ಪ್ರತಿ ನಾಗರಿಕತೆಗೆ ಹುಟ್ಟೋದು ನದಿಯ ದಡದಲ್ಲಿಯೇ


“ಬದುಕ ಬೇಕು ಮುಂದೆ ಸಾಗಬೇಕು. ಬದುಕಿನ ಪ್ರೀತಿಯನ್ನು ಬೆಳೆಸಿಕೊಂಡು ಬದುಕಬೇಕು ಎಂಬುದನ್ನು ಲೇಖಕರು ಅತ್ಯಂತ ಸುಂದರವಾಗಿ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ,” ಎನ್ನುತ್ತಾರೆ ಸೋಮನಾಥ್‌ ಗುರಪ್ಪನವರ. ಅವರು ಬಾಳಾಸಾಹೇಬ ಲೋಕಾಪುರ ಅವರ “ಕೃಷ್ಣೆ ಹರಿದಳು” ಕೃತಿ ಕುರಿತು ಬರೆದ ವಿಮರ್ಶೆ.

ಪ್ರತಿ ನಾಗರಿಕತೆಗೆ ಹುಟ್ಟೋದು ನದಿಯ ದಡದಲ್ಲಿಯೇ ಎಂದು ನಮಗೆ ತಿಳಿದಿದೆ. ನಾಗರಿಕತೆಯ ಹುಟ್ಟಿ ಜನಸಮುದಾಯ ಬೆಳೆಯುವುದು. ಹಾಗೆಯೇ ಕೃಷ್ಣೆ ನದಿಯ ದಡದಲ್ಲಿ ಇರುವ ಶಿರಹಾಡಿಯ ಊರಿನ ಕಥೆಯೇ ಕೃಷ್ಣೆ ಹರಿದಳು.

ಇದೊಂದು ಪಕ್ಕಾ ದೇಸಿ ಹಳ್ಳಿಯ ಕಾದಂಬರಿ. ಶಿರಹಡಿಯ ಎಂಬ ಊರಿನಲ್ಲಿ ನಡೆಯುವ ವಿದ್ಯುನ್ಮಾನಗಳು ಮತ್ತು ಅಲ್ಲಿ ಇರುವ ಜನಗಳ ಕಥೆ ಮತ್ತು ವ್ಯಥೆ. ಇಲ್ಲಿ ನಾವು ಹಳ್ಳಿಯಲ್ಲಿ ಇರುವ ರಾಜಕೀಯ ಅದರ ವಿಸ್ತಾರ ಜನರ ಸಂಕಟ,ನೋವು, ನಲಿವು ,ಬದುಕು ಅವರ ಮನಸ್ಥಿತಿಗಳು,ವಾತಾವರಣ, ಪರಸ್ಪರ ಬೆಸೆಯುವಿಕೆ, ದೇವರು, ಧರ್ಮ, ಜಾತಿ, ಮತ, ಕುರಿತು ನಂಬಿಕೆ ,ಹೆಂಗಸರ ಕಟ್ಟೆ ಪುರಾಣಗಳು, ಬದುಕು ,ಹಳ್ಳಿಗಳಲ್ಲಿ ಅವರ ಭಾಗವಹಿಸುವಿಕೆ, ಒಳ್ಳೆಯವರು, ಕೆಟ್ಟವರು ,ಅಲ್ಲಿಯ ಚಹಾ ಅಂಗಡಿಗಳು ,ಅಲ್ಲಿಯ ಮಾತುಕತೆಗಳು ,ಕೊಲೆ ,ಸುಲಿಗೆ, ಕಳ್ಳತನ ,ಎಲ್ಲವನ್ನು ಸಹ ಕಾಣಬಹುದಾಗಿದೆ. ಅಷ್ಟೇ ಅಲ್ಲದೆ ಪಟ್ಟಣದ ಬದುಕಿನ ಬಗ್ಗೆ ಅಲ್ಲಿಯ ವೈರುಧ್ಯಗಳ ಬಗ್ಗೆ ಅನಿವಾರ್ಯವಾಗಿ ಮನೆ ತೊರೆದು ಹೆಂಗಸರು ಕಾಮಾಟಿಪುರದಂತಹ ಸೂಳೆಕೇರಿಗೆ ಸೇರುವುದು ಅಲ್ಲಿ ಅವರ ಬದುಕು, ಅವರ ಮನಸ್ಥಿತಿ.ಊರು ತೆರೆದು ಪಟ್ಟಣ ಸೇರುವ ಯುವಕರ ಕಷ್ಟ ನಷ್ಟಗಳ, ಬಗ್ಗೆ ಹೀಗೆ ಹಲವಾರು ವಿಚಾರಗಳು ಕಥೆಯಾಗಿ ಮೂಡಿಬಂದಿವೆ. ಕಾದಂಬರಿಯಲ್ಲಿ ಸ್ತ್ರೀ ಸಂವೇದನೆ ಅತ್ಯಂತ ಪರಿಣಾಮಕಾರಿಯಾಗಿ ಮೂಡಿದೆ. ಸ್ತ್ರೀಯರ ಮೇಲಿನ ಆಘಾತಗಳು ಅವುಗಳನ್ನು ಎದುರಿಸುವ ಹೆಂಗಸರು ಅವರ ಮನಸ್ಥಿತಿ ಎಲ್ಲವನ್ನೂ ಇಲ್ಲಿ ಕಟ್ಟಿಕೊಡಲಾಗಿದೆ. ಸ್ತ್ರೀಯರ ಶಕ್ತಿಯನ್ನು ಇಲ್ಲಿ ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಆಧುನಿಕತೆಗೆ ಸಿಲುಕಿದ ಹಳ್ಳಿಗಳು ಯಾವ ಕಡೆಗೆ ಹೊರಟಿವೆ ಯಾವ ಬದಲಾವಣೆಗಳನ್ನು ಒಳಗೊಂಡಿವೆ ಹೇಗೆ ರೂಪಾಂತರಗೊಂಡಿದೆ ಎಂಬುದನ್ನು ಅತ್ಯಂತ ಪರಿಣಾಮವಾಗಿ ತೋರಿಸಿದ್ದಾರೆ. ಕೊನೆಗೆ ಪಟ್ಟಣ ತೊರೆದು ಹಳ್ಳಿ ಕಡೆಗೆ ಮುಖ ಮಾಡುವ ಯುವಕರು ಹಳ್ಳಿಯಲ್ಲಿ ಬದುಕನ್ನು ಕಟ್ಟಿಕೊಂಡು ಆನಂದಮಯ ಬದುಕನ್ನು ಸಾಗಿಸುತ್ತಾರೆ. ಎಂಬುದು ಮರಳಿ ಮಣ್ಣಿಗೆ ಕಾದಂಬರಿ ನೆನಪಿಗೆ ತಂದಿತು. ಉದ್ದಕ್ಕೂ ಬಸವಣ್ಣ, ಹಾಗೂ ಗಾಂಧಿ ತತ್ವಗಳನ್ನು ಒಳಗೊಂಡಿದ್ದು ಕಾದಂಬರಿಗೆ ಒಂದು ಮೆರಗನ್ನು ನೀಡಿದೆ.

