ಸವಿರಾಜ್ ಆನಂದೂರು ಹಾಗೂ ದಸ್ತಗೀರ ದಿನ್ನಿಗೆ ‘ಸಹೃದಯ ಕಾವ್ಯ ಪ್ರಶಸ್ತಿ’

Date: 08-04-2025

Location: ಬೆಂಗಳೂರು


ಸವದತ್ತಿ: ಸಹೃದಯ ಸಾಹಿತ್ಯ ಪ್ರತಿಷ್ಠಾನ ಕೊಡಮಾಡುವ ರಾಜ್ಯಮಟ್ಟದ ‘ಸಹೃದಯ ಕಾವ್ಯ ಪ್ರಶಸ್ತಿ’ಗಾಗಿ ಈ ಬಾರಿ ಎರಡು ಕೃತಿಗಳು ಆಯ್ಕೆಯಾಗಿವೆ ಎಂದು ಪ್ರತಿಷ್ಠಾನದ ಅಧ್ಯಕ್ಷ ನಾಗೇಶ್ ಜೆ. ನಾಯಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರಿನ ಸವಿರಾಜ್ ಆನಂದೂರು ರಚಿಸಿರುವ ‘ಗಂಡಸರನ್ನು ಕೊಲ್ಲಿರಿ’ ಎಂಬ ಕವನ ಸಂಕಲನ ಹಾಗೂ ಬಳ್ಳಾರಿಯ ದಸ್ತಗೀರಸಾಬ್ ದಿನ್ನಿ ರಚಿಸಿರುವ ‘ಮಧು ಬಟ್ಟಲಿನ ಗುಟುಕು’ ಎಂಬ ಗಜಲ್ ಸಂಕಲನಗಳಿಗೆ ಈ ಗೌರವ ಲಭಿಸಿದೆ.

ಪ್ರತಿಷ್ಠಾನದ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಈ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಲಾಗಿತ್ತು. 100ಕ್ಕೂ ಹೆಚ್ಚು ಕೃತಿಗಳು ಸ್ಪರ್ಧೆಗಿದ್ದರು. ಪ್ರಶಸ್ತಿಗೆ ಅಂತಿಮವಾಗಿ ಆಯ್ಕೆಯಾಗಿರುವ ಈ ಕೃತಿಗಳನ್ನು ಹಿರಿಯ ಜಾನಪದ ವಿದ್ವಾಂಸ ಡಾ. ಸಿ. ಕೆ. ನಾವಲಗಿ ಅವರು ವಿಮರ್ಶಿಸಿದ್ದಾರೆ.

ಬರುವ ಮೇ ತಿಂಗಳಿನಲ್ಲಿ ಪಟ್ಟಣದಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಪ್ರಶಸ್ತಿ ವಿಜೇತರಿಗೆ ತಲಾ ರೂ.5 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುವುದು.

ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಉಪಾಧ್ಯಕ್ಷ ಬಸವರಾಜ ಪಟ್ಟಣಶೆಟ್ಟಿ, ಕಾರ್ಯದರ್ಶಿ ರಮೇಶ್ ತಳವಾರ ಹಾಗೂ ಸಂಚಾಲಕರಾದ ಎಸ್. ಬಿ. ಗರಗ ಉಪಸ್ಥಿತರಿದ್ದರು.

MORE NEWS

ಸಾಹಿತ್ಯ ಲೋಕಕ್ಕೆ ಕೊಡುಗೆಯನ್ನು ನೀಡುವ ವಿಭಿನ್ನ ಕೃತಿಗಳಿವು; ಬಿ.ಆರ್. ಲಕ್ಷ್ಮಣರಾವ್

20-04-2025 ಬೆಂಗಳೂರು

ಬೆಂಗಳೂರು: ಅಂಕಿತ ಪುಸ್ತಕ ಹಾಗೂ ಬುಕ್ ಬ್ರಹ್ಮ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರಕಾಶ ಗರುಡ ಅವರ 'ವಾರೆನ್ ಹೇಸ್ಟಿಂ...

ಕು. ವಿಹಾರಿಕಾ ಅಂಜನಾ ಹೊಸಕೇರಿ ಅವರು ಬರೆದಿರುವ ‘ಪ್ರವಾಸದ ಆ ದಿನಗಳು’ ಕೃತಿ ಲೋಕಾರ್ಪಣೆ

18-04-2025 ಬೆಂಗಳೂರು

ಬೆಂಗಳೂರು: ಉದಯ ಪ್ರಕಾಶನ, ಬೆಂಗಳೂರು ಇವರ ಆಶ್ರಯದಲ್ಲಿ ಕು. ವಿಹಾರಿಕಾ ಅಂಜನಾ ಹೊಸಕೇರಿ ಅವರು ಬರೆದಿರುವ ‘ಪ್ರವಾ...

ಗೊಟ್ಟಿಗೆರೆಯಲ್ಲಿ `ಪೂರ್ಣಚಂದ್ರ ಕನ್ನಡ ಸಾಂಸ್ಕೃತಿಕ ಅಧ್ಯಯನ ಕೇಂದ್ರ' ಸ್ಥಾಪನೆ

17-04-2025 ಬೆಂಗಳೂರು

ಬೆಂಗಳೂರು: ಕನ್ನಡದ ಸಂವೇದನಾಶೀಲ ಬರಹಗಾರರು, ಚಿಂತಕರಾದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ನೆನಪಿನಲ್ಲಿ 'ಪೂರ್ಣಚಂ...