‘ಆಕಾಶ ನದಿ ಬಯಲು’ ಕೃತಿಯ ಲೋಕಾರ್ಪಣಾ ಸಮಾರಂಭ

Date: 28-04-2025

Location: ಬೆಂಗಳೂರು


ಬೆಂಗಳೂರು: ಹಲಸಂಗಿಯ ಸುಗಮ ಪುಸ್ತಕ ವತಿಯಿಂದ ಮೇರಿ ಆಲಿವರ್ ಅವರ ಮೂಲ ಕವಿತೆಗಳ ಅನುವಾದ ಚೈತ್ರಾ ಶಿವಯೋಗಿಮಠ ಅವರ ‘ಆಕಾಶ ನದಿ ಬಯಲು’ ಕೃತಿಯ ಲೋಕಾರ್ಪಣಾ ಸಮಾರಂಭವು 2025 ಏ.27 ಭಾನುವಾರದಂದು ನಗರದಲ್ಲಿ ನಡೆಯಿತು.

ಕೃತಿಯನ್ನು ಲೇಖಕ ಎಚ್. ಎಸ್ ರಾಘವೇಂದ್ರರಾವ್ ಪುಸ್ತಕ ಬಿಡುಗಡೆ ಮಾಡಿದರು. ಪುಸ್ತಕದ ಕುರಿತು ಓ ಎಲ್ ನಾಗಭೂಷಣಸ್ವಾಮಿ ಅವರು ಮಾತನಾಡಿದರು. ಶ್ರೀಮತಿ ರತ್ನಾ ಶಿವಯೋಗಿಮಠ, ಸುಮಿತ್ ಮೇತ್ರಿ ಹಾಗೂ ಲೇಖಕರಾದ ಚೈತ್ರಾ ಶಿವಯೋಗಿಮಠ ಅವರು ಉಪಸ್ಥಿತರಿದ್ದರು.

ಪ್ರಾಸ್ತಾವಿಕ ಮಾತನಾಡಿದ ಸುಮಿತ್ ಮೇತ್ರಿ ಅವರು, "ಮೇರಿ ಆಲಿವರ್ ಅವರನ್ನು ತೊಟ್ಟಂತೆ ಇಲ್ಲಿ ಚೈತ್ರಾ ಶಿವಯೋಗಿಮಠ ಅವರು ಕಾಣುತ್ತಾರೆ. ನಿಸರ್ಗ ವೈವಿಧ್ಯಮಯ ವಸ್ತು ವಿಷಯ ಗ್ರಹಿಕೆ ಎಲ್ಲಾ ಕಾಲಕ್ಕೂ ಸಲ್ಲುವ ಕಾವ್ಯದ ಒಳಗೊಳ್ಳುವಿಕೆಯ ಬಗೆ ಈ ಕಾವ್ಯದ ಚೆಲುವು, ಕನ್ನಡಕ್ಕೆ ತರುವಾಗ ಇವರ ಭಾಷೆ ಒಂದು ಹೃದಯ ಕಂಪನವನ್ನು ಉಂಟು ಮಾಡುವ ಸೆಳೆತ, ಎಲ್ಲರನ್ನೂ ಮೋಹಕವಾಗಿ ಸೆಳೆಯುವ ಬಗೆ ಅನನ್ಯವಾದದ್ದು. "ಆಕಾಶ ನದಿ ಬಯಲು" ಸುಗಮ ಪುಸ್ತಕ ಹಲಸಂಗಿ ಪ್ರಕಾಶನದಿಂದ ಪ್ರಕಟವಾಗಿದ್ದು ಮೊದಲ ಅನುವಾದ ಸಂಕಲನ. ಇದು ನಮ್ಮ ಹೆಮ್ಮೆಯ ಪ್ರಕಟಣೆ," ಎಂದು ಹೇಳಿದರು.

ಮೇರಿ ಆಲಿವರ್ ಕಾವ್ಯ ಮತ್ತು ಜೀವನವನ್ನು ಕುರಿತು ದೀರ್ಘವಾಗಿ ಮಾತನಾಡಿ, ಅರ್ಥಕ್ಕೆ ಗಂಟು ಬಿದ್ದಷ್ಟು ಅನುಭವಕ್ಕೆ ದೂರವಾಗುತ್ತೇವೆ, ಭಾಷೆಯಲ್ಲಿ ಅನುಭವವನ್ನು ಹಿಡಿದಿಡುವ ಬಗೆ ಮತ್ತು ಅನುವಾದದ ಸವಾಲುಗಳು ಹಾಗೂ ಅನುವಾದ ಕೂಡ ಮೂಲ ಕೃತಿ ಬರೆದಷ್ಟೇ ಮುಖ್ಯ," ಎಂದರು.

ಅನುವಾದ ಹೇಗೆ ಕನ್ನಡ ಕಾವ್ಯವಾಗಬೇಕು ಎಂಬುದರ ಕುರಿತು ಓ ಎಲ್ ನಾಗಭೂಷಣಸ್ವಾಮಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಉಚ್ಛ ನ್ಯಾಯಾಲಯದ ಹಿರಿಯ ವಕೀಲರಾದ ಶ್ರೀಮತಿ ರತ್ನಾ ಶಿವಯೋಗಿಮಠ ಅವರು ಚೈತ್ರಾ ಅವರ ಕಾವ್ಯದ ಒಡನಾಟದ ಕುರಿತು ಮಾತನಾಡಿದರು.

