"ಸಮುದಾಯಗಳನ್ನು ಒಂದು ‘ವಸ್ತು’ವಾಗಿಯೇ ನೋಡುತ್ತಿರುವ ಈ ಸಂದರ್ಭದಲ್ಲಿ ಪ್ರಹ್ಲಾದ ಅದನ್ನೊಂದು ‘ಜ್ಞಾನ’ವಾಗಿ ‘ಲೋಕದೃಷ್ಠಿ’ಯಾಗಿ ನೋಡುತ್ತಿರುವುದು ಸರಿಯಾದ ಕ್ರಮವಾಗಿದೆ. ಆದೇ ಈ ಬರೆಹಗಳ ಹಿಂದಿರುವ ತಾತ್ವಿಕತೆಯೂ ಆಗಿದೆ. ಎಷ್ಟೋ ಸಂದರ್ಭಗಳಲ್ಲಿ ಅಧ್ಯಯನಕಾರರು ತಮ್ಮನ್ನು ತಾವು ಆ ಸಮುದಾಯದೊಂದಿಗೆ ಗುರುತಿಸಿಕೊಳ್ಳಲು ಇಷ್ಟ ಪಡುವುದಿಲ್ಲ," ಎನ್ನುತ್ತಾರೆ ಡಾ.ವೆಂಕಟಗಿರಿ ದಳವಾಯಿ. ಅವರು ಪ್ರಹ್ಲಾದ ಡಿ.ಎಂ. ಅವರ ‘ಮ್ಯಾಸಬೇಡರ ಚಾರಿತ್ರಿಕ ಕಥನ’ ಕೃತಿಗೆ ಬರೆದ ಅಭಿಪ್ರಾಯ.
ಯಾವುದು ಮಹಾಪಠ್ಯಗಳು ?
ಈಗಾಗಲೇ ರೂಪಿಸಲ್ಪಟ್ಟ ಈ ಮಹಾಪಠ್ಯಗಳು ಮತ್ತು ಕಿರು ಪಠ್ಯಗಳು ಎಂಬ ಪರಿಕಲ್ಪನೆಗಳು ನಿಜಕ್ಕೂ ಆ ರೀತಿಯ ಪಠ್ಯಗಳೇ? ಅದರೇ ಮಹಾ ಪರಂಪರೆ ಮತ್ತು ಕಿರು ಪರಂಪರೆಗಳ ಹಿಂದಿರುವ ತಾತ್ವಿಕತೆಯನ್ನು ನಮ್ಮ ಕಾಲ ವಿಭಿನ್ನವಾಗಿಯೇ ಗ್ರಹಿಸಿದೆ. ಸಿದ್ಧ ಮಾದರಿಯ ಲೋಕದೃಷ್ಠಿಯನ್ನು ಪ್ರಶ್ನಿಸಿ, ಅದನ್ನು ಪುನರ್ ರಚಿಸುವ ಅಗತ್ಯವನ್ನು ವರ್ತಮಾನವು ಒತ್ತಿ ಹೇಳುತ್ತಿದೆ. ಆ ಹಿನ್ನೆಲೆಯಲ್ಲಿಯೇ ಮೌಖಿಕ ಪರಂಪರೆಯನ್ನು, ಬುಡಕಟ್ಟನ್ನು, ದಲಿತರನ್ನು, ಮಹಿಳೆಯರನ್ನು, ದುಡಿಯುವ ವರ್ಗವನ್ನು ನೋಡಲಾಗಿದೆ. ಈ ವರ್ಗಗಳು ಸಾಂಸ್ಕೃತಿಕವಾಗಿ ಅನನ್ಯತೆಯನ್ನು ಹೊಂದಿದ್ದರೂ, ಅವುಗಳನ್ನು ಅಂಚಿನ ಸಂಸ್ಕೃತಿಯ ನೆಲೆಯಲ್ಲಿಯೇ ಅಧ್ಯಯನಕ್ಕೆ ಒಳಪಡಿಸಿರುವುದನ್ನು ಕಾಣಬಹುದು ಅದರೇ ಅದು ಇಂದು ಅಧ್ಯಯನದ ಮಾದರಿಯಾಗಿ ಉಳಿದುಕೊಂಡಿಲ್ಲ. ಅಂತಹ ಮಾದರಿಯನ್ನು ಅದರ ಲೋಕದೃಷ್ಟಿಯನ್ನು ನಿರಾಕರಿಸಿದ ಬರೆಹಗಳಾಗಿ ‘ಮ್ಯಾಸಬೇಡರ ಚಾರಿತ್ರಿಕ ಕಥನ’ದ ಕೃತಿಯಿದೆ.
