Date: 24-11-2024
Location: ಬೆಂಗಳೂರು
ಬೆಂಗಳೂರು: ಅಂಕಿತ ಪ್ರಕಾಶನದ ವತಿಯಿಂದ ಚಿತ್ರಸಮೂಹ ಸಹಯೋಗದಲ್ಲಿ ಸುಚಿತ್ರಾ ಫಿಲಂ ಸೊಸೈಟಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಪಿ. ಶೇಷಾದ್ರಿ ಕುರಿತ ‘ಚಿತ್ರ-ಮಂಥನ’, ‘ಕಣ್ಣು ಕಂಡ ಕ್ಷಣಗಳು’, ‘ದಕ್ಕಿದ್ದು-ಮಿಕ್ಕಿದ್ದು’ ಮತ್ತು ‘Frames of Conscience’ ಕೃತಿಗಳ ಲೋಕಾರ್ಪಣಾ ಸಮಾರಂಭವು 2024 ನ. 24 ಭಾನುವಾರದಂದು ನಗರದ ಸುಚಿತ್ರಾ ಫಿಲಂ ಸೊಸೈಟಿಯ ಸಭಾಂಗಣದಲ್ಲಿ ನಡೆಯಿತು.
ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, "ಒಂದು ಸಾವಿರ ಪದಗಳನ್ನು ಬರೆದು, ನಮ್ಮ ಮಾತನ್ನು ಹೇಳು ಪುಸ್ತಕದ ಮುಕೇನ ಹೇಳಲು ಬಯಸುತ್ತೇವೆ. ಆದರೆ ಅದೇ ಒಂದು ಚಲನಚಿತ್ರ ದೃಶ್ಯ ಹಾಗೂ ಮಾತಿನ ಮೂಲಕ ನಮ್ಮ ಜೊತೆ ಸಂವಹನವನ್ನು ಮಾಡುತ್ತದೆ. ಸಮಾಜದ ದೃಷ್ಟಿಕೋನವನ್ನು ಸಿನಿಮಾಗಳ ಮೂಲಕ ಬದಲಾಯಿಸುವ ಕೆಲಸವನ್ನು ನಿರ್ಮಾಪಕರು, ನಿರ್ದೇಶಕರು ಮಾಡುತ್ತಿದ್ದಾರೆ. ಇಂದಿನ ಈ ಕಾರ್ಯಕ್ರಮದಲ್ಲಿ ಸಿನಿಮಾದ ಕುರಿತು, ವಿಭಿನ್ನ ದೃಷ್ಟಿಕೋನ ಹಾಗೂ ಸಮಾಜದಕ್ಕೆ ಬೇಕಾಗಿರುವಂತಹ ಅಂಶಗಳನ್ನು ಕ್ರೋಢಿಕರಿಸಿ ಪುಸ್ತಕದ ಮುಖೇನ ಮುಂದಿನ ಪೀಳಿಗೆಗೆ ಕೂಡ ದಾಖಲೀಕರಿಸಲಾಗುತ್ತಿದೆ. ನಿಜಕ್ಕೂ ಇದೊಂದು ಅದ್ಭುತವಾದ ಕೆಲಸ. ಇಂದು ಪ್ರದರ್ಶನಗೊಂಡ ಶೇಷಾದ್ರಿ ಅವರ ಸಿನಿಮಾಗಳು ಗಂಭೀರವಾದ ಸಮಸ್ಯೆಗಳನ್ನು ಮನಮುಟ್ಟುವ ಹಾಗೆ ತಿಳಿಸುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರೆಗೂ ಇಂತಹ ಸಿನಿಮಾಗಳ ಅವಶ್ಯಕತೆಯಿದೆ. ಸಮಾಜ ಬದಲಾವಣೆಗೆ ಇಂತಹ ಸಿನಿಮಾಗಳ ಅವಶ್ಯಕ," ಎಂದು ತಿಳಿಸಿದರು.
