ತಾಯಿ ಮಗುವಿನೊಂದಿಗೆ ಮಾತನಾಡುತ್ತಿರುವ ರೀತಿಯಲ್ಲಿ ನಿರೂಪಿಸಲ್ಪಟ್ಟಿರುವ ಕೃತಿ


"ಎಂದೂ ಹುಟ್ಟದ ಮಗುವಿಗೆ ಬರೆದ ಪತ್ರ ಇದು ಅವಿವಾಹಿತ ಯುವತಿಯೊಬ್ಬಳು ಅನಿರೀಕ್ಷಿತವಾಗಿ ತಾಯಾಗುವ ಸಂದರ್ಭ ಬಂದಾಗ ಅವಳ ಮನೋಲೋಕದಲ್ಲಿ ಉಂಟಾದ ಭಾವುಕತೆ, ಸಂದಿಗ್ಧತೆ ಇದರಿಂದ ಅವಳ ದೇಹಸ್ಥಿತಿಯಲ್ಲಾಗುವ ಏರುಪೇರುಗಳು ತಾಯಿ ಮಗುವಿನೊಂದಿಗೆ ಮಾತನಾಡುತ್ತಿರುವ ರೀತಿಯಲ್ಲಿ ನಿರೂಪಿಸಲ್ಪಟ್ಟಿರುವ ಕೃತಿಯಾಗಿದೆ. ಪ್ರತಿ ತಾಯಿಯೂ ಈ ಕೃತಿ ಓದುವಾಗ ಮತ್ತೊಮ್ಮೆ ತನ್ನ ಗರ್ಭಧಾರಣೆಯ ಮೊದಲ ದಿನಗಳಿಗೆ ಮರಳಿ ತನ್ನೆಲ್ಲಾ ನೆನಪುಗಳನ್ನು ಸವಿಯುತ್ತಾಳೆ," ಎನ್ನುತ್ತಾರೆ ಭವ್ಯ ಟಿ.ಎಸ್. ಅವರು ಸುಧಾ ಆಡುಕಳ ಅವರ ‘ಎಂದೂ ಹುಟ್ಟದ ಮಗುವಿಗೆ ಪತ್ರ’ ಕೃತಿ ಕುರಿತು ಬರೆದ ವಿಮರ್ಶೆ.

ಮೂಲ ಲೇಖಕರು‌ : ಒರಿಯಾನ ಫಲಾಚಿ
ಕನ್ನಡ ಅನುವಾದ : ಸುಧಾ ಆಡುಕಳ

ಪ್ರತಿಯೊಬ್ಬ ಹೆಣ್ಣಿನ ಜೀವನದಲ್ಲಿ ತಾಯ್ತನ ಒಂದು ಸುಂದರ ಅಧ್ಯಾಯ. ಮಗುವೊಂದು ತನ್ನ ಗರ್ಭದಲ್ಲಿ ಅಂಕುರಿಸಿದೆ ಎಂದು ತಿಳಿದ ಕ್ಷಣ ಒಂಬತ್ತು ತಿಂಗಳ ಅಪೂರ್ವ ಪಯಣಕ್ಕೆ ಅವಳ ದೇಹ ಮತ್ತು ಮನಸ್ಸು ಸಿದ್ಧಗೊಳ್ಳಬೇಕಾಗುತ್ತದೆ. ಪ್ರತಿಹಂತದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲೇಬೇಕಾಗುತ್ತದೆ.

ಎಂದೂ ಹುಟ್ಟದ ಮಗುವಿಗೆ ಬರೆದ ಪತ್ರ ಇದು ಅವಿವಾಹಿತ ಯುವತಿಯೊಬ್ಬಳು ಅನಿರೀಕ್ಷಿತವಾಗಿ ತಾಯಾಗುವ ಸಂದರ್ಭ ಬಂದಾಗ ಅವಳ ಮನೋಲೋಕದಲ್ಲಿ ಉಂಟಾದ ಭಾವುಕತೆ, ಸಂದಿಗ್ಧತೆ ಇದರಿಂದ ಅವಳ ದೇಹಸ್ಥಿತಿಯಲ್ಲಾಗುವ ಏರುಪೇರುಗಳು ತಾಯಿ ಮಗುವಿನೊಂದಿಗೆ ಮಾತನಾಡುತ್ತಿರುವ ರೀತಿಯಲ್ಲಿ ನಿರೂಪಿಸಲ್ಪಟ್ಟಿರುವ ಕೃತಿಯಾಗಿದೆ. ಪ್ರತಿ ತಾಯಿಯೂ ಈ ಕೃತಿ ಓದುವಾಗ ಮತ್ತೊಮ್ಮೆ ತನ್ನ ಗರ್ಭಧಾರಣೆಯ ಮೊದಲ ದಿನಗಳಿಗೆ ಮರಳಿ ತನ್ನೆಲ್ಲಾ ನೆನಪುಗಳನ್ನು ಸವಿಯುತ್ತಾಳೆ.