ಕಾದಂಬರಿಯಲ್ಲಿ ಬರುವ ಗೌಡ ಗುರುಪಾದಪ್ಪ ,ಅಪ್ಪಣ್ಣ ರುದ್ರಾಯಣಿ ,ಗಿರೆವ್ವ, ಸುಂದ್ರ, ಪೋಸ್ಟ್ ಮ್ಯಾನ್ ಸಿದ್ರಾಮಪ್ಪ, ತುಂಬಾ ಕಾಡಿದ ಪಾತ್ರಗಳು. ಎಲ್ಲಾ ಘಟನೆಗಳಿಗೆ ಸಾಕ್ಷಿಯಾದ ಹಿರಿಹೊಳೆ ಕೃಷ್ಣೆ ಯಾವುದನ್ನು ಲೆಕ್ಕಿಸದೆ ನಿಲಿಪ್ತಳಾಗಿ ಹರಿಯುತ್ತಾಳೆ. "ಬದುಕು ಅಷ್ಟೇ ನಿಲ್ಲದೆ ಹರಿಯಬೇಕು ಏನೇ ಬಂದರೂ, ಈಜಿಸಿ ಬದುಕಬೇಕು ಮುಂದೆ ಸಾಗಬೇಕು. ಬದುಕಿನ ಪ್ರೀತಿಯನ್ನು ಬೆಳೆಸಿಕೊಂಡು ಬದುಕಬೇಕು" ಎಂಬುದನ್ನು ಲೇಖಕರು ಅತ್ಯಂತ ಸುಂದರವಾಗಿ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ.

MORE FEATURES

ವಿಜ್ಞಾನ ತಂತ್ರಜ್ಞಾನಗಳು ಹಿರಿಯರ ಜೀವನ ಶೈಲಿಯಲ್ಲಿ ಹಾಸುಹೊಕ್ಕಾಗಿವೆ

04-04-2025 ಬೆಂಗಳೂರು

“ಮತ್ತೆ ಕಾದಂಬರಿ ಬರೆಯಬೇಕು ಎಂದುಕೊಂಡ ತಕ್ಷಣವೇ ಗೌರಮ್ಮಳ ಬದುಕನ್ನು ಒಳಗೊಂಡಂತೆ ನನ್ನ ಹಳ್ಳಿಯ ಬದುಕಿನ ಸುಂದರ ಘ...

ವೇಶ್ಯೆ ಕೆಟ್ಟವಳಲ್ಲ ವೇಶ್ಯೆ ವೃತ್ತಿಯೂ ಕೆಟ್ಟದ್ದಲ್ಲ 

04-04-2025 ಬೆಂಗಳೂರು

“ವಿನಾಯಕರ ಈ ಬರೆಹ ವೇಶೈಯೊಬ್ಬಳ ಜೀವನದಲ್ಲಿ ಪುಸ್ತಕಗಳು ನಿರ್ವಹಿಸಿರುವ ಬಹಳಾ ದೊಡ್ಡ ಜವಾಬ್ದಾರಿಯ ಕುರಿತು ಮಾತನಾ...

ತಾಯಿ ಮಗುವಿನೊಂದಿಗೆ ಮಾತನಾಡುತ್ತಿರುವ ರೀತಿಯಲ್ಲಿ ನಿರೂಪಿಸಲ್ಪಟ್ಟಿರುವ ಕೃತಿ

04-04-2025 ಬೆಂಗಳೂರು

"ಎಂದೂ ಹುಟ್ಟದ ಮಗುವಿಗೆ ಬರೆದ ಪತ್ರ ಇದು ಅವಿವಾಹಿತ ಯುವತಿಯೊಬ್ಬಳು ಅನಿರೀಕ್ಷಿತವಾಗಿ ತಾಯಾಗುವ ಸಂದರ್ಭ ಬಂದಾಗ ಅವ...