ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2023-24ನೇ ಸಾಲಿನ ವಾರ್ಷಿಕ ‘ಗೌರವ ಪ್ರಶಸ್ತಿ’ ಪುರಸ್ಕೃತರ ಪಟ್ಟಿ

Date: 17-11-2024

Location: ಬೆಂಗಳೂರು


ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಕೊಡಲಾಗುವ 2023 ಹಾಗೂ 2024ನೇ ಸಾಲಿನ ವಾರ್ಷಿಕ ‘ಗೌರವ ಪ್ರಶಸ್ತಿ’ ಹಾಗೂ 2022 ಹಾಗೂ 2023ನೇ ಸಾಲಿನ ಅನುವಾದಿತ ಪುಸ್ತಕ ಬಹುಮಾನಗಳ ಪಟ್ಟಿ ಪ್ರಕಟವಾಗಿದೆ.

ಗೌರವ ಪ್ರಶಸ್ತಿಗೆ ಹತ್ತು ಜನ ಲೇಖಕರು, ಅನುವಾದಕರನ್ನು ಆಯ್ಕೆ ಮಾಡಲಾಗಿದ್ದು, 2024ನೇ ಸಾಲಿನ ಗೌರವ ಪ್ರಶಸ್ತಿಗೆ ರಾಜೇಂದ್ರ ಚೆನ್ನಿ, ಆರ್.ಕೆ. ಕುಲಕರ್ಣಿ, ಕರೀಗೌಡ ಬೀಚನಹಳ್ಳಿ, ಬೋಡೆ ರಿಯಾಜ್ ಅಹ್ಮದ್ ಮತ್ತು ಬಸು ಬೇವಿನಗಿಡದ, 2023ನೇ ಸಾಲಿನ ‘ಗೌರವ ಪ್ರಶಸ್ತಿ’ಗೆ ಪ್ರೊ.ಎಚ್.ಎಸ್. ರಾಘವೇಂದ್ರರಾವ್, ದು.ಸರಸ್ವತಿ, ವಿನಯ್ ಚೈತನ್ಯ, ನಟರಾಜ್ ಹುಳಿಯಾರ್ ಮತ್ತು ಎಚ್.ಎಂ. ಕುಮಾರಸ್ವಾಮಿ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ₹50 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ.

2022 ಹಾಗೂ 2023ನೇ ಸಾಲಿನ ಅನುವಾದಿತ ಪುಸ್ತಕ ಬಹುಮಾನಕ್ಕೆ ಅಯ್ಕೆಯಾದ ಕೃತಿಗಳ ಪಟ್ಟಿ ಹೀಗಿದೆ;

2022ನೇ ಸಾಲಿನ ಪುಸ್ತಕ ಬಹುಮಾನ;

ಕನ್ನಡದಿಂದ ಇಂಗ್ಲಿಷ್‌ ಗೆ ವಸುಧೇಂದ್ರ(ಮೂಲ ಲೇಖಕರು) ಅವರ ‘ತೇಜೋ ತುಂಗಭದ್ರ. ಅನುವಾದಕರು: ಮೈತ್ರೇಯಿ ಕರ್ನೂರು.

ಇಂಗ್ಲಿಷ್‌ನಿಂದ ಕನ್ನಡಕ್ಕೆ ಈಡಿತ್ ಎಗರ್(ಮೂಲ ಲೇಖಕರು) ಅವರ ‘ದಿ ಚಾಯ್ಸ್’ ಅನುವಾಕರು: ಜಯಶ್ರೀ ಭಟ್.

ಇಂಗ್ಲಿಷ್‌ನಿಂದ ಕನ್ನಡಕ್ಕೆ ಸೈರಸ್ ಮಿಸ್ತ್ರಿ(ಮೂಲ ಲೇಖಕರು) ಅವರ ‘ಹೆಣಹೊರುವವನ ವೃತ್ತಾಂತ’ ಅನುವಾದಕರು: ಜಯರಾಮರಾಜೇ ಅರಸ್

ಇಂಗ್ಲಿಷ್ ಹೊರತಾಗಿ ಬೇರೆ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ ‘ದೇಹವೇ ದೇಶ’; ವಿಕ್ರಮವಿಸಾಜಿ(ಅನುವಾದಕರು), ಗರಿಮಾ ಶ್ರೀವಾಸ್ತವ(ಮೂಲ ಲೇಖಕರು)

ಇಂಗ್ಲಿಷ್ ಹೊರತಾಗಿ ಬೇರೆ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ; ‘ಜಾಲ’ ಶುಭಮಂಗಳ ಎಂ.ಜಿ(ಅನುವಾದಕರು), ಪೆದ್ದಿಂಟಿ ಅಶೋಕ್ ಕುಮಾರ್(ಮೂಲ ಲೇಖಕರು)

