ಕತೆ ಡಬ್ಬಿಯಲ್ಲಿ ಒಂದೊಂದು ಕಥೆಯೂ ವಿಭಿನ್ನವಾಗಿ ಮೂಡಿಬಂದಿದೆ. ಹಿಂದಿನ ಕಥೆಗೆ ಮುಂದಿನ ಕತೆಯ ಲಿಂಕ್ ಇಲ್ಲ, ಆ ಕಥೆಯೇ ಬೇರೆ ಈ ಕಥೆಯೇ ಬೇರೆ. ಒಂದರಲ್ಲಿ ಹಾಸ್ಯ ಮನೆ ಮಾಡಿದ್ದರೆ ಇನ್ನೊಂದರಲ್ಲಿ ಗಹನವಾಗಿ ಯೋಚಿಸುವಂತೆ ಬಹಳ ಅದ್ಭುತವಾಗಿ ಬರೆದಿದ್ದಾರೆ ಎನ್ನುತ್ತಾರೆ ಬರಹಗಾರ್ತಿ ಛಾಯಾ ಹೆಗಡೆ. ಅವರು ಲೇಖಕಿ ರಂಜನಿ ರಾಘವನ್ ಅವರ ಕತೆ ಡಬ್ಬಿ ಕಥಾ ಸಂಕಲನದ ಬಗ್ಗೆ ಬರೆದ ಲೇಖನ ನಿಮ್ಮ ಓದಿಗಾಗಿ...
ಪುಸ್ತಕ: ಕತೆ ಡಬ್ಬಿ
ಲೇಖಕರು: ರಂಜನಿ ರಾಘವನ್
ಪ್ರಕಾಶಕರು: ಬಹುರೂಪಿ
ಪುಸ್ತಕದ ಪುಟ: 172
ಪುಸ್ತಕದ ಬೆಲೆ: 200
ಲೇಖಕರ ಪರಿಚಯ
ಕನ್ನಡತಿ ಧಾರಾವಾಹಿಯ ಎಲ್ಲರ ನೆಚ್ಚಿನ ಭುವಿ 'ಕತೆ ಡಬ್ಬಿ' ಪುಸ್ತಕದ ಲೇಖಕಿ. ಇವರು ನಟನೆಯ ಜೊತೆ ಜೊತೆಗೆ ತಮ್ಮ ಎಂ. ಬಿ. ಎ ಪದವಿಯನ್ನು ಮುಗಿಸಿದ್ದಾರೆ. ಅದರ ಜೊತೆಗೆ ಅವರು ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತಾ ಇದ್ದಾರೆ. ಇವರು ಸದಾ ಒಂದಿಲ್ಲೊಂದು ಕನಸಿನತ್ತ ಜೀಕುವ ಇವರು ನಟನೆ ಹಾಗೂ ಓದಿನ ಜೊತೆ ಜೊತೆಗೆ ಬರವಣಿಗೆಯನ್ನು ಶುರು ಮಾಡಿದ್ದಾರೆ. ಇದು ಅವರ ಚೊಚ್ಚಲ ಕೃತಿ. ಅವರು "ಅವಧಿ" ವೆಬ್ ಮ್ಯಾಗಜಿನ್ ನಲ್ಲಿ ಕಥೆಗಳನ್ನು ಬರೆದಿದ್ದಾರೆ. ಹೀಗೆ ಅವರ ಪಯಣ ಸಾಗಲಿ ಎಂದು ಆಶಿಸೋಣ.
ಪುಸ್ತಕ ಪರಿಚಯ
ಕತೆ ಡಬ್ಬಿಯಲ್ಲಿ ವಿಭಿನ್ನವಾದ ಕಥೆಗಳು ಇವೆ. ಒಂದೊಂದು ಕಥೆಯಲ್ಲೂ ನೀತಿ ಇದೆ. ಈ ಕತೆ ಡಬ್ಬಿಯಲ್ಲಿ ಒಟ್ಟು ಹದಿನಾಲ್ಕು ಕತೆಗಳು ಇವೆ. ಇವರು ಕಥೆ ಹೇಳುವ ಪರಿಯೇ ಚಂದ. ಬಹಳ ವೇಗವಾಗಿ ಹಾಗೂ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ.
