“ಸೂಪರ್ ಫ್ಲ್ಯಾಟ್” ಐ ಕ್ಯಾಂಡಿಗಳ ತಕಾಷಿ ಮುರಾಕಾಮಿ

Date: 10-08-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಅಮೆರಿಕ ಮೂಲದ ಸೂಪರ್ ಫ್ಲ್ಯಾಟ್ ಹಾಗೂ ಕಂಟೆಂಪೊರರಿ ಆರ್ಟ್ ಕಲಾವಿದ ತಕಾಷಿ ಮುರಾಕಾಮಿ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ತಕಾಷಿ ಮುರಾಕಾಮಿ (Takashi Murakami)
ಜನನ: 01 ಫೆಬ್ರವರಿ, 1962
ಶಿಕ್ಷಣ: ಟೊಕಿಯೊ ಯೂನಿವರ್ಸಿಟಿ ಆಫ್ ಆರ್ಟ್ಸ್, ಜಪಾನ್
ವಾಸ: ಟೊಕಿಯೊ, ಜಪಾನ್; ನ್ಯೂಯಾರ್ಕ್, ಅಮೆರಿಕ
ಕವಲು: ಸೂಪರ್ ಫ್ಲ್ಯಾಟ್, ಕಂಟೆಂಪೊರರಿ ಆರ್ಟ್
ವ್ಯವಸಾಯ: ಪೇಂಟಿಂಗ್, ಸ್ಕಲ್ಪ್ಚರ್

ತಕಾಷಿ ಮುರಾಕಾಮಿ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ತಕಾಷಿ ಮುರಾಕಾಮಿ ಅವರ ವೆಬ್‌ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಎರಡನೇ ಮಹಾಯುದ್ಧದ ಬಾಂಬುಗಳು ಜಪಾನಿನಲ್ಲಿ ಉಂಟುಮಾಡಿದ ನರಕ ಮತ್ತು ಆ ಬಳಿಕ ಅಲ್ಲಿ ಸತತವಾಗಿ ಅಮೆರಿಕದ ಸೇನೆಯ ಅಸ್ತಿತ್ವಗಳು ತಕಾಷಿ ಮುರಾಕಾಮಿ ಅವರ ಬಾಲ್ಯವನ್ನು ತೀವ್ರವಾಗಿ ಕಾಡಿವೆ. ಅಮೆರಿಕದ ಈ ಪ್ರಭಾವದ ಕಾರಣದಿಂದಾಗಿ ಯುದ್ಧೋತ್ತರ ಜಪಾನಿನ ಕಲಾಲೋಕದಲ್ಲಿ ಕಾಣಿಸಿಕೊಂಡ ಮುಗ್ಧ-ಮುದ್ದಾದ ಚಿತ್ರಣಗಳು ಮತ್ತವುಗಳ ಮೂಲಕ ಮೈದೋರುವ ಹಿಂಸೆಯನ್ನು ಅಮೆರಿಕದ್ದೇ ಉತ್ಪಾದಕತೆಯೊಂದಿಗೆ ಬೆರಸಿ ಅಮೆರಿಕದಲ್ಲಿಯೇ ಆ ಕಲೆಯನ್ನು ವ್ಯವಹಾರವಾಗಿಸುವ ಹಠ ತೊಟ್ಟು ಹೊರಟ ಕ್ರಾಂತಿಕಾರ ಎಂದು ತಕಾಷಿ ಮುರಾಕಾಮಿ ಪರಿಗಣಿತರಾಗುತ್ತಾರೆ.

