ಉರಿದೆಸೆಯುವ ಬದುಕಲ್ಲಿ ಹುಚ್ಚೆಬ್ಬಿಸಿ ಕುಣಿಸುವ ಆಸೆ


‘ಉಸಿರು ನಿಲ್ಲುವ ತನಕವೂ ಕಾಮ ಮೋಹವು ಜೀವವನ್ನು ಆವರಿಸಿಕೊಂಡಿರುತ್ತದೆ ಎನ್ನುವ ನಿಜದ ಹಂಗು-ಭವದಲ್ಲಿ ಉಸಿರಾಡುವ ಎಲ್ಲರಿಗೂ ಅನ್ವಯ’ ಎನ್ನುತ್ತಾರೆ ಸಂತೋಷ್ ಅನಂತಪುರ. ಅವರು `ತೃಷೆ' ಕಥಾ ಸಂಕಲನ ಕುರಿತು ಬರೆದ ಲೇಖಕರ ಮಾತು ನಿಮ್ಮ ಓದಿಗಾಗಿ...

ಮೊದಲ ಕಥಾಸಂಕಲನ 'ಕಾಗೆ ಮತ್ತು ಕಡ್ಲೆಬೇಳೆ ಪಾಯಸ'ವನ್ನು ಸ್ವೀಕರಿಸಿ ಹರಸಿದ ಓದುಗ ಮಹಾಶಯರಿಗೆ ಶರಣು. ಇದೀಗ ನನ್ನ ಎರಡನೇ ಕಥಾಸಂಕಲನ 'ತೃಷೆ'ಯನ್ನು ನಿಮ್ಮ ಕೈಗಳಲ್ಲಿರಿಸುತ್ತಿದ್ದೇನೆ. ತೀವ್ರವಾಗಿ ಬದುಕನ್ನು ಅನುಭವಿಸುವ ಜೀವಗಳ ದಾಹ ಹೇಳತೀರದ್ದು. ಎಂದಿಗೂ ಕಡಿಮೆಯಾಗದ ಅಂತಹ ದಾಹಗಳು ಸ್ಥಿತ್ಯಂತರಗೊಳ್ಳುತ್ತಿರುತ್ತವೆ. ಇವು ಹಲವು ಬಗೆಯಲ್ಲಿ ನಮ್ಮ ಒಳ-ಹೊರಗನ್ನು ಸುಡುತ್ತಲೂ, ತಂಪೆರೆಯುತ್ತಲೂ ಇರುತ್ತವೆ. ಉರಿದೆಸೆಯುವ ಬದುಕಲ್ಲಿ ಹುಚ್ಚೆಬ್ಬಿಸಿ ಕುಣಿಸುವ ಆಸೆ, ದಾಹಗಳಿಗೇನೂ ಕಡಿಮೆಯಿಲ್ಲ. ಅದೆಷ್ಟೇ ಒತ್ತಡಗಳಿದ್ದರೂ, ನೋವು-ವೇದನೆಗಳು ಅಪ್ಪಿಕೊಂಡಿದ್ದರೂ ಇರುಳ ಸುಖವನ್ನು ಬಯಸದಿರುವ ಜೀವ ಇಲ್ಲದಿರಲು ಸಾಧ್ಯವಿಲ್ಲ. ಮತ್ತೆಮತ್ತೆ ಹಸಿರಿನತ್ತ, ಒಸರಿನತ್ತ ಉಸಿರನ್ನು ಹಿಡಿದುಕೊಂಡು ಜೀವವು ಚಲಿಸುತ್ತಲೇ ಇರುತ್ತದೆ.

