ತ್ರಿಕೋನಾಸನ ಹಾಗೂ ಪರಿವೃತ್ತ ತ್ರಿಕೋನಾಸನ

Date: 03-07-2024

Location: ಬೆಂಗಳೂರು


"ತ್ರಿಕೋನಾಸನವು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಹಾಗೂ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಪರಿವೃತ್ತ ತ್ರಿಕೋನಾಸನವು ಹೊಟ್ಟೆಯ ಭಾಗದ ಅಂಗಗಳನ್ನು ಉದ್ದೀಪಿಸಲು ಸಹಾಯ ಮಾಡುತ್ತದೆ ಮತ್ತು ಬೆನ್ನು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ," ಎನ್ನುತ್ತಾರೆ ಚೈತ್ರಾ ಹಂಪಿನಕಟ್ಟಿ. ಅವರು 'ಬುಕ್ ಬ್ರಹ್ಮ' ಪ್ರಕಟಿಸುವ ತಮ್ಮ 'ಯೋಗ ಯೋಗಾ' ಅಂಕಣದಲ್ಲಿ ಈ ಕುರಿತು ವಿವರಿಸಿದ್ದಾರೆ.

ತ್ರಿಕೋನಾಸನ

ತ್ರಿಕೋನಾಸನವು ಯೋಗದ ಹಠಯೋಗದ ಒಂದು ನಿಂತಿರುವ ಭಂಗಿಯಾಗಿದೆ.
'ತ್ರಿ' ಎಂದರೆ ಮೂರು
'ಕೋನ' ಎಂದರೆ 'ಮೂಲೆ' ಎಂದರ್ಥ. ಆದ್ದರಿಂದ, ತ್ರಿಕೋನಾಸನವು ಅಕ್ಷರಶಃ 'ಮೂರು-ಮೂಲೆಗಳು' ಎಂದು ಅನುವಾದಿಸುತ್ತದೆ.

ತ್ರಿಕೋನಾಸನ ಮಾಡುವ ವಿಧಾನ:
ನೇರವಾಗಿ ನಿಂತು, ನಿಮ್ಮ ಕಾಲುಗಳನ್ನು ಅಗಲವಾಗಿ ಇರಿಸಿ, ಈಗ ನಿಮ್ಮ ಬಲ ಪಾದವನ್ನು 90 ಡಿಗ್ರಿಗಳಲ್ಲಿ ಇರಿಸಿ ಮತ್ತು ನಿಮ್ಮ ಎಡ ಪಾದವನ್ನು 15 ಡಿಗ್ರಿಗಳಲ್ಲಿ ಇರಿಸಿ. ನಿಮ್ಮ ತೋಳುಗಳನ್ನು ಎರಡೂ ಬದಿಗಳಲ್ಲಿ ಅಗಲವಾಗಿ ಇರಿಸಿ, ನಂತರ ನಿಮ್ಮ ಎರಡು ಕಾಲಿನ ಸಮವಾಗಿ ದೇಹದ ಭಾರವನ್ನು ಹಾಕಿ.ಈಗ ಆಳವಾಗಿ ಉಸಿರಾಡಿ. ಉಸಿರಾಡುವಾಗ, ನಿಮ್ಮ ದೇಹವನ್ನು ಬಲಭಾಗಕ್ಕೆ ಮತ್ತು ಸೊಂಟದಿಂದ ಕೆಳಕ್ಕೆ ಬಗ್ಗಿಸಿ, ನಿಮ್ಮ ಬಲಗೈಯನ್ನು ಕೆಳಕ್ಕೆ ಮತ್ತು ಎಡಗೈಯನ್ನು ಮೇಲಕ್ಕೆ ತೆಗೆದುಕೊಳ್ಳಿ, ನಿಮ್ಮ ಸೊಂಟವನ್ನು ನೇರವಾಗಿ ಇರಿಸಿ ಮತ್ತು ನಿಮ್ಮ ಕಣ್ಣುಗಳನ್ನು ತೆರೆದಿಡಿ ನಂತರ ಬಲಗೈಯನ್ನು ನಿಮ್ಮ ಪಾದದ ಅಥವಾ ಕಾಲ್ಬೆರಳುಗಳ ಮೇಲೆ ಇರಿಸಿ, ನಿಮ್ಮ ಎಡಗೈಯನ್ನು ಮೇಲಕ್ಕೆ ಎತ್ತಿ ನಂತರ
ನಿಮ್ಮ ದೇಹವನ್ನು ಹಿಗ್ಗಿಸಿ ಮತ್ತು ದೀರ್ಘವಾದ ಉಸಿರನ್ನು ತೆಗೆದುಕೊಳ್ಳಿ, ಈ ಭಂಗಿಯಲ್ಲಿ 20-25 ಸೆಕೆಂಡುಗಳ ಇರಬೇಕು ನಂತರ ನೀವು ಇದನ್ನು ಇನ್ನೊಂದು ಬದಿಯಲ್ಲಿ ಮಾಡಬೇಕು.

ತ್ರಿಕೋನಾಸನದ ಪ್ರಯೋಜನಗಳು:
1)ಈ ಆಸನವು ತೊಡೆಗಳು, ಮೊಣಕಾಲುಗಳು, ಕಾಲುಗಳು, ಪಾದಗಳು, ತೋಳುಗಳು ಮತ್ತು ಎದೆಯನ್ನು ವಿಸ್ತರಿಸುತ್ತದೆ ಮತ್ತು ಬಲಪಡಿಸುತ್ತದೆ.
2) ಈ ಆಸನವ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
3) ಈ ಆಸನವು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.
4) ಈ ಆಸನವು ಬೆನ್ನುನೋವಿನಿಂದ ಪರಿಹಾರ ನೀಡುತ್ತದೆ.
5)ಈ ಆಸನವು ಕಿಬ್ಬೊಟ್ಟೆಯ ಅಂಗಗಳನ್ನು ಉತ್ತೇಜಿಸುತ್ತದೆ.

 

 

 

 

 

 

 

 

 

 

ಪರಿವೃತ್ತ ತ್ರಿಕೋನಾಸನ
ಪರಿವೃತ್ತ ತ್ರಿಕೋನಾಸನ ಎಂಬ ಪದವು ಸಂಸ್ಕೃತ ಪದವಾಗಿದ್ದು "ಪರಿವೃತ್ತ" ಎಂದರೆ ತಿರುಗಿದ ಮತ್ತು "ತ್ರಿಕೋನ" ಎಂದರೆ ತ್ರಿಭುಜದದಂತಹ ಆಸನ ಎಂದರ್ಥವನ್ನು ನೀಡುತ್ತದೆ.

ಪರಿವೃತ್ತ ತ್ರಿಕೋನಾಸನ ಮಾಡುವ ವಿಧಾನ:
ಮೊದಲು ನೇರವಾಗಿ ನಿಂತುಕೊಳ್ಳಿ, ಪರ್ವತಾಸನ ಮಾಡುವಾಗ ನಿಲ್ಲುವಿರಲ್ಲವೇ ಹಾಗೆ. ಇದೇ ಈ ಆಸನಕ್ಕೆ ಸ್ಥಿತಿ. ನಂತರ ಒಂದು ಕಾಲನ್ನು ಹಿಂದಕ್ಕೆ ಸರಿಸಿ, ಸ್ವಲ್ಪ ತಿರುಗಿಸಿ, ನಿಮ್ಮ ಇನ್ನೊಂದು ಪಾದವು ಮುಂದೆ ಇರಬೇಕು ಎರಡೂ ಕಾಲಿನ ಹಿಮ್ಮಡಿ ಮತ್ತು ಪಾದದ ಕಮಾನು ಸಮವಾಗಿರಬೇಕು ನಿಮ್ಮ ಒಂದು ಕೈಯನು ಸೊಂಟದ ಮೇಲೆ ಇಡಿ, ಇನ್ನೊಂದು ಕೈಯನ್ನು ನೇರವಾಗಿ ತಲೆಯ ಮೇಲೆ ಚಾಚಿ.
ನಿಮ್ಮ ಬೆನ್ನು ಮೂಳೆಯನ್ನು ಹಿಗ್ಗಿಸಿ ಮತ್ತು ಕೆಳ ಬೆನ್ನನ್ನು ಸಹ ಹಿಗ್ಗಿಸಿ.

