“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”

Date: 29-12-2020

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಅಮೆರಿಕಾದ ಕಾನ್ಸೆಪ್ಚುವಲ್ ಆರ್ಟ್ ಕಲಾವಿದೆ ಸಿಂಥಿಯಾ ಮೋರಿಸ್ ಶೆರ್ಮನ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದೆ: ಸಿಂಥಿಯಾ ಮೋರಿಸ್ ಶೆರ್ಮನ್ (Cynthia Morris Sherman)
ಜನನ: 19 ಜನವರಿ, 1954
ಶಿಕ್ಷಣ: ಬಫೆಲೊ ಸ್ಟೇಟ್ ಕಾಲೇಜ್ ನಿಂದ ಕಲಾಪದವಿ (1972-76), ರಾಯಲ್ ಕಾಲೇಜ್ ಆಫ್ ಆರ್ಟ್ ನಿಂದ ಗೌರವ ಡಾಕ್ಟರೇಟ್
ವಾಸ: ನ್ಯೂಯಾರ್ಕ್, ಅಮೆರಿಕ
ಕವಲು: ಕಾನ್ಸೆಪ್ಚುವಲ್ ಆರ್ಟ್
ವ್ಯವಸಾಯ: ಪರ್ಫಾರ್ಮಿಂಗ್ ಫೊಟೋಗ್ರಫಿ, ಪೇಂಟಿಂಗ್

ಸಿಂಡಿ ಶೆರ್ಮನ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಸಿಂಡಿ ಶೆರ್ಮನ್ ಅವರ ಅಧಿಕೃತ ವೆಬ್ ಸೈಟ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಸಾಮಾಜಿಕ ನಂಬಿಕೆಗಳು ಮತ್ತು ವ್ಯಕ್ತಿಯ ಆಶಯಗಳ ನಡುವಿನ ಅಸ್ಥಿರ ಹೊಂದಾಣಿಕೆಗಳೇ ಒಬ್ಬ ವ್ಯಕ್ತಿಯ ಚಿತ್ರವನ್ನು ಸಾಮಾಜಿಕವಾಗಿ ರೂಪಿಸುವುದು. ಇಂತಹ ಸ್ಟೀರಿಯೊಟೈಪ್ ವ್ಯವಸ್ಥೆಯನ್ನು ಪ್ರಶ್ನಿಸುವುದಕ್ಕೆ ಸಿಂಡಿ ಶೆರ್ಮನ್ ಬಳಸಿದ್ದು ತನ್ನದೇ ಚಿತ್ರಗಳನ್ನು. ಸಿಂಡಿ ಶೆರ್ಮನ್ ಕಲಾಕೃತಿಗಳೆಂದರೆ ಅವರದೇ ಛಾಯಾಚಿತ್ರಗಳು. ಬಗೆ ಬಗೆಯ ಮೇಕಪ್, ಉಡುಪುಗಳು, ಹಿನ್ನೆಲೆ-ಮುನ್ನೆಲೆಗಳೊಂದಿಗೆ ಬಗೆಬಗೆಯ ರೂಪಗಳಲ್ಲಿ ರೋಲ್ ಪ್ಲೇ ಮಾಡುತ್ತಾ ಕಾಣಿಸಿಕೊಳ್ಳುವ ಸಿಂಡಿ ಶೆರ್ಮನ್, ಮೇಲ್ನೋಟಕ್ಕೆ ಬಹಳ ವರ್ಣರಂಜಿತ, ಆಕರ್ಷಕ ಚಿತ್ರಗಳಲ್ಲಿ ತಮ್ಮನ್ನು ಬಿಚ್ಚಿಡುತ್ತಾರೆನ್ನಿಸಿದರೂ, ಆಳಕ್ಕಿಳಿದಾಗ ಅದಕ್ಕೆ ವಿರುದ್ಧವಾದದ್ದನ್ನು ಹೇಳುತ್ತಿದ್ದಾರೆ ಎಂಬುದು ಅರಿವಾಗತೊಡಗುತ್ತದೆ. ಕಲೆಯ ಚರಿತ್ರೆಯಲ್ಲಿ ಉದ್ದಕ್ಕೂ ಹೆಣ್ಣಿನ ಬಗ್ಗೆ ಇರುವ ಗಂಡು ನೋಟಗಳನ್ನು ಕೆಡವಿ ಕಟ್ಟಿದ ಯಶಸ್ಸು ಶೆರ್ಮನ್ ಗೆ ಸಿಗಬೇಕು ಎನ್ನುತ್ತಾರೆ ಕಲಾವಿಮರ್ಶಕರು.

