ಬದಲಾವಣೆಯ ಸೂಕ್ಷ್ಮ ಅರಿತರೆ ಮಾತ್ರ ಆಡಳಿತ ಸುಸೂತ್ರವಾಗಿ ನಡೆಯಲು ಸಾಧ್ಯ : ಅನಿಲ್ ಗೋಕಾಕ್

Date: 23-11-2024

Location: ಬೆಂಗಳೂರು


ಬೆಂಗಳೂರು: 'ವಿನಯ ಮತ್ತು ಅಧಿಕಾರ ಒಟ್ಟಿಗೆ ಹೋಗುವುದಿಲ್ಲ. ಅಧಿಕಾರ ಬಂದರೆ ಅಹಂಕಾರ ಒಟ್ಟೊಟ್ಟಿಗೆ ಬರುತ್ತದೆ. ಕೇಂದ್ರ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದರೂ ವಿನಯತೆ, ಪ್ರಾಮಾಣಿಕತೆ ಉಳಿಸಿಕೊಂಡ ವ್ಯಕ್ತಿ ಅನಿಲ್ ಗೋಕಾಕ್,' ಎಂದು ವಿನಾಯಕ ಗೋಕಾಕ್ ವಾಹ್ಮಯ ಟ್ರಸ್ಟ್ ನ ಅಧ್ಯಕ್ಷರಾದ ನರಹಳ್ಳಿ ಬಾಲಸುಬ್ರಹ್ಮಣ್ಯ ತಮ್ಮ ತೋರಣ ನಾಂದಿ ನುಡಿಯನ್ನಾಗಿದರು.

ವೈ. ಜಿ. ಮುರಳೀಧರನ್ ಅವರ 'ಆಧುನಿಕ ಭಾರತದ ರೂವಾರಿಗಳು ಪ್ರತಿಭೆ ಪರಿಶ್ರಮ ಮತ್ತು ಪರಿಣತಿ' (ಅನಿಲ್ ಗೋಕಾಕ್ ಗೌರವ ಗ್ರಂಥ) ಹತ್ತು ಐಎಎಸ್ ಅಧಿಕಾರಿಗಳ ಸಂಕ್ಷಿಪ್ತ ಜೀವನ ಕಥನ ಎಂಬ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಾರಾಷ್ಟ್ರದಲ್ಲಿ ಅನಿಲ್ ಗೋಕಾಕ್ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲಿ ಇದ್ದ ಮಂತ್ರಿ ಒಬ್ಬರು ಹೇಳಿದ ಮಾತು ನೆನೆಯುತ್ತೇನೆ, "ದೇವರಿಗೆ ಬೇಕಾದರೆ ಲಂಚ ಕೊಡಬಹುದು ಆದರೆ ಅನಿಲ್ ಗೋಕಾಕ್ ಅವರಿಗೆ ಕೊಡಲು ಸಾಧ್ಯವಿಲ್ಲಾ ಎಂದಿದ್ದರು. ಅಷ್ಟು ಪ್ರಾಮಾಣಿಕ ವ್ಯಕ್ತಿತ್ವ ನಮ್ಮ ಯುವಕರು ಬೆಳೆಸಿಕೊಳ್ಳಬೇಕು. ನಿಷ್ಠಾವಂತ ಅಧಿಕಾರಿಗಳು ಭ್ರಷ್ಟ ಮಂತ್ರಿಯನ್ನು ಬದಲಾಯಿಸಬಹುದು, ಇದಕ್ಕೆ ಇಂದಿರಾಗಾಂಧಿ ಅವರು ಐಎಎಸ್ ಅಧಿಕಾರಿ ಇಟ್ಟುಕೊಂಡು ಮಂತ್ರಿಯನ್ನು ಬದಲಾಯಿಸಿದ್ದ ಉದಾಹರಣೆಗೆ ಇದೆ. ಐಎಎಸ್ ಹುದ್ದೆಗೆ ಮನ್ನಣೆ ಹೆಚ್ಚಿದೆ, ಅವರಿಂದ ಸಮಾಜವನ್ನು ತಿದ್ದಲು ಸಾಧ್ಯವಿದೆ" ಎಂದು ವಿನಾಯಕ ಗೋಕಾಕ್ ವಾಹ್ಮಯ ಟ್ರಸ್ಟ್ ನ ಅಧ್ಯಕ್ಷರಾದ ನರಹಳ್ಳಿ ಬಾಲಸುಬ್ರಹ್ಮಣ್ಯ ತಮ್ಮ ತೋರಣ ನಾಂದಿ ನುಡಿಯನ್ನಾಗಿದರು.

