‘ಸಹೃದಯ ಕಾವ್ಯ ಪ್ರಶಸ್ತಿ’ ಪ್ರದಾನ ಸಮಾರಂಭ ಹಾಗೂ ಕವಿಗೋಷ್ಠಿ

Date: 10-06-2024

Location: ಬೆಂಗಳೂರು


ಬೆಳಗಾವಿ: 2ನೇ ವರ್ಷದ ಸವದತ್ತಿ ಸಹೃದಯ ಸಾಹಿತ್ಯ ಪ್ರತಿಷ್ಠಾನದಿಂದ ನೀಡುವ ರಾಜ್ಯಮಟ್ಟದ ‘ಸಹೃದಯ ಕಾವ್ಯ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು 2024 ಜೂನ್ 16 ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಡಿ. ದೇವರಾಜ್ ಅರಸು ಮೆಟ್ರಿಕ್ ನಂತರದ ಬಾಲಕರ ನಿಲಯದಲ್ಲಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದೆ ಎಂದು ಸಂಚಾಲಕ ಎಸ್. ಬಿ. ಗರಗದ ತಿಳಿಸಿದ್ದಾರೆ.

ಸವದತ್ತಿ ಘಟಕದ ಕಸಾಪ ಅಧ್ಯಕ್ಷ, ಹಿರಿಯ ಸಾಹಿತಿಗಳಾದ ಡಾ. ವಾಯ್. ಎಮ್. ಯಾಕೊಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ನಾಡಿನ ಖ್ಯಾತ ವಿಮರ್ಶಕರಾದ ಡಾ. ಎಚ್. ಎಸ್. ಸತ್ಯನಾರಾಯಣ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ತೀರ್ಪುಗಾರ ಕಥೆಗಾರ ಚನ್ನಪ್ಪ ಅಂಗಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳಾದ ಕು. ಶಿವಪ್ರಿಯಾ ಕಡೇಚೂರ, ನಿಲಯ ಪಾಲಕರಾದ ಹಾಶೀಮ್ ತಹಶಿಲ್‍ದಾರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಶೈಕ್ಷಣಿಕ ಸೇವೆ ಸಲ್ಲಿಸಿದ ಗಣಾಚಾರಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಸಿ. ಬಿ. ಗಣಾಚಾರಿ ಅವರಿಗೆ ಗೌರವ ಸನ್ಮಾನ ನಡೆಯಲಿದೆ. ಪ್ರತಿಷ್ಠಾನದ ಅಧ್ಯಕ್ಷ ನಾಗೇಶ್ ಜೆ. ನಾಯಕ ಉಪಸ್ಥಿತರಿರುತ್ತಾರೆ.

ಉಡುಪಿಯ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ‘ನಕ್ಷತ್ರ ನಕ್ಕ ರಾತ್ರಿ’, ವಿಜಯಪುರದ ಸುಮಿತ್ ಮೇತ್ರಿ ಅವರ ‘ಈ ಕಣ್ಣುಗಳಿಗೆ ಸದಾ ನೀರಡಿಕೆ’, ತುಮಕೂರಿನ ಎಸ್. ಕೆ. ಮಂಜುನಾಥ್ ಅವರ ‘ಗಾಳಿಯ ಎದೆಸೀಳಿ ಹೊರಟ ಹಕ್ಕಿ’, ಬೆಂಗಳೂರಿನ ಡಾ. ಲಕ್ಷ್ಮಣ ವಿ. ಎ. ಅವರ ‘ಕಾಯಿನ್ ಬೂತ್’ ಕವನ ಸಂಕಲನಗಳಿಗೆ ಪ್ರಶಸ್ತಿ ಲಭಿಸಿದ್ದು ಅವರಿಗೆ ರೂ. 2500 ನಗದು ಪುರಸ್ಕಾರ, ನೆನಪಿನ ಕಾಣಿಕೆ ನೀಡಿ ಸತ್ಕರಿಸಲಾಗುವುದು.

ಇದೇ ಸಂದರ್ಭದಲ್ಲಿ ಕವಿಗೋಷ್ಠಿ ನಡೆಯಲಿದ್ದು ರಮೇಶ್ ಮಡಿವಾಳರ, ಹೊನ್ನಪ್ಪ ಕರೆನ್ನಮ್ಮನವರ ಸುಪ್ರಿಯಾ ಮಾಡಮಗೇರಿ, ಎಮ್. ಡಿ. ಬಾವಾಖಾನ್, ಆನಂದ ಹಕ್ಕೆನ್ನವರ, ಆನಂದ ಭೋವಿ, ವಿದ್ಯಾ ರೆಡ್ಡಿ, ವಿಷ್ಣುಪ್ರಿಯ, ಮಂಜುನಾಥ ಸಿಂಗನ್ನವರ, ಮೀನಾಕ್ಷಿ ಸೂಡಿ ಕವನ ವಾಚಿಸಲಿದ್ದಾರೆ.

MORE NEWS

`ಮ್ಯೂಸಿಕಲ್ ವಿಡಿಯೊ ಸಾಂಗ್ ಒಂದು ವಿಶಿಷ್ಟ ಪುಸ್ತಕ' ಲೋಕಾರ್ಪಣಾ ಸಮಾರಂಭ

06-09-2024 ಬೆಂಗಳೂರು

ಬೆಂಗಳೂರು: ಶ್ರೀ ಸಾಯಿಗನ ಪ್ರೊಡಕ್ಷನ್ಸ್ ಹಾಗೂ ವಾಯ್ಸಿಂಗ್ ಸೈಲೆನ್ಸ್, ಕಾವ್ಯಸ್ಪಂದನ ಪಬ್ಲಿಕೇಷನ್ಸ್ ವತಿಯಿಂದ ಮ್ಯೂಸಿಕ...

ಶ್ರೀಧರ ತುಮರಿ ಅವರ ‘ಪಕ್ಷಿಗಳ ವಿಸ್ಮಯ ವಿಶ್ವ’ ಕೃತಿಯ ವಿನ್ಯಾಸ ಮತ್ತು ಮುದ್ರಣಕ್ಕಾಗಿ ರಾಷ್ಟ್ರ ಪ್ರಶಸ್ತಿ

06-09-2024 ಬೆಂಗಳೂರು

ಬೆಂಗಳೂರು: The Federation of Indian Publishers ಭಾರತೀಯ ಪ್ರಕಾಶಕರ ಒಕ್ಕೂಟ, ನವ ದೆಹಲಿ ಇವರ ವತಿಯಿಂದ 2023-24ನ...

ಕರ್ನಾಟಕ ನಾಟಕ ಅಕಾಡೆಮಿಯಿಂದ ‘ರಾಜ್ಯಮಟ್ಟದ ನಾಟಕ ರಚನಾ ಶಿಬಿರ’ಕ್ಕೆ ಅರ್ಜಿ ಆಹ್ವಾನ

04-09-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು “ರಾಜ್ಯಮಟ್ಟದ ನಾಟಕ ರಚನಾ ಶಿಬಿರ"ವನ್ನು 2024 ಅ.03 ರಿಂದ ಅ. 07ರವ...