ಹೊಸ ತಲೆಮಾರಿನ ಅಕರ್ಷಣೆಯ Area ಗಳೆಂದರೆ ಕತೆ, ಕಾದಂಬರಿ, ಕಾವ್ಯ, ವಿಮರ್ಶೆ ಮತ್ತು ಸಂಶೋಧನೆಗೆ ಹೆಚ್ಚು ಅಸಕ್ತಿಯನ್ನು ತೋರದ ಈ ಹೊತ್ತಿನಲ್ಲಿ ಡಾ.ಪ್ರಹ್ಲಾದ ಈ ಲೇಖನಗಳನ್ನು ಬರೆಯುತ್ತಿರುವುದು ಒಂದು ಗಮನಾರ್ಹ ಸಂಗತಿಯಾಗಿದೆ. ಆರಂಭದಲ್ಲಿ ಪ್ರಹ್ಲಾದನು ಸಹ ಪದ್ಯಗಳನ್ನು ಬರೆದರೂ, ನಂತರದಲ್ಲಿ ಸಮುದಾಯದ ಅಧ್ಯಯನಗಳಲ್ಲಿ ತೊಡಗಿಸಿಕೊಂಡದ್ದು ಆಶ್ಚರ್ಯ ಮತ್ತು ಸಂತೋಷದ ವಿಷಯ. ಅತ್ಯಂತ ಹಿಂದುಳಿದ ಪ್ರದೇಶದಿಂದ ಬಂದಂತಹ ಪ್ರಹ್ಲಾದ (ಕೂಡ್ಲಿಗಿ ತಾಲೂಕಿನ ಗಡಿ ಗ್ರಾಮ ಸುಟ್ಟ ಕರ್ನಾರಟ್ಟಿ ಎಂಬ ಪುಟ್ಟ ಗ್ರಾಮ) ಇಂದು ಓದು, ಬರಹ, ಸುತ್ತಾಟಗಳಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿರುವುದು ಅದನ್ನು ಒಂದು ಅಧ್ಯಯನದ ಶಿಸ್ತಿಗೆ ಒಳಪಡಿಸುತ್ತಿರುವುದು ಆತನ ಸಂಶೋಧನಾ ಹಾದಿಯನ್ನು ಸ್ಪಷ್ಟಪಡಿಸುತ್ತಿದೆ.
ಸಮುದಾಯಗಳನ್ನು ಒಂದು ‘ವಸ್ತು’ವಾಗಿಯೇ ನೋಡುತ್ತಿರುವ ಈ ಸಂದರ್ಭದಲ್ಲಿ ಪ್ರಹ್ಲಾದ ಅದನ್ನೊಂದು ‘ಜ್ಞಾನ’ವಾಗಿ ‘ಲೋಕದೃಷ್ಠಿ’ಯಾಗಿ ನೋಡುತ್ತಿರುವುದು ಸರಿಯಾದ ಕ್ರಮವಾಗಿದೆ. ಆದೇ ಈ ಬರೆಹಗಳ ಹಿಂದಿರುವ ತಾತ್ವಿಕತೆಯೂ ಆಗಿದೆ. ಎಷ್ಟೋ ಸಂದರ್ಭಗಳಲ್ಲಿ ಅಧ್ಯಯನಕಾರರು ತಮ್ಮನ್ನು ತಾವು ಆ ಸಮುದಾಯದೊಂದಿಗೆ ಗುರುತಿಸಿಕೊಳ್ಳಲು ಇಷ್ಟ ಪಡುವುದಿಲ್ಲ. ಒಂದು ವೇಳೆ ಗುರುತಿಸಿಕೊಂಡರೂ ಅದನ್ನು ಭಾವುಕ ನೆಲೆಯಲ್ಲಿ ಅಥವಾ ಅವೈಚಾರಿಕ ನೆಲೆಯಲ್ಲಿ ಗ್ರಹಿಸುತ್ತಾರೆ. ಆದರೆ ಪ್ರಹ್ಲಾದ ಈ ಸೂಕ್ಷ್ಮತೆಗಳನ್ನು ತಮ್ಮ ಇಡೀ ಬರೆಹವುದದ್ದಕ್ಕೂ ಒಂದು ಪ್ರಜ್ಞೆಯಾಗಿಯೇ ತಂದುಕೊಂಡಿದ್ದಾರೆ. ಇವತ್ತಿನ ಸಂಶೋಧಕರಿಗೆ ವೈದಿಕ ಚರಿತ್ರೆಯ ಮಾದರಿ ಅಥವಾ ಕಲೋನಿಯಲ್ ಎತ್ನಿಕ್ ಲೋಕದ ಮಾದರಿಗಳ ತಿಳುವಳಿಕೆ ಇಲ್ಲದಿದ್ದರೆ ಈ ಸಮುದಾಯಗಳ ಅಧ್ಯಯನಗಳಿಗೆ ಯಾವುದೇ ರೀತಿಯ ಅರ್ಥವಿರುವುದಿಲ್ಲ. ಈ F Self ಮತ್ತು others ನ್ನು ಬಿಡಿಸಿಕೊಳ್ಳದೇ ಹೋದರೆ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆ. ಆದರೆ ಇದನ್ನು ಇಲ್ಲಿಯ ಬರೆಹಗಳು ಅರ್ಥೈಸಿಕೊಂಡಿವೆ. Self ಆಗಲಿ others ಆಗಲಿ ರೂಪಾಂತರಗೊಳ್ಳದಿದ್ದರೆ ನಮ್ಮ ಸಮುದಾಯಗಳು ಕಿರುಪಠ್ಯಗಳಾಗಿ, ಕಿರುಪರಂಪರೆಗಳಾಗಿ, ಅಂಚಿನ ಸಮುದಾಯಗಳಾಗಿ, ಉಪ ಸಂಸ್ಕೃತಿಗಳಾಗಿ ಕಾಣಿಸುತ್ತವೆಯೋ ಹೊರತು ಮಹಾ ಪರಂಪರೆಗಳಾಗಿ, ಮಹಾ ಪಠ್ಯಗಳಾಗಿ, ಪವಿತ್ರ ಪಠ್ಯಗಳಾಗಿ ಕಾಣಿಸುವುದಿಲ್ಲ. ಹೀಗಾಗಿ ಈ ಕಾಲುದಾರಿಯ ಸಂಸ್ಕೃತಿ, ಸಮಾಜ, ಭಾಷೆ, ಧರ್ಮಗಳನ್ನು ಆಧುನಿಕ ಪೂರ್ವದ ಪರಿಕಲ್ಪನೆಗಳ ಓದಿನಿಂದ ಗ್ರಹಿಸಲು ಆಗುವುದಿಲ್ಲ. ಇವುಗಳನ್ನು ಬುಡಕಟ್ಟಿನ ಬಾಳ್ವೆಯೊಂದಿಗೇನೆ ಇರಿಸಿ ನೋಡಬೇಕಾಗಿದೆ. ಇದರಿಂದಾಗಿಯೇ ಅವರ ಕುಲಮೂಲ, ದೈವಮೂಲ, ವೃತ್ತಿಮೂಲಗಳು ಲೋಕದೃಷ್ಠಿಯಾಗಿ ಪುನರ್ ರಚನೆಗೊಳ್ಳುತ್ತವೆ. ಅಂತಹ ಪುನರ್ ರಚನೆಯ ಭಾಗವಾಗಿ ಈ ಕೃತಿಯ ‘ಕುಲಮೂಲ ಚರಿತ್ರೆ’ ‘ಸಾಂಸ್ಕೃತಿಕ ವೀರರ ಚರಿತ್ರೆ’ ಮತ್ತು ‘ಮಾತೃದೈವಗಳ ಚರಿತ್ರೆ’ಯ ಅಧ್ಯಾಯಗಳಿವೆ.
