Date: 17-04-2025
Location: ಬೆಂಗಳೂರು
ಬೆಂಗಳೂರು: ಕನ್ನಡದ ಸಂವೇದನಾಶೀಲ ಬರಹಗಾರರು, ಚಿಂತಕರಾದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ನೆನಪಿನಲ್ಲಿ 'ಪೂರ್ಣಚಂದ್ರ ಕನ್ನಡ ಸಾಂಸ್ಕೃತಿಕ ಅಧ್ಯಯನ ಕೇಂದ್ರ'ವನ್ನು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆಯಲ್ಲಿರುವ 'ಶ್ರೀ ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರ'ದ ಆವರಣದಲ್ಲಿ ಸ್ಥಾಪಿಸಲಾಗಿದೆ.
ಸಾಹಿತ್ಯ, ವಿಮರ್ಶೆ, ಅನುವಾದ, ವಿಜ್ಞಾನ ತಂತ್ರಜ್ಞಾನ, ಪರಿಸರ, ಫೋಟೋಗ್ರಫಿ, ಕ್ಯಾಲಿಗ್ರಫಿ - ಇವು ತೇಜಸ್ವಿ ಅವರ ಆಸಕ್ತಿಯ ಕ್ಷೇತ್ರಗಳು. ಈ ಹಿನ್ನಲೆಯಲ್ಲಿ ಚರ್ಚೆ, ಸಂವಾದ, ಸಂಶೋಧನೆ, ಕಮ್ಮಟ, ವಿಚಾರ ಸಂಕಿರಣಗಳನ್ನು ಈ ಕೇಂದ್ರದಲ್ಲಿ ವರ್ಷಪೂರ್ತಿ ಹಮ್ಮಿಕೊಳ್ಳಲಾಗುತ್ತದೆ. ಹಾಗೆಯೇ ಉನ್ನತ ಸಂಶೋಧನೆಗಳಿಗೂ ಇಲ್ಲಿ ಅವಕಾಶವಿದೆ.
ಈ ಎಲ್ಲಾ ಚಟುವಟಿಕೆಗಳಿಗೆ ಅಧಿಕೃತ ಚಾಲನೆ ನೀಡಲು ದಿನಾಂಕ 27, 28 ಏಪ್ರಿಲ್ 2025ರಂದು ಸಂಧ್ಯಾಸ್ಕೃತಿ ಮಂದಿರದಲ್ಲಿ 'ಪೂರ್ಣಚಂದ್ರ ಕನ್ನಡ ಸಾಂಸ್ಕೃತಿಕ ಅಧ್ಯಯನ ಕೇಂದ್ರ'ದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದೆ. ಹಾಗೆಯೇ ತೇಜಸ್ವಿ ಅವರ ಫೋಟೋ ಗ್ಯಾಲರಿಯನ್ನು ಉದ್ಘಾಟಿಸಲಾಗುತ್ತಿದೆ. ಈ ಕೇಂದ್ರದ ಉದ್ಘಾಟನೆಯ ಪ್ರಯುಕ್ತ ನಡೆಯಲಿರುವ ಅಧ್ಯಯನ ಶಿಬಿರವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಅಂದು ಎರಡು ದಿನಗಳ ಕಾಲ ಉದ್ಘಾಟನಾ ಸಮಾರಂಭದ ಜೊತೆಗೆ ತೇಜಸ್ವಿ ಅವರ ಆಸಕ್ತಿಯ ಕ್ಷೇತ್ರಗಳಿಗೆ ಸಂಬಂಧಿಸಿದ ಚರ್ಚೆ, ಸಂವಾದಗಳನ್ನೊಳಗೊಂಡ ಅಧ್ಯಯನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ ಕವಿಗೋಷ್ಠಿ, ನಾಟಕ ಪ್ರದರ್ಶನ ಮತ್ತು ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ.
ಈ ಸಮಾರಂಭದಲ್ಲಿ ನಾಡಿನ ಸಾಂಸ್ಕೃತಿಕ ಲೋಕದ ಚಿಂತಕರು, ಸಂವೇದನಾಶೀಲ ಯುವ ಬರಹಗಾರರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ನಾಡಿನ ಸಾಹಿತ್ಯಾಸಕ್ತರು ಭಾಗವಹಿಸಲು ಅವಕಾಶವಿದೆ. ತೇಜಸ್ವಿ ಅವರ ಆಸಕ್ತಿಯ ಕ್ಷೇತ್ರಗಳನ್ನು ಕುರಿತು ಆ ಎರಡೂ ದಿನ ಪ್ರಬಂಧ ಮಂಡಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಪ್ರಬಂಧ ಮಂಡಿಸಲು ಆಸಕ್ತಿ ಇರುವವರು 9448900999 ಈ ವಾಟ್ಸಾಪ್ ನಂಬರಿಗೆ ತಮ್ಮ ವಿಷಯಕ್ಕೆ ಸಂಬಂಧಿಸಿದ ಸಾರಲೇಖವನ್ನು 10 ದಿನಗಳ ಒಳಗೆ ಕಳುಹಿಸಿಕೊಡಬೇಕು.
ನೋಂದಣಿ ಮಾಡಿಸಿದವರಿಗೆ ಮಾತ್ರ ಸ್ಮರಣಿಕೆ ಮತ್ತು ಪ್ರಮಾಣಪತ್ರವನ್ನು ನೀಡಲಾಗುವುದು. ಅಗತ್ಯವಿದ್ದವರಿಗೆ 0.0.D. ಸೌಲಭ್ಯ ಒದಗಿಸಲಾಗುವುದು. ಸಾಹಿತ್ಯಾಸಕ್ತರು ಸಾರ್ವಜನಿಕರು ಭಾಗವಹಿಸಲು ಮುಕ್ತವಾದ ಅವಕಾಶವಿದೆ ಎಂದು ಪ್ರಕಟಣೆಯಲ್ಲಿ ಡಾ. ಕೆ.ಸಿ. ಶಿವಾರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರು: ಸಾಹಿತ್ಯ ಕ್ಷೇತ್ರದಲ್ಲಿ ಬರಹಗಾರರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಲ್ಲತ್ತಹಳ್ಳಿ ಬಾಲ ಗಂಗಾಧರ ನಗರದ &ls...
ಬೈಲಹೊಂಗಲ: ಬಸವ ಸಮಿತಿ ಬೆಂಗಳೂರು ಇವರ ವತಿಯಿಂದ ವಿಶ್ವ ಬಸವ ಜಯಂತಿ 2025 ರ ನಿಮಿತ್ತ ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥ ...
ಬೆಂಗಳೂರು: ಹಲಸಂಗಿಯ ಸುಗಮ ಪುಸ್ತಕ ವತಿಯಿಂದ ಮೇರಿ ಆಲಿವರ್ ಅವರ ಮೂಲ ಕವಿತೆಗಳ ಅನುವಾದ ಚೈತ್ರಾ ಶಿವಯೋಗಿಮಠ ಅವರ &lsquo...
©2025 Book Brahma Private Limited.