* ಕ್ಯಾಬ್ we met
ರಕ್ತ ಸಂಬಂಧವೇ ಸಂಬಂಧವಲ್ಲ, ಅದಕ್ಕೂ ಮೀರಿ ಅಪರಿಚಿತರು ಪರಿಚಿತರಾಗಿ ಆಪ್ತರಾಗುತ್ತರೆ ಎಂದು ಬಹಳ ಚಂದವಾಗಿ ವಿವರಿಸಿದ್ದಾರೆ. ಹಾಗೆಯೇ ನಮಗೆ ನಾವೇ ಸಾಟಿ ನಮ್ಮ ಆಸೆ ಆಕಾಂಕ್ಷೆಗಳನ್ನು ಬೇರೆಯವರಿಗೋಸ್ಕರ ಎಂದು ತ್ಯಾಗ ಮಾಡಬಾರದು ಎಂದು ಕತೆಯಲ್ಲಿ ಹೇಳಿದ್ದಾರೆ.
* ಮಾತುಗಾರರಿದ್ದಾರೆ ಎಚ್ಚರಿಕೆ
'ಮಾತು ಮರಳು ಮಾಡಿತು' ಎಂಬುವುದನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ. ವಿದೇಶದಿಂದ ಬಂದ ಮಗ ಹಳ್ಳಿ ಉದ್ದಾರ ಮಾಡುತ್ತಾನೆ ಎಂದುಕೊಂಡು ಊರವರು ಹಾಗೂ ಅವನ ಅಮ್ಮ ಆಸೆ ಪಟ್ಟಿದ್ದೆ ಬಂತು ಯಾವಾಗ ಅವನ ಸಹಾಯದ ಅವಶ್ಯಕತೆ ಇತ್ತೋ ಅಂದೆ ಅವನು ಬಾರದೆ ಅಲ್ಲಿಂದ ಪಲಾಯನ ಮಾಡಿದ್ದನು. ಅವನು 'ಮಾತಿನಲ್ಲಿ ಮನೆ ಕಟ್ಟಿದನೆ ಹೊರತು ಯಾರಿಗೂ ಸಹಾಯ ಮಾಡಲಿಲ್ಲ. ಕೊನೆಗೆ ಅವನ ತಾಯಿಗೆ ಹೇಗೆ ಊರವರ ಮುಂದೆ ಮುಜುಗರ ಪಡಬೇಕಾಯಿತು ಎಂದು ಹೇಳಿದ್ದಾರೆ.
* ಕಾಣೆಯಾದವರ ಬಗ್ಗೆ ಪ್ರಕಟಣೆ
ಮಂಗ ತನ್ನ ಕಳೆದುಕೊಂಡ ಮರಿಯನ್ನು ಅರಸಿ ಕಾಡಿನಿಂದ ನಾಡಿಗೆ ಬಂದಿದ್ದು ಹಾಗೂ ಒಂದು ಊರಲ್ಲಿ ಮನುಷ್ಯರಿಂದ ನಾಯಿಯನ್ನು ಕಾಪಾಡಿ ಅದರ ಬಳಿ ತನ್ನ ಕಷ್ಟವನ್ನು ಹೇಳಿಕೊಂಡು ತನ್ನ ಮರಿಯನ್ನು ಹುಡುಕಲು ಪ್ರಯತ್ನ ಪಟ್ಟಿತು. ನಾಯಿ ತನ್ನ ಪರಿಚಯ ಇರುವವರಿಗೆ ಮಂಗನ ಕಥೆ ಹೇಳಿ ಸುತ್ತ ಮುತ್ತ ಹಳ್ಳಿಯಲ್ಲಿ ಹುಡುಕಿದರೂ ಮಂಗನ ಮರಿಯ ಪತ್ತೆ ಆಗುವುದಿಲ್ಲ. ತನ್ನ ಮರಿ ಏನಾಯಿತೋ ಏನೋ ಇನ್ನು ಇಲ್ಲಿ ಇದ್ದು ಪ್ರಯೋಜನವಿಲ್ಲ ಎಂದು ಹೊರಡುವ ಸಮಯಕ್ಕೆ ಊರಲ್ಲಿ ಜಾತ್ರೆಯ ಸಂಭ್ರಮ ನೋಡಿ ನಾಯಿಯ ಒತ್ತಾಯಕ್ಕೆ ಮಣಿದು ಅಲ್ಲೆ ಉಳಿಯಿತು. ಮಂಗಕ್ಕೆ ಮರಿ ಸಿಗುತ್ತದ ಇಲ್ಲವ ಎಂದು ಕತೆಯನ್ನು ಓದಿ.
