"ಈ ಕಥಾಸಂಕಲನದಲ್ಲಿ ಬರೀ ನೇರಳೆ ಬಣ್ಣ ಮಾತ್ರವಲ್ಲದೇ ಅವರೊಳಗೆ ಕಾಡಿದ ಬದುಕಿನ ಎಲ್ಲಾ ಬಣ್ಣಗಳೂ ಇವೆ.. ಮುಖ್ಯವಾಗಿ ಇದನ್ನು ಯುವಜನತೆ ಓದಬೇಕು. ಓದಿದವರನ್ನು ಈ ಎಲ್ಲಾ ಬಣ್ಣಗಳು ಖಂಡಿತಾ ಆವರಿಸುತ್ತದೆ," ಎನ್ನುತ್ತಾರೆ ರಾಜೇಶ್ ಕುಮಾರ್ ಕಲ್ಯ. ಅವರು ಪ್ರಸಾದ್ ಶೆಣೈ ಆರ್. ಕೆ ಅವರ "ನೇರಳೆ ಐಸ್ ಕ್ರೀಂ" ಕೃತಿ ಕುರಿತು ಬರೆದ ವಿಮರ್ಶೆ.
ಪ್ರಸಾದ್ ಶೆಣೈ ಅವರ ಬರಹಗಳು ಯಾಕೆ ಇಷ್ಟವಾಗತ್ತೆ ಅಂದ್ರೆ ಅವು ಕರಾವಳಿ, ಮಲೆನಾಡಿನ ಜನಸಾಮಾನ್ಯರ ನಡುವಿನಿಂದಲೇ ಹುಟ್ಟಿ ಬಂದವು. ಹಾಗಾಗಿ ಅವರ ಕೃತಿಗಳ ಮೇಲೆ ನಿರೀಕ್ಷೆ ಹೆಚ್ಚು... ನೇರಳೆ ಐಸ್‌ಕ್ರೀಂ ಕಥಾಸಂಕಲನ ಕೂಡಾ ಅಂತದೇ ಕಥೆಗಳ ಗುಚ್ಚ... ಈ ಕಥೆಗಳನ್ನು ಓದುತ್ತಾ ಹೋದಂತೆ ಪ್ರಕೃತಿಯ ವರ್ಣನೆ ನೋಡಿದಾಗ ಮಲೆನಾಡನ್ನು ವರ್ಣಿಸುವ ಕುವೆಂಪು ನೆನಪಾಗ್ತಾರೆ, ಕಾಡಿನ ನೆಂಟರಾದ ತೇಜಸ್ವಿ , ಶಿವರಾಮ ಕಾರಂತರು ನೆನಪಾಗ್ತಾರೆ...
ಇದರಲ್ಲಿನ ಹದಿನೈದು ಕಥೆಗಳೂ ಹದಿನೈದು ಲೋಕವನ್ನು ತೋರಿಸುವಂತವು.. ಯಕ್ಷಗಾನದ ಪರಿಚಯಸ್ಥರಿಗೆ ಇವ ನಮ್ಮವನೇ ಅನ್ನಿಸುವ ಭಾಗವತ ಗಿರಿಧರ , ನಮ್ಮೆ ಕಣ್ಣೆದುರೇ ಕೂತು ಬಿಸ್ಕೀಟು ಚಕ್ಕುಲಿ ತಿನ್ನುವ ಮರಿ ಮಹಿಷಾಸುರ , ಇನ್ನು thunder mushroom ಅಥವಾ ಕಲ್ಲಲಾಂಬಿನ ಕಥೆಯನ್ನು ನಾವೇ ನೋಡಿದಂತಿದೆ , ಒಂದು ಸಮುದಾಯಕ್ಕೆ ಸೇರಿದ ಜನರು ಗುಡ್ಡಗಾಡು ಅಲೆದು ಸಂಗ್ರಹಿಸುವ ಕಲ್ಲುಅಣಬೆ... ಕುರ್ಲು ಪಚ್ಚಡಿ(ಚುರುಮುರಿ) .. ನೇರಳೆ ಐಸ್‌ಕ್ರೀಂ ಕೂಡಾ ಅಂತದೇ ಒಂದು ಕಥೆ... ಇವರ ಪ್ಲಸ್ ಪಾಯಿಂಟ್ ಏನೆಂದರೆ ದೃಶ್ಯವನ್ನು ಮನ ಮುಟ್ಟುವಂತೆ ನಿರೂಪಿಸುವುದು.. ಓದುಗರನ್ನು ಕಥೆಗಳಲ್ಲಿ ಜೀವಿಸುವಂತೆ ಮಾಡುವುದೂ ಕೂಡಾ ಒಂದು ಕಲೆ.. ಪ್ರಸಾದ್ ಶೆಣೈಯವರಿಗೆ ಆ ಕಲೆ ಸಿದ್ಧಿಸಿದೆ.. ಇವರ ಕಥೆಗಳಲ್ಲೂ ಕೂಡಾ ಓದುತ್ತಿರುವಷ್ಟು ಹೊತ್ತು ನಾವೇ ಜೀವಿಸುತ್ತಾ ಸಾಗುತ್ತೇವೆ. ಅವರು ಮುನ್ನುಡಿಯಲ್ಲಿ ಹೇಳುವಂತೆ ಈ ಕಥಾಸಂಕಲನದಲ್ಲಿ ಬರೀ ನೇರಳೆ ಬಣ್ಣ ಮಾತ್ರವಲ್ಲದೇ ಅವರೊಳಗೆ ಕಾಡಿದ ಬದುಕಿನ ಎಲ್ಲಾ ಬಣ್ಣಗಳೂ ಇವೆ.. ಮುಖ್ಯವಾಗಿ ಇದನ್ನು ಯುವಜನತೆ ಓದಬೇಕು. ಓದಿದವರನ್ನು ಈ ಎಲ್ಲಾ ಬಣ್ಣಗಳು ಖಂಡಿತಾ ಆವರಿಸುತ್ತದೆ.. ನಿಮ್ಮ ನಿರೀಕ್ಷೆ ಸುಳ್ಳಾಗದು ಸರ್
"ಮಾನವನಿಂದ ತಿಳಿಯಬಲ್ಲ ವಿಶ್ವದ ಬಗೆಗಿನ ಜ್ಞಾನದ ಸಮೂಹವೆ ವಿಜ್ಞಾನ. ವಿಜ್ಞಾನವು ತಾರ್ಕಿಕವಾಗಿ ವಿಶ್ವಾಸಾರ್ಹವಾಗಿ...
“ಕಾದಂಬರಿಯ ಈ ಶೀರ್ಷಿಕೆಯೇ ವಿಶಿಷ್ಟವಾಗಿದೆ. ಮಹತ್ವದ ಸುದ್ದಿ, ಪ್ರಭಾವ ವಲಯ-ಎಂಬುದು ಇದರ ಅರ್ಥವೆಂಬುದು ಕಾದಂಬರಿ...
“ನಾನು ಪದವಿ ವ್ಯಾಸಾಂಗದ ಅಂತಿಮ ವರ್ಷದ. ಕೊನೆಯ ಸೆಮ್ ನಲ್ಲಿ ಅಧ್ಯಯನ ಮಾಡುತ್ತಿದ್ದಾಗ, ವಿದ್ಯಾರ್ಥಿನಿಯರ ಪ್ರತಿನ...
©2025 Book Brahma Private Limited.