ನ್ಯೂಯಾರ್ಕ್ ಮತ್ತು ಟೋಕಿಯೊಗಳಲ್ಲಿರುವ ತನ್ನ “ಕಾಯ್ ಕಾಯ್ ಕಿಕಿ” ಕಂಪನಿಯ ಉತ್ಪನ್ನಗಳ ರೂಪದಲ್ಲಿ ಜಪಾನಿನ ಸಾಂಪ್ರದಾಯಿಕ ‘ಒತಾಕು’ ಮತ್ತು ಆಧುನಿಕ ‘ಮಂಗಾ’, ‘ಆನಿಮಿ’ ಕಾರ್ಟೂನು ಚಿತ್ರಗಳಿಂದ ಪ್ರೇರಿತವಾದ ಕಲಾಕೃತಿಗಳನ್ನು ತನ್ನ ಆರ್ಟ್ ಫ್ಯಾಕ್ಟರಿಯಲ್ಲಿ ಸರಕಾಗಿ ಉತ್ಪಾದಿಸಿ ಮಾರುವ ಮುರಾಕಾಮಿ ಆ ಪ್ರಕ್ರಿಯೆಯ ಮೂಲಕವೇ ಅಮೆರಿಕದ ದೊಡ್ಡಣ್ಣತನಕ್ಕೆ ಸಡ್ಡು ಹೊಡೆಯುತ್ತಾರೆ. ಈ ಕಾರಣಕ್ಕಾಗಿ, ಅವರ ಕಲಾಕೃತಿಗಳ ಬಗ್ಗೆ ಜಾಗತಿಕ ಮಾರುಕಟ್ಟೆಯಲ್ಲಿ ಎಷ್ಟು ಮೌಲಿಕವೆಂಬ ಹೊಗಳಿಕೆ ಇದೆಯೋ ಅಷ್ಟೇ ಪ್ರಮಾಣದಲ್ಲಿ ಮಾರುಕಟ್ಟೆಯ ಸರಕು ಎಂಬ ತೆಗಳಿಕೆಯೂ ಇದೆ. ಆದರೆ ಮುರಾಕಾಮಿ ಸೃಜಿಸಿದ “ಸೂಪರ್ ಫ್ಲಾಟ್” ತಂತ್ರದ ಚಿತ್ರಗಳು ಜಾಗತಿಕ ಕಲಾರಂಗದಲ್ಲಿ ಉಂಟುಮಾಡಿರುವ ನವಜನಪ್ರಿಯತೆಯ ಅಲೆಯನ್ನು (ನಿಯೊ-ಪಾಪ್) ಕಲಾಜಗತ್ತು ನಿರ್ಲಕ್ಷಿಸುವಂತಿಲ್ಲ.

ಯುದ್ಧೋತ್ತರ ಜಪಾನಿನಲ್ಲಿ ಟ್ಯಾಕ್ಸಿ ಡ್ರೈವರ್ ತಂದೆ ಮತ್ತು ಹೊಲಿಗೆ ಪರಿಣತೆ ತಾಯಿಯ ಮಗನಾಗಿ ಜನಿಸಿದ ಮುರಾಕಾಮಿ ಬಾಲ್ಯದಲ್ಲೇ, ಆಗಿನ ಜಪಾನಿಗೆ ಅನಿವಾರ್ಯವಾಗಿದ್ದ ಅತ್ಯಂತ ಸ್ಪರ್ಧಾತ್ಮಕ ಸಮಾಜದಲ್ಲಿ ಬೆಳೆಯಬೇಕಾಯಿತು. ಆಗ ಬೆಳೆಸಿಕೊಂಡ “ತಕ್ಷಣ ಪ್ರತಿಕ್ರಿಯಿಸುವ” ಅವರ ಗುಣ ಮುಂದೆ ತನ್ನ ಕಲಾ ವಿಧವನ್ನು ಸಮರ್ಥಿಸಿಕೊಳ್ಳುವಲ್ಲಿ, ವಿಮರ್ಶಕನಾಗಿ ತನ್ನ ವಾದವನ್ನು ಸಮರ್ಥವಾಗಿ ಮುಂದಿಡುವಲ್ಲಿ ಮುರಾಕಾಮಿಗೆ ಬಹಳ ಸಹಾಯಕವಾದವು.