ಈ ಕಾಲದ ದಂದುಗಳ ಬಗ್ಗೆ ಮಾತನಾಡುತ್ತಾ ಕಾವ್ಯ ಅನಾದಿಕಾಲದಿಂದಲೂ ಇರುವ ಪೂಜ್ಯನೀಯ ಕ್ರಿಯೆ ಮತ್ತು ಒಂದು ಸಾಮುದಾಯಿಕ ಆಚರಣೆಯಂತೆ ಎಂದು ಹೇಳುತ್ತಾ ಮೇರಿಯೊಡನೆಯ ಒಡನಾಟವನ್ನು ಹಂಚಿಕೊಂಡರು ಅನುವಾದಕರಾದ ಚೈತ್ರಾ.

ಪುಸ್ತಕ ಬಿಡುಗಡೆ ಮಾಡಿ ಕನ್ನಡ ಕಾವ್ಯ ಪರಂಪರೆ ಕುರಿತ ಮಾತನಾಡುತ್ತಾ ಮೇರಿ ಕಾವ್ಯದ ಪ್ರಸ್ತುತತೆಯನ್ನು ವಿಶ್ಲೇಷಿಸಿದರು. ಪ್ರಕೃತಿಯೊಂದಿಗೆ ಬೆರೆತು ಕಾವ್ಯ ಕಟ್ಟುವ ಮೇರಿ ಆಲಿವರ್ ಕವಿತೆಗಳನ್ನು ಚೈತ್ರಾ ಶಿವಯೋಗಿಮಠ ಅವರು ಸಶಕ್ತವಾಗಿ ಕನ್ನಡಕ್ಕೆ ತಂದಿರುವುದು ಅವರ ನಿಜವಾದ ಯಶಸ್ಸು ಎಂದು ಎಚ್ ಎಸ್ ರಾಘವೇಂದ್ರ ರಾವ್ ಹೇಳಿದರು.

ಕರ್ನಾಟಕ ಉಚ್ಛ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀಮತಿ ಕೆ.ಎಸ್.ಮುದಗಲ್, ಶ್ರೀಮತಿ ನಿರುಪಮಾ ರಾಘವೇಂದ್ರ ರಾವ್, ಎಮ್ ಆರ್ ಕಮಲಾ, ಚಿದಂಬರ ನರೇಂದ್ರ, ಜಯಲಕ್ಷ್ಮಿ ಪಾಟೀಲ್ ದಾದಾಪೀರ್ ಜೈಮನ್, ಎಡೆಯೂರು ಪಲ್ಲವಿ ಕಾವ್ಯಶ್ರೀ ಎಚ್, ರೂಮಿ ಹರೀಶ್, ಶಶಾಂಕ್ ಎಸ್ ಆರ್, ಪಾಲನೇತ್ರ ಜಿ ಎಸ್ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವೈಭವಿ, ದೀಕ್ಷಾ ಪ್ರಾರ್ಥಿಸಿದರು. ಕವಿ ನದೀಮ್ ಸನದಿ ಸ್ವಾಗತಿಸಿದರು. ಕವಿ, ಕಥೆಗಾರ್ತಿ ಶ್ರುತಿ ಬಿ ಆರ್ ನಿರೂಪಣೆ ಮಾಡಿದರು.

MORE NEWS

Booker prize 2025: ಕರುನಾಡ ಲೇಖಕಿ ಬಾನು ಮುಷ್ತಾಕ್ ಅವರ ಸಂತಸದ ನುಡಿ

21-05-2025 ಬೆಂಗಳೂರು

ಕನ್ನಡ ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದೆ. ಮೊದಲ ಬಾರಿಗೆ ಕನ್ನಡದ ಕೃತ...

ಸಾಹಿತ್ಯ ಹಾಗೂ ಸಿನಿಮಾದ ಉದ್ದೇಶ ಕಥೆಯನ್ನು ಹೇಳುವುದಲ್ಲ, ಕಥಾನಕವನ್ನು ಸೃಷ್ಟಿಸುವುದು :ಗಿರೀಶ್ ಕಾಸರವಳ್ಳಿ

21-05-2025 ಬೆಂಗಳೂರು

`ಸಿನೆಮಾ ಮನರಂಜನೆಯಲ್ಲ, ಅದು ಮನೋವಿಕಾಸಕ್ಕೆ ಅನುವು ಮಾಡಿಕೊಡುತ್ತದೆ’ ಎಂದು ಹಿರಿಯ ಕಲಾಸಿನಿಮಾ ನಿರ್ದೇಶಕ ಗಿರೀಶ...

ಮೊದಲ ಓದಿನಿಂದಲೇ ತೀರ್ಪುಗಾರರಿಗೆ ಇಷ್ಟವಾಗಿದ್ದ ಕೃತಿ: ಹಾರ್ಟ್ ಲ್ಯಾಂಪ್

21-05-2025 ಬೆಂಗಳೂರು

ಲಂಡನ್: ಅಂತರ್‌ ರಾಷ್ಟ್ರೀಯ ಬೂಕರ್‌ ಪ್ರಶಸ್ತಿ 2025 ಘೋಷಿಸಿದ ಆಯ್ಕೆ ಸಮಿತಿಯ ಅಧ್ಯಕ್ಷ, ಮ್ಯಾಕ್ಸ...