* ನಂಜನೂಡು to ನೀವ್ಜರ್ಸಿ
ತನ್ನ ಹೊಲ ಹಾಗೂ ಪತಿಯ ಸಮಾಧಿಯನ್ನು ಉಳಿಸಿಕೊಳ್ಳಲು ತನ್ನ ಇಳಿ ವಯಸ್ಸನ್ನು ಲೆಕ್ಕಿಸದೇ ನಂಜನಗೂಡಿನಿಂದ ನೀವ್ಜರ್ಸಿ ಗೆ ಆರು ತಿಂಗಳು ಬಾಳಂತನ ಮಾಡಲು ಹೋದವರ ಕತೆಯನ್ನು ಬಹಳ ಸೊಗಸಾಗಿ ಬರೆದಿದ್ದಾರೆ. ಏತಕ್ಕಾಗಿ ಅಲ್ಲಿಗೆ ಹೋದರು ಹಾಗೂ ಅಲ್ಲಿ ಹೇಗೆ ಇದ್ದರು ಎಂದು ತಿಳಿಯಲು ಕತೆಯನ್ನು ಓದಿರಿ
* ದೇವರು ಕಾಣೆಯಾಗಿದ್ದಾರೆ
ಬಂಗಾರ ಅಂಗಡಿಯ ಸೇಠ್ ಜಿ ಒಂದು ಮಹಾಲಕ್ಷ್ಮಿ ದೇವಿಯ ಫೋಟೋಗೋಸ್ಕರ ಏನೆಲ್ಲಾ ಮಾಡಿದರು. ಹಾಗದರೆ ಆ ಫೋಟೋ ಅಲ್ಲಿ ಅಂತಹದ್ದು ಏನು ಇತ್ತು, ಅದನ್ನು ಹುಡುಕಲು ಆ ಸೇಠ್ ಜೀ ಯ ಮಗ ಪೇಪರ್ ಅಲ್ಲಿ ದೇವರು ಕಾಣೆಯಾಗಿದ್ದಾರೆ ಎಂದು ಪ್ರಕಟಿಸಿ ನಗೆ ಪಟಾಲಿಗೆ ಈಡಾಗಿದ್ದು ಎಲ್ಲವನ್ನೂ ಬಹಳ ಸುಂದರವಾಗಿ ಬರೆದಿದ್ದಾರೆ. ಕೊನೆಗೆ ಮಗನೆ ಅಪ್ಪನ ಕಣ್ಣು ತೆರೆಸಿ ಆ ಫೋಟೋ ಹಿಂದೆ ಹೋಗುವುದನ್ನು ಹೇಗೆ ತಪ್ಪಿಸಿದನು ಎಂದು ಹೇಳುತ್ತಾರೆ.
ಹೀಗೆ "ಅಪ್ಪನ ಮನೆ ಮಾರಾಟಕ್ಕಿದೆ", "ಚುಚ್ಚುಮದ್ದಿನ ಸೈಡ್ ಎಫೆಕ್ಟ್ಸ್", "ವೀಕೆಂಡ್ ಸ್ವಯಂವರ ", " ಉಪ್ಪಿಲ್ಲದ ಸತ್ಯಾಗ್ರಹ", "English ಕೃಷ್ಣ" " ಕಾಣದ ಕಡಲಿಗೆ" , "ವೈರಾಗ್ಯದ ವ್ಯಾಲಿಡಿಟಿ", "Hungry Man" ಹಾಗೂ "ಯಾರು? ಬಹಳ ಚೆನ್ನಾಗಿ ಬರೆದಿದ್ದಾರೆ.
ಒಟ್ಟಾರೆ ಹೇಳಬೇಕು ಎಂದರೆ ಒಂದೊಂದು ಕಥೆಯೂ ವಿಭಿನ್ನವಾಗಿ ಮೂಡಿಬಂದಿದೆ. ಹಿಂದಿನ ಕಥೆಗೆ ಮುಂದಿನ ಕತೆಯ ಲಿಂಕ್ ಇಲ್ಲ, ಆ ಕಥೆಯೇ ಬೇರೆ ಈ ಕಥೆಯೇ ಬೇರೆ. ಒಂದರಲ್ಲಿ ಹಾಸ್ಯ ಮನೆ ಮಾಡಿದ್ದರೆ ಇನ್ನೊಂದರಲ್ಲಿ ಗಹನವಾಗಿ ಯೋಚಿಸುವಂತೆ ಬಹಳ ಅದ್ಭುತವಾಗಿ ಬರೆದಿದ್ದಾರೆ.
- ಛಾಯಾ ಹೆಗಡೆ
ರಂಜನಿ ರಾಘವನ್ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ...
ಕತೆ ಡಬ್ಬಿ ಕೃತಿ ಪರಿಚಯ...
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...
©2024 Book Brahma Private Limited.