“ಒಟ್ಟಾರೆಯಾಗಿ ಅತ್ಯಂತ ಖುಷಿಯಿಂದ ಓದಿ ಖುಷಿ ಪಡುವ, ನಕ್ಕು ನಗಿಸುವ ಪ್ರಬಂಧ ಸಂಕಲನ ಇದು,”ಎನ್ನುತ್ತಾರೆ ಸೋಮನಾಥ ಪ್ರಭು ಗುರಪ್ಪನವರ. ಅವರು ವಿಕಾಸ ಹೊಸಮನಿ. ಅವರ “ಮಿಂಚಿನ ಬಳ್ಳಿ” ಕೃತಿ ಕುರಿತು ಬರೆದ ವಿಮರ್ಶೆ.
'ಮಿಂಚಿನ ಬಳ್ಳಿ' ಯುವ ವಿಮರ್ಶಕ ವಿಕಾಸ ಹೊಸಮನಿ ಅವರ ಲಲಿತ ಪ್ರಬಂಧಗಳ ಸಂಕಲನ. 'ಗಾಳಿ ಹೆಜ್ಜೆ ಹಿಡಿದ ಸುಗಂಧ' ಎಂಬ ವಿಮರ್ಶಾ ಪುಸ್ತಕದ ಮೂಲಕ ಸಾಹಿತ್ಯ ಲೋಕಕ್ಕೆ ಕಾಲಿಟ್ಟ ಹೊಸಮನಿಯವರು ತಮ್ಮ ಮೊದಲ ಪುಸ್ತಕದಲ್ಲಿ ಅತ್ಯಂತ ಸರಳವಾಗಿ ಮತ್ತು ಆಳವಾಗಿ ವಿಮರ್ಶೆಯನ್ನು ಬರೆದಿದ್ದರು. ಆದರೆ ಈ ಪ್ರಬಂಧ ಸಂಕಲನ ಅವರದೇ ಎನ್ನುವಷ್ಟು ವಿಶಿಷ್ಟ, ಸರಳ, ಮತ್ತು ಸುಲಲಿತವಾಗಿದೆ.
ಇದು ಮುಖ್ಯವಾಗಿ ಉತ್ತರ ಕರ್ನಾಟಕ ಸಂಬಂಧಿತವಾಗಿದ್ದು ಅಲ್ಲಿನ ವ್ಯಕ್ತಿಗಳ, ಅಲ್ಲಿನ ಬದುಕಿನ ಕುರಿತು ಬರೆದಿರುವ 15 ಲಲಿತ ಪ್ರಬಂಧಗಳಿವೆ. ಪ್ರತಿಯೊಂದು ಪ್ರಬಂಧವು ತನ್ನದೇ ಆದ ವಿಶಿಷ್ಟತೆ ಹಾಗೂ ವಿಷಯ ವಸ್ತುವಿನಿಂದಾಗಿ ಇಷ್ಟವಾಗುತ್ತದೆ. 15 ಪ್ರಬಂಧಗಳಲ್ಲಿ ವಿಕಾಸ್ ಉತ್ತರ ಕರ್ನಾಟಕದ ಹಲವಾರು ವಿಚಾರಗಳನ್ನು, ಅಲ್ಲಿಯ ಬದುಕನ್ನು, ಸಣ್ಣ ಸಣ್ಣ ಸೂಕ್ಷ್ಮತೆಗಳನ್ನು ವಿನೋದಗಳನ್ನು, ಜನರ ಮನಸ್ಥಿತಿಯನ್ನು, ಬದುಕನ್ನು ಹೀಗೆ ಒಂದೇ, ಎರಡೇ ಹಲವಾರು ಆಯಾಮಗಳಲ್ಲಿ ಹಲವಾರು ವಿಷಯಗಳನ್ನು ಇಟ್ಟುಕೊಂಡು ಪ್ರಬಂಧಗಳನ್ನು ಬರೆದಿದ್ದಾರೆ. ಅಷ್ಟಲ್ಲದೆ ಇಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಪ್ರಬಂಧಗಳು ಕೂಡ ಇವೆ. ಈ ಪ್ರಬಂಧ ಸಂಕಲದಲ್ಲಿ ಅವರ ಸೂಕ್ಷ್ಮನೋಟ, ತುಂಟತನ, ವ್ಯಂಗ್ಯ, ವಿಮರ್ಶನ ಗುಣ ಎದ್ದು ಕಾಣುತ್ತದೆ. ತುಂಟತನದಿಂದ ಲೇವಡಿ ಮಾಡುತ್ತಲೆ, ಗಂಭೀರ ವಿಷಯವನ್ನು ಸೂಕ್ಷ್ಮವಾಗಿ ಹಾಸ್ಯಭರಿತವಾಗಿ ಹೇಳಿ ಓದುಗರನ್ನು ಖುಷಿಗೊಳಿಸುತ್ತಾ, ಅವರ ಜ್ಞಾನವನ್ನು ವಿಸ್ತರಿಸುತ್ತಾರೆ. ಇದು ಇವರ ಬರವಣಿಗೆ ತಾಕತ್ತು ಎಂದು ಹೇಳಬಹುದು. ಸರಳ ಭಾಷೆ ಈ ಪ್ರಬಂಧದ ಪ್ರಮುಖ ಆಕರ್ಷಣೆ ಮತ್ತು ಗೆಲುವು. ಒಟ್ಟಾರೆಯಾಗಿ ಅತ್ಯಂತ ಖುಷಿಯಿಂದ ಓದಿ ಖುಷಿ ಪಡುವ, ನಕ್ಕು ನಗಿಸುವ ಪ್ರಬಂಧ ಸಂಕಲನ ಇದು.
"ಲೇಖಕರ ಹಾಸ್ಯ, ವ್ಯಂಗ್ಯಗಳು ಮತ್ತು ಕುತೂಹಲ ಉಳಿಸಿಕೊಳ್ಳುವ ನಿರೂಪಣೆ ಈ ಕತೆಗಳ ವೈಶಿಷ್ಟ್ಯ. ಕತೆಗಳು ಒಂದು ಒಂದೂವ...
"ಜಲಪಾತ ಹೆಸರೇ ಸೂಚಿಸುವಂತೆ ನಿರಂತರ ಹರಿಯುತ್ತಿರುವ ಪ್ರಕೃತಿಯ ಶಕ್ತಿಯ ಅಗಾಧತೆಯನ್ನು ಬಿಂಬಿಸುವ ಪ್ರಾಕೃತಿಕ ಸೃಷ್...
"ನಗಲು ತೆರೆದ ಬಾಯನ್ನು ಮುಚ್ಚಲಾಗದಷ್ಟು ಪರಿಚಿತ ಮುಖಗಳು ಸಿಕ್ಕು ತವರಿನ ಕಾರ್ಯಕ್ರಮಕ್ಕೆ ಹೋದಂತೆನಿಸಿತು. ಕವಿಗೋಷ...
©2025 Book Brahma Private Limited.