ಹಾಗೊಮ್ಮೆ ಮನಸ್ಸು ಹೊರಳಿದ್ದೇ-ಬತ್ತದ, ತೀರದ ದಾಹಗಳ ನಿರಂತರ ಹುಡುಕಾಟದಲ್ಲಿರುವ ಹೃದಯಗಳು ಅರಳುತ್ತವೆ. ಬಹಳಷ್ಟನ್ನು ಬಾಳಲ್ಲಿ ಕಳೆದುಕೊಳ್ಳುತ್ತಾ ಬಂದರೂ, ಚಿಮ್ಮುತ್ತಲೇ ಇರುವ ಕಾಮನೆಗಳ ಅಂಚು ಸುಲಭದಲ್ಲಿ ಗೋಚರಿಸುವುದಿಲ್ಲ. ಮಗ್ಗುಲು ಬದಲಾದಂತೆ ವಾಂಛಗಳು ಹೆಚ್ಚುತ್ತಲೇ ಹೋಗಿ, ಬದುಕಿನ ಮೂಲ ದ್ರವ್ಯವಾದ ಕಾಮವು ಇನ್ನಿಲ್ಲದಂತೆ ಕಾಡುತ್ತಿರಲು; ಬೇಯುವ ಮನಸ್ಸಿನಾಟಕ್ಕೆ ಕೊನೆಯೇ ಇರುವುದಿಲ್ಲ.

ಉಸಿರು ನಿಲ್ಲುವ ತನಕವೂ ಕಾಮ ಮೋಹವು ಜೀವವನ್ನು ಆವರಿಸಿಕೊಂಡಿರುತ್ತದೆ ಎನ್ನುವ ನಿಜದ ಹಂಗು-ಭವದಲ್ಲಿ ಉಸಿರಾಡುವ ಎಲ್ಲರಿಗೂ ಅನ್ವಯ. ವ್ಯತ್ಯಸ್ತ ಘಟ್ಟಗಳಲ್ಲಿ ಕಾಲ-ಲೋಕದ ಸಮಯವನ್ನೂ ಮೀರಿ ಎಬ್ಬಿಸುವ ಕಾಮನೆಗಳಿಗೆ ಲೌಕಿಕದಲ್ಲಿ ಬಾಗಿ ಮಿಡಿಯದ ದೇಹ-ಮನಸ್ಸುಗಳಿಲ್ಲ. ಆಧುನಿಕ ಬದುಕಲ್ಲಿ ಬಲು ಮುಕ್ತವಾಗಿ ಕಾಣುವ ವಾಹವು ಹಿಂದಿಲ್ಲವೆಂದಲ್ಲ. ಕೆಲವು ಚೌಕಟ್ಟಿನ ಪರಿಮಿತಿಯೊಳಗಿತ್ತು. ಆದರಿಂದು ಕ್ಷಣ ಕ್ಷಣದ ಸುಖಗಳ ಬೆಂಬತ್ತಿ ನಡೆಯುವ ಉಮೇದು వరిమితీయానిళగ ఇత్తు ఆదరించు ಕ್ಷಣಕ್ಷಣದ ಸುಖಗಳ ಬೆಂಬತ್ತಿ ನಡೆಯುವ ಉಮೇದು ಜೀವಕೋಶಗಳಲ್ಲಿ ಹೆಚ್ಚೇ ತುಂಬಿಕೊಂಡಿದೆ. ಹಾಗಾಗಿ ಚೌಕಟ್ಟುಗಳನ್ನು ಬದಿಗೆ ಸರಿಸುವ ಹಕೀಕತ್ತು ಈಗಿನ ಲೋಕದ್ದು. ಇಶಾರೆಗಳಲ್ಲೇ ಅರ್ಥಗಳನ್ನು ಡಿ-ಕೋಡ್ ಮಾಡುವ ತಂತ್ರಜ್ಞಾನ ಯುಗದಲ್ಲಿ ಕಾಮಾರ್ಥ ಸಿದ್ದಿಗಳು ತಣ್ಣಗೆ ನಡೆಯುತ್ತಿರುತ್ತವೆ. ಅವೆಲ್ಲದರ ಅರಿವಿದ್ದೂ ಇಲ್ಲದಂತಿರುವ ಕಟ್ಟಿಕೊಂಡ ಬಂಧಗಳು ನೋಡುವ ಕಣ್ಣಿಗೆ ಶುಭ್ರಜ್ಯೋತ್ಸ ವಾಗಿ ಕಾಣುತ್ತವೆ.

ಆಸೆಯ ದಾಹವನ್ನು ಇಮ್ಮಡಿಗೊಳಿಸುತ್ತದೆ. ಹಾಗಾಗಿ ಸೃಷ್ಟಿ ಮತ್ತು - ಆಸೆಯು ಪ್ರಭಾವ ಬೀರುವುದರಿಂದ ಆಸೆಗಳೇ ಕಥೆಗಳಾಗಿ ಬಿಡುವ ಸೋಜಿಗವನ್ನು ಕಾಣುತ್ತೇವೆ. ಕಥೆಗಳು ಜೀವನ ಕ್ರಮವನ್ನು ಹೇಳುವ ಒಂದು ವಿಧಾನವಷ್ಟೇ ಭಾರವೆನಿಸಿಕೊಳ್ಳುವ ಬದುಕಲ್ಲಿ ಕ್ಷಣಗಳು ನೀಡುವ ಒಂದಷ್ಟು ಮುದಗಳನ್ನು ಅನುಭವಿಸಿ ಹಗುರಾಗುವ ಪ್ರಯತ್ನಗಳು ಎಲ್ಲರ ಬದುಕಲ್ಲೂ ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಸೂಕ್ಷ್ಮ ಮತ್ತು ಮುಕ್ತ ಮನಸಿನೊಂದಿಗೆ ತೆರೆದುಕೊಂಡ ಬಾಯಾರಿದ ಹೃದಯವು ಸಂಕಟ ಸಂಭ್ರಮವನ್ನು ಹಂಚಿಕೊಳ್ಳುವುದು ಮನುಕುಲದ ಆಸೆಯೂ ಹೌದು. ಒಳಗಿನ ಒತ್ತಡದ ಬಿಡುಗಡೆಗೆ ಬರವಣಿಗೆಯೇ ರಹದಾರಿ. ಇಲ್ಲಿನ ಕಥೆಗಳು ಗಹಿಸುವ ಮನಸಿಗೆ ತಟ್ಟಿದ್ದೇ ಹೆಚ್ಚು. ಬದುಕಿನ ನಿತ್ಯ ರಹದಾರಿ, ತುಮುಲಗಳನ್ನು ನಿಭಾಯಿಸುವುದಕ್ಕಿಂತ ಹಿರಿದಾದದ್ದೇನಲ್ಲ ಈ ಕಥೆಗಳು, ಅನುಭವಿಸಿಯೂ ತೀರದಾದಾಗ ಏಳುವ ಹೊಚ್ಚ ಹೊಸ ದಾಹಗಳನ್ನು ಅರಸುತ್ತಾ, ಕಳಕೊಂಡದ್ದನ್ನು ಪಡೆವ ನಿಟ್ಟಿನಲ್ಲಿ ಸಾಗುವ ಪ್ರತಿಯೊಬ್ಬನ ಮನದ ಯಾತ್ರೆಯಿದು. ಅಷ್ಟೇ. ಇಳಿಯುವುದು, ಬೆಳೆಯುವುದು, ಅಳಿಯುವುದು ಆಯಾ ಹೃದಯ-ಮನಸ್ಸಿಗೆ ಬಿಟ್ಟದ್ದು.

ಸಂಕಲನಕ್ಕೆ ನುಡಿ ಬರೆದು ಹರಸಿದ ನೆಚ್ಚಿನ ಕಥೆಗಾರ, ಕೇಂದ್ರ ಸಾಹಿತ್ಯ ಅಕಾಡೆಮಿಯ ಇತಿಹಾಸದಲ್ಲೇ ಎರಡು ಬಾರಿ ಪ್ರಶಸ್ತಿ ಪಡೆದ ದೇಶದ ಏಕೈಕ ಸಾಹಿತಿಯೆಂಬ ದಾಖಲೆ ಬರೆದ ಕನ್ನಡ ಸಾರಸ್ವತ ಲೋಕದ ಹಿರಿಯ ಜೀವ ಬೊಳುವಾರು ಮಹಮ್ಮದ್ ಕುಂಞ ಅವರಿಗೆ, ಕತೆಗಳಿಗೆ ತಮ್ಮ ಅನಿಸಿಕೆಯನ್ನು ಬರೆದ ಡಾ. ವ್ಯಾಸರಾವ್ ನಿಂಜೂರ್, ಡಾ. ಬಸವರಾಜ ಸಾದರ, ಡಾ. ಅಮರೇಶ್ ನುಗಡೋಣಿ, ವಸುಧೇಂದ್ರ, ಡಾ. ಪಾರ್ವತಿ ಜಿ, ಐತಾಳ್, ವಿಕಾಸ್ ನೇಗಿಲೋಣಿ, ಅಂಜನಾ ಹೆಗಡೆ, ವಿಕ್ರಂ ಹತ್ವಾರ್, ಆಶಾ ಜಗದೀಶ್, ಮೇಘನಾ ಸುಧೀಂದ್ರ ಅವರ ಪ್ರೀತಿಗೆ ಆಧಾರಿಯಾಗಿದ್ದೇನೆ.

