ಪುಸ್ತಕದ ಪ್ರತಿಯೊಂದು ಘಟನೆಗೂ ಸಾಕ್ಷಿಯಾಗಿ ಲೇಖಕರು ನಿಲ್ಲುತ್ತಾರೆ


"ಮಾನವನಿಂದ ದೂರವಿರಲು ಪ್ರಯತ್ನಸುವ ಅಘೋರಿಗಳು ಎಲ್ಲಿರುತ್ತಾರೆ, ಏನು ಮಾಡುತ್ತಾರೆ, ಹೇಗೆ ಬದುಕುತ್ತಾರೆ, ಏನು ಆಹಾರವನ್ನು ಸೇವಿಸುತ್ತಾರೆ, ಅವರ ಜೀವನ ಕ್ರಮ, ಬದುಕಿನ ರೀತಿ ಎಲ್ಲವನ್ನು ಸವಿಸ್ತಾರವಾಗಿ ಒಳಗೊಂಡ ಹೊತ್ತಿಗೆ ಇದಾಗಿದೆ," ಎನ್ನುತ್ತಾರೆ ರಾಜು ಹಗ್ಗದ. ಅವರು ಸಂತೋಷಕುಮಾರ ಮೆಹಂದಳೆ ಅವರ `ಅಘೋರಿಗಳ ಲೋಕದಲ್ಲಿ’ ಕೃತಿ ಕುರಿತು ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

ಪುಸ್ತಕದ ಪ್ರತಿಯೊಂದು ಘಟನೆಗೂ ಸಾಕ್ಷಿಯಾಗಿ ಲೇಖಕರು ನಿಲ್ಲುತ್ತಾರೆ. ಅಘೋರಿಗಳ ವಿವಿಧ ಮಂತ್ರ ತಂತ್ರದ ಲೋಕದ ಹಲವಾರು ಸಿದ್ಧಿಗಳ ಸಂದರ್ಭದಲ್ಲಿ ಲೇಖಕರು ಉಪಸ್ಥಿತಿಯಿದ್ದು ಅಲ್ಲಿಯ ಭೀಭತ್ಸವನ್ನು ತಮ್ಮ ಅನುಭವದಲ್ಲಿ ವೈಜ್ಞಾನಿಕ ತಳಹದಿಯಮೇಲೆ ಚಿತ್ರಿಸುತ್ತಾ ಹೋಗಿದ್ದಾರೆ.

ಅಘೋರಿಗಳ ಲೋಕದ ಬದುಕಿನ ಚಿತ್ರಣ, ಅವರ ಜೀವನಶೈಲಿ, ಅಲ್ಲಿ ನಡೆಯುವ ಘಟನೆಗಳಿಗೆ ಸಾಕ್ಷಿಯಾಗಿ ವೈಜ್ಞಾನಿಕವಾಗಿ ಚರ್ಚಿಸಿ, ಚಿಂತನೆಗೊಳಪಡಿಸಿ ಅಘೋರಿಗಳ ಎಲ್ಲ ಚಟುವಟಿಕೆಗಳು ವಿಜ್ಞಾನಕ್ಕೆ, ನಮ್ಮ ಪುರಾತನ ಯೋಗಕ್ಕೆ ಹೇಗೆಲ್ಲ ಸಂಬಂಧವನ್ನು ಬೆಸೆದುಕೊಂಡಿವೆ ಎಂಬುದನ್ನು ಲೇಖಕರು ಸ್ವತಃ ತಾವು ಬೇಟಿಯಾಗಿಯೆ ತಮ್ಮ ಅನುಭವಗಳನ್ನು ಇಲ್ಲಿ ಬಿತ್ತರಿಸಿದ್ದಾರೆ.