ಮ್ಯಾಸಬೇಡರ ಕುಲಮೂಲದ ಚರಿತ್ರೆಯನ್ನು ಕ್ರಿ.ಶ. 603ನೇ ಇಸವಿಯ ಒಂದು ಹಸ್ತಪ್ರತಿಯನ್ನು ಆಧಾರವಾಗಿಟ್ಟುಕೊಂಡು ಹೇಳುತ್ತಾರೆ. ಆದರೇ ಈ ಕಾಲದ ಬಗ್ಗೆ ಮತ್ತಷ್ಟು ಖಚಿತಪಡಿಸಿಕೊಳ್ಳುವ ಆಗತ್ಯವಿದೆ. ಈ ಕಥನದ ಪ್ರಕಾರ ಮೊದಲು ಹುಟ್ಟಿದ ಪ್ರಾಣಿ ‘ಒಂಟಿಕೊಂಬಿನ ಬಲ್ಲ ಆಕಳು’ ಮತ್ತು ಪಂಪಾದ್ರಿ ಬಸವ ಗೋವುಗಳು, ಇವುಗಳನ್ನು ಕಾಯಲು ಹುಟ್ಟಿದವನೇ ‘ಮಂದ ಕಾಮಗೇತ’. ಈತನೇ ಮ್ಯಾಸಬೇಡರ ಮೂಲಪುರುಷ. ಇವನಿಂದ ಶುರುವಾದ ಚರಿತ್ರೆ ಮುಂದೆ ಈತನು ಗುಪ್ತಗಿರಿ ಪುರದ ರಾಜನ ಮಗಳಾದ ಪ್ರಮೀಳೆಯನ್ನು ಮದುವೆ ಆಗಿ ನಾಲ್ಕು ಮಕ್ಕಳ ಜನನಕ್ಕೆ ಕಾರಣನಾಗುತ್ತಾನೆ. ಈ ಅಧ್ಯಾಯದಲ್ಲಿ ಬರುವ ಸಂಚುಲಕ್ಷ್ಮಿ ಉಗ್ರನರಸಿಂಹನನ್ನು ಮದುವೆಯಾಗುವ ಪ್ರಸಂಗ ಮ್ಯಾಸಬೇಡರು ಶಿವನ ಅರಾಧನೆಯಿಂದ ವಿಷ್ಣುವಿನ ಅರಾಧನೆಯ ಕಡೆ ಹೊರಳಿರುವುದನ್ನು ಸೂಚಿಸುತ್ತದೆ. ಈ ಸಂಸ್ಕೃತೀಕರಣಕ್ಕೆ ಇರುವ ಚಾರಿತ್ರಿಕ ಕಾರಣಗಳನ್ನು ಕುಲಮೂಲದ ಇನ್ನಷ್ಟು ಕಥನಗಳ ಮೂಲಕ ಹುಡುಕಬೇಕಾಗಿದೆ. ಇಲ್ಲಿ ಪ್ರಸ್ತಾವನೆಗೊಂಡ ‘ಕುಂಬಳಕಾಯಿ’ ಬೀಜವು ಅವರ ಕೃಷಿ ಪದ್ಧತಿಯನ್ನು ಸೂಚಿಸುತ್ತಿರಬಹುದೇ?
