Date: 20-04-2025
Location: ಬೆಂಗಳೂರು
ಬೆಂಗಳೂರು: ಅಂಕಿತ ಪುಸ್ತಕ ಹಾಗೂ ಬುಕ್ ಬ್ರಹ್ಮ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರಕಾಶ ಗರುಡ ಅವರ 'ವಾರೆನ್ ಹೇಸ್ಟಿಂಗ್ಸ್ ನ ಹೋರಿ', ಎ. ಪಿ. ಮಾಲತಿ ಅವರ 'ಬೆಳ್ಳಿ ಚುಕ್ಕಿ', ಎಂ.ವಿ. ನಾಗರಾಜರಾವ್ ಅವರ 'ಷರ್ಲಾಕ್ ಹೋಮ್ಸ್ ಸಾಹಸಗಳು', `ಕೆಂಪು ತಲೆಗೂದಲಿನ ರಹಸ್ಯ', ಸಂಪಟೂರು ವಿಶ್ವನಾಥ್ ಅವರ 'ಶ್ರೀ ಕೃಷ್ಣನ ಕಥೆ’ ಕೃತಿಗಳ ಲೋಕಾರ್ಪಣಾ ಸಮಾರಂಭವು 2025 ಏ.25 ಭಾನುವಾರದಂದು ನಗರದಲ್ಲಿ ನಡೆಯಿತು.
ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಪ್ರಸಿದ್ದ ಸಾಹಿತಿ ಬಿ.ಆರ್. ಲಕ್ಷ್ಮಣರಾವ್, "ಇಂದು ಬಿಡುಗಡೆಗೊಂಡಂತಹ ಎಲ್ಲಾ ಕೃತಿಗಳು ಸಾಂಸ್ಕೃತಿಕ ಲೋಕಕ್ಕೆ ಬಹು ಕೊಡುಗೆಯನ್ನು ನೀಡಿದೆ. ಇಲ್ಲಿ ನಾವು ಎಲ್ಲ ಪ್ರಕಾರದ ಕೃತಿಗಳನ್ನು ಕಾಣಬಹುದಾಗಿದೆ. ಪ್ರಕಾಶ್ ಗರುಡ ಅವರ ‘ವಾರನ್ ಹೇಸ್ಟಿಂಗ್ಸ್ ಹೋರಿ’ ಸಾಂಸ್ಕೃತಿಕವಾದ ವಿಚಾರಗಳನ್ನು ಬಿತ್ತರಿಸುತ್ತದೆ. ಹಾಗೆಯೇ ಎ.ಪಿ. ಮಾಲತಿ ಅವರ ಬೆಳ್ಳಿ ಚುಕ್ಕಿ’ ಕೃತಿಯು ವಿಭಿನ್ನವಾದ ಲೋಕವನ್ನು ಪರಿಚಯಿಸುತ್ತದೆ. ಎಂ.ವಿ. ನಾಗರಾಜರಾವ್ ಅವರ 'ಷರ್ಲಾಕ್ ಹೋಮ್ಸ್ ಸಾಹಸಗಳು' ಕೃತಿಯು ಮತ್ತೊಂದು ತೆರನಾದ ಸಾಹಸದ ಚಿತ್ರಣವನ್ನು ನೀಡುತ್ತದೆ. ಒಟ್ಟಾರೆಯಾಗಿ ಇಂದು ಬಿಡುಗಡೆಗೊಂಡ ಐದು ಕೃತಿಗಳು ವಿಭಿನ್ನ ಲೋಕದ ಸಾಹಿತ್ಯಿಕ ಅನಾವರಣವನ್ನು ಮಾಡಿದೆ," ಎಂದು ತಿಳಿಸಿದರು.
ಪ್ರಸಿದ್ಧ ಅನುವಾದಕ ನಾ. ದಾಮೋದರ ಶೆಟ್ಟಿ ಮಾತನಾಡಿ, "ಸಾಂಸ್ಕೃತಿಕವಾದ ಅನೇಕ ವಿಚಾರಗಳನ್ನು ಬಿತ್ತರಿಸುವ ಕೃತಿ ಪ್ರಕಾಶ ಗರುಡ ಅವರ 'ವಾರೆನ್ ಹೇಸ್ಟಿಂಗ್ಸ್ ನ ಹೋರಿ'. ಇಲ್ಲಿ ಸಾಂಸ್ಕೃತಿಕವಾದ ವಿಚಾರಗಳ ಅನಾವರಣವಾಗಿದೆ. ವಾರನ್ ಹೇಸ್ಟಿಂಗ್ ಒಬ್ಬ ಅಸಾಮಾನ್ಯ ಮನುಷ್ಯನಾಗಿದ್ದು, ಈತ ಹಲವು ವಿಚಾರಗಳನ್ನು ಪ್ರತಿನಿಧಿಸಿದವನಾಗಿದ್ದಾನೆ. ಇನ್ನು ಬಿಡುಗಡೆಯಾದಂತಹ ಉಳಿದ ಕೃತಿಗಳು ಕನ್ನಡ ಸಾಹಿತ್ಯ ಲೋಕದಲ್ಲಿ ವಿಭಿನ್ನವಾದ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಲಿದೆ,” ಎಂದರು.
ಕಾರ್ಯಕ್ರಮದಲ್ಲಿ ಖ್ಯಾತ ಲೇಖಕ, ಪತ್ರಕರ್ತ ಎನ್. ಎಸ್. ಶ್ರೀಧರಮೂರ್ತಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಬೈಲಹೊಂಗಲ: ಬಸವ ಸಮಿತಿ ಬೆಂಗಳೂರು ಇವರ ವತಿಯಿಂದ ವಿಶ್ವ ಬಸವ ಜಯಂತಿ 2025 ರ ನಿಮಿತ್ತ ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥ ...
ಬೆಂಗಳೂರು: ಹಲಸಂಗಿಯ ಸುಗಮ ಪುಸ್ತಕ ವತಿಯಿಂದ ಮೇರಿ ಆಲಿವರ್ ಅವರ ಮೂಲ ಕವಿತೆಗಳ ಅನುವಾದ ಚೈತ್ರಾ ಶಿವಯೋಗಿಮಠ ಅವರ &lsquo...
ಬೆಂಗಳೂರು: ರಾಯಚೂರಿನ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಪ್ರತಿಷ್ಠಾನ (ರಿ.)ದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಶಿ...
©2025 Book Brahma Private Limited.