ಮೇಘಮೈತ್ರಿ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರಕಾಶ ಜಿ. ಖಾಡೆ

Date: 17-04-2023

Location: ಬೆಂಗಳೂರು


ಬಾಗಲಕೋಟೆ ಜಿಲ್ಲೆಯ ಮೇಘಮೈತ್ರಿ ಕನ್ನಡ ಮತ್ತು ಸಾಹಿತ್ಯ ವೇದಿಕೆಯ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರಕಾಶ ಜಿ. ಖಾಡೆಯವರನ್ನು ಆಯ್ಕೆ ಮಾಡಲಾಗಿದೆ.

ಮೇಘಮೈತ್ರಿ 6ನೇ ಕನ್ನಡ ಸಾಹಿತ್ಯ ಸಮ್ಮೇಳನವು 2023 ಜೂನ್ 11 ರಂದು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಸಭಾಂಗಣದಲ್ಲಿ ನಡೆಯಲಿದೆ.

ಪ್ರಕಾಶ ಜಿ. ಖಾಡೆ ಹಿನ್ನೆಲೆ: ಪ್ರಕಾಶ ಜಿ. ಖಾಡೆ ಅವರು ಮೂಲತಃ ಬಾಗಲಕೋಟೆಯವರು. 1965 ಜೂನ್ 10ರಂದು ಜನನ. ಇಳಕಲ್ಲಿನಲ್ಲಿ ಬಿ.ಎ.ಕನ್ನಡ ಪದವಿ ಶಿಕ್ಷಣ, ಎಂ.ಎ.ಕನ್ನಡ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಪಡೆದಿರುತ್ತಾರೆ. "ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ" ವಿಷಯದ ಮೇಲೆ ಪ್ರೊ.ಎ.ವಿ.ನಾವಡ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಮಹಾಪ್ರಬಂಧವನ್ನು ಮಂಡಿಸಿ, 2005 ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಗೆ ಭಾಜನರಾಗಿರುತ್ತಾರೆ. ಶಾಂತಿ ಬೀಜಗಳ ಜತನ, ಕರೋನಾ ಕಾಲದ ಕವಿತೆಗಳು, ಚೆಲುವಿ ಚಂದ್ರಿ ಕಥಾ ಸಂಕಲನ ಮುಂತಾದವುಗಳು ಇವರ ಪ್ರಕಟಿತ ಕೃತಿಗಳು. ಕನ್ನಡ ಸಾಹಿತ್ಯ ಪರಿಷತ್ತಿನ ಮುದ್ದಣ ಕಾವ್ಯ ಪ್ರಶಸ್ತಿ, ಬೇಂದ್ರೆ ಸಾಹಿತ್ಯ ಪ್ರಶಸ್ತಿ, ಹುಬ್ಬಳ್ಳಿಯ ಬೊಮ್ಮಾಯಿ ಪ್ರತಿಷ್ಠಾನ ಪ್ರಶಸ್ತಿ, ಅಜೂರ ಪ್ರತಿಷ್ಠಾನ ಪ್ರಶಸ್ತಿ ಹಾಗೂ ಸಂಕ್ರಮಣ ಸಾಹಿತ್ಯ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಇವರ ಲೇಖನಗಳು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಗಳಲ್ಲಿ ಪಠ್ಯಗಳಾಗಿವೆ.

MORE NEWS

ಮೂರು ದಿನಗಳ ‘ನುಡಿಜಾತ್ರೆ’ಗೆ ಸಜ್ಜಾದ ಸಕ್ಕರೆ ನಾಡು..

19-12-2024 ಬೆಂಗಳೂರು

ಮಂಡ್ಯ: ‘ಸಕ್ಕರೆ ನಾಡು’ ಮಂಡ್ಯ ಮೂರು ದಿನಗಳ ಕಾಲ ನಡೆಯಲಿರುವ ನುಡಿ ಜಾತ್ರೆಗೆ ಸಿದ್ಧವಾಗಿದೆ. ಮೂರು ದಶಕದ...

‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಎಂಟು ಕವನ ಸಂಕಲನಗಳಿಗೆ

18-12-2024 ಬೆಂಗಳೂರು

ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯು 21 ಭಾಷೆಯ ಕೃತಿಗಳಿಗೆ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಿದೆ. ಆ ಪೈಕಿ ಎಂಟು ಕವ...

ಹಿರಿಯ ಲೇಖಕ, ಚಿಂತಕ ಕೆ. ವಿ. ನಾರಾಯಣಗೆ ಪ್ರತಿಷ್ಠಿತ ‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’

18-12-2024 ಬೆಂಗಳೂರು

ನವದೆಹಲಿ: 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಹಿರಿಯ ಲೇಖಕ, ಚಿಂತಕ ಕೆ. ವಿ. ನಾರಾಯಣ ಅವರು ಆಯ್ಕೆಯ...