"'ರೆಕ್ಕೆಯಿಲ್ಲದ ಹಕ್ಕಿ ' ಶೆಲತ್ ಅವರ ಆಯ್ದ ಕತೆಗಳ ಸಂಗ್ರಹ. ಕನ್ನಡಕ್ಕೆ ಅನುವಾದ ಮಾಡಿದ್ದು ಅಗ್ರಹಾರ ಕೃಷ್ಣಮೂರ್ತಿ ಅವರು. 9 ಸಣ್ಣ ಕತೆಗಳಿರುವ ಪುಟ್ಟ ಪುಸ್ತಕ," ಎನ್ನುತ್ತಾರೆ ರಶ್ಮಿ ತೆಂಡೂಲ್ಕರ್. ಅವರು ಅಗ್ರಹಾರ ಕೃಷ್ಣಮೂರ್ತಿ ಅವರ ಅನುವಾದಿತ ‘ರೆಕ್ಕೆಯಿಲ್ಲದ ಹಕ್ಕಿ’ ಕೃತಿ ಕುರಿತು ಬರೆದ ವಿಮರ್ಶೆ.
ಹಿಮಾಂಶಿ ಇಂದೂಲಾಲ್ ಶೆಲತ್.. ಕೆಲವು ದಿನಗಳ ಹಿಂದೆಯಷ್ಟೇ ಈ ಲೇಖಕಿ ಬಗ್ಗೆ ನನಗೆ ಗೊತ್ತಾಗಿದ್ದು. ಕುವೆಂಪು ರಾಷ್ಟ್ರೀಯ ಪ್ರಶಸ್ತಿ ಸಮಾರಂಭದಲ್ಲಿ ಇವರ ಮಾತು ಕೇಳಿದ್ದೆ.
'ರೆಕ್ಕೆಯಿಲ್ಲದ ಹಕ್ಕಿ ' ಶೆಲತ್ ಅವರ ಆಯ್ದ ಕತೆಗಳ ಸಂಗ್ರಹ. ಕನ್ನಡಕ್ಕೆ ಅನುವಾದ ಮಾಡಿದ್ದು ಅಗ್ರಹಾರ ಕೃಷ್ಣಮೂರ್ತಿ ಅವರು. 9 ಸಣ್ಣ ಕತೆಗಳಿರುವ ಪುಟ್ಟ ಪುಸ್ತಕ.
ಇದರ ಕೊನೆಯಲ್ಲಿ 'ಪ್ರೇಮ ಪತ್ರಗಳು' ಎಂಬ ಕತೆ ಇದೆ. ನನಗೆ ತುಂಬಾ ಇಷ್ಟವಾದ ಕತೆ.
ಮದುವೆಯಾದ ಹೆಂಗಸಿಗೆ ಬರುವ ಒಂದು ಪ್ರೇಮ ಪತ್ರದ ಕತೆ. ಬರೆದಿದ್ದು ಯಾರೋ ಅಪರಿಚಿತ. ಆ ಪ್ರೇಮ ಪತ್ರ ಆಕೆಗೆ ಖುಷಿ ಕೊಡುತ್ತದೆ. ಒಂದು ಸಂಗೀತ ಕಚೇರಿಗೆ ಬಾ ಎಂದು ಕರೆದಾಗ ಆ ಅಪರಿಚಿತನನ್ನು ನೋಡ್ಬೇಕು ಅಂತ ಅವಳು ಹೊರಡುತ್ತಾಳೆ. ಅಲ್ಲಿ ಅವನಿಗಾಗಿ ಹುಡುಕುತ್ತಾಳೆ. ಅವ ಯಾರು ಅಂತ ಕೊನೆಗೂ ಅವಳಿಗೆ ಗೊತ್ತಾಗಲ್ಲ. ಆದ್ರೆ ಈ ಪತ್ರ ಬರೆದ ವ್ಯಕ್ತಿ ಆಕೆಯನ್ನು ನೋಡ್ತಾನೆ.
'ವಾವ್, ಹೆಂಗಸರೆಂದರೆ ಹೀಗೆ! ನೆಲೆಯೂರಿ ನಿಂತ ಸ್ತ್ರೀಯೊಬ್ಬಳು ಪ್ರೀತಿಯ ಇಂಥ ಗಾಳಿ ಮಾತನ್ನು ಇಷ್ಟು ಸುಲಭವಾಗಿ ನಂಬುತ್ತಾಳೆ. ಯಾರಿಗೆ ಬೇಕಾದರೂ ಪ್ರೇಮ ಪತ್ರಗಳನ್ನು ಬರೆಯುತ್ತಾ ಎಲ್ಲ ಕಡೆ ತಿರುಗಾಡುವುದು ಎಷ್ಟು ಸುಲಭವಾದ ಕೆಲಸ.. ಎಂಥಾ ಅದ್ಭುತ!' ಅಂತಾನೆ ಕತೆ ಅಲ್ಲಿಗೆ ಮುಗಿಯುತ್ತೆ.
ಓದಿದ ನಂತರ ಈ ಕತೆಯ ಹೆಣ್ಣು ಕಾಡುತ್ತಾಳೆ. ಈ ಕತೆ ಓದುವಾಗ 'ಲೈಫ್ ಇನ್ ಎ ಮೆಟ್ರೋ' ಸಿನಿಮಾದಲ್ಲಿನ ಶಿಲ್ಪಾ ಶೆಟ್ಟಿ ಪಾತ್ರ, ಲಂಚ್ ಬಾಕ್ಸ್ ಸಿನಿಮಾದ ನಿಮ್ರತ್ ಕೌರ್ ಪಾತ್ರ ಎಲ್ಲ ನೆನಪಿಗೆ ಬಂತು.
ಶುಷ್ಕ ಭೂಮಿಗೆ ಒಂದು ಹನಿ ನೀರು ಬಿದ್ದರೆ ಏನಾಗತ್ತೂ, ಪ್ರೀತಿ ಇಲ್ಲದ ಅಥವಾ ಪ್ರೀತಿಯ ಭಾವನೆಗಳು ನಿರಾಕರಿಸಲ್ಪಟ್ಟ ಬದುಕಿಗೆ ಯಾವುದೋ ಒಂದು ಕಡೆಯಿಂದ 'ಪ್ರೀತಿ' ಬಂದು ಬಿಟ್ಟರೆ ಅಲ್ಲಿ ಬದುಕು ಬದಲಾಗುತ್ತದೆ ಅನ್ನುವುದು ಅಷ್ಟೇ ಸಹಜ.
ಈ ಕತೆಯ ಹೂರಣವೂ ಅದೇ.
ಶೆಲತ್ ಕತೆಗಳು ಪುಟ್ಟದ್ದು, ನಮ್ಮ ಸುತ್ತ ಮುತ್ತಲಿನ ಕಥೆಗಳೇ.. ಹಾಗಾಗಿ ಬೇಗ ಕನೆಕ್ಟ್ ಆಯ್ತು.
"ರಾಜಮಾತೆ ಕೆಂಪನಂಜಮ್ಮಣ್ಣಿ - ಮಾದರಿ ಮೈಸೂರಿನ ತಾಯಿಬೇರು - ಈ ಪುಸ್ತಕ ಕೊಂಡು ವಾರವೇ ಆದರೂ ರೇಷ್ಮೆ ಬಟ್ಟೆಯ ಓದು ...
"ನಾನೂರು ವರ್ಷಗಳಷ್ಟು ಹಳೆಯ ಥಿಯೇಟರಲ್ಲಿ ನಾಟಕ ನೋಡಿದಾಗ ನೀನಾಸಂ ನೆನಪು, ವಿಸೀಯವರ ಇಂಗ್ಲೆಂಡ್ ಪಯಣ, ವರ್ಡ್ಸ್ ವರ...
"ಕಾವ್ಯದ ಹಿನ್ನೆಲೆ, ತತ್ವ, ಸೌಂದರ್ಯಾನುಭವವದ ಜೊತೆಗೆ ಭಾರತೀಯ ಜೀವನ ದರ್ಶನದ ಅನೇಕ ಹೊಸ ಹೊಳಹುಗಳನ್ನು ತಮ್ಮ ಚಮತ್...
©2025 Book Brahma Private Limited.