ಮಲೆನಾಡ ಪರಿಸರದ ಸುಂದರ ಜೀವನವನ್ನು ಹೇಳುವ ಕೃತಿಗಳಲ್ಲಿ ಇದು ಒಂದು 


‘ಜೀವನದಲ್ಲಿ ಮರೆಯಾಗುತ್ತಿರುವ, ಮುಂದೆದುರಿಸಲು ಸಿದ್ಧವಾಗುತ್ತಿರುವ ಸಂದರ್ಭಗಳೇ ಈ ಕಥಾಸಂಕಲನದ ಕಥೆಗಳು’ ಎನ್ನುತ್ತಾರೆ ಪ್ರಸಾದ್. ಅವರು ಕಾರ್ತಿಕಾದಿತ್ಯ ಬೆಳ್ಗೋಡು ಅವರ ‘ಕಾಡು ಹಾದಿಯ ಜಾಡು ಹತ್ತಿ’ ಕೃತಿ ಕುರಿತು ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

ಕೃತಿ: ಕಾಡು ಹಾದಿಯ ಜಾಡು ಹತ್ತಿ

ಲೇಖಕ: ಕಾರ್ತಿಕಾದಿತ್ಯ ಬೆಳ್ಗೋಡು

ಕಥಾ ಸಂಕಲನದ ದಂಗೆಯ ದಿನಗಳ ಹೆಸರಿಲ್ಲದ ಭವಿಷ್ಯತ್ತಿನ ಕನಸಿನ ವಾಸ್ತವದ ಕಥೆ ಬಹಳ ಇಷ್ಟವಾಯಿತು. ಊರು ಮಳೆ ಶಾಲೆ ಊರವರು ಅನ್ನೋ ಪದಗಳು ಊರು ಬಿಟ್ಟು ದೂರ ಬಂದವರಿಗೆ ಅದು ಹೇಗೆ ಅನುಭವಕ್ಕೆ ಬರುತ್ತವೆ ಅಂತ ಹೇಳಬೇಕಾಗಿಲ್ಲ. ಊರಿಗೆ ಮರಳಿದಾಗ ಬದಲಾದ ಸ್ಥಿತಿಗೆ ಹೊಂದಿಕೊಳ್ಳೋದರ ಕಷ್ಟದ ಜೊತೆ ಹಳೆ ನೆನಪುಗಳು ಕಾಡುವುದು ಹೆಚ್ಚು. ಎಲ್ಲ ಇದ್ದು ಎಲ್ಲವನ್ನು ಕಳೆದುಕೊಂಡೆನಾ ಅನ್ನೋ ಭಾವ.

ಅಂತಹದೇ ಕಳೆದುಕೊಂಡ, ಮರೆಯಾಗುತ್ತಿರುವ, ಮುಂದೆದುರಿಸಲು ಸಿದ್ಧವಾಗುತ್ತಿರುವ ಸಂದರ್ಭಗಳೇ ಈ ಕಥಾಸಂಕಲನದ ಕಥೆಗಳು. ಚಿಕ್ಕದಾಗಿ ಚೊಕ್ಕದಾಗಿ ರಪ ರಪ ಓದಿಸಿಕೊಳ್ಳುವ 16 ಕಥೆಗಳು. ಮಲೆನಾಡ ಪರಿಸರದ ಸುಂದರ, ಕಠೋರ, ಕಾರ್ಪಣ್ಯದ ಜೀವನಗಳನ್ನು ಹೇಳುವ ಕೃತಿಗಳಲ್ಲಿ ಇದು ಒಂದು.

-ಪ್ರಸಾದ್

MORE FEATURES

'ಕೂಡಿಟ್ಟ ಹಣ ಎಲ್ಲಿ ಹೋಯಿತು?'

07-09-2024 ಬೆಂಗಳೂರು

“ಒಲವ ಧಾರೆ' ಕವನ ಸಂಕಲನದಲ್ಲಿರುವ ರಾಮಕೃಷ್ಣರವರ ಬಹುತೇಕ ಕವನಗಳಲ್ಲಿ ವ್ಯಕ್ತವಾಗುವ ಕವಿಯ ಅನುಭವಗಳು ನಮ್ಮ ಅ...

ಅಂತಃಕರಣ ಎಂದರೆ ಆಂತರಿಕ ಕಾರ್ಯಗಳು

07-09-2024 ಬೆಂಗಳೂರು

"ನನ್ನದೆ ಜೀವನದ ಹಲವಾರು ರೀತಿಯ ಭಾವನಾತ್ಮಕ ಪದ ಪುಂಜಗಳಿಗೆ ಈ ಹೊತ್ತಗೆಯ ಮೂಲಕ ಮುಕ್ತಿ ಅಥವಾ ಮೋಕ್ಷ(ನಿರ್ವಾಣ) ಇಂ...

ಕಾವ್ಯ ಪ್ರಕಾರದ ಮೂಲಕ ಸಶಕ್ತವಾಗಿ ಗುರುತಿಸಿಕೊಂಡವರು ಶೈಲಜಾ ಉಡಚಣ

07-09-2024 ಬೆಂಗಳೂರು

“ಶರಣರ ಪ್ರಭಾವದಲ್ಲಿ ಅರಳಿದ ಈ ಪ್ರತಿಭಾನ್ವಿತೆಯ ಬದುಕು – ಬರಹಕ್ಕೆ ಪೂರಕವಾಗಿದೆ. ಆ ಕಾರಣಕ್ಕಾಗಿ ಅವರ ಬರ...