ತನ್ನ ಕಲಿಕೆಯ ಆರಂಭದಲ್ಲಿ ಪಾಶ್ಚಿಮಾತ್ಯ ಸಮಕಾಲೀನ ಕಲೆಯತ್ತ ಹೊರಳಿದ್ದ ಮುರಾಕಾಮಿಗೆ 1994ರಲ್ಲಿ ಅಮೆರಿಕದಲ್ಲಿ ನಡೆದ ಕಲಾಪ್ರದರ್ಶನದ ವೇಳೆ ತನ್ನನ್ನು ಅಮೆರಿಕದ ಕಲಾ ಮಾರುಕಟ್ಟೆ ನಿರ್ಲಕ್ಷಿಸಿದ್ದನ್ನು ಕಂಡು ಜುಗುಪ್ಸೆ ಉಂಟಾಗಿತ್ತು ಮತ್ತು ತಾನು ಜಪಾನಿನ ಸತ್ವದ್ದೇ ಕಲೆಯನ್ನು ಜಗತ್ತು ಒಪ್ಪುವಂತೆ ಜಗತ್ತಿನೆದುರು ಪ್ರಸ್ತುತಪಡಿಸಬೇಕು ಎಂಬ ಸತ್ಯದ ಅರಿವಾಯಿತು. ಇದು ಅವರ ಕಲಾ ಬದುಕಿನ ಮಹತ್ವದ ತಿರುವು.

ಜಪಾನಿನ ಟಒತಾಕು’ ಪ್ರೇರಿತ ಶಿಲ್ಪಗಳ ಸಗಟು ತಯಾರಿಗಾಗಿ ಹಿರೊಪಾನ್ (ಹೀರೊಯಿನ್) ಕಾರ್ಖಾನೆ ಆರಂಭಿಸಿದ ಮುರಾಕಾಮಿ ಆ ಬಳಿಕ ಹಿಂದಿರುಗಿ ನೋಡಿಲ್ಲ. 2001ರ ಹೊತ್ತಿಗೆ ಆ ಕಾರ್ಖಾನೆ Kaikai Kiki Co. ಎಂಬ ಕಲೆ, ಕಲಾವಿದರ ಕಾರ್ಪೋರೇಟ್ ಕಂಪನಿ ಆಗಿ ಬೆಳೆದುನಿಂತಿತು. ಜಪಾನಿನ ಸಾಂಪ್ರದಾಯಿಕ ಗೆಂಜಿ ಮತ್ತು ಹೇಯಿಜಿ ಸ್ಕ್ರೋಲ್ ಪೇಂಟಿಂಗ್‌ಗಳಿಂದ ಪ್ರೇರಿತವಾದ ಸಂಕೀರ್ಣ ಸಂಸ್ಕೃತಿಯನ್ನು ಢಾಳಾದ ಬಣ್ಣಗಳು, ಪರಿಚಿತ ರೂಪಗಳ ಮೂಲಕ ಸರಳ – ಜನಪ್ರಿಯ – ಸಮಕಾಲೀನ “ಪಾಪ್ ಸಂಸ್ಕೃತಿ” ಆಗಿ ಪರಿವರ್ತಿಸಿ, ಅದಕ್ಕೆ “ಸೂಪರ್ ಫ್ಲ್ಯಾಟ್” ಕಲಾ ಚಳವಳಿಯ ರೂಪ ಕೊಟ್ಟದ್ದು ಮತ್ತು ಅವನ್ನು ಕಣ್ಣು ತಂಪಾಗಿಸುವ (ಐ ಕ್ಯಾಂಡಿ) ಸರಕುಗಳಾಗಿ ಮಾರುಕಟ್ಟೆಗೆ ನೀಡೀ ಯಶಸ್ವಿಯಾದದ್ದು ಮುರಾಕಾಮಿ ಸಾಧನೆ. ಅಮೆರಿಕದಲ್ಲಿ ಆಂಡಿ ವಾರೋಲ್ ಕಲೆಯನ್ನು ಯಶಸ್ವೀ ಸರಕಾಗಿ ಪ್ರಸ್ತುತಪಡಿಸಿದ್ದನ್ನೇ ಜಪಾನಿನಲ್ಲಿ ಮುರಾಕಾಮಿ ಮಾಡಿದ್ದಾರೆ ಎಂದು ಕಲಾಜಗತ್ತು ಪರಿಗಣಿಸುತ್ತದೆ. ಲೂಯಿ ವಿಟೊ (Louis Vuitton)ನಂತಹ ಪ್ರಸಿದ್ಧ ಗ್ರಾಹಕ ಬ್ರ್ಯಾಂಡ್‌ಗಳ ಜೊತೆಗೆ ಇಂದು ಮುರಾಕಾಮಿ ಅವರ ಕಲಾಕೃತಿಗಳು ತಳುಕು ಹಾಕಿಕೊಂಡಿವೆ.

