Date: 27-04-2025
Location: ಬೆಂಗಳೂರು
ಬೆಂಗಳೂರು: ರಾಯಚೂರಿನ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಪ್ರತಿಷ್ಠಾನ (ರಿ.)ದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಶಿವಶ್ರೀ ಪ್ರಶಸ್ತಿ ಪ್ರದಾನ’ ಮತ್ತು ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಅವರ ‘ಸಂಜೆಗೊಂದು ನುಡಿಚಿಂತನ -365’ ಕೃತಿ ಲೋಕಾರ್ಪಣಾ ಕಾರ್ಯಕ್ರಮವು 2025 ಏ. 27 ಭಾನುವಾದರದಂದು ನಗರದಲ್ಲಿ ನಡೆಯಿತು.
ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ರಾಷ್ಟ್ರೀಯ ಅಧ್ಯಕ್ಷರು ಅಖಿಲ ಭಾರತ ಕಾಂಗ್ರೆಸ್ ಸಮಿತಿ, ರಾಜ್ಯ ಸಭಾದ ವಿರೋದ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, "ಶಿವರಾಜ ಪಾಟೀಲ ಅವರು ಬಡವರಿಗೆ ಬಹಳಷ್ಟು ರೀತಿಯಲ್ಲಿ ಸಹಾಯವನ್ನು ಮಾಡಿದ್ದಾರೆ. ಅವರು ಮಾಡಿದಂತಹ ಸಮಾಜ ಕಾರ್ಯದಿಂದಲೇ ಇಂದು ಅವರು ಋಣಾತ್ಮಕವಾಗಿ ಮಾತನಾಡದಂತಹ ಜನರನ್ನು ಗಳಿಸಿದ್ದಾರೆ. ಹೀಗೆ ತಮ್ಮ ಜೀವನದುದ್ದಕ್ಕೂ ಜನಮೆಚ್ಚುಗೆಯನ್ನು ಗಳಿಸಿ ಇಂದು ವೀರಶೈವ ಲಿಂಗಾಯತ ಸಮುದಾಯದ ಅಧ್ಯಕ್ಷರಾಗಿದ್ದಾರೆ," ಎಂದು ಹೇಳಿದರು.
ನಂತರದಲ್ಲಿ ‘ಶಿವಶ್ರೀ ಪ್ರಶಸ್ತಿ’ಯನ್ನು ಮಲ್ಲಿಕಾರ್ಜುನ ಖರ್ಗೆ ಅವರು ಪ್ರಶಸ್ತಿ ಪುರಸ್ಕೃತ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಅಧ್ಯಕ್ಷ, ಕರ್ನಾಟಕ ಸರ್ಕಾರದ ಶಾಸಕ ಹಾಗೂ ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ ಅವರಿಗೆ ಪ್ರದಾನಿಸಿದರು.
ಕಾರ್ಯಕ್ರಮದಲ್ಲಿ ‘ಸಂಜೆಗೊಂದು ನುಡಿಚಿಂತನ -365’ ಕೃತಿಯ ಲೇಖಕ, ಬೆಂಗಳೂರಿನ ಕರ್ನಾಟಕ ಗಡಿ ಹಾಗೂ ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ಹಾಗೂ ಸುಪ್ರೀಂ ಕೋರ್ಟ್ ನ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಹಾಗೂ ಕರ್ನಾಟಕ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಬೆಂಗಳೂರು: ಸಾಂಸ್ಕೃತಿಕ ಲೋಕವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಕಾರ್ಪೊರೇಟ್ ಲೋಕ ಯತ್ನಿಸುತ್ತಿದೆ. ಈ ಬಗ್ಗೆ ಎಚ್...
ಧಾರವಾಡದಲ್ಲಿ ಅಕ್ಷರ ಸಂತನಂತೆ ಬದುಕಿದ ನಮಗಮೆಲ್ಲರ ಪ್ರೀತಿಯ ಹಿರಿಯ ಜೀವ ರಮಾಕಾಂತ ಜೋಶಿಯವರು ಇಂದು ನಮ್ಮನ್ನು ಅಗಲಿದ್ದಾ...
ಮಂಗಳೂರು: ಕವಿ ಮುದ್ದಣನ ನಂದಳಿಕೆಯರೆಂದೇ ಪರಿಚಯಿಸಿಕೊಂಡಿದ್ದ ಬಾಲಚಂದ್ರರಾವ್ ಇಂದು(ಮೇ 14) ಮಂಗಳೂರಿನಲ್ಲಿ ಹೃದಯಾಘಾತದಿ...
©2025 Book Brahma Private Limited.