Date: 10-11-2024
Location: ಬೆಂಗಳೂರು
ಬೆಂಗಳೂರು: ನಳಂದದ ಪಾಲಿ ಇನ್‌ಸ್ಟಿಟ್ಯೂಟ್, ಬಿ.ಎಂ.ಶ್ರೀ. ಪ್ರತಿಷ್ಠಾನ ಹಾಗೂ ಪ್ರೊ. ಎಸ್.ಕೆ.ರಾಮಚಂದ್ರರಾವ್ ಮೆಮೋರಿಯಲ್ ಟ್ರಸ್ಟ್ ಆಯೋಜಿಸಿದ್ದ ಪ್ರೊ. ಎಸ್.ಕೆ.ರಾಮಚಂದ್ರರಾವ್ ಅವರ ಬೌದ್ಧ ಸಾಹಿತ್ಯ ಕೃತಿಗಳು ವಿಚಾರ ಸಂಕಿರಣ ಕಾರ್ಯಕ್ರಮವು 2024 ನಂ.09 ಶನಿವಾರದಂದು ನಗರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಮಾತನಾಡಿ, "ವಿದ್ವಾಂಸ ಎಸ್.ಕೆ.ರಾಮಚಂದ್ರರಾವ್ ಅವರ ಕೃತಿಗಳು ಶತಮಾನೋತ್ಸವದ ಸಂದರ್ಭದಲ್ಲಾದರೂ ಎಲ್ಲ ಓದುಗರಿಗೆ ಲಭ್ಯವಾಗುವಂತೆ ಮಾಡಬೇಕು. ಅವರು ಲೋಕೋಪಾರಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಸಂಸ್ಕೃತ, ವೇದ ಅಭ್ಯಾಸ ಜತೆಗೆ ಬೌದ್ಧ, ಜೈನ ಧರ್ಮದ ಬಗ್ಗೆ ಅಧ್ಯಯನ ಮಾಡಿದ್ದರು. ಧರ್ಮಗಳ ನಡುವೆ ದ್ವೇ ಷನಡೆಯುತ್ತಿರುವಾಗ ಅನ್ಯ ಧರ್ಮಗಳಲ್ಲಿ ಏನಿದೆ ಎಂದು ತಿಳಿಯಲು ಅಧ್ಯಯನ ಮಾಡಿದ್ದರು," ಎಂದರು.
ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ವಿದ್ವಾಂಸ ಶತಾವಧಾನಿ ಡಾ.ಆರ್.ಗಣೇಶ್, "ಪಾಲಿ ಭಾಷೆಯಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ರಾಮಚಂದ್ರರಾವ್, ಬೌದ್ಧ ಧರ್ಮದ ಮೂಲ ಕೃತಿಗಳ ಅಧ್ಯಯನ ನಡೆಸಿದ್ದರು. ಜಾನಪದ ಕತೆಗಳ ಹೊರತಾಗಿ ಮೂಲ ಗ್ರಂಥಗಳ ವಿಷಯವನ್ನು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯ ಕೃತಿಗಳಲ್ಲಿ ಪ್ರಸುತಪಡಿಸಿದ್ದಾರೆ. ಅಲ್ಲದೇ ಬುದ್ಧ ಮಾತನಾಡಿದ ಭಾಷೆಯಲ್ಲಿ ಬರೆಯಬೇಕೆಂದು ಪಾಲಿ ಭಾಷೆಯಲ್ಲಿ ಜ್ಞಾನ ಭರಿತವಾದ ಕೃತಿ ರಚಿಸಿರುವುದು ಇವರ ವಿದ್ವತ್‌ಗೆ ಸಾಕ್ಷಿ," ಎಂದು ಹೇಳಿದರು.
ಪಾಲಿ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ರಾಹುಲ್ ಎಂ.ಖರ್ಗೆ, ಬಹುಭಾಷಾ ವಿದ್ವಾಂಸ ಮಲ್ಲೇಪುರಂ ಜಿ ವೆಂಕಟೇಶ್ ಹಾಜರಿದ್ದರು. ವಿದ್ವಾಂಸ ಮೊಳಕಾಲ್ಮುರು ಶ್ರೀನಿವಾಸಮೂರ್ತಿ, ಸಂಸ್ಕೃತಿ ಚಿಂತಕ ಜಿ.ಬಿ.ಹರೀಶ್, ಸಹ ಪ್ರಾಧ್ಯಾಪಕಿ ಎಸ್.ಪೂರ್ಣಿಮಾ ವಿಷಯ ಮಂಡಿಸಿದರು.
ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು ಮೂರು ವರ್ಷಗಳ ವಾರ್ಷಿಕ ಪುಸ್ತಕ ಬಹುಮಾನಗಳನ್ನು ಈಗಾಗಲೇ ಪ್ರಕಟಿಸಿದ್ದು, 2021ನೇ...
ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ನಂ. 11, 12 ಮತ್ತು 13 ರಂದು ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ ಲಂಕೇ...
ಧಾರವಾಡ : 'ಪ್ರತಿಯೊಬ್ಬರ ಜೀವನದಲ್ಲಿ ಬಾಲ್ಯ ಬಹು ಮುಖ್ಯವಾದ ಘಟ್ಟ. ಇಂದಿನ ಮಕ್ಕಳು ಅದರಿಂದ ವಂಚಿತರಾಗುತ್ತಿದ್ದಾರೆ...
©2024 Book Brahma Private Limited.