ಭಾರತೀಯ ಆಡಳಿತ ಸೇವೆಯ ನಿವೃತ್ತ ಅಧಿಕಾರಿಗಳಾದ ಎಂ. ವಿಜಯಭಾಸ್ಕರ್ ಅವರು ಮಾತನಾಡಿ, 'ವೈ ಜಿ. ಮುರಳೀಧರ್ 40 ಪುಸ್ತಕ ಬರೆದಿದ್ದಾರೆ. ಅವರಿಂದ ಬರವಣಿಗೆಯನ್ನು ನಾನು ಕಲಿಯಬೇಕು. ಅಧಿಕಾರಿಗಳಾದ ನಾವು ಫೈಲ್ ಗಳನ್ನ ಬರಿತೇವೆ ಆದರೆ ಪುಸ್ತಕ ಬರೆಯೋದು ಕಷ್ಟ. ಹಾಗೆ ನಮಗೆ ವೇದಿಕೆಯಲ್ಲಿ ಮಾತನಾಡುವುದು ಕಷ್ಟ. ಜನರ ಜೊತೆ ಮಾತನಾಡಿ ಅಭ್ಯಾಸ ವೇದಿಕೆ ಭಾಷಣ ಕಷ್ಟ. ಐಎಎಸ್ ನಲ್ಲಿ ಮಹಿಳೆಯರಿಗೆ ಮೀಸಲಾತಿ ಇಲ್ಲ. ಅಲ್ಲಿ ಕಡಿಮೆ ಪ್ರಮಾಣದಲ್ಲಿ ಹೆಣ್ಣು ಮಕ್ಕಳಿದ್ದಾರೆ ಅವರಿಗೆ ಹೆಚ್ಚಿನ ಅವಕಾಶ ದೊರೆಯಬೇಕು. ತಂತ್ರಜ್ಞಾನದ ಸುಧಾರಣೆಯಿಂದ ನುಂಗುವವರ ಸಂಖ್ಯೆ ಕಡಿಮೆ ಆಗಿದೆ,' ಎಂದು ತಿಳಿಸಿದರು.

'ಆಧುನಿಕ ಭಾರತದ ರೂವಾರಿಗಳು ಪ್ರತಿಭೆ ಪರಿಶ್ರಮ ಮತ್ತು ಪರಿಣತಿ ಕೃತಿ ಬರೆದ ವೈ.ಜಿ. ಮುರಳೀಧರ್ ಮಾತನಾಡಿ ಯುವಕರು ಒಂದು ಗುರಿ ಇಟ್ಟುಕೊಂಡು ಐಎಎಸ್ ಮಾಡಬೇಕು. ಹತ್ತು ಜನಕ್ಕೆ ಐಎಎಸ್ ಅಧಿಕಾರಿಗಳ ಬಗ್ಗೆ ಬರೆಯಲು ಕಾರಣ ಯುವಕರಿಗೆ ಅದನ್ನು ತಿಳಿಸಬೇಕು ಎಂಬ ಕಾರಣಕ್ಕೆ,' ಎಂದರು.

'ಕರ್ನಾಟಕದಿಂದ ಐಎಎಸ್ ಅಧಿಕಾರಿಗಳ ಸಂಖ್ಯೆ ಕಡಿಮೆ, ಯುವಕರು ಐಎಎಸ್ ಕಡೆ ಗಮನ ಹರಿಸಬೇಕು. ಕರ್ನಾಟಕದದಿಂದ ಹೆಚ್ಚು ಹೆಚ್ಚು ಐಎಎಸ್ ಅಧಿಕಾರಿಗಳು ಬರಬೇಕು. ಐಎಎಸ್ ಅಧಿಕಾರಿಗಳು ಒಂದು ರಾಜ್ಯದಿಂದ ಹೆಚ್ಚು ಜನ ಇದ್ದರೆ ಆರ್ಥಿಕ ನೆರವು ಸಿಗುತ್ತದೆ. ಕೇರಳ ಮತ್ತು ಗುಜರಾತ್ ಇದಕ್ಕೆ ಸಾಕ್ಷಿ,' ಎಂದು ಅನಿಲ್ ಗೋಕಾಕ್ ತಿಳಿಸಿದ್ದರು.

