ಮನುಷ್ಯ ಆಗಿರೋದು ಅಂದ್ರೆ ಏನು?- ವಿಲಿಯಂ ಕೆಂಟ್ರಿಜ್

Date: 17-08-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ದಕ್ಷಿಣ ಆಫ್ರಿಕಾ ಮೂಲದ ಕಂಟೆಂಪೊರರಿ ಆರ್ಟ್ ಕಲಾವಿದ ವಿಲಿಯಂ ಕೆಂಟ್ರಿಜ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ವಿಲಿಯಂ ಕೆಂಟ್ರಿಜ್ (William Kentridge)
ಜನನ: 28 ಎಪ್ರಿಲ್, 1955
ಶಿಕ್ಷಣ: ಜೊಹಾನೆಸ್‌ಬರ್ಗ್ ಆರ್ಟ್ ಫೌಂಡೇಷನ್
ವಾಸ: ಜೊಹಾನೆಸ್‌ಬರ್ಗ್, ದಕ್ಷಿಣ ಆಫ್ರಿಕಾ
ಕವಲು: ಕಂಟೆಂಪೊರರಿ ಆರ್ಟ್
ವ್ಯವಸಾಯ: ಪ್ರಿಂಟ್ ಮೇಕಿಂಗ್, ಡ್ರಾಯಿಂಗ್, ಆನಿಮೇಷನ್

ವಿಲಿಯಂ ಕೆಂಟ್ರಿಜ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ವಿಲಿಯಂ ಕೆಂಟ್ರಿಜ್ ಅವರ ವೆಬ್‌ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಕಲೆ ಎಂದರೆ ಅದು ಭಾವನಾತ್ಮಕ ಅಭಿವ್ಯಕ್ತಿ, ಹಾಗಾಗಿ ಕಲಾವಿದ ಚಿಂತಕನೂ ಆಗಿರುವುದಿಲ್ಲ ಎಂಬ ಸಾಮಾನ್ಯ ಅಭಿಪ್ರಾಯಕ್ಕೆ ಅಪವಾದವಾಗಿ ಬೆಳೆದುನಿಂತಿರುವ ದಕ್ಷಿಣ ಆಫ್ರಿಕಾದ ಪ್ರಮುಖ ಸಮಕಾಲೀನ ಕಲಾವಿದ ವಿಲಿಯಂ ಕೆಂಟ್ರಿಜ್ ತನ್ನ ಅಭಿವ್ಯಕ್ತಿಯ ವ್ಯಾಪ್ತಿಯ ಕಾರಣಕ್ಕಾಗಿಯೂ ಕಲಾವಿದರೊಳಗೇ ಭಿನ್ನವಾಗಿ ನಿಲ್ಲುತ್ತಾರೆ. ಥಿಯೇಟರ್, ಆಪೆರಾ, ಸಿನಿಮಾ, ಆನಿಮೇಷನ್, ಕಲೆ, ಪ್ರಿಂಟ್ ಮೇಕಿಂಗ್… ಹೀಗೆ ಎಲ್ಲ ರಂಗಗಳಲ್ಲೂ ಅವರ ಅಳಿಸಲಾಗದ ಹೆಜ್ಜೆಗುರುತುಗಳಿವೆ.

ಮನುಷ್ಯತ್ವದ ಬಗ್ಗೆ ಅಪಾರ ಕಾಳಜಿ ಇದ್ದು, ತನ್ನ ಸುತ್ತಮುತ್ತ ನಡೆಯುತ್ತಿರುವ ಸಂಗತಿಗಳಿಗೆ, ಹಿಂಸೆ, ಜನಂಗೀಯ ತಾರತಮ್ಯಗಳಿಗೆ ಪ್ರಖರವಾಗಿ ಪ್ರತಿಕ್ರಿಯಿಸಿರುವ ಕೆಂಟ್ರಿಜ್, ತಾನು ಯಹೂದ್ಯ ಕುಟುಂಬದಿಂದ ಬಂದವರಾದ್ದರಿಂದ ತನಗೆ ದಕ್ಷಿಣ ಆಫ್ರಿಕಾದ ಜನಾಂಗೀಯ ತಾರತಮ್ಯದ ಕಾಲದಲ್ಲಿ ಮೂರನೇ ಪಕ್ಷವಾಗಿ ನಿಂತು ಸರಿ-ತಪ್ಪುಗಳ ವಿವೇಚನೆ ಸಾಧ್ಯವಾಯಿತು ಎಂದು ಅಭಿಪ್ರಾಯಪಡುತ್ತಾರೆ. ಅಲ್ಲಿನ ಸಾಮಾಜಿಕ-ಆರ್ಥಿಕ ಸನ್ನಿವೇಶಗಳೇ ಅವರ ಕಲಾಕೃತಿಗಳ ಹೂರಣ.

ಸ್ವತಃ ನೆಲ್ಸನ್ ಮಂಡೇಲಾ, ಸ್ಟೇವ್ ಬ್ರೆಕೊ ಅವರಂತಹ ಜನಾಂಗೀಯ ತಾರತಮ್ಯದ ಹೋರಾಟಗಾರರಿಗೆ ವಕೀಲರಾಗಿದ್ದ ಯಹೂದಿ ದಂಪತಿಗಳ ಮಗನಾಗಿ ಸಿರಿವಂತ ಕುಟುಂಬದಲ್ಲಿ ಜನಿಸಿದ ಕೆಂಟ್ರಿಜ್ ಅವರಿಗೆ ಬಾಲ್ಯದಲ್ಲಿ ತಮ್ಮ ಹೆತ್ತವರ ರಾಜಕೀಯ ಆಕ್ಟಿವಿಸಂ, ನಾಗರಿಕ ಹಕ್ಕುಗಳ ಕುರಿತಾದ ಎಚ್ಚರದ ಕಾರಣದಿಂದಾಗಿ ಮತ್ತು ಮನೆಯಲ್ಲಿ ಅದೇ ವಾತಾವರಣದಲ್ಲಿ ಬೆಳೆದ ಕಾರಣದಿಂದಾಗಿ ಆ ಸಂಗತಿಗಳು ಅವರ ವೃತ್ತಿಜೀವನದಲ್ಲೂ ಮಹತ್ವದ ಪಾತ್ರ ವಹಿಸಿದ್ದವು.

ಕೆಂಟ್ರಿಜ್ ಅವರ ಆರಂಭಿಕ ದಿನಗಳು ಅವರ ಗೊಂದಲಗಳ ಕಾರಣದಿಂದಾಗಿ ತೀರಾ ಗೋಜಲಾಗಿದ್ದವು. ಜೊಹಾನೆಸ್‌ಬರ್ಗ್ ಆರ್ಟ್ ಫೌಂಡೇಷನ್‌ನಲ್ಲಿ ಕಲಾಭ್ಯಾಸ ಮಾಡುತ್ತಿದ್ದಾಗ ಅವರಿಗೆ ಬಣ್ಣದ ಬಳಕೆ ಮತ್ತು ಚಿತ್ರದ ಗೆರೆಗಳ ನಡುವೆ ಆಯ್ಕೆಯ ಗೊಂದಲ ಇತ್ತು. ಎಚ್ಚಿಂಗ್‍ನಲ್ಲಿ ಬಣ್ಣವಿಲ್ಲದೆ ಚಿತ್ರ ಆರಂಭಗೊಳ್ಳಬಹುದೆಂಬ ಸಂಗತಿ ಅವರಲ್ಲಿ ಕುತೂಹಲ ಮೂಡಿಸಿತ್ತು. ಈ ಹಂತದಲ್ಲೇ ಅವರಿಗೆ ತಾನು ಕಲಾವಿದನಾಗುವ ಬದಲು ನಟನಾಗಿ ಹೆಚ್ಚು ಪರಿಣಾಮಕಾರಿ ಅಭಿವ್ಯಕ್ತಿ ಸಾಧಿಸಬಹುದು ಅನ್ನಿಸಿ, ಪ್ಯಾರಿಸ್‌ಗೆ ತೆರಳಿದರು. ಅಲ್ಲಿ ನಟನೆ ಕಲೆಗಿಂತ ಭಿನ್ನ ಅಲ್ಲ ಅನ್ನಿಸಿ ಅಲ್ಲಿಂದ ಸಿನಿಮಾ ನಿರ್ಮಾಣದತ್ತ ಹೊರಳಿಕೊಂಡರು. ಆದರೆ ನಟನೆಯಲ್ಲಿ ಕಲಿತ ಟೈಮಿಂಗ್, ಚಲನೆ ಮತ್ತು ಪಾತ್ರಾನುಸಂಧಾನ ಅವರಲ್ಲಿ ಆಳವಾಗಿ ಉಳಿದಿತ್ತು. ಸಿನಿಮಾ ಕೂಡ ಅವರಿಗೆ ಸಮಾಧಾನ ತರಲಿಲ್ಲ. ಅಲ್ಲಿಂದಲೂ ಹೊರಬರುವುದಕ್ಕೆ ಕಾರಣ ಹುಡುಕತೊಡಗಿದರು.

