"ನನ್ನದೆ ಜೀವನದ ಹಲವಾರು ರೀತಿಯ ಭಾವನಾತ್ಮಕ ಪದ ಪುಂಜಗಳಿಗೆ ಈ ಹೊತ್ತಗೆಯ ಮೂಲಕ ಮುಕ್ತಿ ಅಥವಾ ಮೋಕ್ಷ(ನಿರ್ವಾಣ) ಇಂದಿಗೆ ಸಿಗುತ್ತಿದೆ,” ಎನ್ನುತ್ತಾರೆ ಲಕ್ಷ್ಮಣ್ ಬಜಿಲ. ಅವರು ‘ನಿರ್ವಾಣ’ ಕವನ ಸಂಕಲನಕ್ಕೆ ಬರೆದ ಮುನ್ನುಡಿ ಬರಹ ನಿಮ್ಮ ಓದಿಗಾಗಿ..
ಅಂತಃ ಎಂದರೆ ಆಂತರಿಕ ಹಾಗೂ ಕರಣ ಎಂದರೆ ವಾದ್ಯ ಅಥವಾ ಕಾರ್ಯ ಎಂಧರ್ಥ. ಒಟ್ಟಾಗಿ ಹೇಳಬೇಕೆಂದರೆ ಆಂತರಿಕ ಕಾರ್ಯಗಳು ಎಂಬುದಾಗಿ. ಈ ಮಾತು ನನ್ನ ಮನಸಿನ ಅಂತಃಸ್ವರಕ್ಕೆ ಹೇಗೆ ಸೂಕ್ತವಾಗಿದೆ ಎಂದರೆ ಈ “ನಿರ್ವಾಣ" ಕವನ ಸಂಕಲವೆನ್ನುವ ಪದಗೊಂಚಲು ಬರಿಯ ಶಬ್ದಗಳಲ್ಲ, ಪ್ರಾಸವಲ್ಲ, ಬದುಕಿನ ಪ್ರಯಾಸ, ನಿನ್ನೆ ಮೊನ್ನೆ ಬೆಳೆದ ಸಾಲುಗಳಲ್ಲ, ವಿದ್ಯಾರ್ಥಿಯಾಗಿದ್ದಾಗ ಬರೆದ ಪ್ರೌಢಿಮೆಯಿಲ್ಲದ ಬರಹಗಳಿಂದ ಹಿಡಿದು ಬದುಕಿನ ಹಲವು ಏರಿಳಿತಗಳನ್ನು ಕಾಣುವ ಇಂದಿನವರೆಗೂ. ನಾನಿಲ್ಲಿ ಸಮಾಜದ ಹಲವು ಮಜಲಾಗಿ, ಹಲವು ಮಾನವ ಪಾತ್ರವಾಗಿ, ಉಪಯೋಗದ ವಸ್ತುವಾಗಿ, ನಿರ್ಜೀವತೆಗೆ ಜೀವ ತುಂಬುವ ಮೂರ್ತ ಅಮೂರ್ತದ ಕಲ್ಪನೆಗಳನ್ನು ಪೋಣಿಸಿದ್ದೇನೆ.
"ನನ್ನದೆ ಜೀವನದ ಹಲವಾರು ರೀತಿಯ ಭಾವನಾತ್ಮಕ ಪದ ಪುಂಜಗಳಿಗೆ ಈ ಹೊತ್ತಗೆಯ ಮೂಲಕ ಮುಕ್ತಿ ಅಥವಾ ಮೋಕ್ಷ(ನಿರ್ವಾಣ) ಇಂದಿಗೆ ಸಿಗುತ್ತಿದೆ. ಕೆಲವೊಂದು ಕಣ್ಣಿಗೆ ಹಿಡಿಸಿದರೆ, ಕೆಲವೊಂದು ಬುದ್ದಿಗೆ, ಇನ್ನೂ ಕೆಲವು ನಿಮ್ಮ ಹೃದಯಕ್ಕೆ. ನಿಮಗನಿಸಬಹುದು ಇದೆಲ್ಲ ಸರಿಯಿದೆ ಅಥವಾ ಸರಿಯಿಲ್ಲ ಎಂದು, ಎಲ್ಲವೂ ನಮ್ಮ ಕಾಲಕ್ಕನುಗುಣವಾಗಿ ಮತ್ತು ಯೋಚನೆಗನುಗುಣವಾಗಿ, ಪ್ರೌಢಿಮೆ ಅಥವಾ ಮನೋಭಿಲಾಷೆಗಳು ಹುಟ್ಟುವುದು ಬೆಳೆಯುವುದು ಸಮಾಜ ನಮ್ಮನ್ನು ನೋಡುವ ಹಾಗೂ ನಾವು ಸಮಾಜವನ್ನು ನೋಡುವ ರೀತಿಯಲ್ಲಿ.
