ರಾಜ್ಯಮಟ್ಟದ ಕವಿಗೋಷ್ಠಿಗೆ ಕವನಗಳ ಆಹ್ವಾನ

Date: 23-07-2024

Location: ಬೆಂಗಳೂರು


ಕೆ.ಆರ್. ಪೇಟೆ: ಬೆಳ್ಳಿ ಹಬ್ಬದ ಹೊಸ್ತಿಲಿನಲ್ಲಿರುವ ಜಿಲ್ಲಾ ಯುವ ಬರಹಗಾರರ ಬಳಗದ ಕೆ.ಆರ್. ಪೇಟೆ ತಾಲ್ಲೂಕು ಘಟಕದ ವತಿಯಿಂದ ಆಗಸ್ಟ್ ತಿಂಗಳಿನಲ್ಲಿ 'ರಾಜ್ಯ ಮಟ್ಟದ ಕವಿಗೋಷ್ಠಿ'ಯನ್ನು ಪಟ್ಟಣದ ಪ್ರಗತಿ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ನಾಡಿನ ಆಸಕ್ತ ಕವಿ ಮತ್ತು ಕವಯತ್ರಿಯರಿಂದ ಕವನಗಳ ಆಹ್ವಾನಿಸಲಾಗಿದೆ ಎಂದು ಬಳಗದ ಸಂಸ್ಥಾಪಕ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ತಿಳಿಸಿದ್ದಾರೆ.

ಈ ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಛಿಸುವ ಯಾವುದೇ ವಯೋಮಾನದ ಆಸಕ್ತ ಕವಿ-ಕವಯಿತ್ರಿಯರು ಯಾವುದೇ ವಸ್ತು ವಿಷಯ ಕುರಿತು ರಚಿಸಿದ, ತಮ್ಮ ಸ್ವ-ರಚಿತ 20 ಸಾಲುಗಳ ಮಿತಿಯೊಳಗಿನ ಎರಡು ಕವಿತೆಗಳು / ಗಜಲ್ ಗಳನ್ನು ಅಥವಾ 6 ಸಾಲಿನ ಮಿತಿಯೊಳಗಿನ ಆರು ಚುಟುಕು/ಹನಿಗವಿತೆಗಳನ್ನು ಸಂಘಟಕರಿಗೆ ಕಳುಹಿಸಿಕೊಡಬೇಕು. ಆಯ್ಕೆಯಾದ ಕವಿತೆಗಳ ಕವಿಗಳಿಗೆ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಕವನ ವಾಚಿಸಲು ಅವಕಾಶ ಮಾಡಿಕೊಡಲಾಗುವುದು. ಜೊತೆಗೆ ಭಾಗವಹಿಸುವ ಎಲ್ಲಾ ಕವಿಗಳಿಗೂ ಸಮಾರಂಭದಲ್ಲಿ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು.

ಆಸಕ್ತ ಕವಿಗಳು ಆ. 2 ರೊಳಗೆ ತಲುಪುವಂತೆ ಸ್ವರಚಿತ ಎರಡು ಕವಿತೆಗಳನ್ನು ತಮ್ಮ ಸಂಕ್ಷಿಪ್ತ ಪರಿಚಯದೊಂದಿಗೆ - ಮೊಹಮ್ಮದ್ ಅಜರುದ್ದೀನ್, ಅಧ್ಯಕ್ಷರು, ತಾಲೂಕು ಯುವ ಬರಹಗಾರರ ಬಳಗ, ಅಕ್ಕಿಹೆಬ್ಬಾಳು ಗ್ರಾಮ, ಕೃಷ್ಣರಾಜಪೇಟೆ ತಾಲ್ಲೂಕು, ಮಂಡ್ಯ ಜಿಲ್ಲೆ - 571605 ಈ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ 9606160571 ಸಂಪರ್ಕಿಸಬಹುದು ಎಂದು ಸತೀಶ್ ಜವರೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

MORE NEWS

ಬೆಂಗಳೂರಿನ ಮಹಾನಗರ ಪಾಲಿಕೆಗೆ ಅವಿರೋಧವಾಗಿ ಆಯ್ಕೆಯಾದ ಪ್ರಥಮ ಮಹಿಳೆ ಲೀಲಾದೇವಿ; ಶಂಕರ್

17-10-2024 ಬೆಂಗಳೂರು

ಬೆಂಗಳೂರು: ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಬಸವ ಸಮಿತಿ ಹಾಗೂ ಕದಳಿ ಮಹಿಳಾ ವೇದಿಕೆಯಿಂದ ಕನ್ನಡ ಸಾಂಸ್ಕೃತಿಕ ಪರಿ...

ಜ್ಞಾನ ವಿಶಾರದೆ ಪುರಸ್ಕಾರಕ್ಕೆ `ಎಲೆಮರಿಯ ಕಾಯಿಗಳು' ಕೃತಿ ಆಯ್ಕೆ

17-10-2024 ಬೆಂಗಳೂರು

ವಿಜಯನಗರ: ಶ್ರೀ ಉತ್ಸವಾಂಬ ಪ್ರಕಾಶನ ವತಿಯಿಂದ ಕನ್ನಡ ರಾಜ್ಯೋತ್ಸವ 2024ರ ಪ್ರಯುಕ್ತ ನೀಡಲಾಗುವ ‘ಜ್ಞಾನ ವಿಶಾರದೆ...

ತಂದೆಯ ವಿದ್ವತ್ ಪರಂಪರೆಯನ್ನು ಎತ್ತರಕ್ಕೆ ಕೊಂಡೊಯ್ಯುವ ಕೆಲಸವನ್ನು ನಾವಡ ಮಾಡುತ್ತಿದ್ದಾರೆ; ಹಂಪನಾ

16-10-2024 ಬೆಂಗಳೂರು

ಬೆಂಗಳೂರು: ಶೇಷಾದ್ರಿಪುರಂ ಶಿಕ್ಷಣ ದತ್ತಿ, ಶೇಷಾದ್ರಿಪುರಂ ಸಂಜೆ ಕಾಲೇಜು ಹಾಗೂ ಗೋಧೂಳಿ ಕನ್ನಡ ಸಂಘ ಮತ್ತು ಮಂಗಳೂರಿನ ಶ...