Date: 06-09-2024
Location: ಬೆಂಗಳೂರು
ಬೆಂಗಳೂರು: ಶ್ರೀ ಸಾಯಿಗನ ಪ್ರೊಡಕ್ಷನ್ಸ್ ಹಾಗೂ ವಾಯ್ಸಿಂಗ್ ಸೈಲೆನ್ಸ್, ಕಾವ್ಯಸ್ಪಂದನ ಪಬ್ಲಿಕೇಷನ್ಸ್ ವತಿಯಿಂದ ಮ್ಯೂಸಿಕಲ್ ವಿಡಿಯೊ ಸಾಂಗ್ ಒಂದು ವಿಶಿಷ್ಟ ಪುಸ್ತಕ ಲೋಕಾರ್ಪಣಾ ಸಮಾರಂಭವು 2024 ಸೆ. 06 ಶುಕ್ರವಾರದಂದು ನಗರದ ಜಿ.ಟಿ ಮಾಲ್ ನಲ್ಲಿ ನಡೆಯಿತು.
ಕೃತಿಯ ಕುರಿತು ಮಾತನಾಡಿದ ನಟ ಸುಚೇಂದ್ರ ಪ್ರಸಾದ್, "ಹಲವಾರು ಕಾರ್ಯಕ್ರಮಗಳನ್ನು ನಾವು ಆಯೋಜನೆ ಮಾಡುತ್ತೇವೆ. ಆದರೆ ಅಂತಿಮವಾಗಿ ಒಂದು ಕಾರ್ಯಕ್ರಮವನ್ನು ಯಾಕೆ ಆಯೋಜಿಸಬೇಕು, ಅದರ ರೂಪು ರೇಷೆ ಏನಾಗಿರುತ್ತದೆ ಎಂಬುವುದನ್ನು ತಿಳಿಯಬೇಕಾದರೆ ಈ ಕೃತಿಯನ್ನು ಖಂಡಿತ ಓದಬೇಕು. ಕೃತಿಯು ಒಂದು ಚಿತ್ರ ರೂಪುಗೊಳ್ಳುವ ಬಗೆಯಿಂದ ಹಿಡಿದು, ಆ ಚಿತ್ರ ರೂಪುಗೊಂಡ ನಂತರ ಅದರ ಒಳಗಿರುವ ಅಡಕ ಸೇರಿದಂತೆ ಹಲವನ್ನು ಮುಂದಿನ ಪೀಳಿಗೆಗೆ ವಿವರಿಸುತ್ತದೆ. ಒಂದು ಆಕಾರ ಗ್ರಂಥ ಇತರರಿಗೆ ಮಾದರಿ ಸ್ಥಾಪನೆ ಮಾಡಬೇಕು. ಇಂತಹ ಮಾದರಿ ಸ್ಥಾಪನೆ ಈ ಕೃತಿಯಿಂದಾಗುತ್ತದೆ ಎಂಬಂತಹ ಆಲೋಚನೆ ನಮ್ಮದು. ಇಲ್ಲಿ ಇಡೀ ಚಿತ್ರಣದ ರೂಪು ರೇಷೆಗಳನ್ನು ದಾಖಲಿಸಲಾಗಿದೆ. ಪ್ರತಿಕ್ರಿಯೆಗೆ, ಪ್ರತಿಕ್ರಿಯೆ ಹೇಗಿದೆ ಎಂಬುವುದನ್ನು ನಾವು ಈ ಕೃತಿಯ ಮುಖೇನ ಕಾಣಬಹುದು. ಈ ಕೃತಿಯ ಬೆನ್ನುಡಿಯಲ್ಲಿ ಪ್ರಮುಖ ವ್ಯಕ್ತಿಗಳ ಅಭಿಪ್ರಾಯವನ್ನು ಕೂಡ ಕಾಣಬಹುದು," ಎಂದು ತಿಳಿಸಿದರು.
ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಕವಿ ಡಾ. ದೊಡ್ಡರಂಗೇಗೌಡ, ಕಲಾವಿದೆ ತಾರಾ ಅನುರಾಧಾ, ಚಿತ್ರ ನಿರ್ದೇಶಕ ಡಾ.ಎಸ್. ನಾರಾಯಣ್, ಬೆಂಗಳೂರಿನ ಅಬಲಾಶ್ರಮದ ಡಾ. ವಿಜಯಲಕ್ಷ್ಮಿ ದೇಶಮಾನೆ, ಬರಹಗಾರ ನಿಡಸಾಲೆ ಪುಟ್ಟಸ್ವಾಮಯ್ಯ, ಲಹರಿ ಸಂಸ್ಥೆಯ ಶ್ರೀವೇಲು ಉಪಸ್ಥಿತರಿದ್ದರು.
ಬೆಂಗಳೂರು: ನ್ಯೂವೇವ್ ಬುಕ್ಸ್ ವತಿಯಿಂದ ಹಾಸ್ಯ ಲೇಖಕಿ, ಕಥೆಗಾರ್ತಿ ನಳಿನಿ ಟಿ. ಭೀಮಪ್ಪ ಅವರ ‘ಚಿತ್ತ ಬಕ್ಕ&rsqu...
"ಸರಳ ಸಜ್ಜನ ವ್ಯಕ್ತಿತ್ವದ ಸ್ನೆಹಮಯಿ ಕೆಕೆಜಿಯವರ ಅನರಿಕ್ಷಿತ ನಿಧನ ಕನ್ನಡ ಮಾತ್ರವಲ್ಲದೆ ಮಲೆಯಾಳ ಸಾಂಸ್ಕೃತಿಕ ಲೊ...
“ಅನುವಾದಗಳ ಮೂಲಕ ಅನ್ಯಭಾಷಾ ಸಂಸ್ಕೃತಿಗಳ ಸಂಪರ್ಕವೇ ವಾಹಕವಾಗಿ ಭಾಷೆ ಮತ್ತು ಸಾಹಿತ್ಯ ಅಭಿವೃದ್ಧಿಯಾಗುತ್ತದೆ ಎಂಬ...
©2025 Book Brahma Private Limited.