ಪೂರ್ಣಚಂದ್ರ ತೇಜಸ್ವಿ ಅವರ ಮನೆಗೆ ಗೆಳೆಯರ ಜೊತೆ ಭೇಟಿ ನೀಡಿ, ಅವರ ಧರ್ಮಪತ್ನಿಯವರ ಮಾತುಗಳನ್ನು ಕೇಳಿದಾಗ ನಮ್ಮೆಲ್ಲರಿಗೂ ಸಾಹಿತ್ಯ ಲೋಕ ಆಹ್ವಾನಿಸಿದ್ದು, ನಮ್ಮ ಕಾಲೇಜು ಜೀವನದಲ್ಲಿ ಕಥೆ, ಕವನ, ಸಾಹಿತ್ಯದ ಗೀಳು ಹೆಚ್ಚಾಗಿದ್ದು, ಹುಚ್ಚಾಗಿದ್ದು. ನನ್ನೊಳಗಿನ ಸಾಹಿತ್ಯ ಗುಡಿಸಲು ಮತ್ತೊಮ್ಮೆ ಗರಿಗೆದರಿ ಅಂತಃಪುರದಂ ಆವರಿಸಲು, ನನ್ನ ಸಣ್ಣ ಕಾರ್ಯಗಳನ್ನು ಸಾಧನೆಯಾಗಿ ಮಾರ್ಪಾಡು ಮಾಡಲು ಅಂತೆಯೇ ಹಲವು ವರ್ಷಗಳಿಂದ ಗೀಚೀದ ಚೂರು ಪಾಲು ಸಾಲುಗಳು ಮುಕ್ತಿಯನ್ನು ಪಡೆದು ನಿರ್ವಾಣ ಎಂಬ ಚೊಚ್ಚಲ ಕವನ ಸಂಕಲನವಾಗಿ ಇಂದು ಉಸಿರಾಡಲು, ಅತಿಮುಖ್ಯ ಕಾರಣ ಈ ಮಹಾಪ್ರಾಣ ಕ್ರಿಯೇಟಿವ್ ಸಂಸ್ಥೆಯ ಅತ್ಯಂತ ಯಶಸ್ವಿ ಮಹಾ ಪ್ರಯೋಗ ಹಾಗೂ ಅತಿ ಶೀಘ್ರದಲ್ಲಿ ಜನಮನ್ನಣೆ ಪಡೆದ ಪುಸ್ತಕ ಯೋಜನೆ ಹಾಗೂ ಅದರ ವಜ್ರಖಚಿತ ಕೀರ್ತಿಯ ಕಿರೀಟ "ಕ್ರಿಯೇಟಿವ್ ಪುಸ್ತಕ ಮನೆ". ಇದು ಸಾಹಿತ್ಯ ಪ್ರೇಮಿಗಳ ಕಣ್ಮಣ ತಣಿಸಿ ಸಾಹಿತ್ಯ ಲೋಕವನ್ನು ಜಗದಗಲ ಪಸರಿಸುವ ಭವ್ಯ ಭವಿಷ್ಯದ ಭವನ ಹಾಗೂ ಅದರ ಮಹಾ ಸಾರಥಿ ಅಶ್ವತ್ ಎಸ್.ಎಲ್ ಸರ್. ಅಂತೆಯೇ ವ್ಯಕ್ತಿ ಜೀವನದ ಮಧ್ಯೆ ಸಾಹಿತ್ಯಾಸಕ್ತಿ ಜೀವಂತವಾಗಿ ಉಳಿಯಲು, ನನ್ನ ಪ್ರತಿ ಏಳು ಬೀಳುಗಳಲ್ಲಿ ಬೆನ್ನು ತಟ್ಟಿ ಸಹೋದರನಂತೆ, ಮಾರ್ಗದರ್ಶಕರಂತೆ, ಪ್ರೋತ್ಸಾಹಿಸಿ ಇಲ್ಲಿಯವರೆಗು ಕರೆದುಕೊಂಡು ಬಂದಿರುವ ಹಾಸನ ಶಾಖೆಯ ಮುಖ್ಯಸ್ಥರಾಗಿರುವ ವಿಮಲ್ ರಾಜ್ ಜಿ. ಸರ್. ಇವರೆಲ್ಲರ ಹಾರೈಕೆಯ "ನಿರ್ವಾಣ".
ನನಗೆ ನನ್ನ ತಮ್ಮ, ತಂಗಿ ಹಾಗೂ ತಾಯಿಯೆ ನನ್ನ ಬರವಣಿಗ ಮೊದಲ ವಿಮರ್ಶಕರು. ಹಾಗೊಂದು ಹೀಗೊಂದು ಬರೆದ ಸಾಲುಗಳು ಇದ ನಿಮ್ಮ ಮುಂದೆ ಕನಸಿನ ಹೊತ್ತಗೆಯಾಗಿದೆ. ಅನೇಕ ದ್ವಂದ್ವಗಳಿದ್ದರು ಕ್ಷಮಿಸಿ ಹರಸಿ ಮತ್ತು ಬೆಳೆಸಿ.
- ಲಕ್ಷ್ಮಣ್ ಬಜಿಲ
"ಬರಹಗಾರ ತಾನು ಎದ್ದು ಕಾಣೋದಕ್ಕಿಂತ ಹಿಂದಿನವರು ಸೃಷ್ಟಿಸಿದ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಬರೆಯುವುದೇ ಮುಖ...
ಬೆಂಗಳೂರು: ಕನ್ನಡ ಸಂಘರ್ಷ ಸಮಿತಿ ನೀಡುವ 2024ನೇ ಸಾಲಿನ ವಿವಿಧ ಪ್ರಶಸ್ತಿಗಳ ಪಟ್ಟಿ ಪ್ರಕಟವಾಗಿದೆ. 'ಕುವೆಂಪು ...
"ಈ ಕಾದಂಬರಿಯ ಪ್ರತಿ ಪಾತ್ರಗಳು ನನ್ನೊಳಗಿನ ಮನುಷ್ಯಳನ್ನು ಹೆಚ್ಚು ಹೆಚ್ಚು ತಿದ್ದಿದೆ, ತೀಡಿದೆ, ಪ್ರಶ್ನೆ ಮಾಡುವಂ...
©2025 Book Brahma Private Limited.