ಕೃತಿಗಳ ಕುರಿತು ಮಾತನಾಡಿದ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾತನಾಡಿ,"ಶೇಷಾದ್ರಿ ಅವರ ಕೃತಿಗಳ ಒಂದು ರೀತಿಯ ವಿಶ್ಲೇಷಣಾತ್ಮಕವಾದ ಬರಹಗಳ ಗುಚ್ಛ. ಶೇಷಾದ್ರಿ ಅವರಿಗಿದ್ದ ಬಹು ದೊಡ್ಡ ಕಾಳಜಿ ಕೃತಿಗಳಲ್ಲಿ ವ್ಯಕ್ತಿಯನ್ನು ವಿಜೃಂಭಿಸಬಾರದು. ಅದರ ಹೊರತಾಗಿ ಸಿನಿಮಾವನ್ನು ವಿಜೃಂಭಿಸಬೇಕೆಂಬುವುದು. ಸಿನಿಮಾ ಸಂಸ್ಕೃತಿಯನ್ನು ಬೆಳೆಸುವುದೇ ಅವರ ದೊಡ್ಡ ಆಸೆ. ಕನ್ನಡದಲ್ಲಿ ಸಿನಿಮಾ ಸಂಕಲನಗಳು ಅಪಾರ ಸಂಖ್ಯೆಯಲ್ಲಿದೆ. ಆದರೆ ಆ ಎಲ್ಲಾ ಕೃತಿಗಳು ಕೂಡ ವ್ಯಕ್ತಿ ವಿಜೃಂಭಣೆಯಿಂದ ಕೂಡಿದೆ. ಇಂತಹ ಸಾಹಿತ್ಯದಿಂದ ಚಿತ್ರ ಸಂಸ್ಕೃತಿ ಬೆಳೆಯುವುದಿಲ್ಲ. ಬದಲಾಗಿ ಇದೊಂದು ವ್ಯಕ್ತಿ ಪೂಜೆಯಾಗುತ್ತದೆ. ಚಿತ್ರ ಸಂಸ್ಕೃತಿ ಬೆಳೆಯಬೇಕಾದರೆ ಸಿನಿಮಾ ಕೇಂದ್ರಿತ ಪಠ್ಯದ ಅವಶ್ಯಕತೆಯಿದೆ. ಅಂತಹ ಪಠ್ಯ ಕೇಂದ್ರಿತ ಅಂಶಗಳನಿಟ್ಟುಕೊಂಡೆ ಇಂದು ಬಿಡುಗಡೆಗೊಂಡ ಕೃತಿಗಳನ್ನು ರಚಿಸಲಾಗಿದೆ," ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ರಾಜೇಂದ್ರಸಿಂಗ್ ಬಾಬು, ಟಿ.ಎಸ್. ನಾಗಾಭರಣ, ಟಿ.ಎನ್. ಸೀತಾರಾಮ್ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಿ. ಜಯಶ್ರೀ, ಜಯಮಾಲ ರಾಮಚಂದ್ರ, ತಾರಾ, ಸುಧಾರಾಣಿ, ಭಾವನಾ, ನಿವೇದಿತಾ, ಲಕ್ಷ್ಮೀ ಗೋಪಾಲಸ್ವಾಮಿ, ಸಿರಿ ರವಿಕುಮಾರ್, ನೀತೂ ಸೇರಿದಂತೆ ಅನೇಕ ಗಣ್ಯರು ನೆರೆದಿದ್ದರು.
ಬುಕ್ ಬ್ರಹ್ಮ ಫೇಸ್ ಬುಕ್ ಪೇಜ್ ಹಾಗೂ ಯುಟ್ಯೂಬ್ ಚಾನೆಲ್ ಮೂಲಕ ಈ ಕಾರ್ಯಕ್ರಮವನ್ನು ಆನ್ ಲೈನ್ ನಲ್ಲಿ ವೀಕ್ಷಿಸಬಹುದು.
ಬೆಂಗಳೂರು: 'ವಿನಯ ಮತ್ತು ಅಧಿಕಾರ ಒಟ್ಟಿಗೆ ಹೋಗುವುದಿಲ್ಲ. ಅಧಿಕಾರ ಬಂದರೆ ಅಹಂಕಾರ ಒಟ್ಟೊಟ್ಟಿಗೆ ಬರುತ್ತದೆ. ಕೇಂದ...
ಬೆಂಗಳೂರು: ದೆಹಲಿಯ ಸಂಗೀತ ನಾಟಕ ಅಕಾಡೆಮಿಯಿಂದ ನೀಡುವ ಬಿಸ್ಮಿಲ್ಲಾ ಖಾನ್ ಪುರಸ್ಕಾರ-2022ಕ್ಕೆ ಕವಿ, ನಾಟಕಕಾರ ಬೇಲೂರು ...
ಬೆಂಗಳೂರು: ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ‘ನಾಡೋಜ ಎಚ್.ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮ...
©2024 Book Brahma Private Limited.