್ದು. ಉತ್ತರ ಕರ್ನಾಟಕಕ್ಕೆ ಮಾತ್ರ ಪರಿಚಿತರಾಗಿದ್ದ ಶರೀಫರ ಗೀತೆಗಳನ್ನು ಸಂಗ್ರಹಿಸಿ ಪ್ರಕಟಿಸಿದರು. ಅಲ್ಲದೇ ಅದಕ್ಕೆ ಅಶ್ವಥ್‌ ಕೈಯಲ್ಲಿ ರಾಗ ಸಂಯೋಜನೆ ಮಾಡಿಸಿದರು. ಇದರಿಂದ ಶರೀಫರು ಕರ್ನಾಟಕ ಮಾತ್ರ ಅಲ್ಲ ವಿಶ್ವದಾದ್ಯಂತ ಪರಿಚಿತರಾಗಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಲಕ್ಷ್ಮೀ ನಾರಾಯಣ ಭಟ್ಟರು ಎಂದು ಬಿ. ಆರ್‌. ಲಕ್ಷ್ಮಣ್‌ರಾವ್‌ ಹೇಳಿದರು. 

ಕರ್ನಾಟಕ ಸುಗಮ ಸಂಗೀತ ಪರಿಷತ್ತು (ರಿ.) ಬೆಂಗಳೂರು ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ನಗರದ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ ವೇದಿಕೆಯಲ್ಲಿ ನವೆಂಬರ್‌ 15 ರಂದು ನಡೆದ ʻಮರೆಯಲಾಗದ ಮಹನೀಯರುʼ ಕಾರ್ಯಕ್ರಮದಲ್ಲಿ ಬಿಆರೆಲ್‌ ಮಾತನಾಡಿದರು. 

ಹೋದಲೆಲ್ಲಾ ಶರೀಫರ ಬಗ್ಗೆ ಲಕ್ಷ್ಮೀ ನಾರಾಯಣ ಭಟ್ಟರು ಮಾತನಾಡುತ್ತಿದ್ದರು ಇದರಿಂದ ಅವರನ್ನ ಶರೀಫ್‌ ಭಟ್ಟರು ಅಂತ ಕರೆಯುತ್ತಿದ್ದರು. ಅಮೇರಿಕಾಕ್ಕೆ ಹೆಚ್ಚು ಬಾರಿ ಹೋಗಿ ಬಂದಿದ್ದರು. ಇವರ ಉಪನ್ಯಾಸ ಅಲ್ಲಿ ಅಷ್ಟು ಹೆಸರುವಾಸಿ ಆಗಿತ್ತು. ನಂತರ ಅವರು ಉಪನ್ಯಾಸವನ್ನು ಸಿ.ಡಿ. ಮಾಡಿ ಕಳಿಸಿದ್ದರು. ಅದೂ ಇಡೀ ಕನ್ನಡ ಸಾಹಿತ್ಯ ಚರಿತ್ರೆಯ ಬಗ್ಗೆ ಮಾಡಿದ್ದರು. ಒಂದು ರೀತಿ ಕನ್ನಡ ಸಾಹಿತ್ಯ ಸೀಮೋಲಂಘನ ಮಾಡಲು ಎನ್ನೆಸ್ಸೆಲ್ ಕಾರಣರಾದರು ಎಂದು ಬಿಆರೆಲ್‌ ನೆನಪು ಮಾಡಿಕೊಂಡರು. 

ಮೈಸೂರು ಅನಂತರ ಸ್ವಾಮಿ ಅವರ ಕುರಿತು ನಗರ ಶ್ರೀನಿವಾಸ ಉಡುಪ ಮಾತನಾಡಿದರು. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಗೆ ಹುಟ್ಟುಬ್ಬದ ಪ್ರಯುಕ್ತ ಕರ್ನಾಟಕ ಸುಗಮ ಸಂಗೀತ ಪರಿಷತ್ತು ವತಿಯಿಂದ ಸನ್ಮಾನಿಸಲಾಯಿತು. 

 



 

MORE NEWS

‘ರಿದಂ’ಗೆ ಮಂತ್ರಾಲಯದಲ್ಲಿ ಶ್ರೀಗಳ ಆಶೀರ್ವಾದ

15-11-2024 ಬೆಂಗಳೂರು

ಬೆಂಗಳೂರು: “ಎಕ್ಸ್ ಕ್ಯೂಸ್ ಮಿ” ಸಿನಿಮಾದ ನಂತರ ಎರಡು ದಶಕಗಳ ಹತ್ತಿರ ಮ್ಯೂಸಿಕಲ್ ಲವ್ ಸ್ಟೋರಿ ಥೀಮ್&zwn...

ವೀರಲೋಕ ಪುಸ್ತಕ ಸಂತೆ ಆರಂಭ

15-11-2024 ಬೆಂಗಳೂರು

ಬೆಂಗಳೂರು: ನವೆಂಬರ್‌ ಎಂದರೆ ಕನ್ನಡದ ಹಬ್ಬದ ಮಾಸ. ಈ ಮಾಸಕ್ಕೆ ಮೆರುಗು ಹೆಚ್ಚಿಸಲು ನಗರದಲ್ಲಿ ಸಾಹಿತ್ಯ ಆಸಕ್ತರಿಗ...

ವಿದ್ಯಾರಶ್ಮಿ ಪೆಲತ್ತಡ್ಕ, ಪ್ರಭಾವತಿ ದೇಸಾಯಿ ಸೇರಿ 10 ಜನರಿಗೆ 2024ನೇ ಸಾಲಿನ ʻಅಮ್ಮ ಪ್ರಶಸ್ತಿʼ

15-11-2024 ಕಲಬುರಗಿ

ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ...