Date: 30-07-2023
Location: ಪುತ್ತೂರು
ಪುತ್ತೂರು: ತುಳುಕೂಟ ಪುತ್ತೂರು, ಚಿಗುರೆಲೆ ಸಾಹಿತ್ಯ ಬಳಗ ಮತ್ತು ರೇಡಿಯೋ ಪಾಂಚಜನ್ಯ 90.8 ಎಫ್ ಎಂ ವತಿಯಿಂದ “ಬರ್ಸದ ಪನಿ ಕಬಿತೆ ಕೇನಿ” ತುಳು ಕವಿಗೋಷ್ಠಿ ಕಾರ್ಯಕ್ರಮವು ಶನಿವಾರದಂದು ಪುತ್ತೂರಿನಲ್ಲಿ ನಡೆಯಿತು.
“ಬರ್ಸದ ಪನಿ ಕಬಿತೆ ಕೇನಿ” ತುಳು ಕವಿಗೋಷ್ಠಿಯನ್ನು ಖ್ಯಾತ ಸಾಹಿತಿ ಕೆದಂಬಾಡಿ ಜತ್ತಪ್ಪ ರೈಯವರ ಕವಿತೆಯೊಂದನ್ನು ಓದುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದ ಅಭ್ಯಾಗತ ಸಾಹಿತಿ, ದಂಬೆಕ್ಕಾನ ಸದಾಶಿವ ರೈ ಮಾತನಾಡಿ ,ತುಳು ಭಾಷೆಯ ಕವಿಗೋಷ್ಠಿ, ಸಾಹಿತ್ಯಗೋಷ್ಟಿಗಳು ಹೆಚ್ಚು ಹೆಚ್ಚು ಜರುಗಿ ತುಳು ಭಾಷೆ ಇನ್ನಷ್ಟು ಶ್ರೀಮಂತವಾಗಲಿ ಎಂದು ಆಶಿಸಿದರು.
ಈ ವೇಳೆ ಪಾಂಚಜನ್ಯ ರೇಡಿಯೋದ ಕಾರ್ಯದರ್ಶಿ ಪದ್ಮಾ ಕೆ.ಆರ್. ಆಚಾರ್ಯ, ತುಳುಕೂಟದ ಉಪಾಧ್ಯಕ್ಷರಾದ ಸಂತೋಷ್ ಶೆಟ್ಟಿ ಎಸ್. ಹಾಗೂ ನ್ಯಾಯವಾದಿ ಹೀರಾ ಉದಯ್, ಮಾಜಿ ಅಧ್ಯಕ್ಷ ವಿಜಯ ಕುಮಾರ್ ಭಂಡಾರಿ ಹೆಬ್ಬಾರೆಬೈಲು, ಚಿಗುರೆಲೆ ಸಾಹಿತ್ಯ ಬಳಗದ ಅಧ್ಯಕ್ಷ ಚಂದ್ರಮೌಳಿ ಕಡಂದೇಲು ಮತ್ತು ಕಾರ್ಯಕ್ರಮ ಸಂಯೋಜಕ ನಾರಾಯಣ ಕುಂಬ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತುಳುಕೂಟದ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಅಧ್ಯಕ್ಷತೆ ವಹಿಸಿದ್ದು, ನವೀನ್ ಕುಲಾಲ್ ಚಿಪ್ಪಾರ್ ಮತ್ತು ಚಂದ್ರಶೇಖರ ಮಾಲೆತ್ತೋಡಿ ಕಾರ್ಯಕ್ರಮ ನಿರ್ವಹಿಸಿದರು.
“ಮಾತೃಭಾಷೆ, ಮಾತೃಭಾಷೆಯಲ್ಲಿನ ಕಲಿಕೆ ಅದರ ಅನಿವಾರ್ಯ ಅವಶ್ಯಕತೆ, ಮಹತ್ವ ಕುರಿತು ಇಲ್ಲಿನ ಎಲ್ಲ ಲೇಖನಗಳು ಹಲವು ನ...
“ಈ ಕಾದಂಬರಿ ತನ್ನ ೧೦೩ ಪುಟಗಳ ಉದ್ದಕ್ಕೂ ಕುತೂಹಲ ಮೂಡಿಸಿಕೊಂಡು ಹೋಗುತ್ತದೆ. ಇಲ್ಲಿ ಪತ್ತೇದಾರಿ ಕಥೆ ಮಾತ್ರವಲ್ಲ...
“ಚರಿತ್ರೆಯ ವಿವರಗಳು ಭಿತ್ತಿಯಾಗಿದ್ದು, ಅದರ ಮೇಲೆ ಮಹಾನ್ ಚಕ್ರವರ್ತಿ ಕೃಷ್ಣದೇವರಾಯನ ಚಾರಿತ್ರ್ಯ, ಅವನ ಪರಿವಾರದ...
©2025 Book Brahma Private Limited.