ಕಾವ್ಯ ಪ್ರಕಾರದ ಮೂಲಕ ಸಶಕ್ತವಾಗಿ ಗುರುತಿಸಿಕೊಂಡವರು ಶೈಲಜಾ ಉಡಚಣ


“ಶರಣರ ಪ್ರಭಾವದಲ್ಲಿ ಅರಳಿದ ಈ ಪ್ರತಿಭಾನ್ವಿತೆಯ ಬದುಕು – ಬರಹಕ್ಕೆ ಪೂರಕವಾಗಿದೆ. ಆ ಕಾರಣಕ್ಕಾಗಿ ಅವರ ಬರಹ ಸದಾ ಕಾಲ ಶಾಶ್ವತವಾಗಿ ಉಳಿಯಲು ಸಾಧ್ಯವಾಗಿದೆ” ಎನ್ನುತ್ತಾರೆ ಡಾ. ಶರಣಬಸಪ್ಪ ವಡ್ಡನಕೇರಿ. ಅವರು ಸಿಕಾ ಅವರ ‘ಶೈಲಜಾ ಉಡಚಣ’ ವಾಚಿಕೆ 4ಕ್ಕೆ ಬರೆದ ಅನಿಸಿಕೆ ನಿಮ್ಮ ಓದಿಗಾಗಿ ಇಲ್ಲಿದೆ.

ಕಲ್ಯಾಣ ಕರ್ನಾಟಕದ ಸೃಜನಶೀಲ ಸಾಹಿತಿಗಳು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಸಾಹಿತಿಗಳ ಕೃತಿಗಳು ಕನ್ನಡ ಓದುಗರಿಗೆ ಉಪಲಬ್ಧವಿರುವುದಿಲ್ಲ. ಈ ಲೇಖಕರು ರಚಿಸಿದ ಎಲ್ಲಾ ಸಾಹಿತ್ಯದ ಮೊತ್ತ ಸಾವಿರ ಪುಟಗಳಷ್ಟಾಗುತ್ತದೆ. ಅಷ್ಟನ್ನೂ ಮುದ್ರಿಸುವುದು ಕಷ್ಟಕರ. ಈ ದಿಸೆಯಲ್ಲಿ ನಮ್ಮ ಪ್ರಕಾಶನದಿಂದ ಸಾಹಿತಿಗಳ ವಾಚಿಕೆಗಳನ್ನು ಹೊರತಂದು, ಅವರ ಸಾಹಿತ್ಯದ ಸ್ವಾದವನ್ನು ಕನ್ನಡಿಗರಿಗೆ ಉಣಬಡಿಸಿ ಕನ್ನಡಿಗರ ಹೃನ್ಮನಗಳನ್ನು ಅರಳಿಸುವಂತಾಗಬೇಕೆನ್ನುವುದು ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಸದಿಚ್ಛೆಯಾಗಿದೆ. ಸುವರ್ಣ ಕರ್ನಾಟಕ ನಾಮಕರಣ ಸಂಭ್ರಮಾಚರಣೆ ಸಂದರ್ಭದಲ್ಲಿ, ಕನ್ನಡ ಸಾಹಿತ್ಯದಲ್ಲಿ ಅಹರ್ನಿಶಿ ಸೇವೆಗೈದ ಹಲವು ಹಿರಿಯ ಮತ್ತು ಕಿರಿಯ ಸಾಹಿತಿಗಳ ವಾಚಿಕೆಗಳನ್ನು ಹೊರತಂದು ಕನ್ನಡ ಓದುಗರ ಮಡಿಲಿಗೆ ಅರ್ಪಿಸುವ ಸದಿಚ್ಚೆಯಾಗಿದೆ.

ಈ ಸದಿಚ್ಚೆ ನೆರವೇರುವಲ್ಲಿ ಶ್ರೀಮತಿ ಕಾವ್ಯಶ್ರೀ ಮಹಾಗಾಂವಕರರವರು ಡಾ. ಶೈಲಜಾ ಉಡಚಣ ಅವರ ಸಮಗ್ರ ಸಾಹಿತ್ಯ ವಾಚಿಕೆ ರೂಪದಲ್ಲಿ ಸಂಪಾದಿಸಿದ್ದಾರೆ . ಅವರಿಂದ ರಚಿತವಾದ ಸಾಹಿತ್ಯ ಕಾವ್ಯ, ಗದ್ಯ ಸಾಹಿತ್ಯ ಈ ವಾಚಿಕೆಯಲ್ಲಿ ಅಡಕವಾಗಿದೆ. ಅವರಿಗೆ ದಾನಚಿಂತಾಮಣಿ ಅತ್ತಿಮಬ್ಬೆ ಪುರಸ್ಕಾರದೊಂದಿಗೆ ಇನ್ನು ಅನೇಕ ಪ್ರಶಸ್ತಿಗಳು ಲಭಿಸಿವೆ. ಅವರ ಸಮಗ್ರ ಸಾಹಿತ್ಯದ ಸತ್ವವನ್ನು ಕನ್ನಡದ ಓದುಗರಿಗೆ ಈ ವಾಚಿಕೆ ಉಣಬಡಿಸುತ್ತದೆ.

