Date: 20-03-2025
Location: ಬೆಂಗಳೂರು
ಬೆಂಗಳೂರು: ಬಿ.ಎಂ.ಶ್ರೀ. ಪ್ರತಿಷ್ಠಾನದ ವತಿಯಿಂದ ವಾರ್ಷಿಕವಾಗಿ ನೀಡುವ ಸೂ.ವೆಂ. ಆರಗ ವಿಮರ್ಶಾ ಪ್ರಶಸ್ತಿಗಾಗಿ ವಿಮರ್ಶಾ ಕೃತಿಗಳನ್ನು ಆಹ್ವಾನಿಸಿದೆ.
ಈ ಪ್ರಶಸ್ತಿಯನ್ನು 2024ನೆಯ ಸಾಲಿನಲ್ಲಿ (ಜನವರಿ-ಡಿಸೆಂಬರ್ ಅವಧಿ) ಮೊದಲ ಆವೃತ್ತಿಯಾಗಿ ಪ್ರಕಟವಾಗಿರುವ ಕನ್ನಡದ ಉತ್ತಮ ವಿಮರ್ಶಾ ಕೃತಿಯೊಂದಕ್ಕೆ ನೀಡಲಾಗುವುದು.
ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ.
ಆಸಕ್ತರು 2024ರಲ್ಲಿ ಪ್ರಕಟವಾಗಿರುವ ವಿಮರ್ಶಾ ಕೃತಿಯ ಮೂರು ಪ್ರತಿಗಳ ಜೊತೆ ಪ್ರತ್ಯೇಕ ಹಾಳೆಯಲ್ಲಿ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಕೆಳಕಂಡ ವಿಳಾಸಕ್ಕೆ 2025 ಏಪ್ರಿಲ್ 05 ಶನಿವಾರದಂದು ಸಂಜೆ 5.00 ಗಂಟೆ ಒಳಗೆ ಕಳುಹಿಸಬೇಕು ಎಂದು ಬಿ.ಎಂ.ಶ್ರೀ. ಪ್ರತಿಷ್ಠಾನದ ಗೌರವ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿಗಳನ್ನು ಕಳುಹಿಸಬೇಕಾದ ವಿಳಾಸ: ಗೌರವ ಕಾರ್ಯದರ್ಶಿ, ಬಿ.ಎಂ.ಶ್ರೀ. ಪ್ರತಿಷ್ಠಾನ, ಬಿ.ಎಂ.ಶ್ರೀ. ಪ್ರತಿಷ್ಠಾನದ ರಸ್ತೆ, 3ನೇ ಮುಖ್ಯರಸ್ತೆ, ನರಸಿಂಹರಾಜ ಕಾಲೋನಿ, ಬೆಂಗಳೂರು- 560004, ದೂರವಾಣಿ ಸಂಖ್ಯೆ 9972812127 ಅನ್ನು ಸಂಪರ್ಕಿಸಿ.
ಬೆಂಗಳೂರು: "ಸಮಾಜದಲ್ಲಿ ಮಹಿಳೆಯಾಗಿ ಮತ್ತು ಲೇಖಕಿಯಾಗಿ ಒಬ್ಬ ವ್ಯಕ್ತಿ ಮುಟ್ಟಬಾರದ ಮೂರು ವಸ್ತುಗಳಿವೆ. ಅವುಗಳೆಂದ...
ಬೆಂಗಳೂರು: "ನಮಗೆ ಹಿಂದಿ ದಿವಸ್ ಅಲ್ಲ, ಭಾಷಾ ದಿವಸ್ ಬೇಕು. ಹಿಂದಿ ರಾಜ ಭಾಷೆ ಅಲ್ಲ. ಭಾರತೀಯ ಎಲ್ಲಾ ಭಾಷೆಗಳಿಗೂ ...
2024ನೇ ಜ್ಞಾನಪೀಠ ಪ್ರಶಸ್ತಿ ಹಿಂದಿ ಲೇಖಕ ವಿನೋದ್ ಕುಮಾರ್ ಶುಕ್ಲಾಗೆ ಜ್ಞಾನಪೀಠ ಪ್ರಶಸ್ತಿ ಭಾರತದ ಅತ್ಯುನ್ನತ...
©2025 Book Brahma Private Limited.