ಆರಂಭದಲ್ಲಿ ಸಮಾಜದ ವ್ಯಂಗ್ಯ, ತನ್ನ ವೈಯಕ್ತಿಕ ವೃತ್ತ, ಸುಖ ಎಲ್ಲವನ್ನೂ ಕಡೆಗಣಿಸಿ ಮಗುವಿಗೆಜನ್ಮ ನೀಡಲೇಬೇಕೆಂದು ನಿರ್ಧರಿಸುತ್ತಾಳೆ. ಆದರೆ‌ ಆ ನಿರ್ಧಾರವನ್ನು ಅವಳ ಭವಿಷ್ಯದ ಕನಸುಗಳು ಮನ್ನಿಸುವುದಿಲ್ಲ. ಅವಳ ಸಂಗಾತಿ ಅಂದರೆ ಮಗುವಿನ ತಂದೆ ಕೂಡ ಆ ಮಗು ಭೂಮಿಗೆ ಬರುವುದರ ಬಗ್ಗೆ ಮೊದಲು ಅಸಮಾಧಾನ ವ್ಯಕ್ತಪಡಿಸಿದ್ದು ಅವಳೊಳಗೆ ಅನೇಕ ತುಮಲಗಳನ್ನು ಹುಟ್ಟುಹಾಕುತ್ತದೆ. ಅವಳು ತನ್ನ ವೃತ್ತಿ ಬದುಕಿನಿಂದ ವಿಮುಖಳಾಗಬೇಕಾಗುತ್ತದೆ ಎಂಬುದನ್ನು ಒಪ್ಪಿಕೊಳ್ಳಲು ಅವಳಿಗೆ ಸಾಧ್ಯವಾಗುವುದಿಲ್ಲ. ವೈದ್ಯರು ಮಗುವಿನ ಉಳಿವಿಗಾಗಿ ಅವಳು ಹಾಸಿಗೆಯಲ್ಲಿಯೇ ಇರಬೇಕೆಂದು ಸಲಹೆ ನೀಡಿದಾಗ ಅವಳು‌ ಇನ್ನೂ ಮನುಷ್ಯ ರೂಪ ಪಡೆಯದ ಆ ಭ್ರೂಣಕ್ಕಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಬದುಕಬೇಕ ಎಂಬ ಪ್ರಶ್ನೆ ಆಗಾಗ ಅವಳನ್ನು ಕಾಡಲಾರಂಭಿಸುತ್ತದೆ. ಆ ಮಗು ಜನಿಸಲು ಸಾಧ್ಯವಿಲ್ಲ ಅಂದುಕೊಳ್ಳುತ್ತಿರುವಾಗಲೇ‌ ಗರ್ಭದಲ್ಲಿ ಅದರ‌ ಚಲನೆ ನೀಡುವ ಮಧುರ ಅನುಭೂತಿಯನ್ನು ಅನುಭವಿಸಿ, ಮಗುವಿನ ಮೋಹಕ್ಕೆ‌ ಒಳಗಾಗುತ್ತಾಳೆ.

ಮಗು‌ ಭೂಮಿಗೆ ಬಂದ ಮೇಲೆ ಇಲ್ಲಿನ ಅಸಮಾನತೆ, ಬಡತನದ ಬೇಗೆ, ಹಸಿವು, ಯುದ್ಧ ಇಂತಹ ನಾನಾ ಸಮಸ್ಯೆಗಳನ್ನು ಎದುರಿಸುವ ಕುರಿತು ಮಗುವಿನೊಂದಿಗೆ ಸಂವಾದಿಸುತ್ತಾಳೆ. ಮಗುವಿಗಿಂತ ತನ್ನ ಸ್ವಾತಂತ್ರ್ಯ ಮತ್ತು ಭವಿಷ್ಯವೇ ಮುಖ್ಯವೆಂದು ಹಾಸಿಗೆಯಿಂದ ಎದ್ದು ವೈದ್ಯರ‌‌ ಸಲಹೆ ಮೀರಿ ಓಡಾಡಲು ಪ್ರಾರಂಭಿಸುತ್ತಾಳೆ. ಈ ಕೃತಿಯಲ್ಲಿ ನನಗೆ ತುಂಬಾ ಇಷ್ಟವಾದುದು ಲೇಖಕಿ ಅಂದರೆ ಇಲ್ಲಿ ತಾಯಿ ತನ್ನ ಮಗುವಿಗೆ ಹೇಳುವ ಕತೆಗಳು.ಜಗತ್ತು ಹೇಗಿದೆ ಎಂಬುದನ್ನು ಹಲವು ಪಾತ್ರ ಸನ್ನಿವೇಶಗಳ ನಿದರ್ಶನಗಳ ಮೂಲಕ ಮಗುವಿನ ಮನಸ್ಸಿಗೆ ಮನವರಿಕೆ ಮಾಡುತ್ತ ಹೋಗುತ್ತಾಳೆ.ಹಾಗೆ ಇಲ್ಲಿ ಬರುವ ಕಾಲ್ಪನಿಕ ನ್ಯಾಯಲಯ.ಅಲ್ಲಿ ಮಗು ಭೂಮಿಗೆ ಬರಬೇಕೇ ಬೇಡವೇ ಎಂಬ ಬಗ್ಗೆ ಚರ್ಚೆ ನಡೆಯುತ್ತದೆ.

ತಾಯಿ, ಅವಳ ಸಂಗಾತಿ, ಪೋಷಕರು, ಪರೀಕ್ಷಿಸಿದ ವೈದ್ಯರು, ಗೆಳತಿ ‌ಹೀಗೆ ಹಲವು ಪಾತ್ರಗಳ ನೈಜಮುಖ ಇಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತದೆ. ಹಾಗಾದರೆ ಆಕೆಯ ದೇಹ ಮಗುವಿಗೆ ಸ್ಪಂದಿಸಿತೇ? ಅವಳು ಮಗುವಿಗೆ ಜನ್ಮ ನೀಡಲು ನಿರ್ಧಾರ ಮಾಡಿದ್ದು ಅವಳ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಿತು, ಅವಳ ಸಂಗಾತಿ, ಸಮಾಜದ ಪ್ರತಿಕ್ರಿಯೆ ಹೇಗಿತ್ತು ಇವೆಲ್ಲವನ್ನೂ ತಿಳಿಯಲು ಈ ಕೃತಿಯನ್ನು ಓದಲೇಬೇಕು.

 

 

MORE FEATURES

'ಬೆಳಕಿಗೆ ಹರಿಯುವ ಶಕ್ತಿ ಇದೆ ಎಂದು ಹೇಳಿದ ತತ್ವಜ್ಞಾನಿ ಬೇಂದ್ರೆ'

08-04-2025 ಬೆಂಗಳೂರು

"ಮಾನವನಿಂದ ತಿಳಿಯಬಲ್ಲ ವಿಶ್ವದ ಬಗೆಗಿನ ಜ್ಞಾನದ ಸಮೂಹವೆ ವಿಜ್ಞಾನ. ವಿಜ್ಞಾನವು ತಾರ್ಕಿಕವಾಗಿ ವಿಶ್ವಾಸಾರ್ಹವಾಗಿ...

ದೇಸೀ ವಸ್ತು, ದೇಸೀ ಭಾಷೆ ಈ ಕಾದಂಬರಿಯ ವೈಶಿಷ್ಟ್ಯಗಳು

08-04-2025 ಬೆಂಗಳೂರು

“ಕಾದಂಬರಿಯ ಈ ಶೀರ್ಷಿಕೆಯೇ ವಿಶಿಷ್ಟವಾಗಿದೆ. ಮಹತ್ವದ ಸುದ್ದಿ, ಪ್ರಭಾವ ವಲಯ-ಎಂಬುದು ಇದರ ಅರ್ಥವೆಂಬುದು ಕಾದಂಬರಿ...

ಶಿಷ್ಯನಾದವನು ಗುರುಗಳ ಮುಂದೆ ಎಂದಿಗೂ ಕಿರಿಯವನೆ

08-04-2025 ಬೆಂಗಳೂರು

“ನಾನು ಪದವಿ ವ್ಯಾಸಾಂಗದ ಅಂತಿಮ ವರ್ಷದ. ಕೊನೆಯ ಸೆಮ್ ನಲ್ಲಿ ಅಧ್ಯಯನ ಮಾಡುತ್ತಿದ್ದಾಗ, ವಿದ್ಯಾರ್ಥಿನಿಯರ ಪ್ರತಿನ...