ಹೀಗೆ ಆರಂಭಿಕ “ವೈಫಲ್ಯ”ಗಳ ಬಳಿಕ ಅವರು ಮತ್ತೆ ಕಲೆಯತ್ತ ಹೊರಳಿಕೊಂಡು, ತನ್ನ ಎಲ್ಲ ಕಲಿಕೆಗಳ ಹದವಾದ ಮಿಶ್ರಣಗಳನ್ನು ತನ್ನ ಕಲಾಭಿವ್ಯಕ್ತಿಯಲ್ಲಿ ರೂಢಿಸಿಕೊಂಡರು. ತನ್ನ ಕಲಾಪ್ರಕ್ರಿಯೆಯಲ್ಲಿ ಈ ವೈಫಲ್ಯಗಳ ಪಾತ್ರ ದೊಡ್ಡದು, ಕಲೆಯ ಪ್ರಕ್ರಿಯೆಯಲ್ಲಿಯೇ ಅಲೆಯ ಅರ್ಥದ ಹೊಳಹುಗಳೂ ಇರುವುದು ಎಂದು ಅವರು ಅಭಿಪ್ರಾಯಪಡುತ್ತಾರೆ. ತನ್ನ ಕಪ್ಪು-ಬಿಳುಪು ಚಾರ್ಕೋಲ್ ಡ್ರಾಯಿಂಗ್‌ಗಳನ್ನೇ ವಿಶಿಷ್ಠವಾಗಿ ಆನಿಮೇಟ್ ಮಾಡಿ ಕಲಾಕೃತಿಗಳನ್ನು ರಚಿಸುವ ಅವರು ತನ್ನ ಕಲಾಕೃತಿಗಳನ್ನು ಶಿಲಾಯುಗದ ಅಥವಾ ಬಡ ಕಲಾವಿದರ ಆನಿಮೇಷನ್ ಎಂದು ಕರೆದುಕೊಳ್ಳುತ್ತಾರೆ. ಒಂದೇ ಜಾಗದಲ್ಲಿ ಚಿತ್ರಗಳನ್ನು ಬರೆದು ಭಂಗಿಗಳನ್ನು ಬದಲಾಯಿಸುತ್ತಾ ಹೋಗುವಾಗ ಅಳಿಸಲಾದ ಗುರುತುಗಳನ್ನು ಅವರು ಮರೆಮಾಡುವುದಿಲ್ಲ.

ಎಕ್ಸ್‌ಪ್ರೆಷನಿಸ್ಟ್ ಹಾದಿಯ ಅವರ ಕಲಾಕೃತಿಗಳಲ್ಲಿ, ವಿಷಾದ, ದುರಂತಗಳನ್ನು ತಮಾಷೆಗಳ ಮೂಲಕ ಬಿಂಬಿಸುತ್ತಾ ಹೋಗುವ ಅವರ ಶೈಲಿಯನ್ನು ಚಾರ್ಲಿ ಚಾಪ್ಲಿನ್ ಶೈಲಿಯ ಜೊತೆ ಹೋಲಿಸಿ ನೋಡಬಹುದು. ದೇಹ ಮೆದುಳನ್ನು ಪ್ರಚೋದಿಸುತ್ತದೆ ಎಂದು ನಂಬಿರುವ ಅವರು ತಮ್ಮ ಕಲಾಸ್ಟುಡಿಯೊ ಕೂಡ ತನ್ನದೇ ದೇಹದ ಭಾಗ ಎಂದು ಪರಿಗಣಿಸುತ್ತಾರೆ. ತನ್ನನ್ನು ತಾನೇ ವಿಚಾರಣೆಗೆ ಒಳಪಡಿಸಿಕೊಳ್ಳುತ್ತಲೇ ಮನುಷ್ಯರಾಗಿರುವುದು ಎಂದರೆ ಏನು ಎಂಬ ಪ್ರಶ್ನೆಗೆ ಒಳನೋಟಗಳನ್ನು ಒದಗಿಸುವ ಕೆಂಟ್ರಿಜ್, ತನ್ನ ಹೆಚ್ಚಿನ ಕಲಾಕೃತಿಗಳಿಗೆ ಪ್ರೇರಣೆ ಪಡೆಯುವುದು ತನ್ನ ಬಾಲ್ಯದಿಂದಲೇ.