ಇತ್ತೀಚೆಗೆ ಅಮೆರಿಕದಲ್ಲಿ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಚಳವಳಿ ನಡೆದಾಗ, ಅದಕ್ಕಾಗಿ ತನ್ನ ಕಲಾಕೃತಿಗಳನ್ನು ಹರಾಜು ಹಾಕಿ ಹಣ ಸಂಗ್ರಹಿಸಿಕೊಟ್ಟ ಮುರಾಕಾಮಿ, ಆ ಬಗ್ಗೆ ಹಾರ್ವರ್ಡ್ ಬ್ಯುಸಿನೆಸ್ ರಿವ್ಯೂಗೆ ಸಂದರ್ಶನ ನೀಡಿ ಹೇಳಿದ್ದು ಹೀಗೆ: Over the years I’ve become aware of my work’s popularity with the U.S. Black community. They seem to have a big appreciation for 1990s and 2000s Japanese culture. And now that I’ve been introduced to that audience and learned their culture and history, I better understand where minorities and particularly African Americans are placed in U.S. society. As someone who was conscious of my own outsider status when I came to America, I can empathize. There’s a certain sadness or sorrow or tragedy that’s associated with being in the minority. Maybe the childish, simplistic lightness in my work kind of pushes back on that or balances it. (ಸಂದರ್ಶಕರು: ಆಲಿಸನ್ ಬೇರ್ಡ್)

ತಕಾಷಿ ಮುರಾಕಾಮಿ ಅವರ ಸಂದರ್ಶನ, ಆಸ್ಟ್ರೇಲಿಯಾದ ಕ್ಯುರೇಟರ್ ಜಸ್ಟಿನ್ ಪಾಟನ್ ನಡೆಸಿದ್ದು:

ತಕಾಷಿ ಮುರಾಕಾಮಿ ಕಲಾಪ್ರದರ್ಶನವೊಂದರ ಕುರಿತು ಖಾಸಗಿ ವರದಿ:

ಚಿತ್ರ ಶೀರ್ಷಿಕೆಗಳು:
ತಕಾಷಿ ಮುರಾಕಾಮಿ ಅವರ DOB in the Strange Forest (Blue DOB) (1999)

ತಕಾಷಿ ಮುರಾಕಾಮಿ ಅವರ Doraemon- Here We Go (Takashi Murakami x Doraemon), (2020)

ತಕಾಷಿ ಮುರಾಕಾಮಿ ಅವರ End of Line (2011)

ತಕಾಷಿ ಮುರಾಕಾಮಿ ಅವರ Flower Matango (b) (2001-2006)

ತಕಾಷಿ ಮುರಾಕಾಮಿ ಅವರ Mr DOB Figure By BAIT x SWITCH Collectibles - Gold edition, (2016)

ತಕಾಷಿ ಮುರಾಕಾಮಿ ಅವರ Nurse Ko2 (2011)

ತಕಾಷಿ ಮುರಾಕಾಮಿ ಅವರ Of Chinese Lions, Peonies, Skulls, And Fountains (2011)

ತಕಾಷಿ ಮುರಾಕಾಮಿ ಅವರ Oval Buddha Silver (2008)

ತಕಾಷಿ ಮುರಾಕಾಮಿ ಅವರ Planet 66 – Summer Vacation, ( 2004)