ಸಾಂಸ್ಕೃತಿಕ ವೀರರ ಚರಿತ್ರೆಯ ಅಧ್ಯಾಯವೂ ಹಿರಿಯರ ಆರಾಧನೆಯೇ ದೈವರಾಧನೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಆದಿಮ ಸಮಾಜ ಎರಡನೇ ಹಂತವಿದು. ಅಲ್ಲಿ ವೀರತ್ವ ಎಂದರೆ ತ್ಯಾಗ, ಕರುಣೆ, ದಾನ ಎನ್ನುವುದನ್ನು ಮರೆಯುವಂತಿಲ್ಲ ಬೇಟೆಯ ನಂತರದ ಈ ಪಶುಪಾಲನೆಯ ಹಂತದಲ್ಲಿ ಪುರುಷ ಕೇಂದ್ರಿತ ಸಮಾಜ ನರ‍್ಮಾಣವಾಗಿರುವುದನ್ನು ಕಾಣಬಹುದು. ಅಲ್ಲದೇ ಇದೇ ಹಂತದಲ್ಲಿ ಪುರುಷದೈವಗಳೂ ಜಾಸ್ತಿಯಾದವು ಎನ್ನುವುದನ್ನು ಪ್ರಹ್ಲಾದ ಅವರು ಸರಿಯಾಗಿ ವಿಶ್ಲೇಷಿಸಿದ್ದಾರೆ. ಈಗಿನ ದೈವಗಳಾಗಿ ಈ ಸಾಂಸ್ಕೃತಿಕ ನಾಯಕರು ಬಳಸುತ್ತಿದ್ದ ಕೋಲು, ಆಭರಣ, ಅಯುಧ, ಪ್ರಾಣಿ, ಎತ್ತುಗಳಾಗಿವೆ ಎಂಬುದನ್ನು ಏಳು ಮಂದಿ ಪಶುಪಾಲಕರ ಚರಿತ್ರೆಯ ಹಿನ್ನೆಲೆಯಲ್ಲಿ ಗುರುತಿಸಿರುವುದು ಬುಡಕಟ್ಟಿನ ಸಂಸ್ಕೃತಿಯ ನಿಜ ಸ್ವರೂಪವನ್ನು ದಾಖಲಿಸಿದಂತಾಗಿದೆ.
ಮ್ಯಾಸಬೇಡರ ಸೌಂದರ್ಯವಿರುವುದು ಅವರ ಜೀವನ ಕ್ರಮದಲ್ಲಿ ಅವರ ರೊಪ್ಪಗಳಲ್ಲಿ, ಅವರ ಹಾಡುಗಳಲ್ಲಿ, ವಾದ್ಯಗಳಲ್ಲಿ, ದೈವಗಳಲ್ಲಿ. ಕಾಡಿನಿಂದ ಹಟ್ಟಿಗಳಿಗಳಿಗೆ ರೊಪ್ಪಗಳಿಗೆ Self ಆದ ಈ ಜೀವನ ಆವರ್ತನ ಬಹು ಕುತೂಹಲಕಾರಿಯಾದದ್ದು, ಬುಡಕಟ್ಟು ಸಮುದಾಯಗಳನ್ನು ಕುಲಚಿಹ್ನೆಗಳು, ಬೆಡಗುಗಳು, ದೈವಗಳು, ಜನನ, ಮದುವೆ, ಸಾವಿನ ಅಚರಣೆಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಈಗಾಗಲೇ ಆರಡಿಮಲ್ಲಯ್ಯ ಕಟ್ಟೇರ ಆವರು ಬಹುಮುಖ್ಯವಾದ ಸಂಶೋಧನೆಯನ್ನೇ ಮಾಡಿದ್ದಾರೆ. ಆ ಮಾರ್ಗದಲ್ಲಿಯೇ ಪ್ರಹ್ಲಾದ ನಡೆಯುವ ಭರವಸೆ ನನಗಿದೆ.
“ಈ ಕೃತಿಯನ್ನು ಪ್ರಕಟಿಸುವ ವಿಚಾರ ಬಂದಾಗ ಅದು ನನಗೆ ಅಷ್ಟು ಸೂಕ್ತವಾಗಿ ತೋರಲಿಲ್ಲ. ಹೀಗಾಗಿ ಇದರ ಮೂಲ ಕಥಾ ಸ್ವರೂ...
“ಕೃಷ್ಣನ ಬಾಲ್ಯವನ್ನು ಕುರಿತೇ ಹೆಚ್ಚಾಗಿ ಬರೆದಿದ್ದರೂ, ಅವನ ಸಂಪೂರ್ಣ ವ್ಯಕ್ತಿತ್ವದ ದೃಷ್ಟಿಯಿಂದ ಕೃಷ್ಣಾವತಾರದಲ...
ಡಾ. ಬಿ. ಜನಾರ್ದನ ಭಟ್ ಅವರು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ. ಎನ್. ಉಪಾಧ್ಯ ಅವರು ಸ...
©2025 Book Brahma Private Limited.