ಅಮೆರಿಕದ ನ್ಯೂಜರ್ಸಿಯಲ್ಲಿ ಇಂಜಿನಿಯರ್ ತಂದೆ-ಶಿಕ್ಷಕಿ ತಾಯಿಯ ಐವರು ಮಕ್ಕಳಲ್ಲಿ ಕೊನೆಯವಳಾಗಿ ಜನಿಸಿದ ಸಿಂಡಿ ಕಲಾಪದವಿಯ ಬಳಿಕ ಪೇಂಟಿಂಗ್ ಗಳಲ್ಲಿ ತೊಡಗಿಕೊಂಡಾಗ, ಅಮೆರಿಕದ ಕಲಾಜಗತ್ತು ಮಿನಿಮಲಿಸಂ ಚಳವಳಿಯ ಬಳಿಕದ ಹೇಳಲು ಇನ್ನೇನೂ ಉಳಿದಿಲ್ಲ ಎಂಬ ಸ್ಥಾಗಿತ್ಯದ ಹಂತದಲ್ಲಿತ್ತು. ಇದನ್ನು ಗ್ರಹಿಸಿದ ಸಿಂಡಿ, ಫೋಟೊಗ್ರಫಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. “ಪಿಕ್ಚರ್ ಜನರೇಶನ್” ಎಂದು ಈಗ ಗುರುತಿಸಲಾಗುವ (1974-84) ಕಲಾಚಳುವಳಿಯಲ್ಲಿ ಜಾನ್ ಬಾಲ್ದೆಸ್ಸಾರಿ, ರಾಬರ್ಟ್ ಲಾಂಗೊ, ಬಾರ್ಬರಾ ಕೃಗರ್ ಮತ್ತಿತರರೊಂದಿಗೆ ಹೊಸ ಹಾದಿಯ ಹುಡುಕಾಟದಲ್ಲಿ ತೊಡಗಿಕೊಂಡರು.

ಅವರ ಆರಂಭಿಕ ಚಿತ್ರ ಸರಣಿ Untitles Film Stills (1978) ಅವರಿಗೆ ಪ್ರಸಿದ್ಧಿ ತಂದುಕೊಟ್ಟಿತು. ಮಹಿಳೆಯರ ಆರ್ಕಿಟೈಪ್ ಗಳನ್ನು (ಗೃಹಿಣಿ, ವೇಶ್ಯೆ…) ಆ ಸರಣಿಯಲ್ಲಿ ಅವರು ಚಿತ್ರಿಸಿದ್ದರು. ಆ ಬಳಿಕ Disasters and Fairy Tales (1985)ಸರಣಿಯಲ್ಲಿ ಅವರುಸಾಮಾನ್ಯವಾಗಿ ಅಸಹ್ಯ ಎಂದು ಪರಿಗಣಿತವಾಗುವ ಚಿತ್ರಗಳಲ್ಲಿ ತಮ್ಮನ್ನು ಬಿಂಬಿಸಿಕೊಂಡರು. History Portraits (1989)ರಲ್ಲಿ ಚರಿತ್ರೆಯ ಪ್ರಮುಖ ವ್ಯಕ್ತಿಗಳ ಪಾತ್ರದಲ್ಲಿ ತನ್ನ ಚಿತ್ರಗಳನ್ನು ತೆಗೆಸಿಕೊಂಡರೆ, Sex Pictures (1992) ಸರಣಿಯಲ್ಲಿ ಮಹಿಳೆ ಭೋಗವಸ್ತುವಾಗಿ ಬಳಕೆ ಆಗುವ ಚಿತ್ರಣಗಳನ್ನು ಕಟ್ಟಿಕೊಟ್ಟರು. Clown Series (2004), ಇತ್ತೀಚೆಗಿನ Plandid ಸೆಲ್ಫೀ ಸರಣಿ ಮತ್ತು ಕಳೆದ ವರ್ಷದ ಪೇಂಟಿಂಗ್ ಸರಣಿಗಳು ಅವರ ಪ್ರಮುಖ ಕಲಾಕೃತಿಗಳು.