ತಕಾಷಿ ಮುರಾಕಾಮಿ ಅವರ Tan Tan Bo a.k.a Gerotan- Scorched by the Blaze in the Purgatory of Knowledge (2018)

ತಕಾಷಿ ಮುರಾಕಾಮಿ ಅವರ Warp (2009)

ತಕಾಷಿ ಮುರಾಕಾಮಿ ಅವರ When Robbed Of Four Limbs, Against All Odds, The Heart Is Set Free, (2011)

ಈ ಅಂಕಣದ ಹಿಂದಿನ ಬರೆಹಗಳು:
ಅಲ್ಲಿರುವುದು ನನ್ನಮನೆ – ದೊ ಹೊ ಸುಹ್
ದಿ ಲೈಫ್ ಆಫ್ CB: ಅರ್ಥಾತ್, ಕ್ರಿಷ್ಚಿಯನ್ ಬೋಲ್ತನಸ್ಕಿ
ಅಸೆಂಬ್ಲಿಗಳಲ್ಲಿ “ಬಾಕತನ” ತೋರಿಸಿದ ಅರ್ಮಾನ್
ಪ್ರಾಮಾಣಿಕತೆಯೇ ಸೌಂದರ್ಯ- ಜೊರ್ಗ್ ಇಮ್ಮೆಂದ್ರಾಫ್
ನಾಗರೀಕತೆಯ ಒಡಕಿಗೆ ಕನ್ನಡಿ ಹಿಡಿದ ಡೊರಿಸ್ ಸಾಲ್ಸೆದೊ
ಕಾನ್ಸೆಪ್ಚುವಲ್ ಆರ್ಟ್‌ಗೆ ತಳಪಾಯ –ರಾಬರ್ಟ್ ರಾಷನ್‌ಬರ್ಗ್
ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್
ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್
ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್
ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್
ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಒಳಗಣ ಅನಂತ ಮತ್ತು ಹೊರಗಣ ಅನಂತ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

 

MORE NEWS

ಶಾಂತಿನಾಥ ದೇಸಾಯಿ ಅವರ ಕ್ಷಿತಿಜ ಕಥೆಯಲ್ಲಿ ಕಾಣುವ ಸಾಂಸ್ಕೃತಿಕ ಮುಖಾಮುಖಿ

16-01-2025 ಬೆಂಗಳೂರು

"ಈ ಕ್ಷಿತಿಜ ಕಥೆಯು ಮಂದಾಕಿನಿ ಎಂಬ ಕಲ್ಕತ್ತೆಯ ಹೆಣ್ಣು ಮಗಳು ಕೆಲಸ ಮಾಡುತ್ತಿದ್ದ ಮಿಶನರಿ ಸ್ಕೂಲ್ ನವರು ಸ್ಕಾಲರ್...

ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ (ಮುಂದುವರೆದುದು)

15-01-2025 ಬೆಂಗಳೂರು

"ಬಾಶೆ ಮಾತ್ರವಲ್ಲದೆ ಆಯಾ ಬಾಶೆಗಳ ಸಾಮಾಜಿಕ, ಸಾಂಸ್ಕೃತಿಕ ಅದ್ಯಯನ ಮಾಡಬೇಕಾಗುತ್ತದೆ. ಈ ಎಲ್ಲ ಅದ್ಯಯನಗಳು ಅವಕಾಶಗ...

ಎ.ಕೆ. ರಾಮಾನುಜನ್ ಅವರ ಅಣ್ಣಯ್ಯನ ಮಾನವಶಾಸ್ತ್ರ

08-01-2025 ಬೆಂಗಳೂರು

"ಈ ಕಥೆಯ ಒಳತಿರುಳುಗಳನ್ನು ಅರ್ಥೈಸುತ್ತಾ ಸಾಗಿದಂತೆ ಒಂದಿಷ್ಟು ವೈರುಧ್ಯ ವ್ಯಂಗ್ಯ ವಿಡಂಬನೆ ನಮಗೆ ಕಾಣುತ್ತದೆ. ಜಿ...