ರೋಚಕ ಕಥನಗಳ ‘LTTE ಮೂರ್ತಿ ಕಾಲಿಂಗ್’ ಕೃತಿ ಲೋಕಾರ್ಪಣೆ

Date: 21-08-2022

Location: ಬೆಂಗಳೂರು


“LTTE ಮೂರ್ತಿ ಕಾಲಿಂಗ್’’ ಕೃತಿಯು ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಕೊಲೆ ಪ್ರಕರಣದಲ್ಲಿ ನಡೆದ ತನಿಖೆ ಇನ್ನಿತರ ವಿಷಯಗಳನ್ನು ಒಳಗೊಂಡಿದ್ದು, ರೋಚಕ ಕಥಾನಕವಾಗಿ ಮೂಡಿಬಂದಿದೆ ಎಂದು ಪತ್ರಕರ್ತ ಡಿಜೆ ಚಂದ್ರಚೂಡ ತಿಳಿಸಿದರು.

ಬೆಂಗಳೂರಿನ ಸಾವಣ್ಣ ಪ್ರಕಾಶನದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಎ. ವೆಂಕಟೇಶ ಮೂರ್ತಿ ಅವರ, ನೈಜ ಘಟನೆ ಆಧಾರಿತ ’LTTE ಮೂರ್ತಿ calling’ ಕಾದಂಬರಿಯ ಲೋಕಾರ್ಪಣೆ ಕಾರ್ಯಕ್ರಮವು ಭಾನುವಾರ ಬೆಂಗಳೂರಿನ ಹನುಮಂತ ನಗರದ ಕೆ.ಎಚ್‌. ಕಲಾಸೌಧದ ಆವರಣದಲ್ಲಿ ನಡೆಯಿತು.

ಪೋಲಿಸರ ಕೈಗೆ ಅಮಾಯಕರು ಸಿಲುಕಿ ತಾವು ಮಾಡದ ಅಪರಾಧಕ್ಕೆ ಹೇಗೆ ಶಿಕ್ಷೆ ಅನುಭವಿಸುತ್ತಾರೆ ಎಂಬುದರ ಜೊತೆಗೆ ತಮಗಾದ ಆ ರೀತಿಯ ಅನುಭವಗಳ ಕುರಿತು ವಿವರಿಸಿದರು. ಇನ್ನು ಈ ಕೃತಿಯು ಚಲನಚಿತ್ರವಾಗಿ ರೂಪುಗೊಂಡರೆ ಸೂಕ್ತವಾಗಿದ್ದು, ಸಿನೆಮಾ ನಿರ್ಮಾಣಕ್ಕೆ ಯಾರೂ ಮುಂದೆ ಬರದಿದ್ದರೆ ತಾವೇ ಆ ಹೊಣೆಯನ್ನು ಸ್ವೀಕರಿಸುವುದಾಗಿ ತಿಳಿಸಿದರು.

ಸಿಐಡಿ ಅಧಿಕಾರಿ ಪಿ.ಆರ್.ಜನಾರ್ಧನ್ ಅವರು ಮಾತನಾಡಿ, ಕೆಲವೊಂದು ಸಂದರ್ಭಗಳಲ್ಲಿ ಪೊಲೀಸ್ ಅಧಿಕಾರಿಗಳು ಎಷ್ಟೇ ಎಚ್ಚರ ವಹಿಸಿದರೂ ಕೂಡ ನಿರ್ದೋಷಿಗಳು ನೋವನ್ನು ಅನುಭವಿಸುವ ಘಟನೆಗಳು ನಡೆಯುತ್ತವೆ ಎಂದರು. ಹಾಗೂ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದಿದ್ದರೂ ಒಂದು ಸಣ್ಣ ಸುಳಿವನ್ನಾಧರಿಸಿ ಅಪರಾಧಿಗಳನ್ನು ಹೇಗೆ ಕಾನೂನಿಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದರು.

ಚಲನಚಿತ್ರ ನಟ ಆದಿತ್ಯ ಅವರು ಮಾತನಾಡಿ, ತಮ್ಮ ತಂದೆ ಖ್ಯಾತ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ತಮ್ಮ ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುತ್ತಾರೆ. ನನಗೆ ಪುಸ್ತಕಗಳನ್ನು ಓದುವ ಹವ್ಯಾಸವಿಲ್ಲ ಇದುವರೆಗೆ ಇರಲಿಲ್ಲ. ಆದರೆ ಇನ್ನು ಮುಂದೆ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದಾಗಿ ಹೇಳಿದರು.

ಲೇಖಕ ಶಿವಕುಮಾರ ಮಾವಲಿ ಈ ಕೃತಿ ರೂಪುಗೊಳ್ಳಲು ತಮ್ಮ ಪ್ರಯತ್ನವನ್ನು ವಿವರಿಸುವುದರ ಜೊತೆಗೆ ಬೇರೆ ದೇಶಗಳಲ್ಲಿ ನಿರಪರಾಧಿಗಳು ಹೇಗೆ ವರ್ಷಗಟ್ಟಲೆ ಜೈಲುಗಳಲ್ಲಿ ಕೊಳೆಯುತ್ತಾರೆ ಎಂಬುದನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಲೇಖಕ ಎ ವೆಂಕಟೇಶಮೂರ್ತಿ ಅವರು, ಈ ಪುಸ್ತಕ ರೂಪುಗೊಳ್ಳಲು ಕಾರಣಕರ್ತರಾದ ಸಾವಣ್ಣ ಪ್ರಕಾಶನದ ಜಮೀಲ್, ಲೇಖಕ ಶಿವಕುಮಾರ ಮಾವಲಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದರು.

MORE NEWS

Unlock Raghava; ಶಿವಮೊಗ್ಗದ ಭಾರತ್ ಸಿನಿಮಾಸ್‍ನಲ್ಲಿ ಬಿಡುಗಡೆ ಆಯಿತು ‘ಲಾಕ್ ಲಾಕ್’ ಹಾಡು

08-01-2025 ಬೆಂಗಳೂರು

ಮಿಲಿಂದ್‍ ಮತ್ತು ರಚೆಲ್‍ ಡೇವಿಡ್‍ ಅಭಿನಯದ ‘ಅನ್‍ಲಾಕ್‍ ರಾಘವ’ ಚಿತ್ರವು ಫೆಬ್ರವ...

ಸದ್ಯ ಓಟಿಟಿಯಲ್ಲಿ ‘UI’ ಇಲ್ಲ; ಸ್ಪಷ್ಟನೆ ಕೊಟ್ಟ ನಿರ್ಮಾಪಕರು

08-01-2025 ಬೆಂಗಳೂರು

ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ‘UI’ ಚಿತ್ರವು ಡಿಸೆಂಬರ್‍ 20ರಂದು ಬಿಡುಗಡೆಯಾಗಿ, ಚಿತ್ರಕ್ಕೆ ...

ಫೆಬ್ರವರಿ 7ರಂದು ‘ಗಜರಾಮ’ನಾಗಿ ಬರಲಿದ್ದಾರೆ ರಾಜವರ್ಧನ್‍

08-01-2025 ಬೆಂಗಳೂರು

ಕಳೆದ ವರ್ಷದ ಕೊನೆಯ ಶುಕ್ರವಾರದಂದು ರಾಜವರ್ಧನ್‍ ಅಭಿನಯದ ‘ಗಜರಾಮ’ ಚಿತ್ರವು ಬಿಡಗುಡೆಯಾಗಬೇಕಿತ್ತು. ...