Date: 07-11-2024
Location: ಬೆಂಗಳೂರು
ಬೆಂಗಳೂರು: 'ಕರ್ನಾಟಕ ಸುವರ್ಣ ಸಂಭ್ರಮ-50ರ ಭಾಗವಾಗಿ ರಾಜ್ಯದ 50 ಮಹಿಳಾ ಸಾಧಕರ ಬಗ್ಗೆ ಪುಸ್ತಕಗಳನ್ನು ಹೊರತರಲಾಗುತ್ತಿದೆ' ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ತಿಳಿಸಿದರು.
ಅವರು ಈ ಕುರಿತಂತೆ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, "ಪುಸ್ತಕಗಳನ್ನು ಹೊರತರಲು ಸರ್ಕಾರವು ₹30 ಲಕ್ಷ ಅನುದಾನ ನೀಡಿದೆ. 50 ಲೇಖಕರಿಂದ ಈ ಪುಸ್ತಕಗಳನ್ನು ಬರೆಸಲಾಗುತ್ತಿದೆ. 'ಕನ್ನಡ ಭಾರತಿ' ಯೋಜನೆಯಡಿ 100 ಪುಸ್ತಕಗಳು ಹೊರಬರಲಿವೆ. ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿನ ವಿವಿಧ ಕ್ಷೇತ್ರಗಳ 100 ಸಾಧಕರನ್ನು ಗುರುತಿಸಿ, ಅವರ ಬಗ್ಗೆ ಪುಸ್ತಕಗಳನ್ನು ಪ್ರಕಟಿಸಲಾಗುತ್ತದೆ," ಎಂದರು.
"ಕೃಷಿಗೆ ಸಂಬಂಧಿಸಿದಂತೆ ಕನ್ನಡದಲ್ಲಿ ಅಷ್ಟಾಗಿ ಪುಸ್ತಕಗಳು ಲಭ್ಯವಿಲ್ಲ. ಆದ್ದರಿಂದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಸಹಯೋಗದಲ್ಲಿ ಕೃಷಿಗೆ ಸಂಬಂಧಿಸಿದಂತೆಯೂ ಪುಸ್ತಕಗಳನ್ನು ಹೊರತರಲಾಗುವುದು. ಜಿಕೆವಿಕೆಯಲ್ಲಿರೈತರು ಹಾಗೂ ಲೇಖಕರ ಕಾರ್ಯಾಗಾರ ನಡೆಸಿ, ರೈತರ ಅನುಭವಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುತ್ತದೆ," ಎಂದು ತಿಳಿಸಿದರು.
ಬೆಳಗಾವಿ: ಸುಪ್ರಸಿದ್ದ ಕವಯಿತ್ರಿ ಹಾಗೂ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಸಂಸ್ಥಾಪಕಿ ಆಶಾ ಕಡಪಟ್ಟಿ ಇಂದು ಮುಂಜಾನೆ 7.5...
ಬೆಂಗಳೂರು: ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸರ್ಕಾರದ ಕಲಾ ಕಾಲೇಜು - ಬಂಡೆಪ್ಪ ಬಾಚಯ್ಯ ಸಂಗನಗೌಡ ...
ಬೆಂಗಳೂರು: ದಿ ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕವು ಇದೇ 8 ಮತ್ತು 9 ರಂದು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲ...
©2024 Book Brahma Private Limited.