ಆಪ್ತರೂ, ಮಾರ್ಗದರ್ಶಕರೂ ಆದ ಗೋಪಾಲ್ ಹೊಸೂರ್, ರಾಮದಾಸ ಯು ಕಾಮತ್ ಅವರಿಗೆ, ಸದಾ ಒಳಿತನ್ನೇ ಬಯಸುತ್ತಾ, ಅಮ್ಮನಂತೆಯೇ ಮುದ್ದಿಸುವ ನನ್ನ ಪ್ರಾಥಮಿಕ ಶಾಲಾ ಶಿಕ್ಷಕಿಯರಾದ ಸೆವಿನ್ ಪೀಟರ್ಸ್ ಹಾಗೂ ರೀಟಾ ಫೆರ್ನಾಂಡಿಸ್ ಅವರಿಗೆ, ಆಪ್ತರಾದ ಮಂಜುನಾಥ್ ಎಸ್. ಕಿಕ್ಕೇರಿ, ಡಾ. ಸಿ.ವಿ. ಹರೀಶ್, ಎಂ. ರಮೇಶ್ ನಾಯ್ಡು, ರವಿ ತಿಮ್ಮಯ್ಯ-ಪರಿಷ್ಠಾ ತಿಮ್ಮಯ್ಯ, ಚೇತನ್ ಸೋಮೇಶ್ವರ್- ರಾಜೇಶ್ವರಿ ಚೇತನ್, ಅನಂತ್ ಜಗದೀಶ, ಭರತ್ ಕುಮಾರ್, ಸುದೀಪ್ ಪುತೃತ್ತಾಯ, ಅಬ್ದುಲ್ ಲತೀಫ್, ಸಂಗಮ್ಮ ಪಾಟೀಲ್, ವಿದ್ಯಾ ಭಕ್ತ, ಡಾ. ಮಂಜುಳಾ ಕಾಮತ್, ಯಾಮಿನಿ ನಾಯ್ ಅವರಿಗೆ;

ಇಲ್ಲಿನ ಕೆಲವು ಕಥೆಗಳಿಗೆ ಎಳೆಯನ್ನು ಕೊಟ್ಟು, ಕಡ್ಡಿ ಗೀರಿ ಬೆಳಕನ್ನು ಹಬ್ಬಿಸಲು ಕಾರಣರಾದ ಬಂಧು ಡಾ. ತೇಜಸ್ವಿ ವ್ಯಾಸ್ ಅವರಿಗೆ, ಕಥೆಗಳನ್ನು ಓದಿ ಸಲಹೆ ಸೂಚನೆಗಳನ್ನು ನೀಡಿದ ಆಪ್ತರೂ, ಹಿರಿಯರೂ ಆದ ಕಥೆಗಾರ ವಿಠಲ ಗಟ್ಟಿ ಉಳಿಯ, ಕವಿ, ಕಥೆಗಾರ, ಲೇಖಕ ಆತ್ಮಬಂಧು ನಾಗರಾಜ ವಸ್ತಾರೆ ಮತ್ತು ಆಪ್ತರಾದ ಕಥೆಗಾರ, ಲೇಖಕ ಸತೀಶ್ ಚಪ್ಪರಿಕೆ ಅವರಿಗೆ, ಕಥೆಗಳನ್ನು ಪ್ರಕಟಿಸಿದ 'ತುಷಾರ-ಸುಧಾ- ತರಂಗ-ಕರ್ಮವೀರ-ಮಂಗಳ-ಕಸ್ತೂರಿ-ಬುಕ್ ಬ್ರಹ್ಮ' ಸಂಪಾದಕರಿಗೆ;