ರಾಯಚೂರಿನಲ್ಲಿ ಹುಟ್ಟಿ ಕಲಬುರಗಿಯಲ್ಲಿ ನೆಲೆಸಿದ್ದ ಡಾ. ಶೈಲಜಾ ಉಡಚಣ ಅವರು ನನ್ನವ್ವನ ಸಮಕಾಲೀನರು. ಅವರೊಂದಿಗೆ ಸಾಹಿತ್ಯಕ ಪರಿಚಯವಾಗಿ ಕೆಲವು ಬಾರಿ ಭೇಟಿ, ಮಾತುಕತೆಯಾಗಿತ್ತು. ಕಲ್ಯಾಣ ಕರ್ನಾಟಕದ ಆಧುನಿಕ ಸಾಹಿತ್ಯದ ಆರಂಭ ಕಾಲದಲ್ಲಿ ಇದ್ದವರು ಕೆಲವೇ ಕೆಲವು ಬೆರಳೆಣಿಕೆಯ ಮಹಿಳೆಯರು, ಜಯದೇವಿತಾಯಿ ಲಿಗಾಡೆ, ಗೀತಾ ನಾಗಭೂಷಣ, ಯಶೋದಮ್ಮ ಸಿದ್ಧಬಟ್ಟೆ, ಪ್ರೇಮ ಸಿರ್ಸೆ. ಇವರೆಲ್ಲರ ಮಧ್ಯೆ ಕಾವ್ಯ ಪ್ರಕಾರದ ಮೂಲಕ ಸಶಕ್ತವಾಗಿ ಗುರುತಿಸಿಕೊಂಡವರು ಶೈಲಜಾ ಉಡಚಣ. ಇಪ್ಪತ್ತೂರು ಸ್ವತಂತ್ರ ಕೃತಿಗಳು, ಸಮಗ್ರ ಕಾವ್ಯ ಸಂಕಲನ, ಅಭಿನಂದನಾ ಕೃತಿ ಇತ್ಯಾದಿಗಳನ್ನು ಪಡೆದ ಸಮೃದ್ಧ ಸಾಹಿತ್ಯ ಬದುಕನ್ನು ಅನುಭವಿಸಿದ್ದಾರೆ. ಶರಣರ ಪ್ರಭಾವದಲ್ಲಿ ಅರಳಿದ ಈ ಪ್ರತಿಭಾನ್ವಿತೆಯ ಬದುಕು – ಬರಹಕ್ಕೆ ಪೂರಕವಾಗಿದೆ. ಆ ಕಾರಣಕ್ಕಾಗಿ ಅವರ ಬರಹ ಸದಾ ಕಾಲ ಶಾಶ್ವತವಾಗಿ ಉಳಿಯಲು ಸಾಧ್ಯವಾಗಿದೆ.

- ಡಾ. ಶರಣಬಸಪ್ಪ ವಡ್ಡನಕೇರಿ

MORE FEATURES

Nigooda; ಕಾದಂಬರಿಗೆ `ನಿಗೂಢ' ಅನ್ನೋ ಶೀರ್ಷಿಕೆ ನೀಡಿದ ಬಗ್ಗೆ ನನ್ನ ತಕರಾರಿದೆ

21-01-2025 ಬೆಂಗಳೂರು

"ಬರಹಗಾರ ತಾನು ಎದ್ದು ಕಾಣೋದಕ್ಕಿಂತ ಹಿಂದಿನವರು ಸೃಷ್ಟಿಸಿದ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಬರೆಯುವುದೇ ಮುಖ...

ವಡ್ಡಗೆರೆ ನಾಗರಾಜಯ್ಯಗೆ 2024ನೇ ಸಾಲಿನ 'ಕುವೆ೦ಪು ಅನಿಕೇತನ' ಪ್ರಶಸ್ತಿ

21-01-2025 ಬೆಂಗಳೂರು

ಬೆಂಗಳೂರು: ಕನ್ನಡ ಸಂಘರ್ಷ ಸಮಿತಿ ನೀಡುವ 2024ನೇ ಸಾಲಿನ ವಿವಿಧ ಪ್ರಶಸ್ತಿಗಳ ಪಟ್ಟಿ ಪ್ರಕಟವಾಗಿದೆ. 'ಕುವೆಂಪು ...

Ishtukaala ottigiddu; ಈಗ ನನ್ನ ಕಣ್ಣು ಶುಭ್ರವಾಗಿದೆ, ದಣಿವು ಆರಿ ಹೋಗಿದೆ

21-01-2025 ಬೆಂಗಳೂರು

"ಈ ಕಾದಂಬರಿಯ ಪ್ರತಿ ಪಾತ್ರಗಳು ನನ್ನೊಳಗಿನ ಮನುಷ್ಯಳನ್ನು ಹೆಚ್ಚು ಹೆಚ್ಚು ತಿದ್ದಿದೆ, ತೀಡಿದೆ, ಪ್ರಶ್ನೆ ಮಾಡುವಂ...