Date: 15-01-2025
Location: ಬೆಂಗಳೂರು
"ಬಾಶೆ ಮಾತ್ರವಲ್ಲದೆ ಆಯಾ ಬಾಶೆಗಳ ಸಾಮಾಜಿಕ, ಸಾಂಸ್ಕೃತಿಕ ಅದ್ಯಯನ ಮಾಡಬೇಕಾಗುತ್ತದೆ. ಈ ಎಲ್ಲ ಅದ್ಯಯನಗಳು ಅವಕಾಶಗಳಾಗಿ ಆ ಸಮುದಾಯದವರಿಗೆ ಒದಗುತ್ತವೆ. ಹೀಗೆ ಆರ‍್ತಿಕ ಚಲನೆಯು ಬಿನ್ನ ಹರಿವನ್ನು ಪಡೆದುಕೊಳ್ಳುತ್ತದೆ ಎನ್ನುತ್ತಾರೆ," ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ (ಮುಂದುವರೆದುದು)’ ಕುರಿತು ಬರೆದಿದ್ದಾರೆ..
ತಾಯ್ಮಾತಿನಲ್ಲಿ ಶಿಕ್ಶಣ ಆರ‍್ತಿಕ ಬೆಳವಣಿಗೆಗೆ ಬೇಕಾದಶ್ಟು ಪೂರಕವಾಗಿರಬಲ್ಲದು. ತಾಯ್ಮಾತಿನ ಶಿಕ್ಶಣವನ್ನು ಕೊಡುವುದಕ್ಕೆ ಮುಂದಾದಾಗ ನೂರಾರು ಬಾಶೆಗಳಲ್ಲಿ ಶಿಕ್ಶಣವನ್ನು ಕೊಡಬೇಕಾಗುತ್ತದೆ. ಇದರಿಂದ ಹಲವು ಉದ್ಯೋಗಸ್ರುಶ್ಟಿಯಾಗುತ್ತವೆ.
ಯುವಕರಿಗೆ ಉದ್ಯೋಗಗಳನ್ನು ಒದಗಿಸುವುದು ದೊಡ್ಡ ಜನಸಂಕೆ ಇರುವ ಬಾರತದಂತಾ ದೇಶಕ್ಕೆ ಯಾವಾಗಲೂ ಒಂದು ದೊಡ್ಡ ಸವಾಲು. ಇಂತಾ ಸಂದರ‍್ಬದಲ್ಲಿ ಹೆಚ್ಚಿನ ತಾಯ್ಮಾತುಗಳಲ್ಲಿ ಶಿಕ್ಶಣವನ್ನು ಕೊಡುವುದನ್ನು ಮೊದಲು ಮಾಡಿದರೆ ಹಲವಾರು ಉದ್ಯೋಗಾವಕಾಶಗಳು ಬೆಳೆಯುತ್ತವೆ. ಮುಕ್ಯವಾಗಿ ಇವುಗಳಲ್ಲಿ ಹೆಚ್ಚಿನವು ಆಯಾ ಬಾಶೆಗಳ ಮಂದಿಗೆ ಸಿಗುತ್ತವೆ. ಆ ಬಾಶೆಯಲ್ಲಿ ಪಟ್ಯ ತಯಾರಿ ಕೆಲಸ, ಪೂರಕಪಟ್ಯ ತಯಾರಿ ಕೆಲಸ, ಆಕರ ಸಾಮಗ್ರಿ ತಯಾರಿಸುವುದು ಮತ್ತು ಶಿಕ್ಶಕರು ಹೀಗೆ ಹಲವಾರು ಅವಕಾಶಗಳು ಬೆಳೆಯುತ್ತವೆ. ಶಿಕ್ಶಣ ವ್ಯವಸ್ತೆಯ ಒಳಗೆ ಬಾರದ ಹೆಚ್ಚಾನುಹೆಚ್ಚು ಬಾಶೆಗಳು ಕೆಳರ‍್ಗದವರು ಆಡುವಂತವು ಮತ್ತು ಬುಡಕಟ್ಟುಗಳು ಆಡುವಂತವು ಆಗಿವೆ. ಅಂದರೆ ಈ ಬಾಶೆಗಳಲ್ಲಿ ಶಿಕ್ಶಣವನ್ನು ಆರಂಬಿಸಿದರೆ ಈ ಎಲ್ಲ ಸಮುದಾಯಗಳ ಹಲವಾರು ಮಂದಿಗೆ ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳು ದೊರಕುತ್ತವೆ. ಈ ಬಾಶೆಗಳ ಮೇಲೆ ಪಟ್ಯಪೂರಕವಾಗಿ ಸಂಶೋದನಾ ಅವಕಾಶಗಳು ಕೂಡ ಹೆಚ್ಚಾಗುತ್ತವೆ. ಇದು ಮುಂದುವರೆದು ಹೊಸತಾಗಿ ಶಿಕ್ಶಣ ಪಡೆದವರಿಗೆ ಅವರ ಬಾಶೆಯಲ್ಲಿ ಓದುವುದಕ್ಕೆ ಸಾಹಿತ್ಯವನ್ನು ಒದಗಿಸುವ ಜವಾಬ್ದಾರಿ ಬರುತ್ತದೆ. ಆ ಮೂಲಕ ಹೆಚ್ಚು ಹೆಚ್ಚು ಅವಕಾಶಗಳು ಬೆಳೆಯುತ್ತಾ ಹೋಗುತ್ತವೆ. ಹೀಗೆ ಈ ಅವಕಾಶಗಳು ಆ ಸಮುದಾಯದ ಬೆಳವಣಿಗೆಗೆ ಮಾತ್ರವಲ್ಲದೆ ಇಡಿಯಾಗಿ ದೇಶದ ಬೆಳವಣಿಗೆಗೆ ಪೂರಕವಾಗುತ್ತವೆ. ಇದು ಇನ್ನೂ ಮುಂದುವರೆದು ಮಾದ್ಯಮ, ಸೇವೆ ಮೊದಲಾದ ವಲಯಗಳನ್ನು, ವ್ಯಾಪಾರ-ವ್ಯವಹಾರಗಳನ್ನು ಆವರಿಸಿಕೊಳ್ಳುತ್ತದೆ. ಸಹಜವಾಗಿಯೆ ಇದು ಆರ‍್ತಿಕ ಬೆಳವಣಿಗೆಗೆ ಪೂರಕವಾಗಿರುವುದು ಮಾತ್ರವಲ್ಲದೆ ಹಲವು ಉದ್ಯೋಗಾವಕಾಶಗಳಿಗೆ ಕಾರಣವಾಗುತ್ತದೆ.
ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುವುದು ಎಂದರೆ ಅದಕ್ಕೆ ಬೇಕಾಗಿರುವ ಪೂರಕ ಸಿದ್ದತೆಯನ್ನು ಮಾಡಿಕೊಳ್ಳಬೇಕು. ಇದುವರೆಗೆ ಕೇವಲ ಕೆಲವೆ ಬಾಶೆಗಳಲ್ಲಿ ಶಿಕ್ಶಣವನ್ನು ಒದಗಿಸುತ್ತಿರುವುದರಿಂದ ಪಟ್ಯ ಮೊದಲಾಗಿ ಇತರೆಲ್ಲ ಸಾಮಗ್ರಿಗಳು ಈ ಕೆಲವೆ ಬಾಶೆಗಳಲ್ಲಿ ಇವೆ. ಈಗ ಉಳಿದೆಲ್ಲ ಬಾಶೆಗಳಲ್ಲಿ ಇವುಗಳನ್ನು ತಯಾರಿಸಬೇಕು. ಪಟ್ಯಗಳನ್ನು ನಿರ‍್ಮಿಸುವ, ವ್ಯಾಕರಣ, ನಿಗಂಟು ಮೊದಲಾದ ಪೂರಕ ಪಟ್ಯಗಳನ್ನು ತಯಾರಿಸುವ, ಜನಪದ ಸಾಹಿತ್ಯ, ಕಲೆ ಮೊದಲಾದವನ್ನು ಸಂಗ್ರಹಿಸುವ ಮೊದಲಾದ ಕೆಲಸಗಳನ್ನು ಮಾಡಬೇಕಾಗುತ್ತದೆ. ಬಾಶೆ ಮಾತ್ರವಲ್ಲದೆ ಆಯಾ ಬಾಶೆಗಳ ಸಾಮಾಜಿಕ, ಸಾಂಸ್ಕೃತಿಕ ಅದ್ಯಯನ ಮಾಡಬೇಕಾಗುತ್ತದೆ. ಈ ಎಲ್ಲ ಅದ್ಯಯನಗಳು ಅವಕಾಶಗಳಾಗಿ ಆ ಸಮುದಾಯದವರಿಗೆ ಒದಗುತ್ತವೆ. ಹೀಗೆ ಆರ‍್ತಿಕ ಚಲನೆಯು ಬಿನ್ನ ಹರಿವನ್ನು ಪಡೆದುಕೊಳ್ಳುತ್ತದೆ. ಪಟ್ಯ ನಿರ‍್ಮಾಣ, ಶಿಕ್ಶಕ ತರಬೇತಿ ಕೆಲಸ, ಶಿಕ್ಶಕ ಹುದ್ದೆಗಳು, ಪಟ್ಯತಯಾರಿ, ಪಟ್ಯತಯಾರಿಗೆ ಬೇಕಾದ ಇತರೆ ಕೆಲಸಗಳು, ಕಲೆ, ಸಂಗೀತ ಮೊದಲಾದವುಗಳ ಕೆಲಸ ಇವೆಲ್ಲ ಬೆಳೆಯುತ್ತವೆ. ಪಟ್ಯೇತರವಾದ ಹಲವಾರು ಕೆಲಸಗಳೂ ಬೆಳೆಯುತ್ತವೆ. ಪಟ್ಯತಯಾರಿ ಪ್ರಕ್ರಿಯೆ ಬಗೆಗೆ ಮುಂದೆ ಮಾತನಾಡಿದೆ, ಅಲ್ಲಿ ಈ ಬಗೆಗೆ ಇನ್ನಶ್ಟು ಚರ‍್ಚೆ ದೊರೆಯುತ್ತದೆ.