Arc/Procession: Develop, Catch Up, Even Surpass (1990,) Felix in Exile (1994), Sleeper – Red (1997), I am not me, the horse is not mine (2008), cavaliere di Toledo (2012) , Second Hand Reading (2013), The Shrapnel in the Woods (2013), More Sweetly Play the Dance (2015), Drawings for 'The Head and the Load' (2017), ಅವರ ಮಹತ್ವದ ಕಲಾಕೃತಿಗಳಲ್ಲಿ ಸೇರಿವೆ.

ವಿಲಿಯಂ ಕೆಂಟ್ರಿಜ್ ಅವರ ಸಂದರ್ಶನ:

ವಿಲಿಯಂ ಕೆಂಟ್ರಿಜ್ ಉಪನ್ಯಾಸ:

ಚಿತ್ರ ಶೀರ್ಷಿಕೆಗಳು:

ವಿಲಿಯಂ ಕೆಂಟ್ರಿಜ್ ಅವರ A Universal Archive (1988)

ವಿಲಿಯಂ ಕೆಂಟ್ರಿಜ್ ಅವರ Angel with spades as wings (1987)

ವಿಲಿಯಂ ಕೆಂಟ್ರಿಜ್ ಅವರ black box-Chambre Noire (2005)

ವಿಲಿಯಂ ಕೆಂಟ್ರಿಜ್ ಅವರ cat-coffee pot I (2019)

ವಿಲಿಯಂ ಕೆಂಟ್ರಿಜ್ ಅವರ City Deep (2020)

ವಿಲಿಯಂ ಕೆಂಟ್ರಿಜ್ ಅವರ Drawing for the film medicine cabinet (Self-Portrait), (2000-01)

ವಿಲಿಯಂ ಕೆಂಟ್ರಿಜ್ ಅವರ Felix in Exile, (1994)

ವಿಲಿಯಂ ಕೆಂಟ್ರಿಜ್ ಅವರ interval in the dress circle (1985)

ವಿಲಿಯಂ ಕೆಂಟ್ರಿಜ್ ಅವರ Lithograph on paper (2004)

ವಿಲಿಯಂ ಕೆಂಟ್ರಿಜ್ ಅವರ Nose ensemble (2009)

ವಿಲಿಯಂ ಕೆಂಟ್ರಿಜ್ ಅವರ Second Hand Reading, (2013)