ಬರವಣಿಗೆಯ ಸ್ಫೂರ್ತಿ, ದೊಡ್ಡಪ್ಪ ಎ. ಈಶ್ವರಯ್ಯರಿಗೆ, ಅಪ್ಪ ಶ್ರೀಕೃಷ್ಣಯ್ಯ ಅನಂತಪುರ ಮತ್ತು ಅಮ್ಮ ಜಯಶ್ರೀ ಅನಂತಪುರ, ಗೆಳತಿ-ಸಂಗಾತಿ ಸ್ವಪ್ನಾ, ಅಣ್ಣ ಶೈಲೇಂದ್ರ, ತಂಗಿ ಸಂಗೀತ ಕುಮಾರ್, ಭಾವ-ಜೀವವೂ ಆಗಿರುವ ಚೈತ್ರ ಕುಮಾರ್, ಎಲ್.ಎನ್. ಶಾನುಭೋಗ್ - ಮೋನಾ ನಾರಾಯಣ್, ಬಂಧು ಶ್ರೀಮತಿ. ಸೀತಾರತ್ನ ಹಾಗೂ ಮುರಳೀಧರ್ ಕಾಸರಗೋಡು ಅವರಿಗೆ;

ಬಲು ಪ್ರೀತಿಯಿಂದ ಮುಖಪುಟ ವಿನ್ಯಾಸವನ್ನು ಮಾಡಿಕೊಟ್ಟ ಕಿರಣ್ ಮಾಡಾಳು ಅವರಿಗೆ, ಪ್ರಕಟಿಸಿದ ಸಹೃದಯಿ ಶ್ರೀಮತಿ ಪ್ರಭಾ ಮತ್ತು ಪ್ರಕಾಶ್ ಕಂಬತ್ತಳ್ಳಿ ಅವರಿಗೆ; ಜೀವ ಬಿಂದು ಮಗಳು ದೇವಯಾನಿಗೆ, ಮೇಲೆ ಹೆಸರಿಸಿದ ಪ್ರತಿಯೊಬ್ಬರಿಗೂ ಮತ್ತು ಪುಸ್ತಕವನ್ನು ಕೊಂಡು ಓದುವ ಎಲ್ಲಾ ಅಕ್ಷರ ಪ್ರೇಮಿಗಳಿಗೆ; ಶರಣು ಶರಣು!

-ಸಂತೋಷ್ ಅನಂತಪುರ

MORE FEATURES

ಒಂದೇ ನದಿಯ ನೀರನ್ನು ಕುಡಿದರೂ, ಒಬ್ಬರು ಇನ್ನೊಬ್ಬರ ಮೇಲೆ ಆಕ್ರಮಣ ಮಾಡುತ್ತಲೇ ಇರುತ್ತಾರೆ

05-10-2024 ಬೆಂಗಳೂರು

“ರೇಷ್ಮೆ ಬಟ್ಟೆಯ ನುಣುಪಿನ ಕಾರಣಕ್ಕೆ ಸಾವಿರಾರು ಮೈಲುಗಳ ಒರಟು ದಾರಿಯೊಂದು ಯವನದಿಂದ ಚೀನಾದವರೆಗೆ ತೆರೆದುಕೊಂಡು ...

ನವೋದಯ ಲೇಖಕರ ಜೀವನಾಡಿಯಾಗಿಯೇ ಠಾಕೂರರ ಸಾಹಿತ್ಯ ಪ್ರಭಾವಿಸಿದೆ

05-10-2024 ಬೆಂಗಳೂರು

“ಕನ್ನಡ ಸಾಂಸ್ಕೃತಿಕ ಸಂದರ್ಭದಲ್ಲಿ ಠಾಕೂರರ ಕೃತಿಗಳ ಅನುವಾದಗಳು ಅದರ ಹಿಂದಿನ ಸಾಂಸ್ಕೃತಿಕ ರಾಜಕಾರಣ ಹಾಗೂ ಅನುವಾ...

ಹೊಟ್ಟೆ ತುಂಬಿದ ಮೇಲೆಯೇ ಆಚಾರ ವಿಚಾರಗಳು ಹುಟ್ಟುವುದು

05-10-2024 ಬೆಂಗಳೂರು

"“ಅನುಭಾವ ಎನ್ನುವುದು ಅನುಭವವನ್ನು ಮೀರಿದ ಸಂಗತಿ. ತನ್ನದಲ್ಲದ ಜಗತ್ತಿನ ಸತ್ಯಗಳನ್ನು ಸುಲಭವಾಗಿ ತನ್ನದಾಗಿ...