ತಾಯ್ಮಾತಿನ ಶಿಕ್ಶಣ ಒಂದು ಬಾಶೆಗೆ ಹಲವಾರು ಸಾಮಾಜಿಕ ಆಯಾಮಗಳನ್ನು ತೆರೆಯುತ್ತದೆ. ಇದುವರೆಗೆ ಬಹುತೇಕ ಬಾರತೀಯ ಬಾಶೆಗಳಿಗೆ ಸಾಂಜದ ಹಲವಾರು ಆಯಾಮಗಳು ಮುಚ್ಚಿಕೊಂಡಿವೆ. ಶಿಕ್ಶಣವನ್ನು ಆ ಬಾಶೆಯಲ್ಲಿ ಕೊಡುತ್ತಿದ್ದಂತೆ ಈ ಎಲ್ಲ ಆಯಾಮಗಳು ತೆರೆದುಕೊಳ್ಳುತ್ತವೆ. ಬರಹ, ಮುದ್ರಣ, ತಂತ್ರಾಂಶ ಬೆಳವಣಿಗೆ, ಸಿನಿಮಾ ಮೊದಲಾದ ಮಾದ್ಯಮಗಳ ಬೆಳವಣಿಗೆ ಈ ಮೊದಲಾದ ವಲಯಗಳಲ್ಲಿ ಒಂದು ಬಾಶೆ ಸರಳವಾಗಿ ಪ್ರವೇಶವನ್ನು ಪಡೆಯುವುದಕ್ಕೆ ಸಾದ್ಯವಾಗುತ್ತದೆ. ಇನ್ನೊಂದೆಡೆ ಒಂದು ಬಾಶೆಯು ಸಮಾಜದ ಎಲ್ಲೆಡೆ ಕಾಣತೊಡಗುತ್ತಿದ್ದಂತೆ ವಿವಿದ ಬಗೆಯ ವೇದಿಕೆಗಳಲ್ಲಿ ಬಾಶೆಯು ಕೇಳಿಸತೊಡಗುತ್ತದೆ. ಆಗ, ಪ್ರದಾನ ಬಾಶೆಗಳಿಗೆ ಒದಗಿರುವ ವೇದಿಕೆಗಳೆಲ್ಲವೂ ಈ ಬಾಶೆಗೆ ತೆರೆದುಕೊಳ್ಳುತ್ತವೆ. ಇವು ಆಡಳಿತ ವಲಯದಲ್ಲಿ ಇರಬಹುದು, ಸಮಾಜಸೇವಾ ವಲಯದಲ್ಲಿ ಇರಬಹುದು, ಮಾರುಕಟ್ಟೆ ವಲಯವಾಗಿರಬಹುದು ಇಲ್ಲವೆ ಶಿಕ್ಶಣ ವ್ಯವಸ್ತೆಯೂ ಆಗಿರಬಹುದು. ಇಲ್ಲೆಲ್ಲ ಬಾಶೆ ಆದಾರಿತವಾದ ಉದ್ಯೋಗಗಳು ಹುಟ್ಟುತ್ತವೆ. ಪತ್ರಿಕೋದ್ಯಮದ ಉದಾಹರಣೆಯೊಂದನ್ನು ತೆಗೆದುಕೊಳ್ಳುವುದಾದರೆ, ವರದಿಗಾರರಿಂದ ಹಿಡಿದು ಸಂಪಾದಕರವರೆಗೆ ಇನ್ನೊಂದೆಡೆ ವಿತರಕರವರೆಗೆ ಹಲವು ಹಂತಗಳಲ್ಲಿ ಉದ್ಯೋಗಗಳು ಹುಟ್ಟಿಕೊಳ್ಳುತ್ತವೆ. ಹೀಗೆ ತಾಯ್ಮಾತಿನ ಶಿಕ್ಶಣವು ದೇಶದಲ್ಲಿ ದೊಡ್ಡ ಸಂಕೆಯ ಉದ್ಯೋಗಗಳನ್ನು ಹುಟ್ಟಿಸುವುದಕ್ಕೆ ಕಾರಣವಾಗುತ್ತದೆ.
ಈ ಅಂಕಣದ ಹಿಂದಿನ ಬರಹಗಳು:
ಆರ‍್ತಿಕ ಅಬಿರುದ್ದಿ ಮತ್ತು ತಾಯ್ಮಾತಿನ ಶಿಕ್ಶಣ
ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ
ಬಹುತ್ವ, ಬಹುಬಾಶಿಕತೆ ಮತ್ತು ತಾಯ್ಮಾತಿನ ಶಿಕ್ಶಣ
ಸಮಾನತೆಯ ವಿಚಾರ ಮತ್ತು ತಾಯ್ಮಾತಿನ ಶಿಕ್ಶಣ
ತಾಯ್ಮಾತಿನ ಶಿಕ್ಶಣ ಯಾಕೆ?
ತಾಯ್ಮಾತಿನ ಶಿಕ್ಶಣ: ಎಲ್ಲಿತನಕ
ಮಗುವಿನ ಮನೋವಿಕಾಸ, ಸಾಮಾಜಿಕತೆ ಮತ್ತು ಕಲಿಕೆ
ಮಗು ಮತ್ತು ಬಾಶಾಗಳಿಕೆ
ತಾಯ್ಮಾತು-ತಾಯಿ ಮಾತು-ಗುರ‍್ತಿಕೆ
ಮನುಶ್ಯ ದೇಹರಚನೆ ಮತ್ತು ಬಾಶಾ ಗಳಿಕೆ
ಬಾಶೆ ಮತ್ತು ಮಾತು
ಲಂಬಾಣಿ ಮತ್ತು ಇತರ ಉತ್ತರ ಬಾರತದ ಬಾಶೆಗಳ ಸಹಸಂಬಂದ
ಮಲಯಾಳಂ, ಕೊಡವ ಮತ್ತು ಇತರ ದ್ರಾವಿಡ ಬಾಶೆಗಳೊಂದಿಗನ ಸಹಸಂಬಂದ
ಮರಾಟಿ, ಉರ‍್ದು ಮತ್ತು ಇತರ ದಕ್ಶಿಣದ ಬಾಶೆಗಳೊಡನೆಯ ಸಹಸಂಬಂದ
ಕನ್ನಡ ಮತ್ತು ತಮಿಳು ಸಹಸಂಬಂದ
ತುಳುವಿನೊಡನೆ ಸಹಸಂಬಂದ
ಕನ್ನಡ ಮತ್ತು ತೆಲುಗು ಸಹಸಂಬಂದ
ಬಾರತೀಯ ಇಂಗ್ಲೀಶು
ಇಂಗ್ಲೀಶು ಕನ್ನಡ ಬದುಕಿನೊಳಗೆ
ಇಂಗ್ಲೀಶೆಂಬ ಜಗತ್ತು ಕನ್ನಡ ಜಗತ್ತಿನೊಳಗೆ
ಪರ‍್ಶಿಯನ್ ನಡೆ-ಉರ‍್ದು ಬೆಳವಣಿಗೆ
ಅರಾಬಿಕ್-ಪರ‍್ಶಿಯನ್ ಕನ್ನಡ ಜಗತ್ತಿನೊಳಗೆ
ಸಕ್ಕದದ ಉಬ್ಬರವಿಳಿತ
ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ
ಕನ್ನಡಮುಂ ಸಕ್ಕದಮುಂ
ಕನ್ನಡಮುಂ ಪಾಗದಮುಂ
ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?
ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?
ಎರಡು ಬಾಶೆಗಳ ನಡುವೆ ನಂಟು ಹೇಗೆ ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತದೆ?
ವಿಶ್ವ ತಾಯ್ಮಾತಿನ ದಿವಸ
ಬಾಶೆಗಳ ನಡುವಿನ ನಂಟನ್ನು ಪರಿಬಾವಿಸುವುದು
ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?
ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಮನೆಯೊಳಗೆ ಬಾಶಿಕ ಅನುಸಂದಾನ
ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?
ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ವಿವಿದ ಬಗೆಯ ವಾಕ್ಯಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ
ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಬಹು-ವಚನ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಲಿಂಗವೆಂದರೆ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಸಾಮಾಜಿಕ ಬೆಳವಣಿಗೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದ ರಚನೆಯ ಗಟಕಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ಕನ್ನಡದಾಗ ಗ್ ಜ್ ಡ್ ದ್ ಬ್ ದ್ವನಿಗಳು - ಇತ್ತೀಚಿನ ಬೆಳವಣಿಗೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಅಪರೂಪದ ವರ‍್ತ್ಸ-ತಾಲವ್ಯ ದ್ವನಿಗಳು : ‘ಚ್’ ಮತ್ತು ‘ಜ್’
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಬಾಶೆಯ ಬೆಳವಣಿಗೆ-ಬದಲಾವಣೆ
ಮೂಲಕನ್ನಡ
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಕನ್ನಡದಾಗ ದ್ವನಿವಿಗ್ನಾನ
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
"ಬಾರತದ ಜನಗಣತಿ ಮಾಹಿತಿ ಪ್ರಕಾರ ಅನುಸೂಚಿತ ಬಾಶೆಗಳನ್ನು ಆಡುವವರ ಸಂಕೆ ಸುಮಾರು 1,17,11,03,853 ಮಂದಿ ಅಂದರೆ ಬಾ...
"ಪ್ರಶಸ್ತಿ ಪುರಸ್ಕಾರಗಳಿಂದ ದೂರವಿದ್ದ ಇವರು ಸರಳ ಸಜ್ಜನಿಕೆಯ ವ್ಯಕ್ತಿತ್ವ ಇವರ ಹಂಗಿನರಮನೆಯ ಹೊರಗೆ ಕಥೆಯು &ldqu...
"ರಂಗಭೂಮಿ ಎಂದರೆ ಕೇವಲ ನಾಟಕಗಳ ಪ್ರದರ್ಶನ ಮಾತ್ರವಲ್ಲ. ಅದೊಂದು ಬಹುತ್ವ ಆಯಾಮಗಳ ಜೀವನ ಪ್ರೀತಿ ಹುಟ್ಟಿಸುವ ಜನಸಂಸ...
©2025 Book Brahma Private Limited.