ವೈಯಕ್ತಿಕ ಬದುಕಿನಲ್ಲಿ ಕಲಾವಿದ ಲಾಂಗೊ, ಚಿತ್ರ ನಿರ್ದೇಶಕ ಮೈಕಲ್ ಆಡರ್, ಕಲಾವಿದ ಡೇವಿಡ್ ಬೈನ್ಸ್ ಅವರ ಜೊತೆ ವೈವಾಹಿಕ ಜೀವನ ನಡೆಸಿದ್ದ ಸಿಂಡಿ, ಅವರೆಲ್ಲರಿಂದಲೂ ವಿಚ್ಛೇದಿತರು. ಮಾರುಕಟ್ಟೆಯಲ್ಲಿ ಕೂಡ ಬಹಳ ಯಶಸ್ವೀ ಕಲಾವಿದೆಯಾಗಿದ್ದ ಸಿಂಡಿ ಅವರ Untitled #96ಕಲಾಕೃತಿ ಕ್ರಿಸ್ತೀಸ್ ಹರಾಜುಕಟ್ಟೆಯಲ್ಲಿ ಅಂದಾಜು 27ಕೋಟಿ ರೂ. ( $3.89ಮಿಲಿಯ) ಗಳಿಸಿ ದಾಖಲೆ ಮಾಡಿತ್ತು. ಪ್ರಾದಾ, ದೋಲ್ಸ್ ಅಂಡ್ ಗಬ್ಬಾನಾ ದಂತಹ ದೊಡ್ಡ ಜಾಗತಿಕ ಬ್ರ್ಯಾಂಡ್ ಗಳ ಪ್ರಮೋಶನ್ ಜಾಹೀರಾತು ಸರಣಿಗಳಲ್ಲೂ ಅವರು ಕಾಣಿಸಿಕೊಂಡಿದ್ದಾರೆ.

ತನ್ನ ಪತಿ ಮೈಕಲ್ ಆಡರ್ ಜೊತೆ ಕೆಲವು ಸಿನಿಮಾಗಳಿಗೂ ಆಕೆ ನಿರ್ದೇಶಕಿಯಾಗಿ, ನಟಿಯಾಗಿ ಕೆಲಸ ಮಾಡಿದ್ದಾರೆ.

ತನ್ನ ಎಲ್ಲ ಕಲಾಕೃತಿಗಳಲ್ಲಿ ತಾನೇ ಇರುವ ಹಿನ್ನೆಲೆಯಲ್ಲಿ ಇವೆಲ್ಲ ನಿಮ್ಮ ಸ್ವ-ಭಾವಚಿತ್ರಗಳೇ? ಎಂದು ಪ್ರಶ್ನಿಸಿದರೆ ಸಿಂಡಿ, “ತಾಂತ್ರಿಕವಾಗಿ ಹೌದಿರಬಹುದು, ಆದರೆ ಅಲ್ಲೆಲ್ಲೂ ನನ್ನ ಗುಣಗಳನ್ನು ನಾನು ಕಂಡಿಲ್ಲ” ಎನ್ನುತ್ತಾರೆ. ಸಹಜವಾಗಿಯೇ ಈಗ ಇನ್ಸ್ಟಾಗ್ರಾಂನಲ್ಲಿ ಅಲೆ ಎಬ್ಬಿಸುತ್ತಿರುವ ಸಿಂಡಿ. 2017ರಿಂದ ತನ್ನ ಇನ್ಸ್ಟಾಗ್ರಾಂ ಖಾತೆಯನ್ನು ಸಾರ್ವಜನಿಕರಿಗೆ ತೆರೆದಿಟ್ಟಿದ್ದಾರೆ. ಅವರ ಇತ್ತೀಚೆಗಿನ Plandid (Planned Candid Photos) ಸೆಲ್ಫೀಗಳು ಇನ್ಸ್ಟಾಗ್ರಾಂನಲ್ಲಿ ಪ್ರಸಿದ್ಧ.

