"ನಾನೂರು ವರ್ಷಗಳಷ್ಟು ಹಳೆಯ ಥಿಯೇಟರಲ್ಲಿ ನಾಟಕ ನೋಡಿದಾಗ ನೀನಾಸಂ ನೆನಪು, ವಿಸೀಯವರ ಇಂಗ್ಲೆಂಡ್ ಪಯಣ, ವರ್ಡ್ಸ್ ವರ್ತ್, ಶೇಕ್ಸ್ಪಿಯರ್, ಕಾನನ್ ಡಾಯಲ್, ಲಾರೆನ್ಸ್ ಮನೆ, ನ್ಯೂಟನನ ಮನೆಯ ಅದೇ ಸೇಬಿನ ಮರ ಇಲ್ಲೆಲ್ಲಾ ಹೋದದ್ದು....ಪ್ರಾಯದ ಪ್ರಯಾಣಿಕರ ಬವಣೆ, ಕೆಲಸ ಮಾಡುತ್ತಿರುವ ಯುವತಿಯ ಬಾಲ್ಯದ ಕಹಿ ನೆನಪು..," ಎನ್ನುತ್ತಾರೆ ಮರಕಿನಿ ನಾರಾಯಣ ಮೂರ್ತಿ. ಅವರು ಜಯಶ್ರೀ ಕಾಸರವಳ್ಳಿ ಅವರ ‘ಹೀಗೊಂದು ಏರೋಸ್ಪೇಸ್ ಪುರಾಣ’ ಕೃತಿ ಕುರಿತು ಬರೆದ ಅನಿಸಿಕೆ.
ಹೀಗೊಂದು ಪ್ರವಾ(ಯಾ)ಸ ಕಥನ.
ಇರಾನ್ ಇಸ್ರೇಲ್ ಮೇಲೆ ಧಾಳಿ ನಡೆಸಿದ ಕಾರಣ ವಿಮಾನದಲ್ಲಿ ತ್ರಿಶಂಕು ಸ್ಥಿತಿಯಲ್ಲಿರದೆ ನಿಲ್ದಾಣಗಳಲ್ಲಿದ್ದಾಗ ಅನುಭವಿಸಿದ ತಲ್ಲಣ, ಹಿತಾನುಭವ, ಖುಷಿಗಳನ್ನು ಎಲ್ಲಿಯೂ ನೀರಸವಾದ ವರದಿಯಂತಾಗದೆ ಬರೆದದ್ದು ಈ ಪುರಾಣ.
ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದಾಗ ಬದುಕಿನಲ್ಲಿ ಕಾಯುವಿಕೆಯ ನಿರರ್ಥಕತೆಯನ್ನು ಸಾರಿದ ಬೆಕೆಟ್ನ ವೈಟಿಂಗ್ ಫಾರ್ ಗಾಡೋ ವನ್ನು ದಿವಾಕರ್ ಓದುತ್ತಿದ್ದದ್ದು.. ದಿವಾಕರ್ ಅವರಿಗೆ ಎಂಭತ್ತು ಎಂದಾಗ, ಕೆಲಸ ಬೇಗ ಆಗ್ಬೇಕು ಅಂತ ಸುಳ್ಳು ಹೇಳ್ಬೇಡಿ ಎಂದ ಬ್ಯಾಂಕಿನ ಹುಡುಗಿ.. ಉಪ್ಪಿಟ್ಟು ಪ್ರಕರಣ.. ಹೀಗೇ ದಿವಾಕರರನ್ನು ಕಿಚಾಯಿಸಿದ್ದನ್ನು ಎಷ್ಟು ಸೊಗಸಾಗಿ ಬರೆದಿದ್ದಾರೆ. ನಾನೂರು ವರ್ಷಗಳಷ್ಟು ಹಳೆಯ ಥಿಯೇಟರಲ್ಲಿ ನಾಟಕ ನೋಡಿದಾಗ ನೀನಾಸಂ ನೆನಪು, ವಿಸೀಯವರ ಇಂಗ್ಲೆಂಡ್ ಪಯಣ, ವರ್ಡ್ಸ್ ವರ್ತ್, ಶೇಕ್ಸ್ಪಿಯರ್, ಕಾನನ್ ಡಾಯಲ್, ಲಾರೆನ್ಸ್ ಮನೆ, ನ್ಯೂಟನನ ಮನೆಯ ಅದೇ ಸೇಬಿನ ಮರ ಇಲ್ಲೆಲ್ಲಾ ಹೋದದ್ದು....ಪ್ರಾಯದ ಪ್ರಯಾಣಿಕರ ಬವಣೆ, ಕೆಲಸ ಮಾಡುತ್ತಿರುವ ಯುವತಿಯ ಬಾಲ್ಯದ ಕಹಿ ನೆನಪು...
ವೈದೇಹಿ, ಮಾರ್ಕೆಸ್, ಕರ್ಕಿ ಕೃಷ್ಣಮೂರ್ತಿಯವರ ಕತೆಗಳನ್ನು, ಹನುಮಂತನ ಸಂಜೀವಿನಿ... ಫಿಲಿಫೈನ್ಸ್ ದಂಪತಿಗಳೊಂದಿಗೆ ಒಬ್ಬರು ಹೇಳುವುದು ಮತ್ತೊಬ್ಬರಿಗೆ ಅರ್ಥವಾಗದಿದ್ದರೂ ಸುಮಾರು ಹದಿನೈದು ನಿಮಿಷಗಳು ನಾವು ಏನೆಲ್ಲಾ ಸಾಧ್ಯವೋ ಅವೆಲ್ಲವನ್ನೂ ಮಾತನಾಡಿದೆವು ಎನ್ನುವ ಪ್ರಸಂಗ.. Poet poetry for sale ..
ಹೀಗೇ ಪುಸ್ತಕದುದ್ದಕ್ಕೂ ಮೊಗೆದಷ್ಟೂ ... ಪ್ರವಾಸ ಕಥನವನ್ನು ಹೀಗೂ ಬರೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ.
“ 'ನಾಗಾ' ಸಮುದಾಯದ ವಾಸಸ್ಥಾನವಾಗಿದ್ದ, ಮೊದಲು ಅಸ್ಸಾಂನ ಭಾಗವಾಗಿದ್ದ ಆ ಪ್ರದೇಶ ಈಗ 'ನಾಗಾಲ್ಯಾಂಡ...
"ಈ ಕಥಾಸಂಕಲನದಲ್ಲಿ ಬರೀ ನೇರಳೆ ಬಣ್ಣ ಮಾತ್ರವಲ್ಲದೇ ಅವರೊಳಗೆ ಕಾಡಿದ ಬದುಕಿನ ಎಲ್ಲಾ ಬಣ್ಣಗಳೂ ಇವೆ.. ಮುಖ್ಯವಾಗಿ ...
"'ದೊರೆ' ಕಥೆಯಲ್ಲಿ ಒಬ್ಬ ಚಿಕ್ಕ ಹುಡುಗನ ತುಂಟಾಟಗಳನ್ನು ಕೇಂದ್ರವಾಗಿಟ್ಟುಕೊಂಡು ಲಾಕ್ಡೌನ್ ವೇಳೆಯಲ್ಲಿ ...
©2025 Book Brahma Private Limited.