ದೀರ್ಘವಾದ ಶ್ವಾಸವನ್ನು ತೆಗೆದುಕೊಳ್ಳಿ. ಒಂದು ಕೈಯಿಂದ ನೆಲವನ್ನು ಮುಟ್ಟಿ. ದೇಹ ಬಳುಕಬಾರದು ಸೊಂಟವನ್ನು ತಿರುಗಿಸಿ ಮತ್ತು ಕೈಯನ್ನು ಸಾಧ್ಯವಾದಷ್ಟು ನೇರವಾಗಿ ಚಾಚಿ.(ಚಿತ್ರದಲ್ಲಿರುವಂತೆ) ನಿಧಾನವಾಗಿ ಈ ಸ್ಥಿತಿಯಿಂದ ಹೊರಬನ್ನಿ. ಇದೇ ಭಂಗಿಯನ್ನು ಇನ್ನೊಂದು ಕಾಲು ಮತ್ತು ಕೈಯನ್ನು ಬಳಸಿ ಪುನರಾವರ್ತಿಸಿ.

ಪರಿವೃತ್ತ ತ್ರಿಕೋನಾಸನ ಪ್ರಯೋಜನಗಳು:
1) ಈ ಆಸನವು ಹೊಟ್ಟೆಯ ಭಾಗದ ಅಂಗಗಳನ್ನು ಉದ್ದೀಪಿಸಲು ಸಹಾಯ ಮಾಡುತ್ತದೆ.
2) ಈ ಆಸನವು ಬೆನ್ನು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.
3) ಈ ಆಸನವು ಉಸಿರಾಟವನ್ನು ಸುಧಾರಿಸುತ್ತದೆ.
4) ಈ ಆಸನವು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.
5) ಈ ಆಸನವು ಮಲಬದ್ಧತೆಯಿಂದ ಮುಕ್ತಿ ನೀಡುತ್ತದೆ.
6) ಈ ಆಸನವು ಸೊಂಟ ಮತ್ತು ಬೆನ್ನು ಮೂಳೆಯನ್ನು ಹಿಗ್ಗಿಸುತ್ತದೆ.

 

 

 

 

 

 

 

 

- ಚೈತ್ರಾ ಹಂಪಿನಕಟ್ಟಿ.

MORE NEWS

ಬಾರತೀಯ ಇಂಗ್ಲೀಶು

07-07-2024 ಬೆಂಗಳೂರು

"ಹತ್ತೊಂಬತ್ತನೆ ಶತಮಾನದಲ್ಲಿ ಯುರೋಪಿಗೆ ಮತ್ತು ತುಸು ಕಾಲದ ನಂತರ ಅಮೆರಿಕಾಕ್ಕೆ ವಿದ್ಯಾಬ್ಯಾಸಕ್ಕೆ ಜಗತ್ತಿನ ವಿವಿ...

ಇಂಗ್ಲೀಶು ಕನ್ನಡ ಬದುಕಿನೊಳಗೆ

01-07-2024 ಬೆಂಗಳೂರು

"ಇಂಗ್ಲೀಶು ಕನ್ನಡದೊಳಗೆ ಪಸರಿಸಿಕೊಂಡ ಬಗೆ ವ್ಯಾಪಕತೆಯನ್ನೂ ಹಲವು ಆಯಾಮಗಳನ್ನೂ ಪಡೆದುಕೊಂಡಿದೆ. ಹಿಂದೆ ಸಂಸ್ಕೃತ-ಪ...

ಕಾಂಗ್ರೆಸ್ ಕಚೇರಿಯಲ್ಲಿ ಅಕಾಡೆಮಿಗಳ ಅಧ್ಯಕ್ಷರ ಸಭೆ ಮತ್ತಿತರೆ ಬೆಳವಣಿಗೆಗಳು

30-06-2024 ಬೆಂಗಳೂರು

"ಕೆ.ಪಿ.ಸಿ.ಸಿ. ಕಚೇರಿಯ ಈ ಸಭೆಯ ಕುರಿತು ಪತ್ರಿಕೆಗಳಲ‌್ಲಿ ಮರುದಿನ ಫೋಟೋ ಸಮೇತ ಸಂಕ್ಷಿಪ್ತ ಸುದ್ದಿ ಪ್ರಕಟವ...