ಸಿಂಡಿ ಶೆರ್ಮನ್ ಬಗ್ಗೆ ಬಿಬಿಸಿ ನಿರ್ಮಿಸಿದ ಡಾಕ್ಯುಮೆಂಟರಿ “Nobody’s Here But Me (1994):

Cindy Sherman - Nobodys Here But Me (1994) from Baboon Nation on Vimeo.

 

ಸಿಂಡಿ ಶೆರ್ಮನ್ ಕಲಾಕೃತಿಗಳ ಬಗ್ಗೆ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (QAGOMA) ದಲ್ಲಿ ನಡೆದ ಒಂದು ಗುಂಪು ಚರ್ಚೆ.

ಚಿತ್ರ ಶೀರ್ಷಿಕೆಗಳು

ಸಿಂಡಿ ಶೆರ್ಮನ್ ಅವರ ತೀರಾ ಇತ್ತೀಚಿನ ಪೇಂಟಿಂಗ್ (2019)

ಸಿಂಡಿ ಶೆರ್ಮನ್ ಅವರ #21 (1978)

ಸಿಂಡಿ ಶೆರ್ಮನ್ ಅವರ #180 (1989)

ಸಿಂಡಿ ಶೆರ್ಮನ್ ಅವರ #205 (1990)

ಸಿಂಡಿ ಶೆರ್ಮನ್ ಅವರ #214 (1990)

ಸಿಂಡಿ ಶೆರ್ಮನ್ ಅವರ . #225 (1992)

ಸಿಂಡಿ ಶೆರ್ಮನ್ ಅವರ #228 (1991)

ಸಿಂಡಿ ಶೆರ್ಮನ್ ಅವರ #305 (1994)

ಸಿಂಡಿ ಶೆರ್ಮನ್ ಅವರ #315 (1995)

ಸಿಂಡಿ ಶೆರ್ಮನ್ ಅವರ #397 (2001)

ಸಿಂಡಿ ಶೆರ್ಮನ್ ಅವರ #410 (2003)

ಸಿಂಡಿ ಶೆರ್ಮನ್ ಅವರ #474 (2009)

ಸಿಂಡಿ ಶೆರ್ಮನ್ ಅವರ #571 (2016)

ಸಿಂಡಿ ಶೆರ್ಮನ್ ಅವರ #97 (1982) ಪಿಂಕ್ ರೋಬ್ಸ್ ಸರಣಿ

ಈ ಅಂಕಣದ ಹಿಂದಿನ ಬರೆಹಗಳು:

ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್

ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ

“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”

“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”

“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”

“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”

“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”

“ಒಳಗಣ ಅನಂತ ಮತ್ತು ಹೊರಗಣ ಅನಂತ”

“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ

ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ

ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್

ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್

ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’

ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ

ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್

ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ

ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ

ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

MORE NEWS

ನಾನು ಕೊಂದ ಹುಡುಗಿ ಕಥೆಯಲ್ಲಡಗಿರುವ ಮೌಢ್ಯತೆ

20-11-2024 ಬೆಂಗಳೂರು

"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...

ಸಮಾನತೆಯ ವಿಚಾರ ಮತ್ತು ತಾಯ್ಮಾತಿನ ಶಿಕ್ಶಣ

18-11-2024 ಬೆಂಗಳೂರು

"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...

ದಾವಣಗೆರೆ ರಂಗಾಯಣ : ಅಭಿನಯ ಸಂಗೀತದ ಅಮೃತಧಾರೆ

14-11-2024 ಬೆಂಗಳೂರು

"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...