'ಮಾಧ್ಯಮಗಳಲ್ಲಿ ಅಧಿಕಾರಿಗಳ ಕೆಟ್ಟ ಮುಖವನ್ನೇ ತೋರಿಸಲಾಗುತ್ತದೆ. ಆಡಳಿತಗಾರ ಕರ್ತವ್ಯ ಜನರ ಕನಸುಗಳನ್ನು ನನಸು ಮಾಡುವುದು. ಹೀಗಾಗಿ ಕನಸನ್ನು ಜನರಲ್ಲಿ ರೂಪಿಸಬಹುದು. ಆಡಳಿತಗಾರ ದೇಶದ ಅಭಿವೃದ್ಧಿಯ ಕನಸನ್ನು ನನಸು ಮಾಡಬಲ್ಲ. ಅಧಿಕಾರಿಗೆ ಸ್ಥಳೀಯ ಭಾಷೆಯ ಜ್ಞಾನ ಮುಖ್ಯ. ಆಡಿತದ ಸಂಕೀರ್ಣ ಅಂಶಗಳನ್ನು ಸ್ಥಳೀಯ ಭಾಷೆಯಲ್ಲಿ ತಿಳಿಸುವುದು ಅಗತ್ಯ. ಇಂದಿನ ಯುಗ ಗತಿ ಶೀಲವಾದುದ್ದು. ಇಂತಹ ಸಂದರ್ಭದಲ್ಲಿ ಆಡಳಿತಗಾರ ಎಚ್ಚರಿಕೆಯಲ್ಲಿರಬೇಕು. ಬದಲಾವಣೆಯ ಸೂಕ್ಷ್ಮ ಅರಿತರೆ ಮಾತ್ರ ಆಡಳಿತ ಸುಸೂತ್ರವಾಗಿ ನಡೆಯಲು ಸಾಧ್ಯ ಎಂದು,' ಎಂದರು.

ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ನಾಗಲಕ್ಷ್ಮೀ ಬಿ. ಎನ್ ಸಾಕ್ಷಿ ನುಡಿಗಳನ್ನು ಆಡಿದರು. ಬಿ. ಎ. ಅನ್ನದಾನೇಶ್ ಗಣ್ಯರನ್ನು ಸ್ವಾಗತಿಸಿದರು. ವಿನಾಯಕ ಗೋಕಾಕ್ ವಾಹ್ಮಯ ಟ್ರಸ್ಟ್ ನ ಕಾರ್ಯದರ್ಶಿ ನ. ರವಿಕುಮಾರ ಅವರು ಕಾರ್ಯಕ್ರಮ ನಿರೂಪಿಸಿದರು. ರಮಾನಂದ್ ಕೆ. ವಿ. ಅವರು ವಂದನಾರ್ಪಣೆ ಮಾಡಿದರು.

MORE NEWS

ಬೇಲೂರು ರಘುನಂದನ್ ಅವರಿಗೆ `ಬಿಸ್ಮಿಲ್ಲಾ ಖಾನ್ ಪುರಸ್ಕಾರ-2022’ ಪ್ರಶಸ್ತಿ ಪ್ರದಾನ

22-11-2024 ಬೆಂಗಳೂರು

ಬೆಂಗಳೂರು: ದೆಹಲಿಯ ಸಂಗೀತ ನಾಟಕ ಅಕಾಡೆಮಿಯಿಂದ ನೀಡುವ ಬಿಸ್ಮಿಲ್ಲಾ ಖಾನ್ ಪುರಸ್ಕಾರ-2022ಕ್ಕೆ ಕವಿ, ನಾಟಕಕಾರ ಬೇಲೂರು ...

ಎಲ್ಲಾ ಲೋಕಗಳ ತಾಯಿಬೇರು ಜಾನಪದ ಲೋಕ; ಹಂಪನಾ

22-11-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ‘ನಾಡೋಜ ಎಚ್.ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮ...

ಕನ್ನಡ ಪುಸ್ತಕ ಪರಿಷತ್ತು ಸಮ್ಮೆಳನಾಧ್ಯಕ್ಷ ಡಾ.ಪ್ರಕಾಶ ಖಾಡೆಗೆ ಪರಿಷತ್ತಿನಿಂದ ಆಹ್ವಾನ

22-11-2024 ಬೆಂಗಳೂರು

ವಿಜಯಪುರ: ನಗರದ ಚೇತನಾ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಡಿಸೆಂಬರ್ 1 ರವಿವಾರ ಜರುಗಲಿರುವ ಕನ್ನಡ ಪುಸ್ತಕ ಪರಿಷತ್ತು ಸಮ್...