2023ನೇ ಸಾಲಿನ ಪುಸ್ತಕ ಬಹುಮಾನ

ಕನ್ನಡದಿಂದ ಇಂಗ್ಲಿಷ್‌; ‘ಲವ್ ಆ್ಯಂಡ್ ವಾಟರ್ ಫ್ಲೋ ಟುಗೆದರ್’; ಸುಕನ್ಯಾ ಕನಾರಳ್ಳಿ(ಅನುವಾದಕರು), ಅಗ್ರಹಾರ ಕೃಷ್ಣಮೂರ್ತಿ(ಮೂಲ ಲೇಖಕರು)

ಇಂಗ್ಲಿಷ್‌ನಿಂದ ಕನ್ನಡಕ್ಕೆ; ‘ಪಾತ್ರ ಪ್ರವೇಶ’ ಶ್ರೀಧರ್ ಹೆಗ್ಗೋಡು(ಅನುವಾದಕರು), ಕೋನ್‌ಸ್ತಂತಿನ್ ಸ್ತಾನಿಸ್ಲಾವಸ್ಕಿಯ(ಮೂಲ ಲೇಖಕರು)

ಇಂಗ್ಲಿಷ್‌ನಿಂದ ಕನ್ನಡಕ್ಕೆ; ‘ಅಂಬೇಡ್ಕರ್ ಜಗತ್ತು’ ವಿಕಾಸ್ ಆರ್. ಮೌರ್ಯ(ಅನುವಾದಕರು), ಎಲೀನರ್ ಜೆಲಿಯಟ್(ಮೂಲ ಲೇಖಕರು)

ಇಂಗ್ಲಿಷ್ ಹೊರತಾಗಿ ಬೇರೆ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ; ‘ನನ್ನ ಪಿತಾಮಹ ಮಹಾತ್ಮಾ ಗಾಂಧಿ’, ಎಸ್.ಜಿ. ಭಾಗ್ವತ್(ಅನುವಾದಕರು), ಸುಮಿತ್ರಾಗಾಂಧಿ ಕುಲಕರ್ಣಿ(ಮೂಲ ಲೇಖಕರು)

ಇಂಗ್ಲಿಷ್ ಹೊರತಾಗಿ ಬೇರೆ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ; ‘ತೌಲನಿಕ ಧರ್ಮ ದರ್ಶನ’ ತೋಂಟದ ಸಿದ್ಧರಾಮ ಸ್ವಾಮೀಜಿ(ಅನುವಾದಕರು), ಯಾಕೂಬ್ ಮಸೀಹ(ಮೂಲ ಲೇಖಕರು)

ಪುಸ್ತಕ ಬಹುಮಾನವು ತಲಾ ₹ 25 ಸಾವಿರ ನಗದು ಒಳಗೊಂಡಿದೆ. ‌

 

 

MORE NEWS

ಅಂಬಾಬಾಯಿ ಕನ್ನಡದ ಅನರ್ಘ್ಯ ಮುತ್ತು; ಸತ್ಯವತಿ

19-11-2024 ಬೆಂಗಳೂರು

ಬೆಂಗಳೂರು: ಯಾಜಿ ಪ್ರಕಾಶನದಿಂದ ಹರಿದಾಸ ಮಹಿಳೆ ಅಂಬಾಬಾಯಿ ವಿರಚಿತ ‘ಏಕಾಂಗಿ ಕವಯತ್ರಿಯ ಪ್ರವಾಸದ ಡೈರಿ’ (...

ಸಿಂಗಪುರದಲ್ಲಿ ವಿಶ್ವ ಸಮ್ಮೇಳನ ಮಾಡಿದ್ದು ದೊಡ್ಡ ‘ಯಜ್ಞ’ ಎಂದೇ ಹೇಳಬಹುದು; ಸೋಮಶೇಖರ್

19-11-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಪ್ರೆಸ್‌ ಕ್ಲಬ್ ಕೌನ್ಸಿಲ್ ಅಂತಾರಾಷ್ಟ್ರೀಯ 2ನೇ ವಿಶ್ವ ಕನ್ನಡ ಹಬ್ಬದ ಸಲಹಾ ಸಮಿತಿ ವತಿಯಿಂದ...

ಎಸ್ಸಿ/ ಎಸ್ಟಿ ಸಂಪಾದಕರ ಸಂಘದ ಪ್ರತಿಷ್ಠಿತ ದತ್ತಿ ಪ್ರಶಸ್ತಿ ಪ್ರಕಟ

19-11-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘ(ರಿ) ಬೆಂಗಳೂರು ಇದರ 2024 ನೇ ಸಾಲಿನ ಪ್ರತಿಷ್ಠಿತ ರಾ...