ಬೆಂಗಳೂರಿನ ಮಹಾನಗರ ಪಾಲಿಕೆಗೆ ಅವಿರೋಧವಾಗಿ ಆಯ್ಕೆಯಾದ ಪ್ರಥಮ ಮಹಿಳೆ ಲೀಲಾದೇವಿ; ಶಂಕರ್

Date: 17-10-2024

Location: ಬೆಂಗಳೂರು


ಬೆಂಗಳೂರು: ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಬಸವ ಸಮಿತಿ ಹಾಗೂ ಕದಳಿ ಮಹಿಳಾ ವೇದಿಕೆಯಿಂದ ಕನ್ನಡ ಸಾಂಸ್ಕೃತಿಕ ಪರಿಚಾರಕಿ ಕರ್ನಾಟಕ ಸರ್ಕಾರದ ಮಾಜಿ ಸಚಿವೆ ಶರಣೆ ಡಾ. ಲೀಲಾದೇವಿ ಆರ್. ಪ್ರಸಾದ್ -92 ‘ಸಾರ್ಥಕ ಬದುಕಿನ ಸುಂದರ ಪಯಣ’ ಕಾರ್ಯಕ್ರಮವು 2024 ಅ.17 ಗುರುವಾರದಂದು ನಗರದ ಬಸವೇಶ್ವರ ವೃತ್ತ ಬಳಿಯ ಬಸವ ಭವನದಲ್ಲಿ ನಡೆಯಿತು.

‘ಕಾಡಿ ಬೇಡದ ಬುತ್ತಿ’ ಆತ್ಮಕಥೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಕರ್ನಾಟಕ ವಿಧಾನ ಪರಿಷತ್ ಮಾಜಿ ಅಧ್ಯಕ್ಷ ಡಾ.ಬಿ.ಎಲ್. ಶಂಕರ್ ಅವರು, " ಈ ರಾಷ್ಟ್ರ ರಾಜಕಾರಣದ 77ರ ನಂತರದ ಎಲ್ಲಾ ಬೆಳವಣಿಗೆಗಳಲ್ಲೂ ಕೂಡ ಹಲವರು ಸಿಗಬೇಕಾದಂತಹ ಅವಕಾಶಗಳನ್ನು ಕಳೆದುಕೊಂಡವರು ಇದ್ದಾರೆ. ಪ್ರತಿಷ್ಠೆಯ ರಾಜಕಾರಣಕ್ಕೆ ಬಲಿಯಾದವರು, ದೊಡ್ಡ ದೊಡ್ಡ ನಾಯಕರ ಮಧ್ಯೆ ಬಂದಂತಹ ಭಿನ್ನಾಭಿಪ್ರಾಯಗಳಿಗೆ ಬಲಿಪಶು ಆಗಿರುವಂತಹ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಅಂತವರ ಪೈಕಿ ಡಾ. ಲೀಲಾದೇವಿ ಆರ್. ಪ್ರಸಾದ್ ಕೂಡ ಒಬ್ಬರು ಅನ್ನುವಂತಹದ್ದು ನಮ್ಮ ಅನುಭವಕ್ಕೆ ಬಂದಂತಹ ವಿಚಾರ. ಬೆಂಗಳೂರು ಮಹಾನಗರದಲ್ಲಿ ಮಹಾನಗರ ಪಾಲಿಕೆಗೆ ಅವಿರೋಧವಾಗಿ ಆಯ್ಕೆಯಾದ ಪ್ರಥಮ ಮಹಿಳೆ ಲೀಲಾದೇವಿ. ಹಲವಾರು ಕಡೆಗಳಿಂದ ಗಣ್ಯರು ಆಗಮಿಸಿದ್ದು, ಉತ್ತರ ದಕ್ಷಿಣದ ಇವೆರಡರ ಸಂಗಮದ ರೂಪದಲ್ಲಿ ಮಧ್ಯದಲ್ಲಿ ಲೀಲಮ್ಮ ಇದ್ದಾರೆ. ಅವರಿಗೆ ಹಾಗೂ ಅವರ ವ್ಯಕ್ತಿತ್ವಕ್ಕೆ ಅವರು ಮಾಡಿದಂತಹ ಸಾಧನೆಗೆ, ಹೋರಾಟಕ್ಕೆ ಸರಿಯಾಗಿರುವಂತಹ ಗೌರವವನ್ನು ಇವತ್ತಿನ ಕಾರ್ಯಕ್ರಮದ ಮುಖೇನ ನೀಡಲಾಗುತ್ತಿರುವ ಸಂತೋಷದ ಸಂಗತಿ," ಎಂದು ತಿಳಿಸಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಮೈಸೂರಿನ ಸುತ್ತೂರು ಶ್ರೀಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಹಾಗೂ ಅಥಣಿಯ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಅವರು ವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಡಾ. ಧರಣಿದೇವಿ ಮಾಲಗತ್ತಿ, ಸುಮಂಗಲಿ ಸೇವಾಶ್ರಮದ ಸಂಸ್ಥಾಪಕ ಸುಶೀಲಮ್ಮ, ಅಥಣಿಯ ಪತ್ರಕರ್ತ ರೋಹಿಣಿ ಶಿವಪುತ್ರ ಯಾದವಾಡ ಅವರು ವಹಿಸಿದ್ದರು.

ಪ್ರಸ್ತಾವಿಕವಾಗಿ ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಅವರು ಮಾತನಾಡಿದರು.

 

MORE NEWS

ಜ್ಞಾನ ವಿಶಾರದೆ ಪುರಸ್ಕಾರಕ್ಕೆ `ಎಲೆಮರಿಯ ಕಾಯಿಗಳು' ಕೃತಿ ಆಯ್ಕೆ

17-10-2024 ಬೆಂಗಳೂರು

ವಿಜಯನಗರ: ಶ್ರೀ ಉತ್ಸವಾಂಬ ಪ್ರಕಾಶನ ವತಿಯಿಂದ ಕನ್ನಡ ರಾಜ್ಯೋತ್ಸವ 2024ರ ಪ್ರಯುಕ್ತ ನೀಡಲಾಗುವ ‘ಜ್ಞಾನ ವಿಶಾರದೆ...

ತಂದೆಯ ವಿದ್ವತ್ ಪರಂಪರೆಯನ್ನು ಎತ್ತರಕ್ಕೆ ಕೊಂಡೊಯ್ಯುವ ಕೆಲಸವನ್ನು ನಾವಡ ಮಾಡುತ್ತಿದ್ದಾರೆ; ಹಂಪನಾ

16-10-2024 ಬೆಂಗಳೂರು

ಬೆಂಗಳೂರು: ಶೇಷಾದ್ರಿಪುರಂ ಶಿಕ್ಷಣ ದತ್ತಿ, ಶೇಷಾದ್ರಿಪುರಂ ಸಂಜೆ ಕಾಲೇಜು ಹಾಗೂ ಗೋಧೂಳಿ ಕನ್ನಡ ಸಂಘ ಮತ್ತು ಮಂಗಳೂರಿನ ಶ...

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ 2023ನೇ ಸಾಲಿನ ಪ್ರಶಸ್ತಿ ಪಟ್ಟಿ ಪ್ರಕಟ

16-10-2024 ಬೆಂಗಳೂರು

ಉತ್ತರ ಕನ್ನಡ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಕೊಡಮಾಡುವ 2023ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ...