Date: 28-09-2021
Location: ಬೆಂಗಳೂರು
ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಜಪಾನ್ ಮೂಲದ ಮೊನೊ-ಹಾ ಮಿನಿಮಲಿಸ್ಟ್ ಆರ್ಟ್ ಮತ್ತು ಮೊನೊಟೋನ್ ಪೇಂಟಿಂಗ್ ಕಲಾವಿದ ಲೀ ಉಹ್ವಾನ್ ಕಲಾಬದುಕಿನ ಕುರಿತು ಬರೆದಿದ್ದಾರೆ.
ಕಲಾವಿದ: ಲೀ ಉಹ್ವಾನ್ (Lee Ufan)
ಜನನ: 24 ಜೂನ್, 1936
ಶಿಕ್ಷಣ: ಜಪಾನ್ ವಿವಿ
ವಾಸ: ಜಪಾನ್, ಪ್ಯಾರಿಸ್
ಕವಲು: ಮೊನೊ-ಹಾ ಮಿನಿಮಲಿಸ್ಟ್ ಆರ್ಟ್, ಮೊನೊಟೋನ್ ಪೇಂಟಿಂಗ್‌ಗಳು
ವ್ಯವಸಾಯ: ಪೇಂಟಿಂಗ್‌ಗಳು, ಸ್ಕಲ್ಪ್ಚರ್‌ಗಳು
ಲೀ ಉಹ್ವಾನ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:
ಲೀ ಉಹ್ವಾನ್ ಅವರ ವೆಬ್‌ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:
ಆಧುನಿಕ ಮನುಷ್ಯ ಖಾಲಿತನಕ್ಕೆ ಭಯಪಡುತ್ತಾನೆ, ಅದು ಇದೆಯೆಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಯಾಕೆಂದರೆ ಅದು ಮನುಷ್ಯ ಮಾಡದೇ ಉಳಿದದ್ದು. ಸಾಮಾನ್ಯವಾಗಿ ನಾವು ಮೌಲ್ಯ ಒದಗಿಸುವುದು ಮಾಡುವುದು ಏನು ಮಾಡಲಾಗಿದೆಯೋ ಅದಕ್ಕೆ ನನಗೆ, ಪೂರ್ಣತೆಗೆ ಎದುರಾಗುವ ಖಾಲಿತನದ ಬಗ್ಗೆ ಆಸಕ್ತಿ. ಅದು ಏನನ್ನು ಮಾಡಲಾಗಿದೆ ಮತ್ತು ಏನನ್ನು ಮಾಡದೇ ಉಳಿಸಲಾಗಿದೆ - ಅವುಗಳ ನಡುವಿನ ಖಾಲಿತನ. ಈ ಖಾಲಿತನ ಅತ್ತ ಸಂಪೂರ್ಣವಾಗಿ ನನ್ನ ಉತ್ಪಾದನೆಯೂ ಅಲ್ಲ, ಇತ್ತ ವಾಸ್ತವಿಕ ಖಾಲಿತನವೂ ಅಲ್ಲ ಎಂದು ವಿವರಿಸುವ ಲೀ ಉಹ್ವಾನ್, ಕೊರಿಯನ್ ಮೂಲದ, ಜಪಾನಿನಲ್ಲಿ ನೆಲೆಸಿರುವ ಮಿನಿಮಲಿಸ್ಟ್ ಕಲಾವಿದ.
ಒಂದು ಪೇಂಟಿಂಗನ್ನು ಅದು ಒಂದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ ಎಂದು ವ್ಯಾಖ್ಯಾನಿಸುವ ಲೀ ಉಹ್ವಾನ್, ಒಂದು ಅಭಿವ್ಯಕ್ತಿ ಅಥವಾ ಹಸ್ತಕ್ಷೇಪದ ಬದಲು, ವಸ್ತುಗಳು ಮತ್ತು ದೃಷ್ಟಿಕೋನಗಳತ್ತ ತಾನು ಗಮನ ಹರಿಸುತ್ತೇನೆ. ನೋಡುಗ-ಕಲೆಗಳ ಜೊತೆ ಅವೆರಡೂ ಇರುವ ಒಟ್ಟು ಒಟ್ಟು ಸನ್ನಿವೇಶ ತನಗೆ ಮುಖ್ಯ ಎಂದು ವಿವರಿಸುತ್ತಾರೆ.
ಗ್ಯೋಂಗ್‌ಸಾಂಗ್ ಪ್ರಾಂತ್ಯದಲ್ಲಿ ಜನಿಸಿದ ಲೀ ಉಹ್ವಾನ್ ಆರಂಭದಲ್ಲಿ ಸೋಲ್ ವಿವಿಯಲ್ಲಿ ಕ್ಯಾಲಿಗ್ರಾಫಿ, ಕಾವ್ಯ ಮತ್ತು ಪೇಟಿಂಗ್ ಕಲಿಕೆ ಆರಂಭಿಸಿದರೂ ಅರ್ಧದಲ್ಲೇ ಅದನ್ನು ಬಿಟ್ಟು ಜಪಾನಿಗೆ ತೆರಳಿ ಅಲ್ಲಿ ಫಿಲಾಸಫಿ ಕಲಿಯಲಾರಂಭಿಸುತ್ತಾರೆ. ಜೊತೆಗೇ ಪೇಂಟಿಂಗ್ ಕೂಡ ಆರಂಭಿಸುತ್ತಾರೆ. ಯುದ್ಧೋತ್ತರ ಜಪಾನಿನ ಯುರೋಪ್ ಕೇಂದ್ರಿತ ಚಿಂತನೆಗಳಿಗೆ ಪ್ರತಿಯಾಗಿ ಪಾಶ್ಚಾತ್ಯೀಕರಣ ಮತ್ತು ಆಧುನೀಕರಣದ ವಿರುದ್ಧ ಚಿಂತನೆಗಳ ಜೊತೆ ಸೇರಿಕೊಳ್ಳುವ ಲೀ ಉಹ್ವಾನ್, 60ರ ದಶಕದಲ್ಲಿ ಮಿನಿಮಲಿಸ್ಟ್ ಚಳುವಳಿ Mono-ha (ಅಂದರೆ School of Things ಅರ್ಥಾತ್, ವಸ್ತುಗಳ ರಾಶಿ) ಆರಂಭಿಸುತ್ತಾರೆ. ಈ ಚಳುವಳಿಗೆ ಈ ಹೆಸರು ಬಂದದ್ದು ಅಂದಿನ ಕಲಾ ವಿಮರ್ಶಕರ ವ್ಯಂಗ್ಯದ ಮೂಲಕ. ಸಾಂಪ್ರದಾಯಿಕ ದೂರಪೂರ್ವದ ಕಲೆಯ ಜಾಗದಲ್ಲಿ ಸಿದ್ಧ ವಸ್ತುಗಳನ್ನು ಜೋಡಿಸಿಟ್ಟು ಮಾಡಿದ ಕಲಾಕೃತಿಗಳನ್ನು ಅಲ್ಲಿನ ವಿಮರ್ಶಕರು ಕರೆದದ್ದು ಹೀಗೆ. ಆದರೆ, ಮುಂದೆ ಅಲ್ಲಿ ಇದೊಂದು ಕಲಾ ಚಳುವಳಿಯಾಗಿ ಬೆಳೆಯಿತು.
1964ರಲ್ಲಿ ಅವರು ಜಪಾನ್‌ನಲ್ಲಿ ವಾಸವಿದ್ದರೂ, ದಕ್ಷಿಣ-ಉತ್ತರ ಕೊರಿಯಾಗಳ ಒಂದು ಗೂಡುವಿಕೆಗೆ ಕೆಲಸ ಮಾಡಿದ್ದಕ್ಕಾಗಿ, ಕೊರೊಯಾದ ಗುಪ್ತಚರ ಸಂಸ್ಥೆಯಿಂದ ಬಂಧಿತರಾಗಿ ಹಿಂಸೆಗೂ ಒಳಗಾಗಿದ್ದರು. 1973-2007ರ ಅವಧಿಯಲ್ಲಿ ಜಪಾನಿನ ತಾಮಾ ಆರ್ಟ್ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ ಲೀ ಉಹ್ವಾನ್, ತನ್ನ ಕಲಾಪದ್ಧತಿಯ ಬಗ್ಗೆ, “The highest level of expression is not to create something from nothing, but rather to nudge something which already exists so that the world shows up more vividly.” ಎನ್ನುತ್ತಾರೆ.
From Point and From Line (1972–84), From Winds (1982–86), With Winds (1987–91), Correspondence (1991–2006), and Dialogue (2006–) ಅವರ ಪ್ರಮುಖ ಕಲಾಸರಣಿಗಳು. 2010ರಲ್ಲಿ ಜಪಾನಿನ ನವೊಷಿಮಾ ದ್ವೀಪದಲ್ಲಿ ಅವರ ಕಲಾಕೃತಿಗಳ ಮ್ಯೂಸಿಯಂ ತೆರೆಯಲಾಗಿದೆ. ಅವರು ಕಾವ್ಯ, ಕಲಾಚರಿತ್ರೆ, ಫಿಲಾಸಫಿ, ಕಲಾವಿಮರ್ಶೆ ಕುರಿತು ಸುಮಾರು 17 ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಕಲಾ ಮಾರುಕಟ್ಟೆಯಲ್ಲೂ ಯಶಸ್ವೀ ಕಲಾವಿದ ಅವರು.
ತಮ್ಮ ಪೇಂಟಿಂಗ್‌ಗಳು ಮತ್ತು ಶಿಲ್ಪಗಳನಡುವೆ ಪರಸ್ಪರ ಏನು ಕೊಡುಕೊಳ್ಳುವಿಕೆ ಇದೆ ಎಂದು ಸಂದರ್ಶನವೊಂದರಲ್ಲಿ ಕೇಳಿದಾಗ ಲೀ ಉಹ್ವಾನ್ ಹೇಳಿದ್ದು ಹೀಗೆ: Painting is made within a pre-established surface, even if it suggests an exterior. Sculpture is made within a relation to time and external space, even if it is the expression of the artist's inner space. In other words, in painting you can evoke the indefinite exterior in a clearly delimited plane surface, and in sculpture you can express the interior within an exteriority. The flatness of painting belongs to the domain of ideas by virtue of its indirect character, whereas sculpture is linked to the immanence of space and matter. Painting is indirect and imaginary; sculpture is direct and reversible. Depending on the vibration I feel between my interior and the exterior, and depending on the vector of this vibration, my work takes shape either as painting or sculpture. I do not want to be totally engaged with the ideal world, nor totally with the real world. Both attract me. That is why I like to work with the complementary relation of painting and sculpture. (ಸಂದರ್ಶಕರು ಹೆನ್ರಿ ಫ್ರಾನ್ಸಿ ಡೆಬೀಲು, ವೆನೀಸ್ ಬಯೆನಾಲ್‌ನಲ್ಲಿ ನಡೆಸಿದ ಸಂದರ್ಶನ 2007)
ಲೀ ಉಹ್ವಾನ್ ಅವರ ಜೊತೆ ಏಷ್ಯಾ ಸೊಸೈಟಿ ಮ್ಯೂಸಿಯಮ್ಮಿನ ಹಿರಿಯ ಕ್ಯುರೇಟರ್ ಮಿಷೆಲ್ ಯುನ್ ಅವರ ಮಾತುಕತೆ:
ಲೀ ಉಹ್ವಾನ್ ಅವರ ಕುರಿತ ಡಾಕ್ಯುಮೆಂಟರಿ Lee Ufan: Marking Infinity:
Lee Ufan: Marking Infinity from Michael Blackwood Productions on Vimeo.
ಚಿತ್ರ ಶೀರ್ಷಿಕೆಗಳು:
ಲೀ ಉಹ್ವಾನ್ ಅವರ ‘From Line’, (1982)
ಲೀ ಉಹ್ವಾನ್ ಅವರ ‘From Point’, (1978)
ಲೀ ಉಹ್ವಾನ್ ಅವರ ‘Relatum – Rest’. (2013)
ಲೀ ಉಹ್ವಾನ್ ಅವರ Dialogue, (2019) charcoal on canvas
ಲೀ ಉಹ್ವಾನ್ ಅವರ From Winds (1989)
ಲೀ ಉಹ್ವಾನ್ ಅವರ Open Dimension, The Hirshhorn Museum & Sculpture Garden (2019)
ಲೀ ಉಹ್ವಾನ್ ಅವರ Relatum - Box Garden, (2019)
ಲೀ ಉಹ್ವಾನ್ ಅವರ Relatum - expansion place, 2008
ಲೀ ಉಹ್ವಾನ್ ಅವರ Relatum - play of primitive, (2015)
ಲೀ ಉಹ್ವಾನ್ ಅವರ Relatum - The Arch of Versailles, (2014)
ಈ ಅಂಕಣದ ಹಿಂದಿನ ಬರೆಹಗಳು:
ಸದಭಿರುಚಿ ಎಂಬುದು ಆಧುನಿಕ ಬದುಕಿನ ಶಾಪ – ಗಿಲ್ಬರ್ಟ್ ಮತ್ತು ಜಾರ್ಜ್
ಆನೆಲದ್ದಿ ಮತ್ತು ಕ್ರಿಸ್ ಒಫಿಲಿ
ನಿಸರ್ಗ ನನ್ನ ಸಹಶಿಲ್ಪಿ – ಆಂಡಿ ಗೋಲ್ಡ್ಸ್‌ವರ್ದಿ
ಫಿಗರೇಟಿವ್ ಚಿತ್ರಗಳು ಕೂಡಾ ಇಂದು ಪ್ರಸ್ತುತ – ಪೀಟರ್ ಡಾಯ್
ಕಾನ್ಸೆಪ್ಚುವಲ್ ಆರ್ಟ್‌ನ ಜನಕ – ಸೊಲ್ ಲೆವಿಟ್
ಮನುಷ್ಯ ಆಗಿರೋದು ಅಂದ್ರೆ ಏನು?- ವಿಲಿಯಂ ಕೆಂಟ್ರಿಜ್
“ಸೂಪರ್ ಫ್ಲ್ಯಾಟ್” ಐ ಕ್ಯಾಂಡಿಗಳ ತಕಾಷಿ ಮುರಾಕಾಮಿ
ಅಲ್ಲಿರುವುದು ನನ್ನಮನೆ – ದೊ ಹೊ ಸುಹ್
ದಿ ಲೈಫ್ ಆಫ್ CB: ಅರ್ಥಾತ್, ಕ್ರಿಷ್ಚಿಯನ್ ಬೋಲ್ತನಸ್ಕಿ
ಅಸೆಂಬ್ಲಿಗಳಲ್ಲಿ “ಬಾಕತನ” ತೋರಿಸಿದ ಅರ್ಮಾನ್
ಪ್ರಾಮಾಣಿಕತೆಯೇ ಸೌಂದರ್ಯ- ಜೊರ್ಗ್ ಇಮ್ಮೆಂದ್ರಾಫ್
ನಾಗರೀಕತೆಯ ಒಡಕಿಗೆ ಕನ್ನಡಿ ಹಿಡಿದ ಡೊರಿಸ್ ಸಾಲ್ಸೆದೊ
ಕಾನ್ಸೆಪ್ಚುವಲ್ ಆರ್ಟ್‌ಗೆ ತಳಪಾಯ –ರಾಬರ್ಟ್ ರಾಷನ್‌ಬರ್ಗ್
ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್
ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್
ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್
ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್
ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಒಳಗಣ ಅನಂತ ಮತ್ತು ಹೊರಗಣ ಅನಂತ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ
"ಕರ್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.