ಈ ಅಂಕಣದ ಹಿಂದಿನ ಬರೆಹಗಳು:
“ಸೂಪರ್ ಫ್ಲ್ಯಾಟ್” ಐ ಕ್ಯಾಂಡಿಗಳ ತಕಾಷಿ ಮುರಾಕಾಮಿ
ಅಲ್ಲಿರುವುದು ನನ್ನಮನೆ – ದೊ ಹೊ ಸುಹ್
ದಿ ಲೈಫ್ ಆಫ್ CB: ಅರ್ಥಾತ್, ಕ್ರಿಷ್ಚಿಯನ್ ಬೋಲ್ತನಸ್ಕಿ
ಅಸೆಂಬ್ಲಿಗಳಲ್ಲಿ “ಬಾಕತನ” ತೋರಿಸಿದ ಅರ್ಮಾನ್
ಪ್ರಾಮಾಣಿಕತೆಯೇ ಸೌಂದರ್ಯ- ಜೊರ್ಗ್ ಇಮ್ಮೆಂದ್ರಾಫ್
ನಾಗರೀಕತೆಯ ಒಡಕಿಗೆ ಕನ್ನಡಿ ಹಿಡಿದ ಡೊರಿಸ್ ಸಾಲ್ಸೆದೊ
ಕಾನ್ಸೆಪ್ಚುವಲ್ ಆರ್ಟ್‌ಗೆ ತಳಪಾಯ –ರಾಬರ್ಟ್ ರಾಷನ್‌ಬರ್ಗ್
ಡಿಜಿಟಲ್ ಜಗತ್ತಿನಲ್ಲಿ ಒರಿಜಿನಲ್‌ನ ಹುಡುಕಾಟ – ಥಾಮಸ್ ರಫ್
ಕಲೆ ಜಗತ್ತನ್ನು ಬದಲಾಯಿಸಲೇ ಬೇಕೆಂದಿಲ್ಲ- ಫಿಯೊನಾ ಹಾಲ್
ಜಾಗತೀಕರಣದ ಆಟಗಳ ಬೆನ್ನಟ್ಟಿರುವ ಇಂಕಾ ಶೋನಿಬೇರ್
ಅರ್ಥವಂತಿಕೆಗಾಗಿ ಅರ್ಥ ಕಳೆದುಕೊಳ್ಳಬೇಕೆಂಬ- ಗು ವೆಂಡಾ
ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು- ನಿಯೊ ಆವ್
ಕಲೆ ಒಂದು ಉತ್ಪನ್ನವಲ್ಲ ಪ್ರಕ್ರಿಯೆ- ನಾಮನ್ ಬ್ರೂಸ್
‘ಇನ್ಫಾರ್ಮೇಷನ್ ಸೂಪರ್ ಹೈವೇ’ ಹೊಳಹು- ನಾಮ್ ಜುನ್ ಪಾಯಿಕ್
ಬದುಕಿನ ಮುಜುಗರಗಳಿಗೆ ಹೊರದಾರಿ- ಸ್ಟೀವ್ ಮೆಕ್ವೀನ್
ಅವ್ಯಕ್ತವನ್ನು ವ್ಯಕ್ತದಿಂದ ವಿವರಿಸುವ ರೀಚಲ್ ವೈಟ್‌ರೀಡ್
ಒಪ್ಪಿತ ನೈತಿಕತೆಯ ದ್ವಂದ್ವಗಳ ಶೋಧ - ಸಾರಾ ಲೂಕಸ್
ತನ್ನೊಳಗಿನ “ತೋಳ”ತನಕ್ಕೆ ಭಾವಕೊಟ್ಟ- ಕಿಕಿ ಸ್ಮಿತ್
“ನಾನು ಪ್ರೀ-ಪಿಕ್ಸೆಲ್”- ಚಕ್ ಕ್ಲೋಸ್
ಕಲೆ ಎಂಬುದು ಪ್ರಶ್ನಿಸುವ ಕಲೆ- ಸ್ಯು ಬಿಂಗ್
ವೀಡಿಯೊ ಆರ್ಟ್ ಕಾಲದ ’ರೆಂಬ್ರಾಂಟ್’
ದೇಹಕ್ಕೆ ವಿಸ್ತರಣೆ; ಯಂತ್ರಗಳಿಗೆ ಆತ್ಮ- ರೆಬೆಕಾ ಹಾರ್ನ್
ಪಾಪ್ ಆರ್ಟಿಗೊಬ್ಬ ಗಾಡ್‌ಫಾದರ್ – ಪೀಟರ್ ಬ್ಲೇಕ್
ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್
ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್
ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್
“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”
“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”
ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್
ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ
“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”
“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”
“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”
“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”
“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”
“ಒಳಗಣ ಅನಂತ ಮತ್ತು ಹೊರಗಣ ಅನಂತ”
“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ
ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

 

 

MORE NEWS

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...

ಬಹುತ್ವ, ಬಹುಬಾಶಿಕತೆ ಮತ್ತು ತಾಯ್ಮಾತಿನ ಶಿಕ್ಶಣ

01-12-2024 ಬೆಂಗಳೂರು

"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...

‘ನಾಲ್ಕು ಮೊಳ ಭೂಮಿ’ ಕತೆಯ ನೈತಿಕಪ್ರಜ್ಞೆ

27-11-2024 ಬೆಂಗಳೂರು

"ಚದುರಂಗರನ್ನು “ಕನ್ನಡದ ಫೀನಿಕ್ಸ್” ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಸಹ ಸಾಮಾಜಿ...