ಅಘೋರಿಗಳೆಂದರೇನು? ಅವರ ಅವಾಸ ಸ್ಥಾನ, ಅವರ ಬದುಕಿನ ರೀತಿ, ಅವರಲ್ಲಿರುವ ಮಾನವ ಸಮಾಜ ದ್ವೇಷಿಸುವಂತಹ ಮಾಟ, ಮಂತ್ರ, ಶವ ಸಂಭೋಗ, ಮನುಷ್ಯ ಬಲಿ, ಕುಂಡಲೀನಿ ಮನ್ಮಥ ರೇಖೆ ಇವುಗಳ ಸವಿಸ್ತಾರವಾದ ವಿವರಗಳೊಂದಿಗೆ ಅವುಗಳ ಸತ್ಯಾಸತ್ಯತೆಯನ್ನು ವೈಜ್ಞಾನಿಕವಾಗಿ ನಿರೂಪಿಸುತ್ತಾ ಅವರ ಜಗತ್ತಿನ ಒಳ ಹೂರಣವನ್ನು ಸೂಕ್ಷ್ಮವಾಗಿ ಅಲ್ಲಿಯ ಅಘೋರಿ ಬಾಬಾಗಳ ಬಾಯಿಂದಲೇ ಉತ್ತರವನ್ನು ಪಡೆದಿರುವುದು ವಿಶೇಷ.

ಮಾನವನಿಂದ ದೂರವಿರಲು ಪ್ರಯತ್ನಸುವ ಅಘೋರಿಗಳು ಎಲ್ಲಿರುತ್ತಾರೆ, ಏನು ಮಾಡುತ್ತಾರೆ, ಹೇಗೆ ಬದುಕುತ್ತಾರೆ, ಏನು ಆಹಾರವನ್ನು ಸೇವಿಸುತ್ತಾರೆ, ಅವರ ಜೀವನ ಕ್ರಮ, ಬದುಕಿನ ರೀತಿ ಎಲ್ಲವನ್ನು ಸವಿಸ್ತಾರವಾಗಿ ಒಳಗೊಂಡ ಹೊತ್ತಿಗೆ ಇದಾಗಿದೆ.

ಅವರ ಸಾಧನೆಯ ಮಾರ್ಗದಲ್ಲಿ ಭೀಭತ್ಸ ಎನ್ನುವಂತಹ ಶವಸಂಭೋಗ, ಮನ್ಮಥರೇಖೆ, ಮಾಂಸ ಭಕ್ಷಣೆಗಳು ಓದುಗರ ಗುಂಡಿಗೆಯನ್ನು ಅದುರಿಸುತ್ತದೆ.

ನಾನು ಆರಂಭದಲ್ಲಿ ಈ ಕೃತಿಯನ್ನು 2019 ರಲ್ಲೇ ಓದು ಆರಂಭಿಸಿ ನೂರು ಪುಟಕ್ಕೆ ಪುಸ್ತಕ ಮುಚ್ಚಿ ಇಟ್ಟಿದ್ದೆ. ಶವಸಂಭೋಗದ ಭೀಭತ್ಸತೆ ನನ್ನಲ್ಲಿ ಈ ಹೊತ್ತಿಗೆಯನ್ನು ಓದಲೇಬಾರದು ಎನ್ನುವಷ್ಟರ ಮಟ್ಟಿಗೆ ತೆಗೆದು ಇಡಿಸಿತ್ತು. ಆದರೆ ಮತ್ತೆ ಇತ್ತೀಚೆಗೆ ಎಲ್ಲೋ ಓದಬೇಕಾದರೆ ಅಘೋರಿಗಳ ಬದುಕಿನ ಕೆಲವು ಘಟನೆಗಳು ಮತ್ತೊಮ್ಮೆ ಈ ಪುಸ್ತಕವನ್ನು ನೆನಪಿಸಿತು. ಅವರ ಬದುಕಿನ ವಿಧಾನವನ್ನಾದರೂ ತಿಳಿಯಬೇಕು ಎಂದು ಮತ್ತೊಮ್ಮೆ ಪುಸ್ತಕ ಓದಲಾರಂಭಿಸಿ ಇನ್ನುಳಿದ ಎರಡುನೂರಾ ಇಪ್ಪತ್ತು ಪುಟಗಳು ಮುಗಿಸಿದೆ. ಅಘೋರಿಗಳ ಬದುಕಿನ ಚಿತ್ರಣವನ್ನು ತಿಳಿದುಕೊಂಡೆ.

ಕೃತಿಯುದ್ದಕ್ಕೂ ಲೇಖಕರು ಅಘೋರಿಗಳೊಡನೆ ಒಡನಾಡಿ ಅವರ ಬದುಕಿನ ಪ್ರತಿಯೊಂದು ಚಿತ್ರಣವನ್ನು ಹೆಕ್ಕಿ ತೆಗೆದು ಬರೆದಿರುವುದು ದಿಟ್ಟತನದ ಧೈರ್ಯವಂತರು ಮಾಡುವ ಕಾರ್ಯ ಎಂದೆನಿಸುತ್ತದೆ‌.‌ ಆಘೋರಿಗಳೊಡನೆ ಇರಬೇಕಾದರೆ ಎಷ್ಟೋ ಸಂದರ್ಭದಲ್ಲಿ ಜೀವಕ್ಕೂ ಅಪಾಯವದ ಸಂದರ್ಭದವನ್ನೂ ಲೇಖಕರು ಎದುರಿಸಿದ್ದಾರೆ! ಅವುಗಳೆಲ್ಲದರ ಮದ್ಯೆಯೂ ಲೇಖಕರು ಅಘೋರಗಿಗಳ ವಿಶ್ವಾಸವನ್ನು ಗಳಿಸುತ್ತ ಅವರೊಂದಿಗೆ ವೈಜ್ಞಾನಿಕವಾಗಿ ಚರ್ಚಿಸುತ್ತ ಅವರಿಂದಲೇ ಹಲವಷ್ಟು ವಿಚಾರಗಳನ್ನು ಹೊರತೆಗೆದಿರುವುದು ಕೃತಿಯ ವಿಶೇಷವಾಗಿದೆ. ಆಸಕ್ತರು ಓದಿ ಖುಷಿಪಡಿ.

MORE FEATURES

'ಕೂಡಿಟ್ಟ ಹಣ ಎಲ್ಲಿ ಹೋಯಿತು?'

07-09-2024 ಬೆಂಗಳೂರು

“ಒಲವ ಧಾರೆ' ಕವನ ಸಂಕಲನದಲ್ಲಿರುವ ರಾಮಕೃಷ್ಣರವರ ಬಹುತೇಕ ಕವನಗಳಲ್ಲಿ ವ್ಯಕ್ತವಾಗುವ ಕವಿಯ ಅನುಭವಗಳು ನಮ್ಮ ಅ...

ಅಂತಃಕರಣ ಎಂದರೆ ಆಂತರಿಕ ಕಾರ್ಯಗಳು

07-09-2024 ಬೆಂಗಳೂರು

"ನನ್ನದೆ ಜೀವನದ ಹಲವಾರು ರೀತಿಯ ಭಾವನಾತ್ಮಕ ಪದ ಪುಂಜಗಳಿಗೆ ಈ ಹೊತ್ತಗೆಯ ಮೂಲಕ ಮುಕ್ತಿ ಅಥವಾ ಮೋಕ್ಷ(ನಿರ್ವಾಣ) ಇಂ...

ಕಾವ್ಯ ಪ್ರಕಾರದ ಮೂಲಕ ಸಶಕ್ತವಾಗಿ ಗುರುತಿಸಿಕೊಂಡವರು ಶೈಲಜಾ ಉಡಚಣ

07-09-2024 ಬೆಂಗಳೂರು

“ಶರಣರ ಪ್ರಭಾವದಲ್ಲಿ ಅರಳಿದ ಈ ಪ್ರತಿಭಾನ್ವಿತೆಯ ಬದುಕು – ಬರಹಕ್ಕೆ ಪೂರಕವಾಗಿದೆ. ಆ ಕಾರಣಕ್ಕಾಗಿ ಅವರ ಬರ...